ನಕ್ಸಲರು (ಸಾಂದರ್ಭಿಕ ಚಿತ್ರ) ಚಿಕ್ಕಮಗಳೂರು: ಅತ್ತ ಛತ್ತೀಸ್‌ಗಡದಲ್ಲಿ (Chhattisgarh) ಅಟ್ಟಹಾಸ ಮೆರೆದಿರೋ ನಕ್ಸಲರು (Naxalites), 10 ಯೋಧರನ್ನು (soldiers) ಬಲಿ ಪಡೆದಿದ್ದಾರೆ. ಇತ್ತ ಕರ್ನಾಟಕದಲ್ಲಿ (Karnataka) 6 ಮಂದಿ ನಕ್ಸಲರು ಬಂದೂಕು ಕೆಳಗಿರಿಸಿ, ಸರ್ಕಾರದ ಮುಂದೆ ಶರಣಾಗಲು ಮುಂದಾಗಿದ್ದಾರೆ. ಮೋಸ್ಟ್ ವಾಂಟೆಡ್ ನಕ್ಸಲರಾದ (Karnataka Naxals) ಮುಂಡಗಾರು ಲತಾ, ಸುಂದರಿ ಸೇರಿದಂತೆ ಒಟ್ಟೂ 6 ಮಂದಿ ನಕ್ಸಲರು ಸರ್ಕಾರದ ಮುಂದೆ ಶರಣಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನು ಇಬ್ಬರು ನಕ್ಸಲರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ 6 ಮಂದಿಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತೀಚಿಗಷ್ಟೇ ನಕ್ಸಲ್ ನಾಯಕ ವಿಕ್ರಂ ಗೌಡ (Naxal Vikram Gowda) ಎನ್‌ಕೌಂಟರ್ ಬಳಿಕ ರಾಜ್ಯದ ನಕ್ಸಲ್ ಹೋರಾಟ ದಿಕ್ಕು ತಪ್ಪಿದಂತಾಗಿದ್ದು, ಇದರಿಂದ ಕಂಗಾಲಾಗಿರೋ ನಕ್ಸಲರು ಶರಣಾಗತಿಗೆ ನಿರ್ಧಿರಿಸಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಶರಣಾಗಲು ನಿರ್ಧರಿಸಿರೋ ನಕ್ಸಲರು ಯಾರು? ಒಟ್ಟು 6 ಮಂದಿ ನಕ್ಸಲರು ಸರ್ಕಾರದ ಮುಂದೆ ಶರಣಾಗಲು ನಿರ್ಧಿರಿಸಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಕ್ಕಡಿಬೈಲು ಗ್ರಾಮದ ಮುಂಡಗಾರು ಲತಾ ಅಲಿಯಾಸ್ ಲೋಕಮ್ಮ ಅಲಿಯಾಸ್ ಶ್ಯಾಮಲಾ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ನಿವಾಸಿ ನಕ್ಸಲ್ ನಾಯಕಿ ಸುಂದರಿ ಅಲಿಯಾಸ್ ಗೀತಾ, ಚಿಕ್ಕಮಗಳೂರು ಜಿಲ್ಲೆಯ ಭದ್ರಸೈಟು – ಬಾಳೆಹೊಳೆ ಗ್ರಾಮದ ಎಂ. ವನಜಾಕ್ಷಿ ಅಲಿಯಾಸ್ ಜ್ಯೋತಿ ಅಲಿಯಾಸ್ ಕಲ್ಪನಾ ಎಂಬ ಮೂವರು ಮೊದಲು ಶರಣಾಗಲು ನಿರ್ಧರಿಸಿದ್ದಾರೆ. ಬಳಿಕ ಶರಣಾಗಲಿದ್ದಾರೆ ಮತ್ತೆ 3 ನಕ್ಸಲರು ಇದಾದ ಬಳಿಕ ಮತ್ತೆ ಮೂವರು ನಕ್ಸಲರು ಸರ್ಕಾರದ ಮುಂದೆ ಶರಣಾಗಲಿದ್ದಾರೆ ಎನ್ನಲಾಗಿದೆ. ಆಂಧ್ರ ಪ್ರದೇಶ ಮೂಲದ ಮಾರೆಪ್ಪ ಅರೋಲಿ, ಕೆ. ವಸಂತ ಹಾಗೂ ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿರುವ ಟಿ.ಎನ್. ಜೀಶ ಸರ್ಕಾರದ ಮುಂದೆ ಶರಣಾಗುತ್ತಿದ್ದಾರಂತೆ. ಇದನ್ನೂ ಓದಿ: Heart Attack: 3ನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ! ಟೀಚರ್ ಕಣ್ಣೆದುರೇ ಕೊನೆಯುಸಿರೆಳೆದ ಬಾಲಕಿ! ಬುಧವಾರ ಶರಣಾಗ್ತಾರಾ ನಕ್ಸಲರು? ಇನ್ನು 6 ನಕ್ಸಲರ ಶರಣಾಗತಿಗೆ ಸಮ್ಮತಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪೊಲೀಸ್ ಇಲಾಖೆಯಿಂದ ಪ್ರಕ್ರಿಯೆ ಆರಂಭವಾಗಿದೆ. ಇದೇ ಬುಧವಾರ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ನಕ್ಸಲರು ಶರಣಾಗುವುದು ಬಹುತೇಕ ಫೈನಲ್ ಆಗಲಿದೆ. ಶಾಂತಿಗಾಗಿ ನಾಗರಿಕ ವೇದಿಕೆ ನೇತೃತ್ವದಲ್ಲಿ ಶರಣಾಗತಿಯಾಗಲಿದ್ದು, ಈಗಾಗಲೇ ರಾಜ್ಯ, ಹೊರ ರಾಜ್ಯದಲ್ಲಿ ಇರುವ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ. 6 ಮಂದಿ ಮೇಲೆ ಹಲವು ರಾಜ್ಯಗಳಲ್ಲಿ ಕೇಸ್ ಈ 6 ಮಂದಿ ಮೇಲೆ ಹಲವು ಕೇಸ್‌ಗಳಿವೆ. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಡಗಾರು ಲತಾ ಮೇಲೆ 27 ಕೇಸ್, ವನಜಾಕ್ಷಿಮೇಲೆ 11 ಕೇಸ್ ಹಾಗೂ ಸುಂದರಿ ಮೇಲೆ 1 ಪ್ರಕರಣ ಇವೆ. ಕರ್ನಾಟಕ, ಕೇರಳ, ಆಂದ್ರಪ್ರದೇಶ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲರು ಇವರಾಗಿದ್ದರು. 7 ಬೇಡಿಕೆ ಮುಂದಿಟ್ಟಿರುವ ನಕ್ಸಲರು ಶರಣಾಗತಿ ಸಂಬಂಧ ಶಾಂತಿಗಾಗಿ ನಾಗರಿಕ ವೇದಿಕೆಗೆ ಈ ನಕ್ಸಲರು ಪತ್ರ ಬರೆದಿದ್ದಾರೆ. ನಕ್ಸಲರ ಪತ್ರದೊಂದಿಗೆ ಶರಣಾಗತಿಯ ಬಗ್ಗೆ ಸರ್ಕಾರದೊಂದಿಗೆ ವೇದಿಕೆ ಚರ್ಚಿಸಿದೆ. ರಾಜ್ಯ ಸರ್ಕಾರದ ಜೊತೆ ನಕ್ಸಲರ ಪರವಾಗಿ ಶಾಂತಿಗಾಗಿ ವೇದಿಕೆ ಮಾತುಕತೆ ನಡೆಸಿದೆ. ಇನ್ನು ಸರ್ಕಾರದ ಮುಂದೆ ನಕ್ಸಲರು 7 ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ನಕ್ಸಲರ ಶರಣಾಗತಿ ಬಗ್ಗೆ ಸಿಎಂ ಹೇಳಿದ್ದೇನು? ನಕ್ಸಲರ ಶರಣಾಗತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ನಕ್ಸಲರಿಗೆ ಶರಣಾಗಿ ಎಂದು ನಾನೇ ಕರೆ ಕೊಟ್ಟಿದ್ದೇನೆ. ಅವರ ಮನಸ್ಸು ಪರಿವರ್ತನೆ ಆಗುತ್ತೆ ಅಂತ ಅನಿಸುತ್ತೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.