ದೊಡ್ಮನೆಯಲ್ಲಿ ಟಿಕೆಟ್ ಟು ಫಿನಾಲೆ ಫೈಟ್ ಬಲು ಜೋರು; ಬಾರಲೇ ಹೋಗಲೇ ಎಂದು ಕಿತ್ತಾಡಿದ ತ್ರಿವಿಕ್ರಮ್-ಉಗ್ರಂ ಮಂಜು! ಬಿಗ್ ಬಾಸ್ (Bigg Boss) ಮನೆಯಲ್ಲಿ ಟಿಕೆಟ್ ಟು ಫಿನಾಲೆ (Ticket to Finale) ಆಟ ಶುರು ಆಗಿದೆ. ಇಡೀ ವಾರ ಇಲ್ಲಿ ಭಯಂಕರ ಆಟಗಳೇ ನಡೆಯುತ್ತವೆ. ಒಂದು ರೀತಿ ಪ್ರತಿ ದಿನವೂ ಮಹಾಯುದ್ಧವೆ ನಡೆಯಲಿದೆ. ಇದಕ್ಕೆ ದಿ ಬೆಸ್ಟ್ ಎಕ್ಸಾಂಪಲ್ ಅನ್ನುವ ಹಾಗೆ ಈ ದಿನದ ಆಟ ಇದೆ. ಇದರ ಝಲಕ್ ಪ್ರೋಮೋದಲ್ಲೂ (Promo) ರಿವೀಲ್ ಆಗಿದೆ. ತ್ರಿವಿಕ್ರಮ್ ಮತ್ತು ಉಗ್ರಂ ಮಂಜು (Ugramm Manju) ಈ ಒಂದು ಆಟದಲ್ಲಿ ಜಗಳ ಆಡಿದ್ದಾರೆ. ಅದು ಯಾವ ಲೆವಲ್‌ಗೆ ಇದೆ ಅಂದ್ರೆ, ಬಾರಲೇ ಹೋಗಲೇ ಅನ್ನೋ ಮಟ್ಟಿಗೆ ಹೋಗಿದೆ. ಈ ಮೂಲಕ ಟಿಕೆಟ್ ಟು ಫಿನಾಲೆ ಯಾವ ಮಟ್ಟಕ್ಕೆ ಹೋಗಲಿದೆ ಅನ್ನೋ ಝಲಕ್ ಈಗಲೆ ಸಿಕ್ಕಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಟಿಕೆಟ್ ಟು ಫಿನಾಲೆ ಫೈಟ್ ಬಲು ಜೋರು ದೊಡ್ಮನೆಯಲ್ಲಿ ಮಾರಿಹಬ್ಬವೇ ಶುರು ಆಗಿದೆ. ಈ ವಾರ ಟಿಕೆಟ್ ಟು ಫಿನಾಲೆ ಆಟ ಇದೆ. ಎಷ್ಟೇ ಆಡಿದ್ರು ಸರಿಯೇ? ಈ ಒಂದು ಟಿಕೆಟ್ ಒಬ್ಬರಿಗೇನೇ ಸಿಗುತ್ತದೆ. ಅದಕ್ಕೇನೆ ಆಟದ ತೀವ್ರತೆ ಬೇರೆ ಲೆವಲ್‌ಗೇನೆ ಇದೆ. ಸ್ವತಃ ಬಿಗ್ ಬಾಸ್ ಕೂಡ ಇದನ್ನ ಹೇಳಿದ್ದಾರೆ. ಟಿಕೆಟ್ ಟು ಫಿನಾಲೆ ಆಟದಲ್ಲಿ ನಿತ್ಯವೂ ಯುದ್ಧವೇ ಆಗುತ್ತದೆ ಅಂತಲೇ ಸೂಚನೆ ಕೊಟ್ಟಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ದೊಡ್ಮನೆಯ ಈ ದಿನದ ಆಟದಲ್ಲಿ ಎಲ್ಲರೂ ಭಯಂಕರವಾಗಿಯೇ ಆಡಿದ್ದಾರೆ. ಇದರಿಂದ ಹೆಣ್ಣುಮಕ್ಕಳು ಅಷ್ಟೇ ಗಾಯಗೊಂಡಂತೇನೆ ಇದೆ. ಹಾಗಾಗಿಯೇ ಈ ದಿನದ ಪ್ರೋಮೋದಲ್ಲಿ ಇರೋ ದೃಶ್ಯಗಳು ಭಯಂಕರ ಆಟದ ಪ್ರತೀಕದಂತೇನೆ ಇದೆ. ಇದನ್ನೂ ಓದಿ: Sudeep: ಅಮ್ಮ ಬಳಸುತ್ತಿದ್ದ ಕುರ್ಚಿ, ಅಮ್ಮನ ಚಪ್ಪಲಿಯೇ ಈಗ ಕಿಚ್ಚನ ಅತಿ ದೊಡ್ಡ ಆಸ್ತಿ ಉಗ್ರಂ ಮಂಜುಗೆ ‘ಲೇ’ ಎಂದ ತ್ರಿವಿಕ್ರಮ್ ತ್ರಿವಿಕ್ರಮ್ ಮತ್ತು ಮಂಜು ನಡುವೆ ಮಾತಿನ ಚಕಮಕಿ ಆಗಿದೆ. ಹನುಮಂತನ ವ್ಯಕ್ತಿತ್ವ ಹೋಲಿಸಿದ್ರೆ, ನಿಮ್ಮದು ಕಡಿಮೆ ಇದೆ. ಹಾಗಂತ ಉಗ್ರಂ ಮಂಜು ನೇರವಾಗಿಯೇ ತ್ರಿವಿಕ್ರಮ್‌ಗೆ ಹೇಳ್ತಾರೆ. ಈ ಒಂದು ಮಾತು ಕೇಳಿದ್ದೇ ತಡ, ತ್ರಿವಿಕ್ರಮ್ ಫುಲ್ ರಾಂಗ್ ಆಗುತ್ತಾರೆ. ನೀನಾ ವ್ಯಕ್ತಿತ್ವದ ಬಗ್ಗೆ ಮಾತ್ ಆಡೋದು..ಥೂ ಅಂತಲೂ ಉಗಿದೇ ಬಿಡ್ತಾರೆ. ಆಗ ಉಗ್ರಂ ಮಂಜು ಕೂಡ ರಾಂಗ್ ಆಗ್ತಾರೆ. ಅಷ್ಟೇ ಓವರ್ ಆಗಿಯೇ ರಿಯಾಕ್ಟ್ ಮಾಡ್ತಾರೆ. ಅದಕ್ಕೆ ತ್ರಿವಿಕ್ರಮ್ ಸ್ವಲ್ಪ ಜಾಸ್ತಿನೇ ಮಾತ್ ಆಡ್ತಾರೆ. ಬಾರಲೇ ಹೋಗಲೇ ಅಂತಾರೆ. ಅದಕ್ಕೆ ಮಂಜು ಏನೂ ಹೇಳೋದಿಲ್ಲ. ಇಷ್ಟು ಸಾಕು ಅಂತ ಏನೋ ಒಂದು ಹೇಳ್ತಾರೆ. ಇವರ ಜಗಳ ಜಾಸ್ತಿ ಆಗಬಹುದು ಅಂತಲೇ ರಜತ್ ಕಿಶನ್ ನಡುವೆ ಬರ್ತಾರೆ. ತ್ರಿವಿಕ್ರಮ್ ಅವರನ್ನ ಕರೆದುಕೊಂಡು ದೂರ ಹೋಗ್ತಾರೆ. ಇದನ್ನೂ ಓದಿ: Bigg Boss: ಚೈತ್ರಾ ಕುಂದಾಪುರ-ರಜತ್ ಕಿಶನ್ ಮಾತಿನ ಚಕಮಕಿ! ಟಿಕೆಟ್ ಟು ಫಿನಾಲೆಗೆ ಹೋರಾಟ ಟಿಕೆಟ್ ಟು ಫಿನಾಲೆ ಆಟ ಜೋರಾಗಿಯೇ ಇರುತ್ತವೆ. ಇರೋ ಮನೆಯ ಸದಸ್ಯರಲ್ಲಿ ಒಬ್ಬರಿಗೆ ಮಾತ್ರ ಈ ಟಿಕೆಟ್ ಸಿಗುತ್ತದೆ. ಅದಕ್ಕಾಗಿಯೇ ಹೋರಾಟ ಬಲು ಜೋರಾಗಿಯೇ ಇರುತ್ತದೆ. ಹಾಗಾಗಿಯೇ ಮನೆಯ ಎಲ್ಲ ಸದಸ್ಯರು ತೀವ್ರಗತಿಯಲ್ಲಿಯೇ ಆಟ ಆಡುತ್ತಾರೆ. ಅದರ ಎಫೆಕ್ಟ್ ಹೇಗಿರುತ್ತದೆ ಅನ್ನೋ ಝಲಕ್ ಈಗಾಗಲೇ ಪ್ರೋಮೋದಲ್ಲಿಯೇ ಸಿಕ್ಕಿದೆ. ಹಾಗೇನೆ ಈ ಒಂದು ಟಿಕೆಟ್ ಟು ಫಿನಾಲೆ ಯಾರಿಗೆ ಸಿಗುತ್ತದೆ ಅನ್ನೋ ಕುತೂಹಲ ಕೂಡ ಇದೆ. ಆದರೆ, ಇದಕ್ಕಾಗಿಯೇ ಮನೆಯ ಮಂದಿಯ ಆಟ ಬೇರೆ ಲೆವಲ್‌ಗೇನೆ ಇದೆ. ಇದರ ಜೊತೆಗೆ ಫೈನಲ್‌ಗೆ ಯಾರೆಲ್ಲ ಹೋಗ್ತಾರೆ ಅನ್ನೋ ಪ್ರಶ್ನೆ ಕೂಡ ಇದೆ. ಆ ಸಾಲಿನಲ್ಲಿ ತ್ರಿವಿಕ್ರಮ್, ರಜತ್, ಉಗ್ರಂ ಮಂಜು, ಹನುಮಂತ್ ಹೋಗ್ತಾರೆ ಅನ್ನೋ ಒಂದು ಸಣ್ಣ ಅಂದಾಜು ಕೂಡ ಶುರು ಆಗಿದೆ ಅಂತಲೂ ಹೇಳಬಹುದು. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.