NEWS

Actor Vishal: ಮಾತು ತೊದಲಿದೆ, ಕೈ ನಡುಗುತ್ತಿದೆ, ವಿಶಾಲ್​​ಗೆ ನಿಜಕ್ಕೂ ಏನಾಯ್ತು! ಹೊರಬಿತ್ತು ತಮಿಳು ನಟನ ಹೆಲ್ತ್​ ರಿಪೋರ್ಟ್​!

ಕಾಲಿವುಡ್ ಸ್ಟಾರ್ ಹೀರೋ ನಟ ವಿಶಾಲ್ (Actor Vishal)​ ತಮಿಳುನಾಡಿನಲ್ಲಿ (Tamilnadu) ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೆಲ ದಿನಗಳಿಂದ ನಟ ವಿಶಾಲ್ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರಲಿಲ್ಲ. ಇದೀಗ ವಿಶಾಲ್​ ನಟಿಸಿರುವ,​ 12 ವರ್ಷಗಳ ಹಿಂದೆ ಚಿತ್ರೀಕರಣ ಮುಗಿಸಿದ್ದ ಮದಗಜರಾಜ ಚಿತ್ರ ಈಗ ಥಿಯೇಟರ್‌ ನಲ್ಲಿ ಬಿಡುಗಡೆಯಾಗುತ್ತಿದೆ. ಸಂಕ್ರಾಂತಿ ಉಡುಗೊರೆಯಾಗಿ ಜನವರಿ 12 ರಂದು ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ಪ್ರಚಾರದ ಅಂಗವಾಗಿ ಮದಗಜರಾಜ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ (Pre-Release Event) ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೀರೋ ವಿಶಾಲ್ ಕೂಡ ಭಾಗವಹಿಸಿದ್ದರು. ನಟ ವಿಶಾಲ್ ಅವರನ್ನು ನೋಡಿದ ಅಭಿಮಾನಿಗಳು ಬಿಚ್ಚಿಬಿದ್ದಿದ್ದಾರೆ. ತಮಿಳು ನಟನಿಗೆ ಏನಾಯ್ತು? ಡಾಕ್ಟರ್ ಹೇಳಿದ್ದೇನು?​ ಕೈ ನಡುಗುತ್ತಿದೆ, ಮಾತು ತೊದಲುತ್ತಿದೆ! ತಮಿಳು ನಟ ವಿಶಾಲ್ ಅವರ ಗುರುತಿಸಲಾಗದಷ್ಟು ಬದಲಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗ್ತಿದೆ. ಸಿನಿಮಾ ಕುರಿತು ಮಾತಾಡಲು ಮೈಕ್​ ಹಿಡಿದ ನಟ ವಿಶಾಲ್​ ಕೈ ನಡುಗುತ್ತಿತ್ತು. ದೊಡ್ಡ ದೊಡ್ಡ ಡೈಲಾಗ್​ ಹೇಳ್ತಾ, ಚಟ-ಪಟ ಮಾತಾಡ್ತಿದ್ದ ನಟ ವಿಶಾಲ್​​, ಯಾಕೋ ಇವತ್ತಿನ ಕಾರ್ಯಕ್ರಮದಲ್ಲಿ ತೊದಲುತ್ತಿದ್ರು. ವಿಶಾಲ್ ಲುಕ್ ಬದಲಾಗಿತ್ತು. ವಿಶಾಲ್​ ನೋಡಿ ಶಾಕ್ ಆದ ಅಭಿಮಾನಿಗಳು ನಿಜಕ್ಕೂ ನಟನಿಗೆ ಏನಾಗಿದೆ ಅಂತ ಕಂಗಾಲಾಗಿದ್ದಾರೆ. Take care vishal naa y hand ivolo nadungudhu?🥲 #MadhaGajaRaja pic.twitter.com/LLHjhDFKHp ವೈದ್ಯರು ಕೊಟ್ಟ ಸ್ಪಷ್ಟನೆ ಏನು? ತಮ್ಮ ನೆಚ್ಚಿನ ನಾಯಕನಿಗೆ ಏನಾಯಿತು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನಟ ವಿಶಾಲ್ ಅವರು ತೀವ್ರ ಚಳಿ, ಜ್ವರ, ನೆಗಡಿಯಿಂದ ಬಳಲುತ್ತಿದ್ದಾರಂತೆ. ವೈರಲ್​ ಫೀವರ್ ಅವರನ್ನ ಕಾಡ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ. ವಿಶಾಲ್​ ಆರೋಗ್ಯ ಕುರಿತ ಹೆಲ್ತ್ ಬುಲೆಟಿನ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ನಿಜವಾಗಿಯೂ ಜ್ವರವೇನಾ? ಆದರೆ ಇದು ನಿಜವಾಗಿಯೂ ಜ್ವರವೇ ಅಥವಾ ಬೇರೆ ಏನಾದರೂ ಸಮಸ್ಯೆ ಇದೆಯೇ ಎಂದು ತಿಳಿಯಲು ವಿಶಾಲ್ ಪ್ರತಿಕ್ರಿಯೆಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ನಟ ವಿಶಾಲ್ ಶೀಘ್ರ ಗುಣಮುಖರಾಗಿ ಸಹಜ ಸ್ಥಿತಿಗೆ ಮರಳಲಿ ಎಂದು ಎಲ್ಲರೂ ಹಾರೈಸಿದ್ದಾರೆ. ಇದನ್ನೂ ಓದಿ: Sanvi Sudeep: ಸುದೀಪ್ ಮಗಳು ಸಾನ್ವಿ ಟ್ರೋಲ್ ಆಗಿದ್ದು ಯಾಕೆ? ಕಿಚ್ಚನ ಮಗಳು ಮಾಡಿದ ತಪ್ಪೇನು? 2012ರಲ್ಲಿ ಸುಂದರ್ ಸಿ ನಿರ್ದೇಶನದ ವಿಶಾಲ್ ಅಭಿನಯದ ‘ಮದಗಜರಾಜ’ ಚಿತ್ರೀಕರಣವೂ ಅಷ್ಟೇ ವೇಗದಲ್ಲಿ ಮುಗಿದಿತ್ತು. ಇದೇ ವರ್ಷ ಚಿತ್ರ ತೆರೆಗೆ ಬರುವ ನಿರೀಕ್ಷೆ ಇತ್ತು. ಆದ್ರೆ ಬಿಡುಗಡೆ ಕಾರಣಾಂತರದಿಂದ ರಿಲೀಸ್ ಆಗಲಿಲ್ಲ. ವಿಶಾಲ್ ಜೊತೆ ಸಂತಾನಂ, ವರಲಕ್ಷ್ಮಿ, ಸತೀಶ್, ನಿತಿನ್ ಸತ್ಯ, ಸೋನುಸೂದ್, ಅಂಜಲಿ, ದಿವಂಗತ ನಟರಾದ ಮಣಿವಣ್ಣನ್, ಮನೋಬಾಲಾ, ಮೈಲಸ್ವಾಮಿ, ಚಿಟ್ಟಿಬಾಬು ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಮದಗಜರಾಜ’ ಚಿತ್ರವನ್ನು ಜೆಮಿನಿ ಫಿಲ್ಮ್ ಸರ್ಕ್ಯೂಟ್ ನಿರ್ಮಿಸಿದ್ದು, ವಿಜಯ್ ಆಂಟೋನಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಪಂಡೆಂ ಕೊಡಿ, ಪೊಗರು, ಭರಣಿ, ಪೂಜಾ, ಅಭಿಮನ್ಯುಡು, ಪತ್ತೇದಾರಿ, ಮಾರ್ಕ್ ಆಂಟನಿ, ಲಾಠಿ ಮುಂತಾದ ಸೂಪರ್ ಹಿಟ್ ಸಿನಿಮಾಗಳ ಮೂಲಕ ನಟ ವಿಶಾಲ್ ಪ್ರೇಕ್ಷಕರ ಮನಗೆದ್ದಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.