NEWS

Udupi: ಕಾರ್ಕಳ ಅತ್ಯಾಚಾರ ಕೇಸ್; ರಾತ್ರಿ ಬಿಯರ್ ಕುಡಿದು ಮಲಗಿದ್ದನಂತೆ ಆರೋಪಿ; ತಾಯಿಯ ಶಾಕಿಂಗ್ ಹೇಳಿಕೆ!

ಬಂಧಿತ ಆರೋಪಿಗಳು ಉಡುಪಿ: ಕಾರ್ಕಳ ರೇಪ್ ಪ್ರಕರಣ (Karkala Rape Case) ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರ್ ಮಾಡಿದ್ದಾರೆ. ಅಲ್ಲದೇ, ಉಡುಪಿ (Udupi) ಎಸ್ಪಿ‌ ಡಾ. ಅರುಣ್ ಕುಮಾರ್, ಪಶ್ಚಿಮ ವಲಯ ಐಜಿ ಅಮಿತ್ ಸಿಂಗ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ್‌ (Home Minister Parameshwar), ಕಠಿಣ ಕಾನೂನು ಕ್ರಮದ ಭರವಸೆ ನೀಡಿದ್ದಾರೆ. ಆರೋಪಿಗಳು ನಾಲ್ಕು ದಿನಗಳು ಪೊಲೀಸ್ ಕಸ್ಟಡಿಗೆ ಇಂದು ಇಬ್ಬರು ಆರೋಪಿಗಳನ್ನು ಕಾರ್ಕಳ ಜೆಎಂಎಫ್ ಸಿ ಕೋರ್ಟ್ ಮುಂದೆ ಪೊಲೀಸರು ಹಾಜರು ಪಡಿಸಿದ್ದು, ಆರೋಪಿಗಳಾದ ಅಲ್ತಾಫ್, ರಿಚರ್ಡ್ ಗೆ ನಾಲ್ಕು ದಿನ ಪೊಲೀಸ್ ಕಸ್ಟಡಿ ನೀಡಿ ಕೋರ್ಟ್ ಆದೇಶ ನೀಡಿದೆ. ಈ ಬಗ್ಗೆ ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದ್ದು, ಕಾರ್ಕಳ ನಗರ ಠಾಣೆ ಪೊಲೀಸರು ನಾಲ್ಕು ದಿನಗಳು ಕಸ್ಟಡಿಗೆ ಕೇಳಿದ್ದರಂತೆ. ಇದು ಲವ್ ಜಿಹಾದ್; ಮುತಾಲಿಕ್ ಇತ್ತ ಕಾರ್ಕಳ ಘಟನೆಗೆ ಕಿಡಿಕಾರಿರುವ ಪ್ರಮೋದ್ ಮುತಾಲಿಕ್, ಇದು ಹಿಂದೂ ಯುವತಿಯರಿಗೆ ಎಚ್ಚರಿಕೆಯ ಗಂಟೆ. 25 ವರ್ಷಗಳಿಂದ ನಾವು ಹೇಳ್ತಾ ಇದ್ದೀವಿ. ಯಾರನ್ನ ಪ್ರೀತಿ ಮಾಡ್ಬೇಕು, ಯಾರನ್ನ ಭೇಟಿ ಮಾಡ್ಬೇಕು ಅನ್ನೋದನ್ನ, ಯೋಚನೆ ಮಾಡಿ. ಇದು ಪ್ರೀತಿ-ಪ್ರೇಮವಲ್ಲಾ, ಇದು ಜಿಹಾದ್ ಎಂದು ಆರೋಪಿಸಿದ್ದಾರೆ. ನನ್ನ ಮಗ ಅತ್ಯಾಚಾರ ಮಾಡುವವ ಅಲ್ಲ ಎಂದ ಆರೋಪಿ ತಾಯಿ ಇನ್ನು, ಆರೋಪಿ ಕಾರ್ಕಳ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎ2 ಸವೇರಾ ರಿಚರ್ಡ್ ಕಾರ್ಡೋಸಾ ತಾಯಿ ಮಾತನಾಡಿದ್ದಾರೆ. ಪ್ರಕರಣದಲ್ಲಿ ನನ್ನ ಮಗನ ಕೈವಾಡ ಇಲ್ಲ ಅಂತ ಹೇಳಿದ್ದಾರೆ. ನನ್ನ ಮಗ ಟಿಪ್ಪರ್ ಚಾಲಕ ಎಲ್ಲಿ ಹೋಗ್ತಾನೆ ಅಂತ ಯಾವತ್ತೂ ಹೇಳಲ್ಲ. ಘಟನೆ ನಡೆದ ದಿನವೂ ಕಾರ್​ನಲ್ಲಿ ಎಲ್ಲೋ ಹೋಗಿದ್ದ. ರಾತ್ರಿ ಬೈಕ್ ನಲ್ಲಿ ಬಂದಾಗ ಕಾರ್​ ಎಲ್ಲಿ ಅಂತ ಪ್ರಶ್ನೆ ಮಾಡಿದ್ದೆ. ಆದರೆ ಏನೂ ಮಾತನಾಡದೇ ಸುಮ್ಮನೆ ಬಿಯರ್ ಕುಡಿಯುತ್ತಾ ಕುಳಿತುಕೊಂಡಿದ್ದ. ಬಳಿಕ ಊಟ ಮಾಡಿ ಮಲಗಿದ ಮೇಲೆ ಸುಮ್ಮನೆ ಕನವರಿಸ್ತಿದ್ದ. ತಡರಾತ್ರಿ ಪೊಲೀಸರು ಮನೆಗೆ ಬಂದು ಬಾಗಿಲು ಬಡಿದಾಗ ಮಗನನ್ನು ಎಬ್ಬಿಸಿದ್ದೆ. ಆಗ ಅವನು ಬೆಚ್ಚಿ ಬಿದ್ದಿದ್ದ. ನನ್ನ ಮಗ ಅತ್ಯಾಚಾರ ಮಾಡುವಂತವನಲ್ಲ. ಅವನಾಯ್ತು ಅವನ ಕೆಲಸ ಆಯ್ತು ಅಂತ ಇರ್ತಿದ್ದ ಅಂತ ಸವೆರಾ ತಾಯಿ ನ್ಯೂಸ್ 18ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Bengaluru: ಇಬ್ಬರು ಅಪ್ರಾಪ್ತ ಬಾಲಕಿಯರನ್ನ ಮಚ್ಚಿನಿಂದ ಕೊಚ್ಚಿ ಕೊಂದ ಮಲತಂದೆ! ಪ್ರಕರಣದ ಎ1 ಆರೋಪಿ ಅಲ್ತಾಫ್ ಸಹೋದರ ನ್ಯೂಸ್​18 ಕನ್ನಡದೊಂದಿಗೆ ಮಾತನಾಡಿದ್ದು, ಅಲ್ತಾಫ್ ಸಿಗರೇಟ್ ಕೂಡ ಸೇದುತ್ತಿರಲಿಲ್ಲ. ಗೆಳೆಯರು ಒತ್ತಾಯ ಮಾಡಿ ಅವನಿಗೆ ದುಶ್ಚಟಗಳ ಕಲಿಸಿದ್ದಾರೆ. ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ವಿಚಾರ ನಮಗೆ ಗೊತ್ತಿಲ್ಲ, ಅವ ಏನು ತಿನ್ನುವುದಿಲ್ಲ ಏನು ಮಾಡುವುದಿಲ್ಲ. ಜಬರ್ದಸ್ತ್ ಅಲ್ಲಿ ಜೊತೆಗಿದ್ದರು ಅವನನ್ನ ಹಾಳು ಮಾಡಿದ್ದಾರೆ. ನಾನು ಅವನ ತಮ್ಮನಾಗಿ ಹೇಳುತ್ತೇನೆ ಅವನಿಗೆ ಯಾವುದೇ ಹ್ಯಾಬಿಟ್ ಇರಲಿಲ್ಲ. ಕೆಟ್ಟ ಸ್ನೇಹಿತರಿಂದ ಅವನು ಹಾಳಾಗಿದ್ದಾನೆ ಎಂದು ಹೇಳಿದ್ದಾರೆ. ಸಂತ್ರಸ್ತೆ ನೆರವಿಗೆ ನಿಮತ ಬೋವಿ ಸಮುದಾಯ ಕಾರ್ಕಳದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯ ಪರ ಬೋವಿ ಸಮುದಾಯ ನಿಂತಿದೆ. ಹಿಂದೂ ಸಂಘಟನೆಗಳು ಆಕೆಗೆ ನ್ಯಾಯ ಒದಗಿಸಲು ಹೋರಾಡುತ್ತಿದ್ದು, ಅವರ ಜೊತೆ ಸೇರಿಕೊಂಡು ತಾವು ಕೂಡ ಹೋರಾಟ ನಡೆಸುವುದಾಗಿ ಸಂಘಟನೆ ತಿಳಿಸಿದೆ. ಸಂತ್ರಸ್ತ ಯುವತಿ ಭೋವಿ ಸಮುದಾಯಕ್ಕೆ ಸೇರಿದ್ದು, ನೊಂದ ಕುಟುಂಬದ ಪರ ಇರುವುದಾಗಿ ಸಂಘಟನೆ ತಿಳಿಸಿದೆ. ( ವರದಿ: ಗಣೇಶ್ ಸೈಬ್ರಕಟ್ಟೆ, ನ್ಯೂಸ್ 18 ಕನ್ನಡ ಉಡುಪಿ ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.