NEWS

Actor Darshan: ನಟ ದರ್ಶನ್‌ಗೆ ಬಿಗ್ ಶಾಕ್! 7 ಆರೋಪಿಗಳ ಜಾಮೀನು ರದ್ಧು ಕೋರಿ ಸುಪ್ರೀಂ ಮೆಟ್ಟಿಲೇರಿದ ಖಾಕಿ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ (Actor Darshan)​ ಬೇಲ್​ (Bail) ಪಡೆದು ಹೊರಗೆ ಬಂದಿದ್ರು. ಆದ್ರೆ ಜಾಮೀನು​ ಸಿಕ್ಕ ಖುಷಿಯಲ್ಲಿದ್ದ ರೆಸ್ಟ್​​ ಮಾಡಿದ್ದ ನಟ ದರ್ಶನ್​ಗೆ ಬೆಂಗಳೂರು ಪೊಲೀಸರು ಬಿಗ್​ ಶಾಕ್ ಕೊಟ್ಟಿದ್ದಾರೆ. ನಟ ದರ್ಶನ್ ಸೇರಿದಂತೆ ಏಳು ಆರೋಪಿಗಳ (Accused) ಜಾಮೀನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್​ಗೆ (Supreme Court) ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ರದ್ದಾಗುತ್ತಾ ನಟ ದರ್ಶನ್ ಬೇಲ್, ಮತ್ತೆ ಜೈಲು ಸೇರ್ತಾರಾ ದಾಸ? ದರ್ಶನ್ ಜಾಮೀನು ರದ್ದಾಗುತ್ತಾ? ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಆರೋಪಿಯಾಗಿದ್ದ 17 ಮಂದಿಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದ್ರೆ ಇದೀಗ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನು​ ರದ್ದು ಕೋರಿ ಬೆಂಗಳೂರು ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂಕೋರ್ಟ್ ವಕೀಲ ಅನಿಲ್ ಸಿ ನಿಶಾನಿ ಪೊಲೀಸರ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 7 ಆರೋಪಿಗಳ ಬೇಲ್​ ರದ್ದುಗೆ ಅರ್ಜಿ ನಟ ದರ್ಶನ್, ಪವಿತ್ರಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್, ಜಗದೀಶ್ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲಾಗಿದೆ. ಡಿಸೆಂಬರ್ 13 ರಂದು ನಟ ದರ್ಶನ್, ಪವಿತ್ರಾ ಸೇರಿದಂತೆ ಏಳು ಆರೋಪಿಗಳು ಜಾಮೀನು ಪಡೆದಿದ್ದರು. ತೋಟದ ಮನೆಯಲ್ಲಿ ನಟ ದರ್ಶನ್! ಜಾಮೀನು ಸಿಗ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ನಟ ದರ್ಶನ್ ಪತ್ನಿ ಮನೆಗೆ ತೆರಳಿದ್ರು. ಬಳಿಕ ಅಮ್ಮನನ್ನು ನೋಡ್ಬೇಕು, ತಾನು ಸಾಕಿದ ಪ್ರಾಣಿ-ಪಕ್ಷಿಗಳನ್ನು ನೋಡ್ಬೇಕು ಅಂತ ಕೋರ್ಟ್​​ನಿಂದ ಅನುಮತಿ ಪಡೆದು ಮೈಸೂರಿಗೆ ಹಾರಿದ್ರು. ಇದೀಗ ಫ್ಯಾಮಿಲಿ ಹಾಗೂ ಆಪ್ತರ ಜೊತೆ ನಟ ದರ್ಶನ್​ ಕಾಲಕಳೆಯುತ್ತಿದ್ದಾರೆ. ಬೇಲ್​ ಸಿಕ್ಕ ಬಳಿಕ ಕೊಂಚ ರಿಲ್ಯಾಕ್ಸ್ ಆಗಿದ್ದ ದರ್ಶನ್​ಗೆ ಇದೀಗ ಮತ್ತೆ ಢವಢವ ಶುರುವಾಗಿದೆ. ಆಪರೇಷನ್​ಗೆ ರೆಡಿಯಾದ ದಾಸ ಬೇಲ್​ ಸಿಗ್ತಿದ್ದಂತೆ ಆಸ್ಪತ್ರೆಯಿಂದ ಬಂದ ದರ್ಶನ್​ಗೆ ಇನ್ನೂ ಬೆನ್ನು ನೋವು ಬಿಡದೆ ಕಾಡ್ತಿದೆಯಂತೆ. ದರ್ಶನ್ ಬೆನ್ನು ನೋವಿಗಾಗಿ ಆಪರೇಷನ್ ಮಾಡಿಸಿಕೊಂಡಿರಲಿಲ್ಲ. ಇದೀಗ ನೋವು ತಡೆಯಲಾರದೆ ಆಪರೇಷನ್​​ಗೆ ಒಪ್ಪಿದ್ದಾರೆ ಎನ್ನಲಾಗ್ತಿದೆ. ಸಂಕ್ರಾಂತಿ ಹಬ್ಬದ ಟೈಮ್​ನಲ್ಲೇ ನಟ ದರ್ಶನ್​ ಆಪರೇಷನ್ ಕೂಡ ಮಾಡಿಸಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ಕೂಡ ಹಬ್ಬಿದೆ. ಇದನ್ನೂ ಓದಿ: Darshan: ಮೈಸೂರಿನಲ್ಲಿ ಉಳಿಯೋ ಗಡುವು ಅಂತ್ಯ! ಬೆಂಗಳೂರಿಗೆ ಬರ್ತಾರಾ ದರ್ಶನ್? ದರ್ಶನ್ ಬೆನ್ನು ನೋವಿನ ಆಪರೇಷನ್ ಮೈಸೂರಿನಲ್ಲಿಯೇ ಆಗುತ್ತಿದೆ. ಇಲ್ಲಿಯ ಡಾಕ್ಟರ್ ಅಜಯ್ ಹೆಗಡೆ ಅವರ ಬಳಿಯೇ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೈದ್ಯರಿಂದಲೇ ಆಪರೇಷನ್ ಮಾಡಿಸಿಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ ಕೂಡ ಇದೆ. ಮಾಧ್ಯಮವೊಂದಕ್ಕೆ ಈ ಬಗ್ಗೆ ಅಜಯ್ ಹೆಗಡೆ ತಿಳಿಸಿದ್ದಾರಂತೆ. ದರ್ಶನ್‌ಗೆ ಆಪರೇಷನ್ ಮಾಡ್ತೀವಿ ಅಂತಲೇ ಹೇಳಿದ್ದಾರೆ. (ವರದಿ: ಮಂಜುನಾಥ್​, ನ್ಯೂಸ್​18 ಕನ್ನಡ, ಬೆಂಗಳೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.