NEWS

Bengaluru: ಟಿಕೆಟ್ ಬೆಲೆ ಏರಿಕೆ ಬೆನ್ನಲ್ಲೇ KSRTC ನೌಕರರಿಗೆ ಗುಡ್‌ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ

ಕೆಎಸ್​​ಆರ್​ಟಿಸಿ ಸಿಬ್ಬಂದಿಗೆ ಗುಡ್ ನ್ಯೂಸ್ ಬೆಂಗಳೂರು: ನಿನ್ನೆಯಷ್ಟೇ ರಾಜ್ಯದ 4 ಸಾರಿಗೆ ನಿಗಮಗಳಲ್ಲಿ (Transport Corporation) ಬಸ್ ಟಿಕೆಟ್‌ ದರ (Bus Ticket Price Increase) ಹೆಚ್ಚಾಗಿದೆ. ಇಟಿಎಂ ಯಂತ್ರಗಳಲ್ಲಿ ನೂತನ ದರದ ಬಗ್ಗೆ ಅಪ್ಡೇಟ್‌ ಆಗಿದ್ದು, ಪ್ರಯಾಣಿಕರ ಬಳಿ ಹೊಸ ದರವನ್ನ ಪಡೆಯಲಾಗುತ್ತಿದೆ. ಟಿಕೆಟ್ ದರ ಏರಿಕೆಗೆ ಪ್ರಯಾಣಿಕರು (Passengers) ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳೆಯರಿಗೆ ಫ್ರೀ ಕೊಟ್ಟು (Free Ticket) ನಮ್ಮ ಜೇಬಿಗೆ ಕತ್ತರಿ ಹಾಕ್ತಿದ್ದಾರೆ. ಫ್ರೀ ಕೊಟ್ರೆ ಎಲ್ಲರಿಗೂ ಕೊಡಿ. ಒಂದು ಕಡೆ ಕೊಟ್ಟು ಮತ್ತೊಂದು ಕಡೆ ಕಿತ್ಕೊಂಡರೆ ಏನ್ ಪ್ರಯೋಜನ ಅಂತಾ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಆದರೆ ಇದರ ನಡುವೆಯೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Minister Ramalinga Reddy) ಅವರು ಟಿಕೆಟ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯ ಸಾರಿಗೆ ಇಲಾಖೆ ಕೆಎಸ್​​ಆರ್​​ಟಿಸಿ ನೌಕರರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಹೌದು, ಕೆ ಎಸ್ ಆರ್ ಟಿ ಸಿ ನೌಕರರಿಗೆ ಇನ್ಮುಂದೆ ನಗದು ರಹಿತ ಆರೋಗ್ಯ ಸೇವೆ ನೀಡಲು ಸಾರಿಗೆ ಇಲಾಖೆ ಯೋಜನೆ ರೂಪಿಸಿದ್ದು, ಇಂದು ನಗದು ರಹಿತ ಆರೋಗ್ಯ ಸೇವೆ ಯೋಜನೆಗೆ ಚಾಲನೆ ಸಿಗಲಿದೆ. ಸಾರಿಗೆ ನೌಕರರು ಒತ್ತಡ, ಹೃದಯಘಾತ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹಲವು ಸಂದರ್ಭದಲ್ಲಿ ಕರ್ತವ್ಯದಲ್ಲೇ ನೌಕರರು ಅನಾರೋಗ್ಯದಿಂದ ಜೀವ ಕಳೆದುಕೊಂಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಈ ಕಾರಣದಿಂದಲೇ ಸಾರಿಗೆ ಇಲಾಖೆ ನಿಗಮ ನೌಕರರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ನಗದು ರಹಿತ ಆರೋಗ್ಯ ಸೇವೆಯನ್ನು ಆರಂಭಿಸುತ್ತಿದೆ. ಇದನ್ನೂ ಓದಿ: Tirumala, Mysuru: ತಿರುಪತಿ, ತಿರುಮಲದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಮಾಡೆಲ್; ಟಿಟಿಡಿ ನಿರ್ಧಾರ! ಇಂದು ಸಿಎಂ ಸಿದ್ದರಾಮಯ್ಯ ಅವರು ನಗದು ರಹಿತ ಆರೋಗ್ಯ ಸೇವೆ ಯೋಜನೆಗೆ ಚಾಲನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಕಾರ್ಯಕ್ರಮ ಇಂದು ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಿದ್ದಾರೆ. ರಾಜ್ಯದಾದ್ಯಂತ 225 ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಈ ಆಸ್ಪತ್ರೆಗಳಲ್ಲಿ ಕೆಎಸ್​​ಆರ್​ಟಿಸಿ ನೌಕರರಿಗೆ ನಗದು ರಹಿತ ಆರೋಗ್ಯ ಸೇವೆ ಲಭ್ಯವಾಗಲಿದೆ. ಇನ್ನು ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಸಚಿವರು ಭಾಗಿದ್ದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.