NEWS

HMPV Symptoms: ಬೆಂಗಳೂರಲ್ಲಿ ಕಾಣಿಸಿಕೊಂಡಿರೋ ಈ HMPV ಎಷ್ಟು ಡೇಂಜರಸ್‌? 20 ವರ್ಷದಿಂದ ಭಾರತದಲ್ಲೇ ಇತ್ತಾ ಈ ವೈರಸ್?

ಸಾಂದರ್ಭಿಕ ಚಿತ್ರ ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿಲಿ ಅಂದ ಹಾಗೇ ಆಗಿದೆ ಚೀನಾ (China) ಪರಿಸ್ಥಿತಿ. ಕೊರೋನಾ (Corona) ಕಾಟ ಮುಗಿದು ನೆಮ್ಮದಿಯಿಂದ ಇದ್ದ ಪ್ರಪಂಚಕ್ಕೆ ಮತ್ತೊಂದು ಶಾಕಿಂಗ್‌ ಕೊಟ್ಟಿದೆ ಚೀನಾ ಅಂದ್ರೆ ತಪ್ಪಾಗಲ್ಲ. ಚೀನಾದ ಆಸ್ಪತ್ರೆಗಳಲ್ಲಾ (Hospitals) ಫುಲ್ ಆಗಿದೆ. ಅತ್ತ ಸ್ಮಶಾಣಗಳಲ್ಲೂ ಕೆಲಸ ಹೆಚ್ಚಾಗಿcದೆ ಅನ್ನೋ ವರದಿಗಳು ಕೇಳಿಬರುತ್ತಿದೆ. HMPV ಎಂಬ ವೈರಸ್ ಚೀನಾದಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿದೆ. ಮೊದಲಿಗೆ ಈ ಸುದ್ದಿ ಗೊತ್ತಾದಾಗ ಏನಾಗಲ್ಲ ನಮ್ಮ ಬೆಂಗಳೂರಿಗೆ ಏನು ಬರೋದಿಲ್ಲ ಬಿಡು ಅಂತ 2 ದಿನದ ಹಿಂದೆ ನೀವು ಕೂಡ ಮಾತನಾಡಿಕೊಂಡಿರುತ್ತೀರಾ? ಆದರೆ ಬೆಂಗಳೂರಿಗೂ ಈ ಎಚ್‌ಎಂಪಿವಿ ವೈರಸ್ ಬಂದಿದೆ. ಬೆಂಗಳೂರಿನಲ್ಲಿ 3 ಗಂಟೆ ಅವಧಿಯಲ್ಲಿ ಎರಡು ಕೇಸ್‌ಗಳು ದಾಖಲಾಗಿದೆ. 8 ತಿಂಗಳ ಮಗು ಹಾಗೂ 3 ತಿಂಗಳ ಮಗುವಿನಲ್ಲಿ ಈ HMPV ವೈರಸ್‌ ಕಾಣಿಸಿಕೊಂಡಿದೆ. ಹ್ಯೂಮನ್ ಮೆಟಾಪ್ನ್ಯೂಮೋವೈರಸ್! ಹ್ಯೂಮನ್ ಮೆಟಾಪ್ನ್ಯೂಮೋವೈರಸ್ ಎಷ್ಟು ಡೇಂಜರಸ್? ಇಲ್ಲ ಇದು ಕೂಡ ನಾರ್ಮಲ್‌ ವೈರಸ್‌ ರೀತಿನಾ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಮೊದಲಿಗೆ ಇದು ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತೆ. ಮಕ್ಕಳು ಅಂತಷ್ಟೇ ಅಲ್ಲ ಎಲ್ಲ ವಯಸ್ಸಿನವರೆಗೂ ಈ ವೈರಸ್‌ ದಾಳಿ ಮಾಡುತ್ತಂತೆ. ಕೊರೋನಾದಷ್ಟು ಡೇಂಜರಸ್ ಅಲ್ಲದಿದ್ರೂ ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಈ ವೈರಸ್‌ ಬೇಗ ಅಟ್ಯಾಕ್ ಮಾಡುತ್ತಂತೆ. ಎಲ್ಲಿ ಹೆಚ್ಚು ಕಾಣಿಸಿಕೊಂಡಿದೆ HMPV? ಸಾಮಾನ್ಯವಾಗಿ ಚಳಿಗಾಲದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುವ ನಿರೀಕ್ಷೆಯಿರುವದರಿಂದ ಡಿಸೆಂಬರ್ 16 ಮತ್ತು 22 ರ ನಡುವೆ ಉಸಿರಾಟದ ಸೋಂಕುಗಳ ಹೆಚ್ಚಳವನ್ನು ತೋರಿಸುವ ಡೇಟಾವನ್ನು ಚೀನಾ ಕೂಡ ಹಂಚಿಕೊಂಡಿತ್ತು. ಚೀನಾದಲ್ಲಿ ವಿವಿಧ ರೀತಿಯ ಉಸಿರಾಟದ ಸೋಂಕುಗಳು ಕಂಡು ಬರುವ ಸಾಧ್ಯತೆಯಿದೆ ಎಂದು ಅಲ್ಲಿನ ಸರ್ಕಾರಿ ಅಧಿಕಾರಿ ಕಾನ್ ಬಿಯಾವೊ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಜೊತೆಗೆ, ಈ ವರ್ಷ ಒಟ್ಟು ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಅವರು ಉಲ್ಲೇಖಿಸಿದ್ದರು. ಇದನ್ನೂ ಓದಿ: ಎಚ್ಚರ ಎಚ್ಚರ! 3 ಗಂಟೆ ಅವಧಿಯಲ್ಲಿ ಬೆಂಗಳೂರಿನ ಮತ್ತೊಂದು ಮಗುವಿನಲ್ಲಿ HMPV ವೈರಸ್ ಪತ್ತೆ! ಎಚ್ ಎಂಪಿವಿ ಹೇಗೆ ಹರಡುತ್ತದೆ? ಎಚ್ಎಂಪಿವಿ ಇತರ ಉಸಿರಾಟದ ವೈರಸ್‌‌ಗಳಂತೆ ಹರಡುತ್ತದೆ ಕೆಮ್ಮು ಮತ್ತು ಸೀನುವಿಕೆ ಕೈ ಕುಲುಕುವುದು ಅಥವಾ ವ್ಯಕ್ತಿಯ ನಿಕಟ ಸಂಪರ್ಕ ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸುವುದು ಅಥವಾ ಮುಖವನ್ನು ಸ್ಪರ್ಶಿಸುವುದು (ಬಾಯಿ, ಮೂಗು ಅಥವಾ ಕಣ್ಣುಗಳು). ಭಯ ಬೇಡ, ಇರಲಿ ಮುಂಜಾಗ್ರತೆ! ನಮ್ಮಲ್ಲಿ ಜನ ದಟ್ಟಣೆ ಇರುವುದರಿಂದ ಜನರು ನಿರ್ಲಕ್ಷ್ಯ ಮಾಡದೆಯೇ, ಪದೇ ಪದೇ ಕೈ ತೊಳೆಯುವುದು, ಜನ ಹೆಚ್ಚಾಗಿರುವ ಪ್ರದೇಶಗಳಲ್ಲಿ ಮಾಸ್ಕ್ಗಳ ಬಳಕೆ ಮತ್ತು ಯಾರ ಜೊತೆಗೆ ಆಗಲಿ ನಿಕಟ ಸಂಪರ್ಕವನ್ನು ತಪ್ಪಿಸುವುದು ಮುಂತಾದ ಕೆಲವು ಮುನ್ನೆಚ್ಚರಿಕೆ, ನೈರ್ಮಲ್ಯ ಅಭ್ಯಾಸಗಳು ಇಂತಹ ಅಪಾಯವನ್ನು ಕಡಿಮೆ ಮಾಡಬಹುದು. ಏನು ಮಾಡಬೇಕು? ಶೀತ, ನೆಗಡಿ, ಕೆಮ್ಮು ಇದ್ದರೆ ಕರವಸ್ತ್ರ ಅಥವಾ ಮಾಸ್ಕ್ ನಿಂದ ಮೂಗು, ಬಾಯಿಯನ್ನು ಮುಚ್ಚಿಕೊಳ್ಳಬೇಕು. ಆಗಾಗ್ಗೆ ಸೋಪ್ ಅಥವಾ ಸ್ಯಾನಿಟೈಸರ್ ಬಳಸಿ ಕೈ ಸ್ವಚ್ಛಗೊಳಿಸಬೇಕು. ಹೆಚ್ಚಿನ ಜನರೊಂದಿಗೆ ಗುಂಪು ಸೇರಬಾರದು. ಜನದಟ್ಟಣೆ ಹೆಚ್ಚಾಗಿರುವ ಜಾಗಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹೆಚ್ಚು ನೀರು ಕುಡಿಯಬೇಕು ಮತ್ತು ಪೋಷಕಾಂಶಭರಿತ ಆಹಾರಗಳನ್ನು ಸೇವಿಸಬೇಕು. ಏನು ಮಾಡಬಾರದು? ಬಳಸಿದ ಕರವಸ್ತ್ರವನ್ನೆ/ಮಾಸ್ಕ್ ಅನ್ನೇ ಬಳಸಬಾರದು. ಶೀತ, ನೆಗಡಿ, ಕೆಮ್ಮು ಇರುವವರಿಂದ ಅಂತರ ಕಾಯ್ದುಕೊಳ್ಳಬೇಕು. ಸದಾ ಮೂಗು, ಬಾಯಿ, ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.