ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಬಾಲಿವುಡ್ ನಟಿ ಕಂಗನಾ ರಣಾವತ್ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿರುವ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆ ಸೆಪ್ಟೆಂಬರ್ 2024ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಅಡ್ಡಿಯಾಗುತ್ತಿದ್ದ ಹಲವಾರು ವಿಘ್ನಗಳು ಸಿನಿಮಾ ರಿಲೀಸ್ ಡೇಟ್ ಅನ್ನು ಮುಂದೂಡುತ್ತಲೇ ಇದ್ದವು. 1975-77ರ ಕಾಲದ ತುರ್ತು ಪರಿಸ್ಥಿತಿಯ ಕಥೆ ಇದೆ ಎನ್ನಲಾಗಿರುವ ‘ಎಮರ್ಜೆನ್ಸಿ’ ಸಿನಿಮಾಗೆ ಸೆನ್ಸಾರ್ಶಿಪ್ ಸಿಗದಿದ್ದ ಕಾರಣ ಸೆಪ್ಟೆಂಬರ್ 2024ಕ್ಕೆ ಸಿನಿಮಾ ರಿಲೀಸ್ ಆಗಿರಲಿಲ್ಲ. ಆದರೆ ಕಂಗನಾ ರಣಾವತ್ ಅಭಿಮಾನಿಗಳು, ಸಿನಿ ಪ್ರೇಮಿಗಳು ಮಾತ್ರ ಈ ಬಹುನಿರೀಕ್ಷಿತ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆ ಯಾವಾಗ ಅಂತಾ ಕಾತುರದಿಂದ ಕಾಯುತ್ತಿದ್ದರು. ಜನವರಿ 17ಕ್ಕೆ ಎಮರ್ಜೆನ್ಸಿ ಸಿನಿಮಾ ರಿಲೀಸ್ ಪ್ರಸ್ತುತ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದ್ದು, ವರ್ಷಗಳಿಂದ ಸಿನಿಮಾ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಎಮರ್ಜೆನ್ಸಿ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದ್ದು ಇದೇ ಜನವರಿ 17 ರಂದು ಥಿಯೇಟರ್‌ಗಳಿಗೆ ಬರಲಿದೆ. ರಿಲೀಸ್‌ಗೂ ಮುನ್ನ ಟ್ರೇಲರ್ ಸಖತ್ ಸದ್ದು ಮಾಡ್ತಿದೆ. ಸಿನಿಮಾ ರಿಲೀಸ್ ಡೇಟ್ ಸಮೀಪಿಸುತ್ತಿದ್ದಂತೆ, ಸಿನಿಮಾ ತಂಡವು ಹೊಸ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಹೊಸ ಟ್ರೇಲರ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಟ್ರೇಲರ್ ಮತ್ತು ಪೋಸ್ಟ್‌ರ್ ನೋಡಿದ ಮೇಲಂತೂ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಏಕೆಂದರೆ ಟ್ರೇಲರ್ ಮತ್ತು ಪೋಸ್ಟರ್‌ಗಳಲ್ಲಿ ನಟಿ ಕಂಗನಾ ಅವರು ಥೇಟ್ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ನೋಡಿದ ಹಾಗೆಯೇ ಕಾಣುತ್ತಾರೆ. ಹೇಗಿದೆ ಹೊಸ ಟ್ರೇಲರ್? ಒಂದು ನಿಮಿಷದ ಐವತ್ತು ಸೆಕೆಂಡುಗಳ ಅವಧಿಯ ಟ್ರೇಲರ್ ಸಿನಿರಸಿಕರ ಮನ ಗೆದ್ದಿದೆ. ಜೈಲಿನಿಂದ ಭಾರತದ ಪ್ರಧಾನಿಗೆ ಜಯಪ್ರಕಾಶ್ ನಾರಾಯಣ್ ಪತ್ರ ಬರೆಯುವುದರೊಂದಿಗೆ ಪ್ರಾರಂಭವಾಗುವ ಟ್ರೇಲರ್ ನೋಡುವವರ ಮೈ ಜುಮ್ಮೆನಿಸುತ್ತದೆ. ಅನುಪಮ್ ಖೇರ್ ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಇಲ್ಲಿ ನಟಿಸಿದ್ದಾರೆ. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಬಗ್ಗೆ ಪ್ರಶ್ನಿಸಿದಾಗ ಇಂದಿರಾ ಗಾಂಧಿಯಾಗಿ ಉತ್ತರಿಸುವ ಕಂಗನಾ ಅಭಿನಯ ಪಾತ್ರಕ್ಕೆ ಜೀವ ತುಂಬಿದೆ. ರೋಮಂಚನವಾಗುವ ಡೈಲಾಗ್‌ಗಳು. ಆಗಿನ ಸ್ಥಿತಿಯನ್ನು ಹೋಲುವ ಸೆಟ್‌ಗಳು, ಕಂಗನಾ ಕಸ್ಟ್ಯೂಮ್, ಹೇರ್‌ಸ್ಟೈಲ್, ಮಾತಿನಶೈಲಿ ಎಲ್ಲವೂ ಪಾತ್ರಕ್ಕೆ ಜೀವ ತುಂಬಿದೆ. 1975-77ರ ಕಾಲದ ತುರ್ತು ಪರಿಸ್ಥಿತಿಯ ಕಥಾಹಂದರವಿರುವ ಸಿನಿಮಾದಲ್ಲಿ ಎಲ್ಲರ ಅಭಿನಯವೂ ಮೆಚ್ಚುಗೆ ನೀಡುವಂತಿದೆ. ಭಾರತವೇ ಇಂದಿರಾ, ಮತ್ತು ಇಂದಿರಾ ಈಸ್ ಇಂಡಿಯಾ ಎಂಬ ಮಾತಿನಲ್ಲಿ ಕೊನೆಗೊಳ್ಳುವ ಚಿತ್ರದ ಹೊಸ ಟ್ರೇಲರ್ ಸಿನಿ ರಂಗದಲ್ಲಿ ಸದ್ದು ಮಾಡಿದೆ. “ ಕಂಗನಾಗೆ ನ್ಯಾಷನಲ್ ಅವಾರ್ಡ್ ತಂದುಕೊಡುತ್ತೆ” ಚಿತ್ರತಂಡ ಈ ಟ್ರೇಲರ್ ಬಿಡುಗಡೆ ಮಾಡುತ್ತಿದ್ದಂತೆ, ಅಭಿಮಾನಿಗಳು ಕಾಮೆಂಟ್ ಬಾಕ್ಸ್ ಅನ್ನು ತುಂಬಿಸಿದ್ದಾರೆ. ಪ್ರತಿಯೊಬ್ಬರೂ ನಟಿ ಕಂಗನಾ ರಣಾವತ್ ಅಭಿನಯಕ್ಕೆ ತಲೆ ಬಾಗಿದ್ದಾರೆ. ನಟನೆಯಲ್ಲಿ ಬುದ್ಧಿವಂತರಾಗಿರುವ ಕಂಗನಾ ಎಂದಿದೂ ಫ್ಯಾನ್ಸ್‌ಗೆ ನಿರಾಸೆ ಮಾಡಲ್ಲ ಎಂಬುವುದಕ್ಕೆ ಈ ಸಿನಿಮಾ ಸಾಕ್ಷಿ ಅಂತಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಕೆಲವರಂತೂ ಕಂಗನಾ ಕೆರಿಯರ್‌ನಲ್ಲಿ ಈ ಸಿನಿಮಾ ಬೆಸ್ಟ್ ಸಿನಿಮಾವಾಗಲಿದೆ, ಈ ಸಿನಿಮಾಕ್ಕೆ ಇವರಿಗೆ ಖಂಡಿತಾ ನ್ಯಾಷನಲ್ ಅವಾರ್ಡ್ ತರುತ್ತದೆ ಎಂದು ಕೆಲವರು ಹೇಳಿದ್ದಾರೆ. ಎಮರ್ಜೆನ್ಸಿ ಸಿನಿಮಾದಲ್ಲಿ ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ವಿಶಾಕ್ ನಾಯರ್, ಆಧೀರ್ ಭಟ್, ಸತೀಶ್ ಕೌಶಿಕ್ ಮುಂತಾದವರು ನಟಿಸಿದ್ದಾರೆ. ಆಗಿನ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ಕಂಗನಾ ನಟಿಸಿದ್ದು, ಪಾತ್ರಕ್ಕೆ ಕಳೆ ಕೊಟ್ಟಿದ್ದಾರೆ. ಇನ್ನು ಈ ಸಿನಿಮಾಕ್ಕೆ ಜಿ. ವಿ ಪ್ರಕಾಶ್ ಕುಮಾರ್ ಅವರು ಸಂಗೀತ ನೀಡಿದ್ದಾರೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.