ಪೆಟ್ರೋಲ್-ಡೀಸೆಲ್ ಬೆಲೆ Karnataka Petrol-Diesel Price Today: ಕರ್ನಾಟಕ ರಾಜ್ಯ ಸರಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಜೂನ್ 15ರಂದು ಹಣಕಾಸು ಇಲಾಖೆ ಹೊರಡಿಸಿದ ಅಧಿಸೂಚನೆ ಪ್ರಕಾರ, ಪೆಟ್ರೋಲ್ ಮೇಲಿನ ಕರ್ನಾಟಕ ಮಾರಾಟ ತೆರಿಗೆ (ಕೆಎಸ್‌ಟಿ)ಯನ್ನು ಸರಕಾರ ಶೇ. 25.92ರಿಂದ ಶೇ. 29.84ಕ್ಕೆ ಹೆಚ್ಚಿಸಿದೆ. ಇದೇ ರೀತಿ ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 14.34ರಿಂದ ಶೇ. 18.44ಕ್ಕೆ ಏರಿಕೆ ಮಾಡಿದೆ. ಹೀಗಾಗಿ ಪ್ರಸ್ತುತ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದ್ದು, ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್‌ಗೆ 3 ರೂಪಾಯಿಗಿಂತ ಹೆಚ್ಚಾಗಿದೆ. ಇದನ್ನೂ ಓದಿ: Bomb Threat: ದೇಶದ 60 ಆಸ್ಪತ್ರೆಗಳು, 41 ವಿಮಾನ ನಿಲ್ದಾಣಗಳಿಗೆ ಅಪರಿಚಿತರಿಂದ ಬಾಂಬ್ ಬೆದರಿಕೆ! ಪರಿಶೀಲನೆ ವೇಳೆ ಏನಾಯ್ತು! ಯಾವಾಗಲೂ ಹೇಳುವಂತೆ ಇಂಧನ ದರ ಅನ್ನೋದು ಸರಪಳಿ ಇದ್ದಂತೆ, ತೈಲಬೆಲೆ ಹೆಚ್ಚಾದ್ರೆ ಸಾರಿಗೆ, ಕೈಗಾರಿಕೆ, ಕೃಷಿ ಇವೆಲ್ಲದರ ಮೇಲೆ ಹೊಡೆತ ಬೀಳುತ್ತದೆ ಮತ್ತು ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತದೆ. ಜೂನ್ 15 ರಂದು ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ ನಂತರ ಕರ್ನಾಟಕದಲ್ಲಿ ಇಂಧನ ಬೆಲೆಯಲ್ಲಿ ಏರಿಕೆಯಾಗಿದೆ. ಈಗಾಗ್ಲೇ ಹೊಸ ಬೆಲೆ ಜಾರಿಗೆ ಬಂದಿದ್ದು, ಇಂಧನ ಹಾಕಿಸಿಕೊಳ್ಳಲು ಹೋದವರು ಬೆಲೆ ನೋಡಿ ದಂಗಾಗಿದ್ದಾರೆ. ಇಂಧನ ಬೆಲೆ ಏರಿಕೆಯಾದ ನಂತರ ರಾಜ್ಯದಲ್ಲಿ ಎಷ್ಟಿದೆ ತೈಲ ಬೆಲೆ ಅಂತಾ ನೋಡೋದಾದ್ರೆ. ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 102.86 ಆಗಿದ್ದರೆ ಡೀಸೆಲ್ ದರ ರೂ. 88.94 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ. 100.75, ರೂ. 104.21, ರೂ. 103.94 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.34, ರೂ. 92.15, ರೂ. 90.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 94.72 ಆಗಿದ್ದರೆ ಡೀಸೆಲ್ ದರ ರೂ. 87.62 ಆಗಿದೆ. ಇದನ್ನೂ ಓದಿ: Bridge Collapse: ಉದ್ಘಾಟನೆಗೂ ಮೊದಲೇ ಕುಸಿದ ಸೇತುವೆ! ಕೋಟ್ಯಂತರ ಹಣ ನೀರಿನಲ್ಲಿ ಹೋಮ! ಕೇಂದ್ರ ಸಚಿವರು ಹೇಳಿದ್ದೇನು? ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಬಾಗಲಕೋಟೆ - ರೂ. 103.44 (00) ಬೆಂಗಳೂರು - ರೂ. 102.86 (00) ಬೆಂಗಳೂರು ಗ್ರಾಮಾಂತರ - ರೂ. 102.94 (39 ಪೈಸೆ ಇಳಿಕೆ) ಬೆಳಗಾವಿ - ರೂ. 102.90 (00) ಬಳ್ಳಾರಿ - ರೂ. 104.89 (00) ಬೀದರ್ - ರೂ. 103.47 (00) ವಿಜಯಪುರ - ರೂ. 103.18 (13 ಪೈಸೆ ಏರಿಕೆ) ಚಾಮರಾಜನಗರ - ರೂ. 103.03 (03 ಪೈಸೆ ಏರಿಕೆ) ಚಿಕ್ಕಬಳ್ಳಾಪುರ - ರೂ. 102.86 (48 ಪೈಸೆ ಇಳಿಕೆ) ಚಿಕ್ಕಮಗಳೂರು - ರೂ. 104.44 (66 ಪೈಸೆ ಏರಿಕೆ) ಚಿತ್ರದುರ್ಗ - ರೂ. 104.56 (88 ಪೈಸೆ ಏರಿಕೆ) ದಕ್ಷಿಣ ಕನ್ನಡ - ರೂ.102.32 (29 ಪೈಸೆ ಏರಿಕೆ) ದಾವಣಗೆರೆ - ರೂ. 104.61 (17 ಪೈಸೆ ಏರಿಕೆ) ಧಾರವಾಡ - ರೂ.102.63 (00) ಗದಗ - ರೂ. 103.19 (00) ಕಲಬುರಗಿ - ರೂ.102.93 (00) ಹಾಸನ - ರೂ. 102.61 (21 ಪೈಸೆ ಇಳಿಕೆ) ಹಾವೇರಿ - ರೂ. 103.35 (00) ಕೊಡಗು - ರೂ. 104.12 (00) ಕೋಲಾರ - ರೂ.103.10 (05 ಪೈಸೆ ಇಳಿಕೆ) ಕೊಪ್ಪಳ - ರೂ. 104.09 (00) ಮಂಡ್ಯ - ರೂ. 102.70 (00) ಮೈಸೂರು - ರೂ. 102.95 (16 ಪೈಸೆ ಇಳಿಕೆ) ರಾಯಚೂರು - ರೂ.103.78 (00) ರಾಮನಗರ - ರೂ. 103.34 (36 ಪೈಸೆ ಏರಿಕೆ)) ಶಿವಮೊಗ್ಗ - ರೂ. 104.24 (01 ಪೈಸೆ ಏರಿಕೆ) ತುಮಕೂರು - ರೂ. 102.99 (49 ಪೈಸೆ ಇಳಿಕೆ) ಉಡುಪಿ - ರೂ.102.14 (29 ಪೈಸೆ ಇಳಿಕೆ) ಉತ್ತರ ಕನ್ನಡ - ರೂ. 103.31 (1.15 ಪೈಸೆ ಇಳಿಕೆ) ವಿಜಯನಗರ - ರೂ. 101.86 (00) ಯಾದಗಿರಿ - ರೂ. 103.37 (00) ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು ಬಾಗಲಕೋಟೆ - ರೂ. ̈89.49 ಬೆಂಗಳೂರು - ರೂ. 88.94 ಬೆಂಗಳೂರು ಗ್ರಾಮಾಂತರ - ರೂ. 89.01 ಬೆಳಗಾವಿ - ರೂ. 89 ಬಳ್ಳಾರಿ - ರೂ.90.80 ಬೀದರ್ - ರೂ. 89.51 ವಿಜಯಪುರ - ರೂ. 89.25 ಚಾಮರಾಜನಗರ - ರೂ. 89.10 ಚಿಕ್ಕಬಳ್ಳಾಪುರ - ರೂ. 88.94 ಚಿಕ್ಕಮಗಳೂರು - ರೂ. 90.31 ಚಿತ್ರದುರ್ಗ - ರೂ. 90.38 ದಕ್ಷಿಣ ಕನ್ನಡ - ರೂ. 88.41 ದಾವಣಗೆರೆ - ರೂ. 90.43 ಧಾರವಾಡ - ರೂ. 88.76 ಗದಗ - ರೂ. 89.26 ಕಲಬುರಗಿ - ರೂ. 89.03 ಹಾಸನ - ರೂ. 88.61 ಹಾವೇರಿ - ರೂ. 89.41 ಕೊಡಗು - ರೂ. 89.16 ಕೋಲಾರ - ರೂ. 89.20 ಕೊಪ್ಪಳ - ರೂ.90.08 ಮಂಡ್ಯ - ರೂ. 88.80 ಮೈಸೂರು - ರೂ. 89.02 ರಾಯಚೂರು - ರೂ. 89.81 ರಾಮನಗರ - ರೂ. 89.38 ಶಿವಮೊಗ್ಗ - 90.14 ತುಮಕೂರು - ರೂ. 88.96 ಉಡುಪಿ - ರೂ. 88.25 ಉತ್ತರ ಕನ್ನಡ - ರೂ. 89.31 ವಿಜಯನಗರ - ರೂ. 87.66 ಯಾದಗಿರಿ - ರೂ. 89.43 ಯಾವಾಗಲೂ ಹೇಳುವಂತೆ ಇಂಧನ ದರ ಅನ್ನೋದು ಸರಪಳಿ ಇದ್ದಂತೆ, ತೈಲಬೆಲೆ ಹೆಚ್ಚಾದ್ರೆ ಸಾರಿಗೆ, ಕೈಗಾರಿಕೆ, ಕೃಷಿ ಇವೆಲ್ಲದರ ಮೇಲೆ ಹೊಡೆತ ಬೀಳುತ್ತದೆ ಮತ್ತು ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.