NEWS

Toxic Movie: ಯಶ್​ ಫ್ಯಾನ್ಸ್​​ಗೆ ಗುಡ್​ನ್ಯೂಸ್! ರಾಕಿಂಗ್ ಸ್ಟಾರ್​ ಬರ್ತ್​ಡೇಗೆ ಬಿಗ್​ ಸರ್ಪೈಸ್

ಟಾಕ್ಸಿಕ್ ಮೂವಿ ರಾಕಿಂಗ್ ಸ್ಟಾರ್ ಯಶ್ (Yash) ಅವರ ಬರ್ತ್​ಡೇಗೆ (Birthday) ಇನ್ನು ಒಂದೇ ದಿನ ಬಾಕಿ. ಈ ಸಂದರ್ಭದಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ಅವರು ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಕೊಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜನವರಿ‌ 8ಕ್ಕೆ ಬರ್ತ್​ಡೇ ಆಚರಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಯಶ್ ಹುಟ್ಟು ಹಬ್ಬಕ್ಕೆ ಟಾಕ್ಸಿಕ್ (Toxic Movie Poster) ಚಿತ್ರದ ಪೊಸ್ಟರ್ ರಿಲೀಸ್ ಆಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಟಾಕ್ಸಿಕ್ ಅಪ್ಡೇಟ್ ಬಗ್ಗೆ ಮಾಹಿತಿ ಕೊಟ್ಟ ರಾಕಿಂಗ್ ಸ್ಟಾರ್ ಯಶ್ ಅವರು ಜನವರಿ 8ರಂದು 10: 25 ನಿಮಿಷಕ್ಕೆ ಟಾಕ್ಸಿಕ್ ಚಿತ್ರದ ನ್ಯೂ ಪೋಸ್ಟರ್ ಲಾಂಚ್ ಮಾಡೋದಾಗಿ ಹೇಳಿದ್ದಾರೆ. ಟಾಕ್ಸಿಕ್ ಪೋಸ್ಟರ್ ಬಗ್ಗೆ ಸೋಷಿಯಲ್ ಮೀಡಿಯಾ ದಲ್ಲಿ ಪೋಸ್ಟ್ ಹಾಕಿದ ಯಶ್ ಅವರು ಅಭಿಮಾನಿಗಳಿಗೆ ಭರ್ಜರಿಯಾಗಿಯೇ ಗುಡ್​ನ್ಯೂಸ್ ಕೊಟ್ಟಿದ್ದಾರೆ ಎನ್ನುವುದರಲ್ಲಿ ಸಂದೇಹವಿಲ್ಲ. ರೆಟ್ರೋ ಸ್ಟೈಲ್ ಕಾರಿನ ಪಕ್ಕ ಸಿಗರೇಟ್ ಸೇರುತ್ತಾ ಸೂಟ್ ಧರಿಸಿ, ಹ್ಯಾಟ್ ಧರಿಸಿ ಯಶ್ ನೋಡುತ್ತಿರುವುದನ್ನು ಕಾಣಬಹುದು. ಸದ್ಯ ಈ ಪೋಸ್ಟರ್ ಸಖತ್ ವೈರಲ್ ಆಗಿದೆ.​ ಯಶ್ ಈ ಪೋಸ್ಟ್ ಹಾಕಿದ ಅರ್ಧ ಗಂಟೆಯೊಳಗೆ 1 ಲಕ್ಷದ 99 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಬಂದಿವೆ. ಬಹಳಷ್ಟು ಜನರು ಕಮೆಂಟ್ ಮಾಡಿ ಯಶ್​​ಗೆ ವಿಶ್ ಮಾಡುತ್ತಿದ್ದಾರೆ. ಯಶ್ ಕಾಮನ್ ಡಿಪಿ ಫ್ಯಾನ್ಸ್ ಕಾಮನ್ ಡಿಪಿ ರಿಲೀಸ್ (CDP Release) ಮಾಡಿದ್ದಾರೆ. ಇದನ್ನ ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಲಾಗಿದೆ. ಈ ಒಂದು ಡಿಪಿ ನಿಜಕ್ಕೂ ಸ್ಪೆಷಲ್ ಆಗಿದೆ. ಇದರಲ್ಲಿ ಯಶ್ (Yash) ಒಬ್ಬ ಮಹಾರಾಜನ ತರ ಕಾಣಿಸುತ್ತಿದ್ದಾರೆ. ಜನವರಿ-8 ರಂದು ಯಶ್ ಫ್ಯಾನ್ಸ್ ದೊಡ್ಡ ಹಬ್ಬವನ್ನೆ ಮಾಡೋಕೆ ಪ್ಲಾನ್ ಮಾಡಿದಂತೆ ಇದೆ. ಆದರೆ, ಯಶ್ ಈ ಮೊದಲೇ ಹೇಳಿದ್ದಾರೆ. ಆ ದಿನ ನಾನು ಊರಲ್ಲಿ ಇರೋದಿಲ್ಲ. ಟಾಕ್ಸಿಕ್ ಚಿತ್ರದ ಕೆಲಸ ಇದೆ. ಈ ಹಿನ್ನೆಲೆಯಲ್ಲಿ ನೀವು ಎಲ್ಲಿದ್ದಿರೋ ಅಲ್ಲಿಂದಲೇ ಜನ್ಮ ದಿನ ಸೆಲೆಬ್ರೇಟ್ ಮಾಡಿ ಅಂತಲೇ ಹೇಳಿದ್ದರು. ಆದರೆ, ಯಶ್ ಫ್ಯಾನ್ಸ್ ತಮ್ಮದೇ ಹಾದಿಯಲ್ಲಿಯೇ ಈ ಜನ್ಮ ದಿನವನ್ನ ಸೆಲೆಬ್ರೇಟ್ ಮಾಡೋಕೆ ಸಜ್ಜಾಗಿದ್ದಾರೆ. ಯಶ್ ಕಾಮನ್ ಡಿಪಿ ಕೂಡ ರೆಡಿ ಮಾಡಿದ್ದಾರೆ. ಇದನ್ನೂ ಓದಿ: KGF-1 Movie: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ರೀರಿಲೀಸ್ ಆಗುತ್ತಾ ಕೆಜಿಎಫ್-1? ಫ್ಯಾನ್ಸ್ ನಿರೀಕ್ಷೆ ಏನಿದೆ? ಟಾಕ್ಸಿಕ್ ಚಿತ್ರದ ಹೀರೋ ನಿರ್ಮಾಪಕ ಯಶ್, ತಮ್ಮ ಈ ಚಿತ್ರವನ್ನ ಇಂಟರ್‌ನ್ಯಾಷನಲ್ ಲೆವಲ್‌ಗೆ ರಿಲೀಸ್ ಮಾಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಒಂದು ಹೆಸರಾಂತ ಚಿತ್ರ ವಿತರಣೆ ಸಂಸ್ಥೆ ಜೊತೆಗೆ ಮಾತ್ ಆಡ್ತಿದ್ದಾರೆ ಅನ್ನೋ ಸುದ್ದಿ ಇದೆ. ಇದನ್ನೂ ಓದಿ: Actor Yash: ಹೊಸ ವರ್ಷಕ್ಕೆ ಫ್ಯಾನ್ಸ್‌ಗೆ ಶಾಕ್ ಕೊಟ್ಟ ರಾಕಿಂಗ್ ಸ್ಟಾರ್! ಸೋಶಿಯಲ್ ಮೀಡಿಯಾದಲ್ಲಿ ಯಶ್ ಏನಂದ್ರು? ಟಾಕ್ಸಿಕ್ ಸಿನಿಮಾ ಹಾಲಿವುಡ್ ರೇಂಜ್‌ ಅಲ್ಲಿಯೇ ಇದೆ. ಇದರ ವಿಷ್ಯೂಲ್ ಎಫೆಕ್ಟ್ಸ್, ಇದರ ಸ್ಟೋರಿ ಟೆಲ್ಲಿಂಗ್ ಪ್ಯಾಟರ್ನ್, ಹೀಗೆ ಎಲ್ಲವೂ ಇಂಟರ್‌ನ್ಯಾಷನಲ್ ರೇಂಜ್‌ಗೆ ಇದೆ. ಇಂಟರ್‌ನ್ಯಾಷನಲ್‌ ಮಾರ್ಕೆಟ್‌ಗೆ ಈ ಚಿತ್ರ ಸೂಕ್ತವಾಗಿಯ ರೆಡಿ ಆಗಿದೆ. ಹಾಗಾಗಿಯೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಈ ಚಿತ್ರವನ್ನ ಇಂಟರ್‌ನ್ಯಾಷನಲ್‌ ರೇಂಜ್‌ಗೆ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ ಈ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಹೆಸರಾಂತ ಚಿತ್ರ ವಿರಣಾ ಸಂಸ್ಥೆ ಜೊತೆಗೆ ಮಾತುಕತೆ ನಡೆಸಿದ್ದಾರೆ. ಹೌದು 20th Century Fox ಜೊತೆಗೆ ಯಶ್ ಮಾತುಕತೆ ಮಾಡುತ್ತಿದ್ದಾರೆ ಅನ್ನುವ ಸುದ್ದಿ ಇದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ವೈರಲ್ ಆಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.