ಸಾಂದರ್ಭಿಕ ಚಿತ್ರ ವೈರಸ್‌ಗಳ ಫ್ಯಾಕ್ಟರಿ ಎಂದೆನಿಸಿಕೊಂಡಿರುವ ಚೀನಾದಲ್ಲಿ ಮತ್ತೊಂದು ಭೀಕರ ವೈರಸ್ ಕಾಲಿಟ್ಟಿದೆ. ಕೋವಿಡ್ನಿಂದ ಬಳಲಿ ಬೆಂಡಾದ ವಿಶ್ವಕ್ಕೆ ಈಗ ಚೀನಾದಲ್ಲಿ ಕಾಣಿಸಿಕೊಂಡಿರುವ ಹೊಸ ವೈರಸ್ ಮತ್ತಷ್ಟು ಆತಂಕಗೊಳಿಸಿದೆ. ಇನ್ನು ಬೆಂಗಳೂರಿನ ಎಂಟು ತಿಂಗಳ ಕಂದನಲ್ಲೂ ಈ HMPV ವೈರಸ್ ಪತ್ತೆಯಾಗಿದ್ದು, ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಹೀಗಿದ್ದರೂ ಈ ವೈರೆಸ್ ಚೀನಾದಲ್ಲಿ ಹಾವಳಿ ಎಬ್ಬಿಸಿರುವ ವೈರಸಾ? ಅಥವಾ ಬೇರಾವುದಾದರೂ ವೈರಸ್ಸಾ ಎಂಬುವುದು ಇನ್ನೂ ಪತ್ತೆಯಾಗಿಲ್ಲ. ಚೀನಾದಲ್ಲಿ ಹೆಚ್‌ಎಂಪಿವಿ ವೈರಸ್ ಹಾವಳಿ ಹೌದು, ಚೀನಾವು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಪ್ರಕರಣಗಳ ಉಲ್ಬಣಕ್ಕೆ ಸಾಕ್ಷಿಯಾಗಿದ್ದು, ಕೋವಿಡ್ ನಂತರ ಚೀನಾದಲ್ಲಿ ಮತ್ತೊಂದು ಆರೋಗ್ಯ ಬಿಕ್ಕಟ್ಟಿನ ಸಮಸ್ಯೆ ಎದುರಾಗಿದೆ. ಚೀನಾದಲ್ಲಿ ಎಲ್ಲೆಡೆ ಈ ವೈರಸ್ ಹಾವಳಿ ಹೆಚ್ಚಾಗಿದೆ, ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿ ತುಳುಕುತ್ತಿದ್ದಾರೆ, ಎಲ್ಲೆಡೆ ಮಾಸ್ಕ್‌ಗಳು ಮುಖದ ಮೇಲೆ ಕಾಣುತ್ತಿವೆ, ಸ್ಯಾನಿಟೈಜ್ ಮಾಡಲು ಸಲಹೆ ನೀಡಲಾಗ್ತಿದೆ. ಇನ್ಫ್ಲುಯೆನ್ಸ A, ಮೈಕೋಪ್ಲಾಸ್ಮಾ ನ್ಯುಮೋನಿಯಾ, ಕೋವಿಡ್ ವೈರಸ್ ಹೀಗೆ ಹಲವು ವೈರಸ್‌ಗಳ ಜೊತೆಗೆ ಚೀನಾದಲ್ಲಿ ಬಂದಿರುವ ಹೊಸ ವೈರಸ್ ಕುರಿತಾಗಿ ಒಂದಿಷ್ಟು ಮಾಹಿತಿ ಹೀಗಿದೆ ನೋಡಿ. ಏನಿದು ಎಚ್‌ಎಂಪಿವಿ ವೈರಸ್? ಎಚ್‌ಎಂಪಿವಿ ಉಸಿರಾಟದ ವೈರಸ್ ಆಗಿದ್ದು, ಉಸಿರಾಟದ ಸೋಂಕುಗಳನ್ನು ಉಂಟುಮಾಡುತ್ತದೆ. ವಯಸ್ಸಿನ ಮಿತಿ ಇಲ್ಲದಿದ್ದರೂ ಚಿಕ್ಕ ಮಕ್ಕಳು, ವಯಸ್ಸಾದವರು ಮತ್ತು ಇಮ್ಯುನಿಟಿ ಪವರ್ ಕಡಿಮೆ ಇರೋರಿಗೆ ಈ ಸೋಂಕು ಅಪಾಯಕಾರಿಯಾಗಿದ್ದು, ಇವರಲ್ಲಿಯೇ ಬೇಗ ಕಾಣಿಸಿಕೊಳ್ಳುತ್ತದೆ. ಎಚ್‌ಎಂಪಿವಿಯ ಲಕ್ಷಣಗಳು ಎಚ್‌ಎಂಪಿವಿಯಲ್ಲಿ ಮೊದಲಿಗೆ ನಿಮಗೆ ಜ್ವರ ಮತ್ತು ಇತರ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಚ್ಚು, ಕಮ್ಮಿ ಕೋವಿಡ್‌ನಂತಹ ರೋಗಲಕ್ಷಣಗಳನ್ನೇ ಇದು ಹೊಂದಿದೆ. ಕೆಮ್ಮು, ಜ್ವರ, ಮೂಗು ಕಟ್ಟಿಕೊಳ್ಳುವುದು ಮತ್ತು ಉಸಿರಾಟದ ತೊಂದರೆ ಇದರ ಸಾಮಾನ್ಯ ಲಕ್ಷಣಗಳು. ಇದನ್ನೂ ಓದಿ: Amit Shah: ಅಮಿತ್ ಶಾ ಹೇಳಿಕೆ ಖಂಡಿಸಿ ಬಂದ್‌ಗೆ ಕರೆ; ಸಂಜೆ 6ರವರೆಗೆ ಇಲ್ಲಿ ಬಸ್ ಸಂಚಾರ ಇರಲ್ಲ, ಶಾಲಾ ಕಾಲೇಜುಗಳಿಗೆ ರಜೆ ಸೋಂಕು ಹೆಚ್ಚಾದಲ್ಲಿ ವೈರಸ್ ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾ ಕೂಡ ಬರಬಹುದು. ವೈರಸ್‌ನ ಕಾಲಾವಧಿಯು ಸಾಮಾನ್ಯವಾಗಿ ಮೂರರಿಂದ ಆರು ದಿನಗಳವರೆಗೆ ಇರುತ್ತದೆ, ಸೋಂಕಿನ ತೀವ್ರತೆಯನ್ನು ಅವಲಂಬಿಸಿ ರೋಗಲಕ್ಷಣಗಳು ವಿಭಿನ್ನ ಅವಧಿಗಳವರೆಗೆ ಇರುತ್ತದೆ. ಎಚ್‌ಎಂಪಿವಿ ವೈರಸ್ ಹೇಗೆ ಹರಡುತ್ತದೆ? * ಕೆಮ್ಮು ಮತ್ತು ಸೀನು. * ಕೈಕುಲುಕುವುದು ಅಥವಾ ಸ್ಪರ್ಶಿಸುವುದು ಸೇರಿ ಮುಂತಾದ ವೈಯಕ್ತಿಕ ಸಂಪರ್ಕ. * ಕಲುಷಿತ ಜಾಗಗಳನ್ನು ಮುಟ್ಟಿ ಕೈ ತೊಳೆಯದೇ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಸ್ಪರ್ಶಿಸುವುದು. ಯಾರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಈ ವೈರಸ್? ಚಿಕ್ಕ ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಇದು ಡೇಂಜರಸ್ ಎನಿಸಿಕೊಂಡಿದೆ. ಎಚ್‌ಎಂಪಿವಿಯನ್ನು ತಡೆಯುವುದು ಹೇಗೆ? ನಿಮಗೆ ಈ ಸೋಂಕು ಹರಡದಂತೆ ತಡೆಯಲು ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನು ಮತ್ತು ನೀರಿನಿಂದ ನಿಯಮಿತವಾಗಿ ಕೈಗಳನ್ನು ತೊಳೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. * ಕೈ ತೊಳೆಯದೇ ಮುಖ, ಕಣ್ಣು, ಮೂಗನ್ನು ಸ್ಪರ್ಶಿಸಬೇಡಿ. * ಅನಾರೋಗ್ಯ ಹೊಂದಿರುವವರಿಂದ ಅಂತರ ಕಾಯ್ದುಕೊಳ್ಳಿ. * ಡೋರ್ ಹ್ಯಾಂಡಲ್, ಮಕ್ಕಳ ಆಟಿಕೆ ಇವುಗಳನ್ನು ನಿಯಮಿತವಾಗಿ ಸ್ಯಾನಿಟೈಜ್ ಮಾಡಿ. * ಮಾಸ್ಕ್ ಅನ್ನು ಕಡ್ಡಾಯವಾಗಿ ಬಳಸಿ. ಈಗಾಗ್ಲೇ ಇದರ ರೋಗಲಕ್ಷಣಗಳನ್ನು ಅನುಭವಿಸುತ್ತಿರುವವರು ಏನು ಮಾಡಬೇಕು? ವೈರಸ್‌ನ ರೋಗಲಕ್ಷಣಗಳನ್ನು ಎದುರಿಸುತ್ತಿರುವವರು ಸರಳ ನೈರ್ಮಲ್ಯ ಅಭ್ಯಾಸಗಳನ್ನು ಅನುಸರಿಸುವ ಮೂಲಕ ವೈರಸ್ ಹರಡುವುದನ್ನು ತಡೆಯಬಹುದು. * ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ: ಸೀನುವಾಗ ಅಥವಾ ಕೆಮ್ಮುವಾಗ ಕರವಸ್ತ್ರ ಬಳಸಿ * ನಿಯಮಿತವಾಗಿ ಕೈಗಳನ್ನು ತೊಳೆಯಿರಿ: ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಕೈ ತೊಳೆಯುವುದು ಪ್ರಸರಣದ ಅಪಾಯವನ್ನು ಕಡಿಮೆ ಮಾಡುತ್ತದೆ. * ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ: ಇತರರಿಗೆ ಸೋಂಕು ತಗಲುವ ಸಾಧ್ಯತೆಗಳನ್ನು ಕಡಿಮೆ ಮಾಡಲು ಪಾತ್ರೆಗಳು, ಕಪ್‌ಗಳು ಅಥವಾ ಇತರ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳಬೇಡಿ. * ಮನೆಯಲ್ಲಿಯೇ ಇರಿ: ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ಇತರರಿಗೆ ವೈರಸ್ ಹರಡುವುದನ್ನು ತಪ್ಪಿಸಲು ಮನೆಯಲ್ಲಿಯೇ ಇದ್ದು ವಿಶ್ರಾಂತಿ ಪಡೆಯುವುದು ಉತ್ತಮ. ಚಿಕಿತ್ಸೆ ಅಥವಾ ಲಸಿಕೆ ಇದೆಯೇ? ಸದ್ಯಕ್ಕೆ, ಇದಕ್ಕೆ ಯಾವುದೇ ನಿರ್ದಿಷ್ಟ ಆ್ಯಂಟಿವೈರಲ್ ಚಿಕಿತ್ಸೆ ಅಥವಾ ಲಸಿಕೆ ಇಲ್ಲ. ಸೋಂಕಿತರಿಗೆ ವೈದ್ಯಕೀಯ ಆರೈಕೆಯಷ್ಟೇ ಇದೆ. ಮುಂಜಾಗ್ರತ ಕ್ರಮಗಳ ಮೂಲಕ ನೀವು ಆರೈಕೆ ಮಾಡಿಕೊಳ್ಳಬಹುದು. HMPV ಮತ್ತು COVID-19 ಎರಡಕ್ಕೂ ಹೋಲಿಕೆ ಉಂಟೇ? ಎಚ್‌ಎಂಪಿವಿ ಮತ್ತು ಕೋವಿಡ್ ಹಲವು ಸಾಮ್ಯತೆಗಳನ್ನು ಹಂಚಿಕೊಳ್ಳುತ್ತವೆ, ಇವೆರೆಡೂ ಒಂದೇ ತರನಾದ ರೋಗಲಕ್ಷಣಗಳನ್ನು ಹೊಂದಿವೆ ಮತ್ತು ಒಂದೇ ರೀತಿಯ ಮಾದರಿಯಲ್ಲಿ ಹರಡುತ್ತವೆ ಎನ್ನಲಾಗಿದೆ. ಎಚ್‌ಎಂಪಿವಿ ಚಳಿಗಾಲದಲ್ಲಿ ಹೆಚ್ಚಾದರೆ ಇದಕ್ಕೆ ವಿರುದ್ಧ ಎನ್ನುವಂತೆ ಕೋವಿಡ್ 19 ರೂಪಾಂತರಗಳಿಂದ ವಿಕಸನವಾಗುತ್ತಾ ವರ್ಷಪೂರ್ತಿ ಹರಡಬಹುದು. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.