ಚೈತ್ರಾ ಕುಂದಾಪುರ-ರಜತ್ ಕಿಶನ್ ಮಾತಿನ ಚಕಮಕಿ; ಮಾತಿನ ಬರದಲ್ಲಿ ಆ ಒಂದು ಪದ ಬಳಸಿದ ಬುಜ್ಜಿ! ದೊಡ್ಮನೆಯಲ್ಲಿ (Bigg Boss House) ಹೊಸ ಆಟ ಶುರು ಆಗಿದೆ. ಮನೆ ಕ್ಯಾಪ್ಟನ್ ರಜತ್ ಕಿಶನ್ ಖಳನಾಯಕರಂತೆ ಡ್ರೆಸ್ ತೊಟ್ಟಿದ್ದಾರೆ. ಫಿನಾಲೆಗೆ ಹೋಗಲು ಅರ್ಹತೆ ಇಲ್ಲದ ಐವರು ಯಾರು ಅನ್ನೋದನ್ನ ರಜತ್ ಹೇಳಬೇಕಿದೆ.. ಪಕ್ಕಾ ಖಳನಾಯಕನ ಗೆಟಪ್ ಅಲ್ಲಿಯೇ ಇರೋ ರಜತ್ (Rajath) ಸಖತ್ ಡ್ಯಾನ್ಸ್ ಕೂಡ ಮಾಡಿದ್ದಾರೆ. ಟಿಕೆಟ್ ಟು ಹೋಮ್ ಅನ್ನೋ ಬೋಲ್ಡ್ ಕೂಡ ಹಾಕಿದ್ದಾರೆ. ಹೀಗೆ ಚೈತ್ರಾ ಕುಂದಾಪುರಗೆ (Chaithra Kundapur) ರಜತ್ ಇಲ್ಲಿ ಟಿಕೆಟ್ ಟು ಹೋಮ್ (Ticket to Home) ಬೋರ್ಡ್ ಹಾಕಿದ್ದಾರೆ. ಈ ಮೂಲಕ ಚೈತ್ರಾ ಕುಂದಾಪುರ ಜೊತೆಗೆ ವಾದಕ್ಕೂ ಇಳಿದಿದ್ದಾರೆ. ಸದಾ ಸುಳ್ಳನ್ನೆ ಹೇಳೋದು ಅಂತಲೇ ‘ಸುಳ್ಳಿ ಸುಳ್ಳಿ’ ಅಂತಲೇ ಹೇಳಿದ್ದಾರೆ. ಆದರೆ, ಇದು ಬೇರೆ ರೀತಿನೇ ಕೇಳುತ್ತಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಚೈತ್ರಾ ನೀವು ಸುಳ್ಳು ಬುರುಕಿ ಚೈತ್ರಾ ಕುಂದಾಪುರ ಸುಳ್ಳು ಹೇಳ್ತಾರೆ. ಈ ಒಂದು ಮಾತನ್ನ ಮನೆಯ ಸದಸ್ಯರು ಹೇಳ್ತಾನೇ ಇರ್ತಾರೆ. ಮೋಕ್ಷಿತಾ ಪೈ, ಐಶ್ವರ್ಯ ಸಿಂಧೋಗಿ ಹೀಗೆ ಇನ್ನು ಕೆಲವ್ರು ಹೇಳಿಕೊಂಡಿದ್ದಾರೆ. ಅದಕ್ಕೆ ಪೂರಕ ಅನ್ನುವ ಹಾಗೆ ರಜತ್ ಮಾತುಗಳೂ ಇವೆ. ಆದರೆ, ಹೇಳಿದ ರೀತಿ ಮಾತ್ರ ಬೇರೆ ರೀತಿನೇ ಸೌಂಡ್ ಆಗುತ್ತಿದೆ. ಸುಳ್ಳಿ ನೀನು…ಸುಳ್ಳಿ ನೀನು ಅಂತಲೇ ಒತ್ತಿ ಹೇಳ್ತಾರೆ. ಆದರೆ, ಉತ್ತರ ಕರ್ನಾಟಕದಲ್ಲಿ ಈ ಪದಕ್ಕೆ ಬೇರೆ ಅರ್ಥ ಇದೆ. ಆದರೆ, ರಜತ್ ಕಿಶನ್ ಇಲ್ಲಿ ಈ ಮಾತನ್ನ ಸುಳ್ಳುಬುರುಕಿ ಅನ್ನೋ ಅರ್ಥದಲ್ಲಿಯೇ ಹೇಳಿದ್ದಾರೆ. ಆದರೆ, ರಜತ್ ಮಾತನ್ನ ಸರಿಯಾಗಿಯೇ ಅರ್ಥ ಮಾಡಿಕೊಂಡ ಭವ್ಯ ಗೌಡ, ಹುಬ್ಬೇರಿಸಿದ್ದಾರೆ. ಇದನ್ನೂ ಓದಿ: Amaran Movie: ಸ್ಟಾರ್ ಸುವರ್ಣದಲ್ಲಿ ಬರ್ತಿದೆ ಅಮರನ್! ಯಾವಾಗ? ಚೈತ್ರಾ-ರಜತ್ ಭಯಂಕರ ಮಾತು ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಕಿತ್ತಾಡಿದ್ದಾರೆ. ಮಾತಿನಲ್ಲಿಯೇ ಪರಸ್ಪರ ಟೀಕಿಸಿದ್ದಾರೆ. 50 ದಿನ ಆದ್ಮೇಲೆ ಬಂದಿದ್ದೀರಾ? ನಿಮ್ಮ ಲಕ್ ಚೆನ್ನಾಗಿದೆ ಅನ್ನೋ ಅರ್ಥದಲ್ಲಿಯೇ ಚೈತ್ರಾ ಕುಂದಾಪುರ ಹೇಳ್ತಾರೆ. ಆದರೆ, ಇದಕ್ಕೆ ಪ್ರತಿಯಾಗಿಯೇ ರಜತ್ ಕಿಶನ್ ಒಂದು ಮಾತು ಹೇಳ್ತಾರೆ. ನಾನು ಲೇಟ್ ಆಗಿಯೇ ಬಂದದ್ದೇನೆ. ನಿಮ್ಮ ಲಕ್ ಚೆನ್ನಾಗಿದೆ. ಒಂದು ವೇಳೆ ಮೊದಲೇ ಬಂದಿದ್ದರೇ, ನಾಲ್ಕೇ ವಾರಕ್ಕೆ ನಿಮನ್ನ ಮನೆಗೆ ಕಳಿಸುತ್ತಿದ್ದೆ ಅಂತಲೇ ರಜತ್ ಕಿಶನ್ ಹೇಳಿದ್ದಾರೆ. ಯಾರಿಗೆಲ್ಲ ಟಿಕೆಟ್ ಟು ಹೋಮ್ ರಜತ್ ಕಿಶನ್ ಮನೆಯ ಐದು ಜನರಿಗೆ ಟಿಕೆಟ್ ಟು ಹೋಮ್ ಕೊಟ್ಟಿದ್ದಾರೆ. ಚೈತ್ರಾ ಕುಂದಾಪುರ, ಗೌತಮಿ ಜಾದವ್, ಮೋಕ್ಷಿತಾ ಪೈ ಹೀಗೆ ಐದು ಜನಕ್ಕೆ ರಜತ್ ಕಿಶನ್ ಟಿಕೆಟ್ ಟು ಹೋಮ್ ಅನ್ನೆ ಕೊಟ್ಟಿದ್ದಾರೆ. ಈ ಮೂಲಕ ರಜತ್ ಕಿಶನ್ ಈ ವಾರದ ಈ ಒಂದು ಟಾಸ್ಕ್ ಮುಖಾಂತರ ಅತಿ ಹೆಚ್ಚು ಗಮನ ಸೆಳೆದಿದ್ದಾರೆ. ಇದನ್ನೂ ಓದಿ: Yash CDP: ರಾಕಿ ಭಾಯ್ ಕಾಮನ್ ಡಿಪಿ ಜೌಟ್! ಅತಿ ದೊಡ್ಡ ಹಬ್ಬಕ್ಕೆ ಸಜ್ಜಾದ ಯಶ್ ಫ್ಯಾನ್ಸ್ ಕಿಚ್ಚ ಸುದೀಪ್ ಹೇಳಿದಂತೆ ಈ ವಾರ ಒಬ್ಬರಿಗೆ ಟಿಕೆಟ್ ಟು ಫಿನಾಲೆ ಸಿಗ್ತಾ ಇದೆ. ಹಾಗಾಗಿಯೇ ಈ ಒಂದು ವಾರ ಮನೆಯ ಎಲ್ಲ ಸದಸ್ಯರಿಗೂ ತುಂಬಾನೆ ಮಹತ್ವದ್ದೇ ಆಗಿದೆ. ಈ ಹಿನ್ನೆಲೆಯಲ್ಲಿ ಈ ವಾರದ ಆಟ ಇನ್ನೂ ಜೋರಾಗಿಯೇ ಇರುತ್ತದೆ. ಈ ಮೂಲಕ ಯಾರಿಗೆ ಈ ಒಂದು ಟಿಕೆಟ್ ಟು ಫಿನಾಲೆಗೆ ಸಿಗುತ್ತದೆ ಅನ್ನುವ ಕುತೂಹಲ ಕೂಡ ಇದೆ. ಈ ವಾರ ಯಾರು ಮನೆಗೆ ಕಳೆದ ವಾರ ಮನೆಯಿಂದ ಯಾರೂ ಹೋಗ್ಲಿಲ್ಲ. ಈ ವಾರ ಒಬ್ಬರು ಹೋಗ್ತಾರಾ? ಇಲ್ಲ ಇಬ್ಬರು ಹೋಗ್ತಾ? ಈ ಪ್ರಶ್ನೆ ಇದ್ದೇ ಇದೆ. ಇನ್ನು ಮೂರೇ ಮೂರು ವಾರ ಇದೆ. ಈ ಮೂರು ವಾರಗಳಲ್ಲಿ ಫಿನಾಲೆಗೆ ಯಾರು ಹೋಗ್ತಾರೇ? ಯಾರು ವಿನ್ ಆಗ್ತಾರೆ ಅನ್ನೋ ಪ್ರಶ್ನೆ ಇದೆ. ಆ ಒಂದು ಲೆಕ್ಕಾಚಾರದಲ್ಲಿ ಫಿನಾಲೆಗೆ ರಜತ್, ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ ಇರ್ತಾರೆ. ಗೆಲ್ಲೋರು ಯಾರು ಅನ್ನೋ ಪ್ರಶ್ನೆಗೆ, ತ್ರಿವಿಕ್ರಮ್ ಇಲ್ವೇ ಉಗ್ರಂ ಮಂಜು ಅನ್ನೋ ಒಂದು ಗೆಸ್ಸಿಂಗ್ ಕೂಡ ಇದ್ದೇ ಇದೆ ಅಂತಲೇ ಹೇಳಬಹುದು. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.