ಸಿಎಂಗೆ ಸಿ.ಟಿ. ರವಿ ಪತ್ರ ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ (CM Siddaramaiah) ವಿಧಾನ ಪರಿಷತ್ ಸದಸ್ಯ (MLC) ಸಿ.ಟಿ. ರವಿ (CT Ravi) ಪತ್ರ ಬರೆದಿದ್ದಾರೆ. ಅರ್ಕಾವತಿ ಡಿನೋಟಿಫಿಕೇಶನ್ (Arkavati Denotification) ಸಂಬಂಧ ನ್ಯಾಯಮೂರ್ತಿ ಕೆಂಪಣ್ಣ ನೇತೃತ್ವದ ಆಯೋಗ ನೀಡಿರುವ ವರದಿಯನ್ನು ಬಹಿರಂಗಗೊಳಿಸುವಂತೆ ಪತ್ರದಲ್ಲಿ ಸಿ.ಟಿ. ರವಿ ಆಗ್ರಹಿಸಿದ್ದಾರೆ. ತಮ್ಮ ಸರ್ಕಾರ ಈ ವರದಿಯನ್ನು ಬಿಡುಗಡೆ ಮಾಡದೇ ಮುಚ್ಚಿಡುವ ಕಾರ್ಯ ಮಾಡುತ್ತಿರುವುದು ನಿಮ್ಮ ಮತ್ತು ನಿಮ್ಮ ಸರ್ಕಾರದ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಕುರಿತು ಸಂಶಯ ಹಾಗೂ ಸಂದೇಹ ಹುಟ್ಟುವಂತೆ ಮಾಡುತ್ತಿದೆ ಅಂತ ಪತ್ರದಲ್ಲಿ ಸಿಟಿ ರವಿ ಕುಟುಕಿದ್ದಾರೆ. ಮತ್ತೊಂದೆಡೆ ವರದಿ ಬಹಿರಂಗ ಗೊಳಿಸುವಂತೆ ಸಿಎಂಗೆ ಸೂಚಿಸುವಂತೆ ಕೋರಿ ರಾಜ್ಯಪಾಲ (Governor) ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರಿಗೂ ಸಿ.ಟಿ. ರವಿ ಪತ್ರ ಬರೆದಿದ್ದಾರೆ. 8000 ಕೋಟಿ ಹಗರಣವಾಗಿರಬಹುದೆಂಬ ಅನುಮಾನ! ಅರ್ಕಾವತಿ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ನ್ಯಾ. ಕೆಂಪಣ್ಣ ಆಯೋಗದ ವರದಿ ಬಹಿರಂಗ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಚಿವ ಸಿಟಿ ರವಿ ಆಗ್ರಹಿಸಿ, ಪತ್ರ ಬರೆದಿದ್ದಾರೆ. ಸುಮಾರು 852 ಎಕರೆ ಎಷ್ಟು ಜಮೀನನ್ನ ಡಿ ನೋಟಿಫಿಕೇಶನ್ ಮಾಡಿದ್ದು, 8,000 ಕೋಟಿ ಹಗರಣವಾಗಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ. 2014ರಲ್ಲಿ ಮುಖ್ಯಮಂತ್ರಿಗಳಾಗಿದ್ದ ತಾವು ತನಿಖೆಗಾಗಿ ನ್ಯಾಯಮೂರ್ತಿ ಕೆಂಪಣ್ಣ ಸಮಿತಿ ರಚಿಸಿದ್ದು, ಇದುವರೆಗೂ ಸಮಿತಿ ನೀಡಿದ ವರದಿ ಬಹಿರಂಗವಾಗದೇ ಇರೋದು ಸಂಶಯಕ್ಕೆ ಕಾರಣವಾಗಿದೆ ಅಂತ ಸಿಟಿ ರವಿ ಪತ್ರದಲ್ಲಿ ಬರೆದಿದ್ದಾರೆ. ಸಿಎಂಗೆ ಸಿ.ಟಿ. ರವಿ ಬರೆದಿರುವ ಪತ್ರದಲ್ಲಿ ಏನಿದೆ? ಒಬ್ಬ ಜವಾಬ್ದಾರಿಯುತ ನಾಗರೀಕನಾಗಿ ಹಾಗೂ ಜನಪ್ರತಿನಿಧಿಯಾಗಿ ಈ ಮೂಲಕ ತಮ್ಮ ಗಮನಸೆಳೆಯಬಯಸುವುದೇನೆಂದರೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಆರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಸುಮಾರು 852 ಎಕರೆಯಷ್ಟು ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದು ಇದು ಸುಮಾರು 8000 ಕೋಟಿ ರೂ. ಮೊತ್ತದ ಹಗರಣವಾಗಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇದನ್ನೂ ಓದಿ: MB Patil: ಸಿದ್ದರಾಮಯ್ಯ ಬೆನ್ನಲ್ಲೇ ಎಂಬಿ ಪಾಟೀಲ್‌ಗೂ ಸಂಕಷ್ಟ! ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು ವರದಿ ಬಿಡುಗಡೆ ಮಾಡದಿರುವುದು ಸಂಶಯಕ್ಕೆ ಕಾರಣ 2014ರಲ್ಲಿ ಮುಖ್ಯಮಂತ್ರಿಗಳಾಗಿದ್ದ ತಾವು ಇದರ ತನಿಖೆಗಾಗಿ ನ್ಯಾಯಮೂರ್ತಿ ಕೆಂಪಣ್ಣರವರ ನೇತೃತ್ವದ ವಿಚಾರಣ ಆಯೋಗವನ್ನು ಕಮಿಷನ್ ಆಫ್ ಎನರಿ ಆಕ್ಟ್ 1952 ರಂತೆ ರಚಿಸಿದ್ದು, ಅದರಂತೆ ಈ ಆಯೋಗವು ವಿಚಾರಣ ವರದಿಯನ್ನು ಸಹ ನೀಡಿದೆ. ಆಯೋಗಗಳ ತನಿಖಾ ವರದಿಗಳು ಸಾರ್ವಜನಿಕ ದಾಖಲೆಗಳಾಗಿದ್ದು, ಅದನ್ನು ಜನಸಾಮಾನ್ಯರಿಗೆ ದೊರಕುವ ಹಾಗೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಆದರೆ ಇದುವರೆಗೂ ಆಯೋಗದ ವರದಿಯನ್ನು ಬಿಡುಗಡೆ ಮಾಡದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ನಿಮ್ಮ ಮತ್ತು ಸರ್ಕಾರದ ಬಗ್ಗೆ ಸಂಶಯ ರಾಜ್ಯದ ಜನಪ್ರತಿನಿಧಿಯಾಗಿ ನಾನು ಸಹ ಈ ವರದಿಯ ಬಿಡುಗಡೆಗಾಗಿ ಕಾಯುತ್ತಿದ್ದೇನೆ. ತಮ್ಮ ಸರ್ಕಾರ ಈ ವರದಿಯನ್ನು ಬಿಡುಗಡೆ ಮಾಡದೇ ಮುಚ್ಚಿಡುವ ಕಾರ್ಯ ಮಾಡುತ್ತಿರುವುದು ನಿಮ್ಮ ಮತ್ತು ನಿಮ್ಮ ಸರ್ಕಾರದ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಕುರಿತು ಸಂಶಯ ಹಾಗೂ ಸಂದೇಹ ಹುಟ್ಟುವಂತೆ ಮಾಡುತ್ತಿದೆ. ನಾನು ಕಳಂಕರಹಿತ ರಾಜಕಾರಣಿ ಎಂದಿದ್ದೀರಿ ನಾನೊಬ್ಬ ಪ್ರಾಮಾಣಿಕ, ಕಳಂಕರಹಿತ ರಾಜಕಾರಣಿ, ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲ ಎಂದು ತಾವು ಸದಾಕಾಲ ಪ್ರತಿಪಾದಿಸುವ ಮಾತಿನ ಬದ್ಧತೆಯನ್ನು ತೋರಿಸುವ ಸಕಾಲ ಇದಾಗಿದೆ. ತಾವು ಸದಾ ನುಡಿದಂತೆ ನಡೆಯುವ ರಾಜಕಾರಣಿ ಎಂದು ರಾಜ್ಯದ ಮತ್ತು ರಾಷ್ಟ್ರದ ಜನರಿಗೆ ಸಿದ್ದಪಡಿಸುವ ಕಾಲ ಇದಾಗಿದೆ. ತಾವು ತಮ್ಮದೇ ಮಾತುಗಳನ್ನು ದೃಢಪಡಿಸುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನು ಸಾರ್ವಜನಿಕರ ಪರಿಶೀಲನೆಗೆ ಬಿಡುಗಡೆ ಮಾಡುವುದರ ಮೂಲಕ ಭ್ರಷ್ಟಾಚಾರದ ವಿರುದ್ಧದ ತಮ್ಮ ಹೋರಾಟದ ಮಾತುಗಳನ್ನು ಪುನಃ ದೃಢೀಕರಿಸಬೇಕೆಂದು ಕೇಳಿಕೊಳ್ಳುತ್ತೇನೆ ಅಂತ ಪತ್ರದಲ್ಲಿ ಸಿಟಿ ರವಿ ಆಗ್ರಹಿಸಿದ್ದಾರೆ. ಸಿಎಂ ವಿರುದ್ಧ ರಾಜ್ಯಪಾಲರಿಗೆ ಪತ್ರ ಮತ್ತೊಂದೆಡೆ ಇದೇ ವಿಚಾರಕ್ಕೆ ರಾಜ್ಯಪಾಲರಿಗೂ ಸಿಟಿ ರವಿ ಪತ್ರ ಬರೆದಿದ್ದಾರೆ. ಅರ್ಕಾವತಿ ಡಿನೋಟಿಫಿಕೇಷನ್ ಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆಂಪಣ್ಣನವರು ನೇತೃತ್ವದ ಆಯೋಗ ನೀಡಿರುವ ವರದಿಯನ್ನು ಬಹಿರಂಗಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೂಚಿಸುವಂತೆ ಪತ್ರದಲ್ಲಿ ರಾಜ್ಯಪಾಲರಿಗೆ ಸಿಟಿ ರವಿ ಮನವಿ ಮಾಡಿದ್ದಾರೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.