NEWS

Mohammed Shami: ವಿಜಯ್ ಹಜಾರೆಯಲ್ಲಿ ಅಬ್ಬರ! ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತಕ್ಕೆ ಗುಡ್​ ನ್ಯೂಸ್ ಕೊಟ್ಟ ಶಮಿ!

ಮೊಹಮ್ಮದ್ ಶಮಿ ಭಾರತ ತಂಡಕ್ಕೆ ಕಮ್​ಬ್ಯಾಕ್ ಮಾಡಲು ಹಾತೊರೆಯುತ್ತಿರುವ ಮೊಹಮ್ಮದ್ ಶಮಿ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಆಲ್​ರೌಂಡರ್​ ಆಟದ ಮೂಲಕ ಗಮನ ಸೆಳೆದಿದ್ದಾರೆ. ಬೆಂಗಾಲ್‌ ತಂಡದ ಪರ ಆಡುತ್ತಿರುವ ಹಿರಿಯ ಬೌಲರ್​ ಬೌಲಿಂಗ್​ನಲ್ಲಿ ಮಾತ್ರವಲ್ಲದೆ, ಬ್ಯಾಟಿಂಗ್​ ಮೂಲಕವೂ ತಂಡಕ್ಕೆ ನೆರವಾಗುತ್ತಿದ್ದಾರೆ. ಭಾನುವಾರ ಮಧ್ಯಪ್ರದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಶಮಿ ವಿದ್ವಂಸಕ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದರೆ. ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶಮಿ 34 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ ಸಹಿತ 42 ರನ್ ಗಳಿಸಿದರು. ಶಮಿ ಬ್ಯಾಟ್‌ ಜಳಪಿಸುವುದರೊಂದಿಗೆ ಈ ಪಂದ್ಯದಲ್ಲಿ ಬೆಂಗಾಲ್‌ ಗೌರವಾತ್ಮಕ ಮೊತ್ತ ಪೇರಿಸಲು ನೆರವಾದರು. ಟಾಸ್ ಸೋತು ಮೊದಲಿಗೆ ಬ್ಯಾಟ್ ಮಾಡಿದ ಬೆಂಗಾಲ್ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿತು. ಬೆಂಗಾಲ್‌ ಕ್ಯಾಪ್ಟನ್‌ ಸುದೀಪ್‌ ಘರಾಮಿ ಆರಂಭಿಕರಾಗಿ ಕಣಕ್ಕಿಳಿದು 125 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್​ಗಳೊಂದಿಗೆ 99 ರನ್​ಗಳಿಸಿ ಒಂದು ರನ್​ ನಿಂದ ಶತಕ ಮಿಸ್ ಮಾಡಿಕೊಂಡರು. ಸುದೀಪ್‌ ಚಟರ್ಜಿ (47)ರನ್​ಗಳಿಸಿದರೆ 8ನೇ ಕ್ರಮಾಂಕದಲ್ಲಿ ಶಮಿ 42 ರನ್​ಗಳಿಸಿದರೆ,, ಕೌಶಿಕ್‌ ಮೈತಿ ಅಜೇಯ 20 ರನ್​ಗಳಿಸಿದತು. ಮಧ್ಯಪ್ರದೇಶ ಬೌಲರ್‌ಗಳಲ್ಲಿ ಆರ್ಯನ್‌ ಪಾಂಡೆ, ಆವೇಶ್‌ ಖಾನ್‌ ತಲಾ ಎರಡು ವಿಕೆಟ್‌, ಸರಾನ್ಶ್‌ ಜೈನ್‌, ಸಾಗರ ಸೋಲಂಕಿ ತಲಾ 1 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: Vijay Hazare: 4ನೇ ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್! ಟೂರ್ನಿಯಲ್ಲಿ 6ನೇ ಜಯ ಸಾಧಿಸಿ ನಾಕೌಟ್​ ಪ್ರವೇಶಿಸಿದ ಕರ್ನಾಟಕ ಆಯ್ಕೆ ಸಮಿತಿ ಗಮನ ಸೆಳೆದ ಶಮಿ ಗಾಯದ ಕಾರಣ ಶಮಿ 2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಭಾರತದ ಪರ ಯಾವುದೆ ಪಂದ್ಯವನ್ನಾಡಿಲ್ಲ. ಇದೀಗ ರಣಜಿ, ಸೈಯದ್ ಮುಷ್ತಾಕ್ ಅಲಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆಯುತ್ತಿದ್ದಾರೆ. ಈ ಮೂಲಕ ತಾವೂ ಫಿಟ್ ಅಂಡ್ ಫೈನ್ ಆಗಿರುವುದಾಗಿ ತೋರಿಸಿಕೊಡುತ್ತಿದ್ದಾರೆ. ಕಳೆದ ತಿಂಗಳು ರಣಜಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ತಾವೂ ಸಿದ್ಧ ಎಂದು ತಿಳಿಸಿದ್ದರು. ಆದರೆ ಕಾಲು ಹೂತವಿರುವ ಕಾರಣ ಸಂಪೂರ್ಣ ಫಿಟ್ ಇಲ್ಲ ಎಂದು ಅವರನ್ನ ಆಯ್ಕೆ ಮಾಡಿರಲಿಲ್ಲ. ಇದೀಗ ಸಂಪೂರ್ಣ ಫಿಟ್ ಆಗಿದ್ದು, ಮುಂಬರುವ ಇಂಗ್ಲೆಂಡ್​ ವಿರುದ್ಧ ತವರಿನಲ್ಲಿ ನಡೆಯುವ ಏಕದಿನ ಸರಣಿ ಹಾಗೂ ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ತಂಡಕ್ಕೆ ಮರಳಲು ಸಿದ್ಧರಾಗಿದ್ದಾರೆ. ಇದೀಗ ಬ್ಯಾಟಿಂಗ್ ಬೌಲಿಂಗ್ ಮೂಲಕ ಮಿಂಚುತ್ತಿದ್ದು, ಭಾರತ ತಂಡಕ್ಕೆ ತಾವೂ ಆಡುವುದಕ್ಕೆ ಸಿದ್ಧ ಎಂದು ಆಯ್ಕೆ ಸಮಿತಿಗೆ ಪ್ರದರ್ಶನದ ಮೂಲಕವೇ ತೋರಿಸಿಕೊಟ್ಟಿದ್ದಾರೆ. ಇದನ್ನೂ ಓದಿ: 9999 ರನ್​ಗೆ ಔಟ್ ಆದ ಸ್ಮಿತ್! ಟೆಸ್ಟ್ ಇತಿಹಾಸದಲ್ಲಿ ಈ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಬ್ಯಾಟರ್​ಗಳೆಷ್ಟು? ಇನ್ನು ಈ ಪಂದ್ಯಕ್ಕೆ ಬರುವುದಾದರೆ, ಬೆಂಗಾಲ್ ನೀಡಿದ 270 ರನ್​ಗಳ ಗುರಿಯನ್ನ ಮಧ್ಯಪ್ರದೇಶ ತಂಡ 46.2 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು. ನಾಯಕ ರಜತ್ ಪಾಟಿದಾರ್ 137 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 132 ರನ್​ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಈ ಪಂದ್ಯವನ್ನು ಸೋಲು ಕಂಡರು ಬೆಂಗಾಲ್ ತಂಡ ಫ್ರೀ ಕ್ವಾರ್ಟರ್ ಫೈನಲ್​ನಲ್ಲಿ ಆಡುವ ಅವಕಾಶ ಪಡೆದುಕೊಂಡಿದೆ. ಹರಿಯಾಣ ತಂಡವನ್ನು ಎದುರಿಸಲಿದೆ. ಮಧ್ಯಪ್ರದೇಶ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಈ ಮೂಲಕ ಟೂರ್ನಿಯಿಂದ ಹೊರಬಿದ್ದಿತು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.