ಅಮ್ಮನ ಜನ್ಮ ದಿನಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ ಸಾನ್ವಿ ಸುದೀಪ್; ಇನ್ಸ್ಟಾ ಪೋಸ್ಟ್ ಅಲ್ಲಿದೆ ಒಂದು ಸ್ಪೆಷಲ್ ಫೋಟೋ! ಸಾನ್ವಿ ಸುದೀಪ್ (Sanvi Sudeep) ತಮ್ಮ ಅಮ್ಮನಿಗೆ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ಅಮ್ಮನಿಗಿಂತಲೂ ಸುಂದರ ಯಾರೂ ಇಲ್ಲ. ಅಮ್ಮನಿಗೆ ಹ್ಯಾಪಿ ಬರ್ತ್ ಡೇ ಅಂತಲೇ (Happy Birthday) ಸಾನ್ವಿ ಸುದೀಪ್ (Sanvi Sudeep) ಬರೆದುಕೊಂಡಿದ್ದಾರೆ. ಅಮ್ಮನ (Mother) ಜೊತೆಗಿನ ಒಂದು ಸುಂದರ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಎರಡೂ ಸೇರಿ ಇದೀಗ ಈ ಒಂದು ಪೋಸ್ಟ್ (Post) ಇನ್ನಷ್ಟು ಇಂಟ್ರಸ್ಟಿಂಗ್ ಅನಿಸುತ್ತಿದೆ. ಸಾನ್ವಿ ಸುದೀಪ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿಯೇ ಇದನ್ನ ಹಂಚಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಅಮ್ಮನ ಜನ್ಮ ದಿನಕ್ಕೆ ಸಾನ್ವಿ ವಿಶ್ ಪ್ರಿಯಾ ಸುದೀಪ್ ಜನವರಿ-6 ರಂದು ತಮ್ಮ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡ್ತಾರೆ. ಆದರೆ, ಕಿಚ್ಚನ ಅಮ್ಮ ಇತ್ತೀಚಿಗೆ ತೀರಿ ಹೋಗಿದ್ದಾರೆ. ಆ ನೋವು ಇಡೀ ಮನೆಯಲ್ಲಿ ಇದ್ದೇ ಇದೆ. ಈ ಒಂದು ಬೇಸರದ ಸಮಯದಲ್ಲಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದರೆ, ಸಾನ್ವಿ ಸುದೀಪ್ ತಮ್ಮ ಅಮ್ಮನ ಜನ್ಮ ದಿನಕ್ಕೆ ಶುಭಾಶಯ ತಿಳಿಸಿದ್ದಾರೆ. ಅಷ್ಟೇ ವಿಶೇಷವಾದ ಒಂದು ಫೋಟೋ ಕೂಡ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ ಎರಡು ಸುಂದರ ಲೈನ್ ಕೂಡ ಬರೆದಿದ್ದಾರೆ. ಆ ಲೈನ್‌ಗಳು ಈ ರೀತಿ ಇವೆ ಓದಿ. ಕಿಚ್ಚನ ಮಗಳು ‘ಸಾನು’ ಬರೆದ ಸಾಲು… Never seen a more beautiful woman than today’s birthday girl !! Happy birthday ma I love you most ಅಮ್ಮ ಸುಂದರವಾಗಿಯೇ ಕಾಣಿಸ್ತಾ ಇದ್ದೀರಾ? ಹಿಂದೆ ಎಂದು ನೋಡದ ರೀತಿ ಇದ್ದೀರಾ? ಹ್ಯಾಪಿ ಬರ್ತ್ ಡೇ. ಐ ಲವ್ ಯು ಅಮ್ಮ…. ಇದನ್ನೂ ಓದಿ: Bigg Boss: ಚೈತ್ರಾ ಕುಂದಾಪುರ-ರಜತ್ ಕಿಶನ್ ಮಾತಿನ ಚಕಮಕಿ! ಹ್ಯಾಪಿ ಬರ್ತ್ ಡೇ ಅತ್ತಿಗೆ ಪ್ರಿಯಾ ಸುದೀಪ್ ಅವರ ಜನ್ಮ ದಿನಕ್ಕೆ ಸಾನ್ವಿ ಸುದೀಪ್ ಶುಭಾಶಯ ತಿಳಿಸಿದ್ದಾರೆ. ಅದನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. ಅದನ್ನ ನೋಡಿದ ಕಿಚ್ಚನ ಅನೇಕ ಫ್ಯಾನ್ಸ್ ತುಂಬಾನೆ ಖುಷಿಪಟ್ಟಿದ್ದಾರೆ. ಹ್ಯಾಪಿ ಬರ್ತ್ ಡೇ ಪ್ರಿಯಾ ಮ್ಯಾಡಂ ಅಂತಲೂ ವಿಶ್ ಮಾಡಿದ್ದಾರೆ. ಹ್ಯಾಪಿ ಬರ್ತ್ ಡೇ ಪ್ರಿಯಾ ಅತ್ತಿಗೆ ಅಂತಲೂ ಅದ್ಯಾರೋ ಹೇಳಿದ್ದಾರೆ. ಕಿಚ್ಚ ಸುದೀಪ್ ಅವರ ಫ್ಯಾನ್ಸ್ ಪ್ರಿಯಾ ಅವರನ್ನ ಅತ್ತಿಗೆ ಅಂತಲೇ ಕರೆಯುತ್ತಾರೆ. ಅಷ್ಟೇ ಗೌರವದಿಂದಲು ಕಾಣುತ್ತಾರೆ. ಫ್ಯಾನ್ಸ್ ಅಷ್ಟೇ ಅಲ್ಲ. ಸುದೀಪ್ ಸ್ನೇಹ ವಲಯದ ಅಷ್ಟೂ ಸ್ನೇಹಿತರು ಪ್ರಿಯಾ ಅವರನ್ನ ಗೌರವಿಸುತ್ತಾರೆ. ಇದನ್ನೂ ಓದಿ: Sudeep: ಅಮ್ಮ ಬಳಸುತ್ತಿದ್ದ ಕುರ್ಚಿ, ಅಮ್ಮನ ಚಪ್ಪಲಿಯೇ ಈಗ ಕಿಚ್ಚನ ಅತಿ ದೊಡ್ಡ ಆಸ್ತಿ ಪ್ರಿಯಾ ಸುದೀಪ್ ದಿ ಬೆಸ್ಟ್ ಪ್ರಿಯಾ ಸುದೀಪ್ ಅವರ ಬಗ್ಗೆ ಒಂದು ಕಾಂಪ್ಲಿಮೆಂಟ್ ಇದೆ. ಅದು 2006, ಫೆಬ್ರವರಿ 4 ಸಮಯದ ಮಾತಾಗಿದೆ. ರಾಹುಲ್ ಅನ್ನೋರು ಇದನ್ನ ಸಾನ್ವಿ ಸುದೀಪ್ ಪೋಸ್ಟ್‌ನ ಕಾಮೆಂಟ್ ಬಾಕ್ಸ್ ಅಲ್ಲಿಯೇ ಬರೆದುಕೊಂಡಿದ್ದಾರೆ. ಹೌದು, ಆಗಿನ್ನು ಮೈ ಆಟೋಗ್ರಾಫ್ ಸಿನಿಮಾ ರಿಲೀಸ್ ಆಗಿರಲಿಲ್ಲ. ಸುದೀಪ್ ಅವರನ್ನ ಭೇಟಿ ಆಗ್ಬೇಕು ಅಂತ ಅವರ ಮನೆಗೆ ಹೋಗಿದ್ದೆ. ಆಗ ಪ್ರಿಯಾ ಸುದೀಪ್ ಅವರು ಬಂದ್ರು. ಅವರಿಗೆ ನಾನು ಯಾರೂ ಅಂತಲೂ ತಿಳಿದಿರಲಿಲ್ಲ. ಆದರೂ ನಾನು ಬ್ರೇಕ್ ಫಾಸ್ಟ್ ಮಾಡ್ಬೇಕು ಅಂತ ಹೇಳಿದರು. ನಾನು ಬ್ರೇಕ್ ಫಾಸ್ಟ್ ಮುಗಿಸೋವರೆಗೂ ಬಿಡಲೇ ಇಲ್ಲ. ಅಷ್ಟು ಕೇರ್ ಮಾಡ್ತಾರೆ. ಅಷ್ಟು ಗೌರವಿಸುತ್ತಾರೆ ಅಂತಲೇ ಬರೆದುಕೊಂಡಿದ್ದಾರೆ. ಒಟ್ಟಾರೆ, ಪ್ರಿಯಾ ಸುದೀಪ್ ಸ್ಪೆಷಲ್ ಆಗಿದ್ದಾರೆ. ಎಲ್ಲರಿಗೂ ಗೌರವ ಕೊಡ್ತಾರೆ. ಆ ಗೌರವವನ್ನ ಉಳಿಸಿಕೊಂಡೇ ಹೋಗ್ತಿದ್ದಾರೆ ಅಂತಲೂ ಹೇಳಬಹುದು. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.