ಬೆಂಗಳೂರು ಏರೋ ಇಂಡಿಯಾಗೆ ಮುಹೂರ್ತ ಫಿಕ್ಸ್! ಬೆಂಗಳೂರು: ಏಷ್ಯಾದ ಅತಿದೊಡ್ಡ ಏರೋ ಶೋ (Asia’s Biggest Aero Show) 15 ನೇ ಆವೃತ್ತಿ - ಏರೋ ಇಂಡಿಯಾ 2025 (Aero India 2025) ಫೆಬ್ರವರಿ 10 ರಿಂದ 14, 2025 ರವರೆಗೆ ಬೆಂಗಳೂರಿನ (Bangalore) ಯಲಹಂಕದ (Yalahanka) ಏರ್ ಫೋರ್ಸ್ ಸ್ಟೇಷನ್ (Air Force Station) ನಲ್ಲಿ ನಡೆಯಲಿದೆ. ಇದೇ ವೇಳೆ “ದಿ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್” (The Runway to a Billion Opportunities) ಕಾರ್ಯಕ್ರಮದ ಅಡಿ ಜಾಗತಿಕ ಹಾಗೂ ಭಾರತೀಯ ಏರೋಸ್ಪೇಸ್ ಉದ್ಯಮಗಳಲ್ಲಿನ ಪ್ರಗತಿಗಾಗಿ ಪಾಲುದಾರಿಕೆಗಳನ್ನು ಉತ್ತೇಜಿಸುವುದರೊಂದಿಗೆ ಸ್ವದೇಶೀ ಉದ್ಯಮಕ್ಕೆ ಹೆಚ್ಚು ಅವಕಾಶಗಳನ್ನು ಸೃಷ್ಠಿಸುವುದು ಇದರ ಉದ್ದೇಶವಾಗಿದೆ. ದೇಶ-ವಿದೇಶದ ಗಣ್ಯರು ಭಾಗಿ 1996ರಲ್ಲಿ ಪ್ರಾರಂಭವಾದ ಏಷ್ಯಾದ ಅತಿದೊಡ್ಡ ಏರೋ ಶೋ ಕಾರ್ಯಕ್ರಮವಾದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಸರಣಿಯು ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನಲ್ಲಿ ನಡೆಯುತ್ತದೆ. ಈ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ದೇಶ-ವಿದೇಶದ ನಾಯಕರು ಮತ್ತು ಜನರು ಆಗಮಿಸುತ್ತಾರೆ. ಆದರಿಂದ ಈ ಆವೃತ್ತಿಯಲ್ಲಿ ಹೊಸ ಪಾಲುದಾರಿಕೆಗಳನ್ನು ರೂಪಿಸಲು ಮತ್ತು ಸ್ವದೇಶೀಕರಣ ಪ್ರಕ್ರಿಯೆಯನ್ನು ವೇಗವಾಗಿ ಪತ್ತೆಹಚ್ಚುವ ಮಾರ್ಗವಾಗಿ ರಕ್ಷಣಾ ಮಂತ್ರಿಯವರ ಕಾನ್ಕ್ಲೇವ್, ಉದ್ಯಮಗಳ ಸಿಇಒಗಳ ರೌಂಡ್-ಟೇಬಲ್ ಸಭೆ, ಸ್ಟಾರ್ಟ್-ಅಪ್ ಮಂಥನ ಕಾರ್ಯಕ್ರಮ, ಹಾಗೂ ದೇಶೀಯ ಉತ್ಪಾದನಾ ಸಾಮರ್ಥ್ಯಗಳ ಪ್ರದರ್ಶನದ ಕುರಿತು ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಇದನ್ನು ಓದಿ: ಕಾವಿ ಧರಿಸಿ ಸೈಲೆಂಟಾಗಿ ಮನೆಗೆ ಬರ್ತಾರೆ, ಮಾಟ ಮಂತ್ರದ ಕಥೆ ಹೇಳಿ ಪಂಗನಾಮ ಹಾಕ್ತಾರೆ! ಎಚ್ಚರ! ಈ ಕಾವಿಧಾರಿಗಳಿಗೆ ಒಂಟಿ ಮನೆಗಳೇ ಟಾರ್ಗೆಟ್! ಮೇಕ್-ಇನ್-ಇಂಡಿಯಾಗೆ ಬಲ ‘ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್’ ಎಂಬ ವಿಶಾಲ ಥೀಮ್‌ನೊಂದಿಗೆ ಈ ಬಾರಿ ವಿದೇಶಿ ಮತ್ತು ಭಾರತೀಯ ಉದ್ಯಮಗಳ ನಡುವಿನ ಪಾಲುದಾರಿಕೆಯನ್ನು ರೂಪಿಸಲು ಮತ್ತು ಜಾಗತಿಕ ವಲಯದಲ್ಲಿ ಹೊಸ ಮಾರ್ಗಗಳ ಅನ್ವೇಷಣೆಗೆ ವೇದಿಕೆಯನ್ನು ಒದಗಿಸಿ, ಸ್ವದೇಶೀಕರಣ ಪ್ರಕ್ರಿಯೆಯನ್ನು ವೇಗಗೊಳಿಸಲು ಯೋಜಿಸಲಾಗಿದೆ. ಕಾರ್ಯಕ್ರಮದ ಮೊದಲ ಮೂರು ದಿನಗಳಲ್ಲಿ (ಫೆಬ್ರವರಿ 10, 11 ಮತ್ತು 12) ಉದ್ಯಮಗಳ ನಡುವೆ ವ್ಯವಹಾರಕ್ಕಾಗಿ ನಿಗದಿ ಪಡಸಿದ್ದು, ಇನ್ನುಳಿದ 13 ಮತ್ತು 14 ನೇ ತಾರೀಖಿನಂದು ಸಾರ್ವಜನಿಕರಿಗಾಗಿ ಭಾರತೀಯ ವಾಯು ಸೇನೆ ಪ್ರದರ್ಶನಗಳನ್ನು ಆಯೋಜಿಸಲಿದೆ. ಇದನ್ನು ಓದಿ: ಛತ್ತೀಸ್ಗಢದಲ್ಲಿ ನಕ್ಸಲರ ಅಟ್ಟಹಾಸ; ವಾಹನ ಸ್ಫೋಟದಲ್ಲಿ 10 ಯೋಧರು ಹುತಾತ್ಮ! ಇದೆ ವೇಳೆ ಭಾರತದ ಮಿತ್ರ ರಾಷ್ಟ್ರಗಳ ರಕ್ಷಣಾ ಸಚಿವರೊಂದಿಗೆ ರಕ್ಷಣಾ ಕ್ಷೇತದ ಸಹಭಾಗಿತ್ವದ ಕುರಿತು BRIDGE - ಅಂತರ್‌ರಾಷ್ಟ್ರೀಯ ರಕ್ಷಣೆ ಮತ್ತು ಜಾಗತಿಕ ನಿಶ್ಚಿತಾರ್ಥದ ಮೂಲಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದಕ್ಕಾಗಿ ಸಮಾವೇಶವನ್ನು ಆಯೋಜಿಸಲಿದೆ. ಇದು ಭೌಗೋಳಿಕ ಭದ್ರತೆಗಾಗಿ ಜೊತೆಗೆ ಪರಸ್ಪರ ಸಮೃದ್ಧಿಯ ಹಾದಿಯನ್ನು ಅವಕಾಶ ನೀಡುತ್ತದೆ. ಹಾಗೂ ಭದ್ರತೆಯ ದೃಷ್ಠಿಯಿಂದ ರಾಷ್ಟ್ರಗಳ ನಡುವಿನ ಸಹಕಾರಕ್ಕೆ ಸೇತುವೆಯಾಗುತ್ತದೆ ಎಂದು ಬಣ್ಣಿಸಲಾಗಿದೆ. ಇನ್ನು ಸಮಾವೇಶದಲ್ಲಿ ರಕ್ಷಣಾ ಸಚಿವರು ಹಾಗೂ ರಾಜ್ಯ ಖಾತೆ ರಕ್ಷಣಾ ಸಚಿವರು ಸೇರಿದಂತೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಹಾಗೂ ಮೂರು ಪಡೆಗಳ ಮುಖ್ಯಸ್ಥರು ಮತ್ತು ರಕ್ಷಣಾ ಕಾರ್ಯದರ್ಶಿಗಳು ಭಾಗವಿಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಾಯು ಸೇನೆಯು ಮೇಕ್-ಇನ್-ಇಂಡಿಯಾ ಯೋಜನಗೆ ತನ್ನ ಬದ್ದತೆಯನ್ನು ವಿಶ್ವಕ್ಕೆ ತೋರಿಸಲಿದೆ. ಭವಿಷ್ಯದ ರಕ್ಷಣಾ ಉತ್ಪಾದನಾ ಸಾಮರ್ಥ್ಯ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಈ ವೇಳೆ ಪ್ರದರ್ಶಿಸಲಾಗುತ್ತದೆ. ಇದೆ ವೇಳೆ ಭಾರತದ ಸ್ಟಾರ್ಟ್-ಅಪ್‌ಗಳ ಕುರಿತು ಪ್ರಚಾರವನ್ನು ಸಹ ಮಾಡಲಿದೆ. ಇನ್ನು ರಕ್ಷಣಾ ಇಲಾಖೆಯು 2024 ರ ಆವೃತ್ತಿಯ ಸಾಧನೆಗಳನ್ನು ಮೀರಿಸುವ ಗುರಿಯನ್ನು ಹೊಂದಿದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.