ಸುಧೀಂದ್ರ ದೇಸಾಯಿ, ಮಾದರಿ ಶಿಕ್ಷಕ ಕೊಪ್ಪಳ: ಶಾಲೆಯಲ್ಲಿ (School) ಪಾಠ ಮಾಡಿ ತಮ್ಮ ಕರ್ತವ್ಯ ಮುಗಿಸಿದರೆ ಆಯ್ತು ಎನ್ನುವ ಈ ಕಾಲದಲ್ಲಿ ಇಲ್ಲೊಬ್ಬ ಶಿಕ್ಷಕರು (Teacher), ಮಕ್ಕಳ ಭವಿಷ್ಯ ರೂಪಿಸುವ ಕೆಲಸವನ್ನೂ ವಹಿಸಿಕೊಂಡಿದ್ದಾರೆ. ಬಾಲ್ಯದಲ್ಲಿ (Childhood) ಶಿಕ್ಷಣದ ಜೊತೆಗೆ ಮುಂದಿನ ಭವಿಷ್ಯಕ್ಕಾಗಿ (Future) ತಾವೇ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡ್ತಿದ್ದಾರೆ. ಇವರು ಕೊಪ್ಪಳದ ಭಾಗ್ಯನಗರದ ನಿವಾಸಿ ಶಿಕ್ಷಕ ಸುಧೀಂದ್ರ ದೇಸಾಯಿ. ಅರಸನಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುವ ಇವ್ರು, ಶಿಕ್ಷಕ ವೃತ್ತಿ ಜೊತೆಗೆ ಶಾಲೆ ಬಿಟ್ಟು ಹೋದ ಮಕ್ಕಳನ್ನು ಗುರುತಿಸಿ ಕಬ್ಬಿಣದ ಕಡಲೆ ಅಗಿರುವ ಇಂಗ್ಲಿಷ್ ಪಾಠ ಮಾಡುತ್ತಾರೆ. ಇಂಗ್ಲಿಷ್ ಕಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದಿದ್ದಾರೆ. ಇದು ಕೇವಲ ಪಾಠಕ್ಕೆ ಮಾತ್ರವಲ್ಲ. ಮಕ್ಕಳು ಶಾಲೆ ಬಿಟ್ಟು ಕುರಿ ಕಾಯಲು. ಹೊಲದ ಕೆಲಸಕ್ಕೆ ಹೋದಾಗಲೂ ಪಾಲಕರೊಂದಿಗೆ ಮಾತನಾಡಿ, ಶಿಕ್ಷಣ ಕೊಡಿಸಿದ್ದಾರೆ. ಬಾಲ್ಯ ವಿವಾಹ ತಡೆದು ಉನ್ನತ ಶಿಕ್ಷಣಕ್ಕೆ ಸಹಕಾರಿ ಆಗಿದ್ದಾರೆ. ಕೇವಲ ಪಾಠ ಅಷ್ಟೇ ಅಲ್ಲ ಕಷ್ಟ ಎಂದವರ ಓದಿಗೆ ಆರ್ಥಿಕ ಸಹಾಯವನ್ನೂ ಮಾಡುತ್ತ ಮಾದರಿ ಆಗಿದ್ದಾರೆ. ನಾನು ನಾಲ್ಕನೇ ತರಗತಿ ಓದಿದ ಮೇಲೆ ನಮ್ಮ ಅವ್ವ ಮನೆಯಲ್ಲಿ ಕಷ್ಟ ಅಂತ ಶಾಲೆ ಬಿಡಿಸಿಬಿಟ್ಟರು, ಮನೆಯಲ್ಲಿ ಕುರಿ ಮೇಯಿಸುವ ಕೆಲಸ ಮಾಡಿದ್ದರು. ಆದರೆ ಅಂದು ಸರ್ ಮನೆಗೆ ಬಂದು ಅಮ್ಮನಿಗೆ ತಿಳಿ ಹೇಳುವ ಕೆಲಸ ಮಾಡಿದ್ದರು, ನನಗೆ ನೇರ 5ನೇ ತರಗತಿಗೆ ಶಾಲೆ ಸೇರಿಸಿಕೊಂಡಿದ್ದರು ಎಂದು ಆನಂದ ಎಂಬ ವಿದ್ಯಾರ್ಥಿ ತಮ್ಮ ಜೀವನದಲ್ಲಿ ಆದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: R K Beach: ಬರೋಬ್ಬರಿ 400 ಮೀಟರ್ ಹಿಂದಕ್ಕೆ ಹೋದ ಸಮುದ್ರ; ಭಾರತದ ಖ್ಯಾತ ಬೀಚ್ನಲ್ಲಿ ಅಚ್ಚರಿಯ ಘಟನೆ! 57 ವರ್ಷದ ಶಿಕ್ಷಕ ಸುಧೀಂದ್ರ ದೇಸಾಯಿಯವರು ಶಿಕ್ಷಕ ವೃತ್ತಿ ಸೇರಿ 35 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಹೀಗಾಗಿ ಶಿಷ್ಯರಿಗೆ ಗುರುಗಳ ಮೇಲೆ ಅಭಿಮಾನ. ಸುಧೀಂದ್ರ ದೇಸಾಯಿ ಶಾಲೆಗೆ ಬರುವ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣುತ್ತಿದ್ದಾರೆ. ಅವರಿಗೆ ಈಗಲೂ ಮಕ್ಕಳು ಪ್ರೀತಿ ತೋರಿಸುತ್ತಿರುವುದು ನನ್ನ ಜೀವನ ಸಾರ್ಥಕ ಎನ್ನುತ್ತಾರೆ. ಸುಮಾರು 10 ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಿ ಓದಿಸ್ತಿದ್ದು, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಓದಿಗೆ ಸಹಾಯ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಾದರಿ ಶಿಕ್ಷಕ ಸುಧೀಂದ್ರ ದೇಸಾಯಿ, ಆನಂದ ಎಂಬ ವಿದ್ಯಾರ್ಥಿ 4ನೇ ತರಗತಿಯಲ್ಲೇ ಉತ್ತಮವಾಗಿ ಓದುತ್ತಿದ್ದ, ಆತನ ಟ್ಯಾಲೆಟ್ ನೋಡಿ ನಾನು ಅವರ ಮನೆಗೆ ಹೋಗಿ ಶಾಲೆಗೆ ಕಳುಹಿಸುವಂತೆ ಮನವರಿಕೆ ಮಾಡಿದೆ. ಆಗ ನಮ್ಮ ಇಲಾಖೆಯಿಂದ ಚಿಣ್ಣರ ಅಂಗಳ ಯೋಜನೆ ಬಂತು, ಅದರ ಅಡಿ ಶಾಲೆಗೆ ಮರುದಾಖಲು ಮಾಡಿಕೊಂಡಿದ್ದೆ, ಅದೇ ಹುಡುಗ ಈಗ ಎಂಎ, ಬಿಎಡ್ ಮಾಡಿಕೊಂಡು ನಿಮ್ಮ ಮುಂದಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ಬಗ್ಗೆಯೂ ಕೆಟ್ಟ ಸುದ್ದಿಗಳು ಬರುವ ಈ ಕಾಲದಲ್ಲಿ ಸುಧೀಂದ್ರ ದೇಸಾಯಿ ಮಾದರಿ ಶಿಕ್ಷಕರು ಎನ್ನಬಹುದು. (ವರದಿ: ಶರಣಪ್ಪ ಬಾಚಲಾಪುರ, ನ್ಯೂಸ್ 18 ಕನ್ನಡ, ಕೊಪ್ಪಳ) None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.