ದರ್ಶನ್ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿ ಒಂಭತ್ತು ದಿನ ಕಳೆದಿದ್ದಾರೆ. ಜೂನ್ 11 ಮಂಗಳವಾರದಂದು ನಟನನ್ನು ಅರೆಸ್ಟ್ ಮಾಡಲಾಗಿತ್ತು. ಜೂನ್ 11 ರಿಂದ ಇಂದಿನವರೆಗೂ ನಟ, ಪವಿತ್ರಾ ಗೌಡ ಹಾಗೂ ಗ್ಯಾಂಗ್ ಜೊತೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಸಿನಿಮಾ, ಶೂಟಿಂಗ್ ಅಂತಾ ಓಡಾಡುತ್ತಿದ್ದ ನಟನಿಗೆ ಈಗ ಪೊಲೀಸ್ ಠಾಣೆಯಲ್ಲಿ ವಾಸಿಸಬೇಕಾಗಿ ಬಂದಿದೆ. ಜೂನ್ 20ರಂದು ನಾಳೆ ದರ್ಶನ್ ಆಂಡ್ ಗ್ಯಾಂಗ್ ಪೊಲೀಸ್ ಕಸ್ಟಡಿಗೆ ಅಂತ್ಯವಾಗಲಿದೆ. ಜೂನ್ 20ರಂದು ದರ್ಶನ್ ಹಾಗೂ ಟೀಮ್ನ್ನು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಲಿದ್ದು, ಪ್ರಕರಣದ ತನಿಖೆ ಸಂಬಂಧ ಪೇಪರ್ ವರ್ಕ್ ನಡೆಸಿದ್ದಾರೆ. ಇಂದು ಪೊಲೀಸರು ದರ್ಶನ್ ಆಂಡ್ ಗ್ಯಾಂಗ್ ವಿಚಾರಣೆ ಪೂರ್ಣಗೊಳಿಸಲಿದ್ದಾರೆ. ತನಿಖೆ ಪೂರ್ಣಗೊಂಡ ಹಿನ್ನೆಲೆ, ಪುನಃ ಕಸ್ಟಡಿಗೆ ಕೇಳದಿರಲು ಪೊಲೀಸರ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಬಹುತೇಕ ನಾಳೆ ದರ್ಶನ್, ಪವಿತ್ರಗೌಡ ಸೇರಿದಂತೆ ಎಲ್ಲರು ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಪೊಲೀಸ್ ಕಮೀಷನರ್ ಬಿ. ದಯಾನಂದ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಆಗಮಿಸಿದ್ದಾರೆ. ಡಿಸಿಪಿ ಗಿರೀಶ್ ಕೂಡ ಆಗಮಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ತಲುಪಿದೆ. ಆರೋಪಿಗಳ ಕಸ್ಟಡಿ ನಾಳೆ ಅಂತ್ಯ ಹಿನ್ನೆಲೆಯಲ್ಲಿ ಇಂದು ಕೇಸ್ ಪ್ರಗತಿ, ತನಿಖೆ ಬಗ್ಗೆ ಕಮೀಷನರ್ ಮಾಹಿತಿ ಪಡೆಯಲಿದ್ದಾರೆ. ಇದನ್ನೂ ಓದಿ: Darshan-Pavithra: ಪವಿತ್ರಾಳನ್ನು ಶನಿಗೆ ಯಾಕೆ ಹೋಲಿಕೆ ಮಾಡ್ತೀರಾ? ದರ್ಶನ್ ಗೆಳತಿ ಮೇಲೂ ಉಮಾಪತಿ ಗರಂ ಠಾಣೆಯಲ್ಲಿ ಕುಸಿದು ಬಿದ್ದ ಪವಿತ್ರಾ ಗೌಡ ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಸ್ಟಡಿಯಲ್ಲಿದ್ದ ಪವಿತ್ರಾಗೌಡ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಠಾಣೆಗೆ ವೈದ್ಯರನ್ನು ಪೊಲೀಸರು ಕರೆಸಿದ್ದಾರೆ. ಕೂಡಲೇ ವೈದ್ಯರೊಂದಿಗೆ ಪವಿತ್ರಾ ಗೌಡರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ವಿಚಾರಣೆ ವೇಳೆ ಪವಿತ್ರಾ ಗೌಡ ಅಸ್ವಸ್ಥಗೊಂಡಿದ್ರು. ಹೀಗಾಗಿ ಅವರನ್ನು ಅಂಬೇಡ್ಕರ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ರಾತ್ರಿ ವೇಳೆ ಪವಿತ್ರಾ ಗೌಡರನ್ನು ಸಾಂತ್ವನ ಕೇಂದ್ರಲ್ಲಿರಿಸಲಾಗುತ್ತಿತ್ತು. ಮತ್ತೆ ಬೆಳಗ್ಗೆ ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗುತ್ತಿತ್ತು. ಪವಿತ್ರಗೌಡರನ್ನು ಮಲ್ಲತ್ತಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ಕರೆತಂದಿದ್ದಾರೆ. ಇನ್ನೂ ವೈದ್ಯರು ಕೂಡಲೇ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಚಿಕಿತ್ಸೆ ಮುಗಿಯುತ್ತಿದ್ದಂತೆ ಮತ್ತೆ ಠಾಣೆಗೆ ಪವಿತ್ರಾ ಗೌಡರನ್ನು ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ. ಪೊಲೀಸ್ ಕಮಿಷನರ್ ಬಿ ದಯಾನಂದ್ ಸುದ್ದಿಗೋಷ್ಠಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಪೊಲೀಸ್ ಕಮಿಷನರ್ ಬಿ ದಯಾನಂದ್ ಅವರು, ಈವರೆಗೆ 17 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ರು. ಆರೋಪಿಗಳ ಕೂಲಂಕಷ ವಿಚಾರಣೆ ನಡೆಸಲಾಗ್ತಿದೆ ಇದೆ. ಪ್ರಕರಣದ ತನಿಖೆಯನ್ನ ಎಸಿಪಿ ಮಟ್ಟದ ಅಧಿಕಾರಿಗೆ ನೀಡಲಾಗಿದೆ ಎಂದು ಹೇಳಿದ್ರು. ಪ್ರತಿ ವಿಚಾರದ ಬಗ್ಗೆ ಪ್ರತ್ಯೇಕ ತಂಡ ರಚಿಸಿ ತನಿಖೆ ಮಾಡಲಾಗುತ್ತಿದೆ. ತನಿಖಾ ತಂಡದಲ್ಲಿ ಹಲವು ಇನ್ಸ್‌ಪೆಕ್ಟರ್, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಸಾಕ್ಷಿ ಸಂಗ್ರಹಕ್ಕೆ ಸಹಕರಿಸಲು ಎಫ್ಎಸ್ಎಲ್ ತಜ್ಞರು, ತಾಂತ್ರಿಕ ಪರಿಣತರು ಇದ್ದಾರೆ. ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಪೊಲೀಸರು ನಿಷ್ಪಕ್ಷಪಾತ, ಪ್ರಾಮಾಣಿಕ ತನಿಖೆ ನಡೆಸುತ್ತಿದ್ದಾರೆ ಎಂದು ಕಮಿಷನ್ ದಯಾನಂದ ಹೇಳಿದ್ರು. ರೇಣುಕಾಸ್ವಾಮಿ ಕೇಸ್ಗೆ ಸಂಬಂಧಿಸಿದಂತೆ ಎಲ್ಲಾ ಕಡೆ ತನಿಖೆ ನಡೆಯುತ್ತಿದೆ. ಚಿತ್ರದುರ್ಗ, ಮೈಸೂರಿನಲ್ಲೂ ಒಂದೊಂದು ತನಿಖಾ ತಂಡ ಇದೆ. ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಎಲ್ಲವನ್ನೂ ಮಾನಿಟರ್ ಮಾಡ್ತಿದ್ದಾರೆ. ಪ್ರತಿ ತಂಡಕ್ಕೆ ಓರ್ವ ಇನ್ಸ್‌ಪೆಕ್ಟರ್ ನೇತೃತ್ವ ವಹಿಸಿ ತನಿಖೆ ಮಾಡ್ತಿದ್ದಾರೆ. ಕೇಸ್ಗೆ ಸಂಬಂಧಿಸಿದಂತೆ ಈಗಲೇ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಕಮಿಷನರ್ ದಯಾನಂದ ಅವರು ಹೇಳಿದ್ದಾರೆ. ವರದಿ: ಮುನಿರಾಜು ಕೆ. ಜಿ None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.