ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ಕೊಡಿಸುತ್ತೇನೆ ಎಂದು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೆಸರನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ವಕೀಲೆಯೊಬ್ಬರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಜಾಮೀನು ಕೊಡಿಸುವುದಾಗಿ ನ್ಯಾಯಮೂರ್ತಿಯ ಹೆಸರು ದುರ್ಬಳಕೆ ವಕೀಲೆ ದಯೀನಾಬಾನು ಎಂಬುವವರೇ ಈ ಪ್ರಕರಣದ ಆರೋಪಿಯಾಗಿದ್ದಾರೆ. ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ಕೊಡಿಸುವುದಾಗಿ ನ್ಯಾಯಮೂರ್ತಿಯ ಹೆಸರು ದುರ್ಬಳಕೆ ಮಾಡಿಕೊಂಡು ಆರೋಪಿಯ ತಾಯಿಯಿಂದ ಹಣ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಪ್ರಕರಣ ಸಂಬಂಧ ಹೈಕೋರ್ಟ್‌ನ ಕಾನೂನು ವಿಭಾಗದ ಜಂಟಿ ರಿಜಿಸ್ಟ್ರಾರ್ ಎಂ.ರಾಜೇಶ್ವರಿ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಇದನ್ನೂ ಓದಿ: HMPV Virus: ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್! ILI, ಸಾರಿ ಕೇಸ್‌ಗಳ ಮೇಲೆ ಹದ್ದಿನಕಣ್ಣು ಪೊಲೀಸರಿಂದ ಆರೋಪಿ ಬಂಧಿಸಿ ವಿಚಾರಣೆ ದೂರಿನ ಮೇರೆಗೆ ಹೈಕೋರ್ಟ್ ವಕೀಲೆ ದಯೀನಾಬಾನು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 318 (4) (ವಂಚನೆ) ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ವರದಿ: ಮಂಜುನಾಥ್ ನ್ಯೂಸ್ 18 ಕನ್ನಡ, ಬೆಂಗಳೂರು) ಸಾಲ ಕೊಡುವುದಾಗಿ ಹೊಟೆಲ್‌ಗೆ ಕರೆಸಿ ಅತ್ಯಾಚಾರ ಆರೋಪ; ಜಿಮ್ ಸೋಮನ ವಿರುದ್ದ FIR ಬೆಂಗಳೂರು: ಅತ್ಯಾಚಾರ ಆರೋಪದಲ್ಲಿ ಜಿಮ್ ಸೋಮನ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ : HMPV Virus: HMPV ವೈರಸ್‌ಗೆ ಆತಂಕ ಪಡಬೇಡಿ; ಜೀವಕ್ಕೇನು ಅಪಾಯವಿಲ್ಲ ಆದ್ರೆ ಮಾಸ್ಕ್ ಹಾಕಲೇಬೇಕು! ದಿನೇಶ್ ಗುಂಡೂರಾವ್ ಸಾಲ ಕೊಡುವುದಾಗಿ ಹೊಟೇಲ್‌ಗೆ ಕರೆಸಿ ಯುವತಿ ಮೇಲೆ ಅತ್ಯಾಚಾರ? ಜಿಮ್ ಸೋಮ ಯುವತಿಯೊಬ್ಬಳನ್ನು ಸಾಲ ಕೊಡುವುದಾಗಿ ಲ್ಯಾಂಗ್ ಪೋರ್ಡ್ ರಸ್ತೆಯ ಹೊಟೇಲ್‌ಗೆ ಕರೆಸಿ ಅತ್ಯಾಚಾರ ಎಸಗಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಜೆಪಿಯಿಂದ ಈ ಹಿಂದೆ ಸಕಲೇಶಪುರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಸೋಮ ಬಿಜೆಪಿಯಿಂದ ಈ ಹಿಂದೆ ಸಕಲೇಶಪುರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದನು. ಇತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸದ್ಯ ಅಶೋಕನಗರ ಪೊಲೀಸ್ರಿಂದ ಮುಂದುವರೆದ ತನಿಖೆ ಮುಂದುವರೆದಿದೆ. (ವರದಿ: ಗಂಗಾಧರ್ ನ್ಯೂಸ್ 18 ಕನ್ನಡ, ಬೆಂಗಳೂರು) None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.