NEWS

Vinesh Phogat: ವಿನೇಶ್ ಫೋಗಟ್ ಆಸ್ತಿ ಎಷ್ಟಿತ್ತು? ಒಲಿಂಪಿಕ್ಸ್ ಬಳಿಕ ಹೆಚ್ಚಾಗಿದ್ದು ಎಷ್ಟು ಗೊತ್ತಾ?

ವಿನೇಸ್ ಫೋಗಟ್​ ವಿನೇಶ್ ಫೋಗಟ್ (Vinesh Phogat), ಭಾರತದ ಖ್ಯಾತ ಕುಸ್ತಿಪಟು… ಈ ಬಾರಿಯ ಪ್ಯಾರಿಸ್ ಒಲಂಪಿಕ್ಸ್​​ನಲ್ಲಿ ತೂಕ ಹೆಚ್ಚಳದಿಂದಾಗಿ ಪದಕದಿಂದ ವಂಚಿತರಾದ ಕುಸ್ತಿಪಟು. ಫೈನಲ್ ಪಂದ್ಯದಲ್ಲಿ ವಿನೇಶ್ ಫೋಗಟ್ ಪದಕದಿಂದ ವಂಚಿತರಾದರೂ ಇಡೀ ದೇಶದ ಜನರ ಹೃದಯ ಗೆದಿದ್ದಾರೆ. ಅದೇ ಗೆಲುವು ಅವರಿಗೆ ಮತ್ತಷ್ಟು ಖ್ಯಾತಿಯನ್ನು ತಂದುಕೊಟ್ಟಿದೆ. ಪ್ಯಾರಿಸ್ ಒಲಂಪಿಕ್ಸ್​​​ನಲ್ಲಿ (Paris olympics) ಪದಕ ಗೆಲ್ಲದೆ ನಿರಾಸೆ ಅನುಭವಿಸಿದರೂ ವಿನೇಶ್ ಫೋಗಟ್ ಅವರ ಆಸ್ತಿ ಈಗ ಮತ್ತಷ್ಟು ಹೆಚ್ಚಾಗಿದೆ. ಪ್ಯಾರಿಸ್ ಒಲಂಪಿಕ್ಸ್ ನಂತರ ವಿನೇಶ್ ಫೋಗಟ್ ಅವರ ಬ್ರಾಂಡ್ ವ್ಯಾಲ್ಯೂ ಹೆಚ್ಚಾಗಿದೆ. ಹೆಚ್ಚಾದ ಬ್ರ್ಯಾಂಡ್ ವ್ಯಾಲ್ಯೂ; ಒಂದು ಕೋಟಿ ಸಂಭಾವನೆ ಪಡೆಯುವ ವಿನೇಶ್ 2024ರ ಪ್ಯಾರಿಸ್ ಒಲಂಪಿಕ್ಸ್​​ಗೂ ಹಿಂದೆ ವಿನೇಶ್ ಫೋಗಟ್ ಅವರು ಸುಮಾರು 25 ಲಕ್ಷಕ್ಕೆ ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಅವರ ಬ್ರಾಂಡ್ ವ್ಯಾಲ್ಯೂ ಹೆಚ್ಚಾಗಿದೆ.. ಪ್ರತಿ ಒಪ್ಪಂದಕ್ಕೆ ಅವರು 75 ಲಕ್ಷದಿಂದ ಒಂದು ಕೋಟಿಯ ತನಕ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ವಿನೇಶ್ ಈಗ 36.5 ಕೋಟಿ ಆಸ್ತಿ ಮೌಲ್ಯದ ಒಡತಿ ಪ್ಯಾರಿಸ್ ಒಲಂಪಿಕ್ಸ್ ಮೊದಲು ಅವರ ಒಟ್ಟಾರೆ ಆಸ್ತಿಯ ಮೌಲ್ಯವೋ 5 ಕೋಟಿ ರೂಪಾಯಿಯಷ್ಟು ಇತ್ತು.. ಇದೀಗ ಅವರ ವೈಯಕ್ತಿಕ ಆಸ್ತಿಯ ಮೊತ್ತ 36.5 ಕೋಟಿಯಷ್ಟಾಗಿದೆ. ಇದನ್ನೂ ಓದಿ: ಆರ್‌ಸಿಬಿಗೆ ಬರೋ ಸೂಚನೆ ನೀಡಿದ ಕನ್ನಡಿಗ! ಲಕ್ನೋ ಟೀಮ್ ಓನರ್‌ಗೆ ಟಾಂಗ್ ಕೊಟ್ಟ KL ರಾಹುಲ್! ಇನ್ನು ವಿನೇಶ್ ಫೋಗಟ್ ಅವರಿಗೆ ಯುವಜನಾ ಮತ್ತು ಕ್ರೀಡಾ ಇಲಾಖೆಯಿಂದ ವಾರ್ಷಿಕವಾಗಿ 6 ಲಕ್ಷ ರೂಪಾಯಿ ಸ್ಯಾಲರಿಯನ್ನ ನೀಡಲಾಗುತ್ತದೆ. ವಿನೇಶ್ ಫೋಗಟ್ ಅವರ ಕ್ರೀಡಾಧಾರಿತ ಚಟುವಟಿಕೆಗಳನ್ನ ಕಾರ್ನರ್ ಸ್ಟೋನ್ ಸ್ಪೋರ್ಟ್ಸ್ ನಿರ್ವಹಿಸುತ್ತಿದ್ದು ಅವರ ಬ್ರಾಂಡ್ ವ್ಯಾಲ್ಯೂ ತಕ್ಕಂತೆ ಅವರ ಸಂಭಾವನೆಯನ್ನ ಹೆಚ್ಚು ಮಾಡಲಾಗಿದೆ. ಇದಿಷ್ಟೇ ಅಲ್ಲ ಪ್ಯಾರಿಸ್ ಒಲಂಪಿಕ್ಸ್ ನಂತರ ವಿನೇಶ್ ಅವರ ಜೀವನ ಶೈಲಿಯೂ ಕೂಡ ಬದಲಾಗಿದೆ. ಅವರ ಬಳಿ ಈಗ 33 ಲಕ್ಷ ರೂಪಾಯಿ ಮೌಲ್ಯದ ಟೊಯೋಟಾ ಫಾರ್ಚುನರ್ ಕಾರಿದೆ. ಇದರ ಜೊತೆಗೆ 28 ಲಕ್ಷ ರೂಪಾಯಿ ಮೌಲ್ಯದ ಟೊಯೋಟೊ ಇನೋವಾ ಹಾಗೂ 1.8 ಕೋಟಿ ಮೌಲ್ಯದ ಮರ್ಸಿಡಿಸ್ ಜಿ ಎಲ್ ವಿ ಕಾರು ಕೂಡ ಅವರ ಬಳಿ ಇದೆ. ಒಟ್ಟಾರೆಯಾಗಿ ಪ್ಯಾರಿಸ್ ಒಲಂಪಿಕ್ಸ್ ಫೈನಲ್ ಪಂದ್ಯದಲ್ಲಿ ಆಡಲು ವಿನೇಶ್ ಫೋಗಟ್ ಅವರು ಅರ್ಹತೆಯನ್ನು ಪಡೆಯಲು ವಿಫಲರಾದರು ಕೂಡ ಅವರು ದೇಶದ ಕೋಟಿ ಕೋಟಿ ಜನರ ಹೃದಯವನ್ನು ಗೆದ್ದಿದ್ದಾರೆ ಈ ಮೂಲಕ ಅವರ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಕುಸ್ತಿಪಟು ಗೀತಾ ಮತ್ತು ಬಬಿತಾ ಸೋದರ ಸಂಬಂಧಿ! ಅಂದಹಾಗೆ ವಿನೇಶ್ ಫೋಗಟ್ ಅವರು ಖ್ಯಾತ ಕುಸ್ತಿಪಟುಗಳಾದಂತಹ ಗೀತಾ ಮತ್ತು ಬಬಿತಾ ಫೋಗಟ್ ಇವರ ಸೋದರ ಸಂಬಂಧಿ. ಗೀತಾ ಮತ್ತು ಅವರ ಜೀವನಾಧರಿತ ದಂಗಲ್ ಚಿತ್ರ 2016ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಗೀತಾ ಬಬಿತಾ ಪಾತ್ರಧಾರಿಗಳ ಜೊತೆಗೆ ವಿನೇಶ್ ಫೋಗಟ್ ರವರು ಇರುವಂತೆ ಚಿಕ್ಕ ಪಾತ್ರದ ಹುಡುಗಿಯನ್ನು ಕೂಡ ತೋರಿಸಲಾಗಿತ್ತು. ವಿನೇಶ್ ಫೋಗಟ್ ಅವರು ಹರಿಯಾಣ ರಾಜ್ಯದ ಚಕ್ರಿ ದಾರಿ ಗ್ರಾಮದವರು. 1994 ಆಗಸ್ಟ್ 25ರಂದು ವಿನೇಶ್ ಫೋಗಟ್ ಅವರು ಜನಿಸಿದರು.. 2024ರ ಒಲಂಪಿಕ್ಸ್ನಲ್ಲಿ 50 ಕೆಜಿ ಮಹಿಳೆಯರ ವಿಭಾಗದಲ್ಲಿ ಫೈನಲ್ ಪಂದ್ಯದಲ್ಲಿ ತೂಕ ಹೆಚ್ಚಳದ ಕಾರಣದಿಂದಾಗಿ ಅವರು ಅನರ್ಹತೆಗೊಂಡಿದ್ದರು. ಒಂದು ವೇಳೆ ಈ ಪಂದ್ಯದಲ್ಲಿ ವಿನೇಶ್ ಫೋಗಟ್ ಅವರು ಗೆದ್ದಿದ್ದರೆ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎಂಬ ಕೀರ್ತಿಗೆ ಪಾತ್ರರಾಗುತ್ತಿದ್ದರು.. ಇಲ್ಲವಾದಲ್ಲಿ ಫೈನಲ್ ಪಂದ್ಯದಲ್ಲಿ ವಿನೇಶ್ ಫೋಗಟ್ ಅವರು ಸೋತಿದ್ರೆ ಬೆಳ್ಳಿಯ ಪದಕವು ಕೂಡ ಸಿಗುತ್ತಿತ್ತು.. ಆದರೆ 100 ಗ್ರಾಂ ತೂಕ ಹೆಚ್ಚಳದಿಂದಾಗಿ ಅವರು ಫೈನಲ್ ಪಂದ್ಯದಿಂದ ಅನರ್ಹತೆಗೊಂಡಿದ್ದರು. ತೂಕ ಕಡಿಮೆ ಮಾಡಿಕೊಳ್ಳಲು ಇಡೀ ರಾತ್ರಿ ಕಸರತ್ತು ಪಟ್ರು ಅದು ಸಾಧ್ಯವಾಗಲಿಲ್ಲ. ಅನರ್ಹತೆ ಬಳಿಕವು ವಿನೇಶ್ ಫೋಗಟ್ ಅವರು ಅಂತಾರಾಷ್ಟ್ರೀಯ ಕುಸ್ತಿ ಮಂಡಳಿಯ ಮೊರೆ ಹೋಗಿದ್ದರು. ಆದರೆ ಕುಸ್ತಿ ಮಂಡಳಿ ಕೂಡ ವಿನೇಶ್ ಫೋಗಟ್ ಅವರ ಮನವಿಯನ್ನ ಪರಿಗಣಿಸಲಿಲ್ಲ. ಇದರಿಂದಾಗಿ ವಿನೇಶ್ ಫೋಗಟ್ ಅವರಿಗೆ ನಿರಾಸೆ ಎದುರಾಯಿತು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.