ಸಾಂದರ್ಭಿಕ ಚಿತ್ರ ಈಗಿನ ಮಕ್ಕಳು (Children) ಎಲ್ಲವನ್ನೂ ಬೇಗ ಕಲಿಯುತ್ತಾರೆ ಮತ್ತು ಅಳವಡಿಸಿಕೊಳ್ಳುತ್ತಾರೆ. ಈ ಎಲ್ಲವನ್ನೂ ಕಲಿಯುವ ಮಕ್ಕಳಿಗೆ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಅಂತಾ ತಿಳಿಸಿಕೊಡುವುದು ಪೋಷಕರಾದ ನಮ್ಮ ಜವಾಬ್ದಾರಿ. ಸ್ಪಷ್ಟ ಭಾಷೆ, ಪದ ಬಳಕೆ, ಸಕಾರಾತ್ಮಕ ನಡವಳಿಕೆ, ಡಿಜಿಟಲ್ ಗಡಿಗಳು, ಮುಕ್ತ ಸಂವಹನ, ಸಹಾಯ ಮಾಡುವ ಗುಣ ಮತ್ತು ಈ ಕೌಶಲ್ಯಗಳು ಅವರ ಸರ್ವೋತುಮುಖ ಅಭಿವೃದ್ಧಿಗೆ ಪೂರಕ. ಕೆಲವು ಗಡಿಗಳನ್ನು ಹೊಂದಿಸುವ ಮೂಲಕ ನೀವು ಅವರಿಗೆ ಈ ಸಾಫ್ಟ್ ಸ್ಕಿಲ್ಸ್‌ಗಳನ್ನು (Soft Skill) ಕಲಿಸಬೇಕಾಗುತ್ತದೆ. ಮಕ್ಕಳಿಗೆ ವೈಯಕ್ತಿಕ ಜಾಗವನ್ನು ಅರ್ಥಮಾಡಿಕೊಳ್ಳಲು ಮತ್ತು ಗೌರವಿಸಲು, ಭಾವನಾತ್ಮಕ ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸಲು, ಆರೋಗ್ಯಕರ ಸಂಬಂಧಗಳನ್ನು ಬೆಳೆಸಲು ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಈ ಸ್ಕಿಲ್ಸ್ ಅವರಿಗೆ ಸಹಾಯ ಮಾಡುತ್ತವೆ. ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿಗೆ ಕಲಿಸಬೇಕಾದ ಕೌಶಲ್ಯಗಳು ಸ್ಪಷ್ಟ ಮತ್ತು ಸರಳ ಭಾಷೆಯನ್ನು ಬಳಸುವುದು ಸಣ್ಣ ಮಕ್ಕಳಿಗೆ ವಿಷಯಗಳನ್ನು ಕಲಿಸುವಾಗ ಸ್ಪಷ್ಟ ಮತ್ತು ನೇರವಾದ ಭಾಷೆಯನ್ನು ಬಳಸಬೇಕು. ಇದು ಅವರಿಗೆ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸ್ಪಷ್ಟ ಮತ್ತು ಸರಳ ಭಾಷೆ ಬಗ್ಗೆ ಅವರಿಗೆ ತಿಳಿದಿದ್ದರೆ, ಅವರಿಗೂ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಈ ಸ್ಪಷ್ಟ ಮತ್ತು ಸರಳ ಭಾಷೆಯ ಸಾಫ್ಟ್ ಸ್ಕಿಲ್ ಸಹಾಯ ಮಾಡುತ್ತದೆ. ಸಕಾರಾತ್ಮಕ ನಡವಳಿಕೆ ಹೀಗೆ ಮಾಡಬೇಕು, ನೀನು ಹೀಗೆ ನಡೆದುಕೊಳ್ಳಬೇಕು ಎಂದು ತಾಕೀತು ಮಾಡುವ ಬದಲು, ಮೊದಲಿನಿಂದಲೂ ನಿಮ್ಮ ಮಾತು, ನಿಮ್ಮ ನಡೆ ಮೂಲಕ ಒಳ್ಳೆಯ ನಡವಳಿಕೆಗಳನ್ನು ಕಲಿಯುವಂತೆ ಮಾಡಿ. ತದನಂತರ ಸಕಾರಾತ್ಮಕ ನಡವಳಿಕೆ ಬಗ್ಗೆ ಹೇಳಿಕೊಡಿ. ಇದು ಏಕೆ ಮುಖ್ಯ ಎನ್ನುವುದರ ಬಗ್ಗೆ ಸರಳ ಭಾಷೆಯಲ್ಲಿ ಅವರಿಗೆ ಅರ್ಥ ಮಾಡಿಸಿ. ಗಡಿಗಳ ಬಗ್ಗೆ ಕಲಿಸಿ ಗಡಿಗಳ ಬಗ್ಗೆ ಮಕ್ಕಳಿಗೆ ಕಲಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಮಾಡೆಲಿಂಗ್. ಮಕ್ಕಳು ತಮ್ಮ ಸುತ್ತಲಿನ ದೊಡ್ಡವರ ವರ್ತನೆಯನ್ನು ಗಮನಿಸಿ ಕಲಿಯುತ್ತಾರೆ. ಪೋಷಕರು ಮತ್ತು ಶಿಕ್ಷಕರು ತಮ್ಮ ಪರಸ್ಪರ ಕ್ರಿಯೆಗಳಲ್ಲಿ ಸ್ಪಷ್ಟ ಮತ್ತು ಗೌರವಾನ್ವಿತ ಗಡಿಗಳನ್ನು ಪ್ರದರ್ಶಿಸಿದಾಗ, ಮಕ್ಕಳು ತಮ್ಮ ನಡವಳಿಕೆಗಳಲ್ಲಿ ಈ ವಿಷಯಗಳನ್ನು ತಮ್ಮ ಸ್ವಂತವಾಗಿ ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ನಿಮ್ಮ ಸರಿಯಾದ ನಡವಳಿಕೆ ಜೊತೆಗೆ ಅವರಿಗೆ ಬೇಕಾದ ಅಗತ್ಯ ಮಾಹಿತಿಯನ್ನು ಒದಗಿಸಿ. ಅವರ ಗಡಿಗಳ ಬಗ್ಗೆ ಪ್ರಜ್ಞೆ ಬೆಳೆಸಿ ಪರಾನುಭೂತಿ ಮತ್ತು ಭಾವನಾತ್ಮಕ ಅರಿವನ್ನು ಕಲಿಸುವುದು ಮಕ್ಕಳು ತಮ್ಮ ಸ್ವಂತ ಭಾವನೆಗಳನ್ನು ಮತ್ತು ಇತರರ ಭಾವನೆಗಳನ್ನು ಗುರುತಿಸಲು ಸಹಾಯ ಮಾಡುವ ಗುಣಗಳನ್ನು ಕಲಿಸಬೇಕು. ಪೋಷಕರು, ಮಕ್ಕಳಿಗೆ ಅವರ ಭಾವನೆಗಳ ಬಗ್ಗೆ ಮಾತನಾಡಲು ಪ್ರೋತ್ಸಾಹಿಸಬೇಕು. ಈ ಕೌಶಲ್ಯವು ಮಕ್ಕಳಿಗೆ ತಮ್ಮ ಭಾವನೆಗಳ ಜೊತೆಗೆ ಬೇರೆಯವರ ಫೀಲಿಂಗ್ಸ್ ಅನ್ನು ಅರ್ಥಮಾಡಿಕೊಳ್ಳುವ ಗುಣಗಳನ್ನು ಬೆಳೆಸುತ್ತದೆ. ಡಿಜಿಟಲ್ ಗಡಿಗಳನ್ನು ಹೊಂದಿಸುವುದು ಮತ್ತು ಗೌರವಿಸುವುದು ಇಂದಿನ ಡಿಜಿಟಲ್ ಯುಗದಲ್ಲಿ, ಆನ್‌ಲೈನ್ ಗಡಿಗಳ ಬಗ್ಗೆ ಮಕ್ಕಳಿಗೆ ಕಲಿಸುವುದು ಅತ್ಯಗತ್ಯ. ಇದು ಗೌಪ್ಯತೆ, ಸಮ್ಮತಿ ಮತ್ತು ಗೌರವಾನ್ವಿತ ಆನ್‌ಲೈನ್ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಪೋಷಕ-ಸ್ನೇಹಿ ಅಪ್ಲಿಕೇಶನ್‌ಗಳು ಮಕ್ಕಳ ಆನ್‌ಲೈನ್ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸುವಲ್ಲಿ ಮಾರ್ಗದರ್ಶನಗಳು ಮತ್ತು ಸಲಹೆಗಳನ್ನು ನೀಡುವ ಮೂಲಕ ಈ ಕೌಶಲ್ಯವನ್ನು ಅವರಿಗೆ ತಿಳಿಸಿಕೊಡಬೇಕು. ಮುಕ್ತ ಸಂವಹನವನ್ನು ಪ್ರೋತ್ಸಾಹಿಸುವುದು ಸುರಕ್ಷಿತ ಮತ್ತು ನಿಯಂತ್ರಿತ ಪರಿಸರದಲ್ಲಿ ಗಡಿಗಳನ್ನು ಹೊಂದಿಸಲು, ಚರ್ಚಿಸಲು ಮತ್ತು ಗೌರವಿಸಲು ಅಭ್ಯಾಸ ಮಾಡಲು ಮುಕ್ತ ಸಂವಹನ ಅವರಿಗೆ ಅನುಮತಿಸುತ್ತದೆ. ಮಕ್ಕಳು ಮಾತನಾಡುತ್ತಿದ್ದರೆ ಅಡ್ಡ ಹಾಕಬೇಡಿ ಬದಲಿಗೆ ಮುಕ್ತವಾಗಿ ಮಾತನಾಡುವ ಅಧಿಕಾರ ನೀಡಿ. ಈ ಮೂಲಕ ಅವರಿಗೆ ಮುಕ್ತ ಸಂವಹನದ ಕೌಶಲ್ಯ ಕಲಿಸಿ. ಇದು ನಂಬಿಕೆಯನ್ನು ನಿರ್ಮಿಸುತ್ತದೆ, ಅವರ ಕಾಳಜಿಗಳನ್ನು ಹಂಚಿಕೊಳ್ಳಲು ಅವರನ್ನು ಪ್ರೋತ್ಸಾಹಿಸುತ್ತದೆ ಮತ್ತು ಅವರ ಅನುಭವಗಳನ್ನು ಪ್ರತಿಬಿಂಬಿಸಲು ಸಹಾಯ ಮಾಡುತ್ತದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.