ಬೆಂಗಳೂರು: ವೈರಸ್‌ಗಳ ಫ್ಯಾಕ್ಟರಿ ಎಂದೆನಿಸಿಕೊಂಡಿರುವ ಚೀನಾದಲ್ಲಿ ಮತ್ತೊಂದು ಭೀಕರ ವೈರಸ್ ಕಾಲಿಟ್ಟಿದೆ. ಕೋವಿಡ್‌ನಿಂದ ಬಳಲಿ ಬೆಂಡಾದ ವಿಶ್ವಕ್ಕೆ ಈಗ ಚೀನಾದಲ್ಲಿ ಕಾಣಿಸಿಕೊಂಡಿರುವ ಹೊಸ ವೈರಸ್ ಮತ್ತಷ್ಟು ಆತಂಕಗೊಳಿಸಿದೆ. ಇಂದು ಬೆಂಗಳೂರಿಗೂ ಕಾಲಿಟ್ಟುವ ಈ HMPV ವೈರಸ್ ಎರಡು ಮಕ್ಕಳಲ್ಲಿ ಕಾಣಿಸಿಕೊಂಡಿದ್ದು, ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಎರಡು ಕೇಸ್ ಆಗಿರೋದು ಭಯ ಹುಟ್ಟಿಸಿದೆ. ಆದರೆ ಇದು ಮೊದಲ ಕೇಸ್ ಅಲ್ಲ! ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಸಾರ್ವಜನಿಕರಲ್ಲಿ HMPV ಔಟ್ ಬ್ರೇಕ್ ಆಗಿದೆ ಎಂದು ಆತಂಕ ಇದೆ. ನಗರದಲ್ಲಿ ಎರಡು ಕೇಸ್ ಆಗಿರೋದು ಭಯ ಹುಟ್ಟಿಸಿದೆ.ಇದು ಮೊದಲ ಕೇಸ್ ಅಲ್ಲ. ILI ಯವರಿಗೆ ಬೇರೆ ಬೇರೆ ವೈರಸ್ ಬರುತ್ತೆ. ಅದ್ರಲ್ಲಿ ಈ HMPV ಕೂಡಾ ಇರುತ್ತದೆ ಎಂದರು. ಹಾನಿಕಾರಕ ವೈರಸ್ ಅಂತ ಹೇಳಲು ಸಾಧ್ಯವಿಲ್ಲ ಇದು ಹಾನಿಕಾರಕ ವೈರಸ್ ಅಂತ ಹೇಳಲು ಸಾಧ್ಯವಿಲ್ಲ. ಇದು ಸಹಜವಾಗಿರುವಂಥದ್ದು, ILI ಕೇಸ್ ನಲ್ಲಿ ಬೇರೆ ಬೇರೆ ವೈರಸ್ ಬರುತ್ತೆ. ಇದು ಬೇರೆ ಸಮಸ್ಯೆಗಳು ಸೇರಿಕೊಂಡು ಬರುತ್ತದೆ ಎಂದು ಹೇಳಿದರು. ಇದನ್ನೂ ಓದಿ: HMPV Virus: ಎಚ್ಚರ ಎಚ್ಚರ! 3 ಗಂಟೆ ಅವಧಿಯಲ್ಲಿ ಬೆಂಗಳೂರಿನ ಮತ್ತೊಂದು ಮಗುವಿನಲ್ಲಿ HMPV ವೈರಸ್ ಪತ್ತೆ! ಮಾಸ್ಕ್ ಹಾಕಬೇಕು , ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ ಇಬ್ಬರು ಮಕ್ಕಳು ಕೂಡಾ ಗುಣಮುಖರಾಗಿದ್ದಾರೆ. 8 ತಿಂಗಳ ಮಗು ನಾಳೆ ಡಿಸ್ಚಾರ್ಜ್ ಆಗುತ್ತೆ. ಮಾಸ್ಕ್ ಹಾಕಬೇಕು , ಲಾಕ್ ಡೌನ್ ಮಾಡಬೇಕು ಅಂತ ಏನಿಲ್ಲ. ಸಾರ್ವಜನಿಕರು ಆತಂಕ ಪಡಬೇಡಿ. ಇದರಿಂದ ಜೀವಕ್ಕೆ ಏನು ಅಪಾಯ ಇಲ್ಲ. ಚೈನಾ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ. ಪುಣೆಗೆ ಕಳುಹಿಸಬೇಕು ಎಂಬ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: Operation Hasta: ಸಂಕ್ರಾಂತಿ ಬಳಿಕ ‘ಆಪರೇಷನ್ ಹಸ್ತ’ ಫಿಕ್ಸ್? ಹೊಸ ಬಾಂಬ್ ಸಿಡಿಸಿದ ಎಂಬಿ ಪಾಟೀಲ್ ಇಂದು ಒಟ್ಟು ಇಬ್ಬರು ಮಕ್ಕಳಲ್ಲಿ ವೈರಸ್ ಪತ್ತೆ ಇಂದು ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ HMPV ವೈರಸ್ ಪತ್ತೆಯಾಗಿತ್ತು. ಇದು ದೃಢಪಟ್ಟ ಮೂರು ಗಂಟೆಗಳ ಅವಧಿಯಲ್ಲೇ ಇದೀಗ ಮತ್ತೊಂದು ಮೂರು ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. ಇಂದು ಒಟ್ಟು ಇಬ್ಬರು ಮಕ್ಕಳಲ್ಲಿ ವೈರಸ್ ಪತ್ತೆಯಾಗಿದೆ. ICMR ನಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಮೊದಲ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮೊದಲ ಮಗುವಿಗೆ ಜ್ವರ ಬಂದ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಈ ವೇಳೆ ಬ್ಲಡ್ ಟೆಸ್ಟ್ ಮಾಡಿಸಿದಾಗ HMPV ವೈರಸ್ ಪತ್ತೆಯಾಗಿತ್ತು. ಇದೀಗ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮತ್ತೊಂದು ಮೂರು ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.