ಶುಭಮನ್ ಗಿಲ್ - ಶುಭಮನ್ ಗಿಲ್ ಸರಣಿಯ ಸೋಲಿನಲ್ಲಿ ಕೊನೆಗೊಂಡ ಆಸ್ಟ್ರೇಲಿಯಾದ (Australia) ಸುಮಾರು 2 ತಿಂಗಳ ಸುದೀರ್ಘ ಟೆಸ್ಟ್ ಪ್ರವಾಸದ ಮುಕ್ತಾಯದ ನಂತರ, ಭಾರತೀಯ ಪುರುಷರ ಕ್ರಿಕೆಟ್ ತಂಡವು ಈಗ ವೈಟ್-ಬಾಲ್ ಕ್ರಿಕೆಟ್ನತ್ತ ತನ್ನ ಗಮನ ಹರಿಸಲಿದೆ. ಕೋಲ್ಕತ್ತಾದಲ್ಲಿ (Kolkata) ಜನವರಿ 22 ರಂದು ಪ್ರಾರಂಭವಾಗುವ ಐದು ಪಂದ್ಯಗಳ T20I ಸರಣಿಯಲ್ಲಿ ಭಾರತವು (India) ಇಂಗ್ಲೆಂಡ್ (England) ಅನ್ನು ಎದುರಿಸಲಿದೆ, ನಂತರ ಎರಡು ತಂಡಗಳು ಮೂರು ಪಂದ್ಯಗಳ ODI ಸರಣಿಯಲ್ಲಿ ಪರಸ್ಪರ ಆಡಲಿವೆ. ಮೂರು 50 ಓವರ್‌ಗಳ ಪಂದ್ಯಗಳು ಫೆಬ್ರವರಿ 19 ರಂದು ಪ್ರಾರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ 2025ರ ಆವೃತ್ತಿಗೆ ಭಾರತ ತಂಡವನ್ನು ಸಿದ್ಧಪಡಿಸಲು ಸಹಾಯ ಮಾಡುತ್ತವೆ. ಭಾರತವು ಚಾಂಪಿಯನ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ, ಬದಲಿಗೆ ದುಬೈನಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಮೊದಲ ಪಂದ್ಯವು ಫೆಬ್ರವರಿ 20 ರಂದು ಬಾಂಗ್ಲಾದೇಶದ ವಿರುದ್ಧ ನಡೆಯಲಿದೆ ಮತ್ತು ಫೆಬ್ರವರಿ 23ರ ಭಾನುವಾರದಂದು ಭಾರತವು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಭಾರತದ ಕೊನೆಯ ಲೀಗ್ ಪಂದ್ಯ ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ವಿಶ್ವದ ನಂ. 1 ODI ತಂಡವು ನಾಕೌಟ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರೆ, ಸೆಮಿಫೈನಲ್ ಪಂದ್ಯವು ಮಾರ್ಚ್ 4 ರಂದು ದುಬೈನಲ್ಲಿ ಮತ್ತು ಅಂತಿಮ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ಇದನ್ನೂ ಓದಿ: ವಿಜಯ್ ಹಜಾರೆ ಟ್ರೋಫಿಯ ನಾಕೌಟ್ ಪಂದ್ಯಗಳ ವೇಳಾಪಟ್ಟಿ, ಅರ್ಹತೆ ಪಡೆದ 10 ತಂಡಗಳು ವಿವರ ಇಲ್ಲಿದೆ ಬುಮ್ರಾಗೆ ಉಪನಾಯಕ ಸ್ಥಾನ ಜನವರಿ 12ರೊಳಗೆ ಭಾರತವು ಚಾಂಪಿಯನ್ಸ್ ಟ್ರೋಫಿಗಾಗಿ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ ಮತ್ತು ಸೋಮವಾರ (ಜನವರಿ 6) ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಯಾವುದೇ ಫಿಟ್ನೆಸ್ ಸಮಸ್ಯೆಗಳು ಇಲ್ಲದಿದ್ದರೆ ಭಾರತ ತಂಡದ ಉಪನಾಯಕರಾಗಿರುತ್ತಾರೆ. ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಮತ್ತು ಐದನೇ ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದ್ದ ಬುಮ್ರಾ, ರೋಹಿತ್ ಶರ್ಮಾ ಅವರ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದನ್ನೂ ಓದಿ: ಜನವರಿಯಿಂದ ಡಿಸೆಂಬರ್ವರೆಗೆ ಭಾರತ ಕ್ರಿಕೆಟ್ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ಈ ಹಿಂದೆ ಗಿಲ್, ಪಾಂಡ್ಯಗೆ ಉಪನಾಯಕ ಪಟ್ಟ ಭಾರತವು ಕೊನೆಯದಾಗಿ 2024ರ ಆಗಸ್ಟ್ನಲ್ಲಿ ಶ್ರೀಲಂಕಾ ವಿರುದ್ಧ ವೈಟ್-ಬಾಲ್ ಸರಣಿಯನ್ನು ಆಡಿತ್ತು ಮತ್ತು ಅದರಲ್ಲಿ, ಶುಭಮನ್ ಗಿಲ್ ಭಾರತದ ಉಪನಾಯಕರಾಗಿದ್ದರು. ಈ ಹಿಂದೆ ಹಾರ್ದಿಕ್ ಪಾಂಡ್ಯ ಕೂಡ ಉಪನಾಯಕರಾಗಿ ಸೇವೆ ಸಲ್ಲಿಸಿದ್ದರು. ಸ್ಟಾರ್ ಆಲ್ ರೌಂಡರ್ ಗಾಯದ ಕಾರಣದಿಂದ ಹೊರಗುಳಿಯುವ ಮೊದಲು 2023ರ ODI ವಿಶ್ವಕಪ್‌ನಲ್ಲಿ ಭಾರತದ ಉಪನಾಯಕರಾಗಿದ್ದರು. ಚಾಂಪಿಯನ್ಸ್ ಟ್ರೋಫಿಗೆ ಯಾರಿಗೆಲ್ಲಾ ಸ್ಥಾನ? ಭಾರತದ ವೈಟ್ ಬಾಲ್ ರೆಗ್ಯುಲರ್ ಆಟಗಾರರಾದ ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ ಮತ್ತು ಅರ್ಷ್‌ದೀಪ್ ಸಿಂಗ್ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ ಮತ್ತು ನವೆಂಬರ್ 19, 2023 ರಂದು ಭಾರತಕ್ಕಾಗಿ ಕೊನೆಯ ಬಾರಿಗೆ ಆಡಿದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಕೂಡ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಆಗುತ್ತಾರಾ ಎಂಬುದು ಕುತೂಹಲಕಾರಿಯಾಗಿದೆ. ಕೆಲಸದ ಹೊರೆ ನಿರ್ವಹಣೆಯಿಂದಾಗಿ ಬುಮ್ರಾ ಅವರನ್ನು ಹೊರತುಪಡಿಸಿ ಚಾಂಪಿಯನ್ಸ್ ಟ್ರೋಫಿಗೆ ಒಳಪಡುವ ಉಳಿದೆಲ್ಲಾ ಆಟಗಾರರು ಫೆಬ್ರವರಿ 6, 9 ಮತ್ತು 12 ರಂದು ಕ್ರಮವಾಗಿ ನಾಗ್ಪುರ, ಕಟಕ್ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರು ODIಗಳಲ್ಲಿ ಆಡುವ ಸಾಧ್ಯತೆಯಿದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.