ಸಾಂದರ್ಭಿಕ ಚಿತ್ರ ಕೊರಿಯನ್ ಡ್ರಾಮಾವಾಗಿರಬಹುದು, ಕೊರಿಯನ್ ಬ್ಯೂಟಿ ಟ್ರೆಂಡ್ ಆಗಿರಬಹುದು ದಕ್ಷಿಣ ಕೊರಿಯಾದ ಬ್ಯೂಟಿ, ಡ್ರಾಮಾ, ಕಾನ್ಸರ್ಟ್ ವಿಶ್ವದಾದ್ಯಂತ ಮನೆ ಮಾತಾಗಿವೆ. ಹೈಡ್ರೇಟಿಂಗ್ ಶೀಟ್ ಮಾಸ್ಕ್, ಟೋನರ್ ಪ್ಯಾಡ್ಸ್, ಕ್ಲೇ ಮಾಸ್ಕ್, ಮಾಯಿಶ್ಚರೈಸಿಂಗ್ ಸೀರಮ್ಸ್ ಹೀಗೆ ಸೌಂದರ್ಯ ಜಗತ್ತಿನಲ್ಲಿ ದಕ್ಷಿಣ ಕೊರಿಯಾದ ಸೌಂದರ್ಯ ಸಲಹೆಗಳು ಸಾಕಷ್ಟು ಮಾರ್ಪಾಡುಗಳನ್ನುಂಟು ಮಾಡಿವೆ. ಸೌಂದರ್ಯ ಉದ್ಯಮಿ ಜಿವೊ ಮಾತೇನು ಫ್ಯಾಷನ್ ಮತ್ತು ಸೌಂದರ್ಯ ಉದ್ಯಮಿ ಜಿವೂ ಸೌಂದರ್ಯ ಕ್ಷೇತ್ರದಲ್ಲಿ ಅಪ್ರತಿಮರಾಗಿ ಗುರುತಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 11 ಮಿಲಿಯನ್ ಫಾಲೋವರ್ಸ್ ಹೊಂದಿರುವ ಜಿವೂ, ತಮ್ಮ ಬ್ರ್ಯಾಂಡ್ ಆದ ನೀಫ್ ನೀಫ್ ಅನ್ನು ಭಾರತಕ್ಕೆ ಪರಿಚಯಿಸಿದ್ದಾರೆ. ತಮ್ಮ ಸೌಂದರ್ಯ ರಕ್ಷಣೆಗೆ ಜಿವೂ ಏನೆಲ್ಲಾ ಮಾಡುತ್ತಾರೆ ಹಾಗೂ ತಮ್ಮ ಬ್ರ್ಯಾಂಡ್‌ನ ವಿಶೇಷತೆ ಏನು ಎಂಬುದನ್ನು ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕ್ರಿಸ್‌ಮಸ್, ಹೊಸ ವರ್ಷದ ಆಚರಣೆಗೆ ರಂಗು ತುಂಬಲು ಬೆಂಗಳೂರಿನ ಈ ರೆಸ್ಟೋರೆಂಟ್‌ಗೆ ಹೋಗಿ! ನೀಫ್ ನೀಫ್ ಬ್ರ್ಯಾಂಡ್ ಅನ್ನು ಭಾರತಕ್ಕೆ ಪರಿಚಯಿಸಿರುವ ಜಿವೊ ತಮ್ಮ ಬ್ರ್ಯಾಂಡ್ ಆದ ನೀಫ್ ನೀಫ್ ಅನ್ನು ಭಾರತಕ್ಕೆ ಪರಿಚಯಿಸುವ ಸುವರ್ಣ ಅವಕಾಶ ನನ್ನದಾಗಿದೆ ಎಂದು ತಿಳಿಸಿರುವ ಜಿವೂ ಭಾರತದ ಆಹಾರಗಳ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಾಂಪ್ರದಾಯಿಕ ಉಡುಪಾದ ಸೀರೆಯನ್ನುಟ್ಟು ಕೂಡ ಜಿವೊ ಖುಷಿಪಟ್ಟಿದ್ದಾಗಿ ತಿಳಿಸಿದ್ದಾರೆ. ನಾನ್ ಹಾಗೂ ಹಪ್ಪಳ ನನಗೆ ತುಂಬಾ ಇಷ್ಟ ಎಂದು ಜಿವೊ ಹೇಳಿದ್ದಾರೆ. ನನ್ನ ಉತ್ಪನ್ನಗಳನ್ನು ಮೊದಲು ನನ್ನ ಮೇಲೆ ಪ್ರಯೋಗಿಸುತ್ತೇನೆ. ಹೀಗಾಗಿ ನನ್ನಲ್ಲಿ ಆತ್ಮವಿಶ್ವಾಸ ಹಾಗೂ ಸುರಕ್ಷತೆಯ ಭಾವನೆ ಉಂಟಾಗುತ್ತದೆ ಇನ್ನೊಬ್ಬರಿಗೆ ಇದನ್ನು ಪ್ರಸ್ತುತಪಡಿಸುವುದಕ್ಕೆ ನನಗೆ ಆಗ ಹಿಂಜರಿಕೆಯುಂಟಾಗುವುದಿಲ್ಲ ಎಂದಿದ್ದಾರೆ. ನೈಸರ್ಗಿಕ ಅಂಶಗಳೇ ನನ್ನ ಪ್ರಾಡಕ್ಟ್‌ನಲ್ಲಿದೆ ತಮ್ಮ ಬ್ರ್ಯಾಂಡ್ ಆದ ನೀಫ್ ನೀಫ್ ಕುರಿತ ಮಾಹಿತಿಗಳನ್ನು ಹಂಚಿಕೊಂಡ ಜಿವೂ, ನನ್ನ ಪ್ರಾಡಕ್ಟ್ ಉತ್ತಮ ಗುಣಮಟ್ಟದ ನೈಸರ್ಗಿಕ ಪದಾರ್ಥಗಳಿಗೆ ಆದ್ಯತೆ ನೀಡುತ್ತದೆ. ಮನೆಯಲ್ಲೇ ದೈನಂದಿನ ಆರೈಕೆ ಬೇಕು ಎಂಬುವವರಿಗೆ ಈ ಬ್ರ್ಯಾಂಡ್ ಉತ್ತಮವಾಗಿದೆ. ತಮ್ಮ ಚರ್ಮದ ಆರೈಕೆಯ ಸಮಯದಲ್ಲಿ ನಾನೇ ಒಂದು ಬ್ರ್ಯಾಂಡ್ ಅನ್ನು ಆರಂಭಿಸಬೇಕೆಂದು ನಿಶ್ಚಯಿಸಿ ನೀಫ್ ನೀಫ್ ಅನ್ನು ಪ್ರಾರಂಭಿಸಿದೆ ಎಂದರು. ಕೆ-ಬ್ಯೂಟಿ ಟ್ರೆಂಡ್‌ಗಳು ನಿರಂತರವಾಗಿ ಮುಂದುವರಿಯುತ್ತಿವೆ ಮತ್ತು 2025 ರಲ್ಲಿ ಕೂಡ ಬ್ರ್ಯಾಂಡ್ ಗಮನಾರ್ಹವಾಗಿ ಗಮನವನ್ನು ಸೆಳೆಯುತ್ತಿದೆ ಎಂಬುದು ಜಿವೊ ತಿಳಿಸಿದ್ದಾರೆ. ವಯಸ್ಸಾದಂತೆ ಮಹಿಳೆಯರಿಗೆ ಬ್ಯೂಟಿ ಟಿಪ್ಸ್ ಸಲಹೆಗಳು ಮಹಿಳೆಯರು ವಯಸ್ಸಾದಂತೆ ತ್ವಚೆಯ ಕಾಳಜಿಯನ್ನು ಉತ್ತಮವಾಗಿ ಮಾಡಬೇಕೆಂದು ಸಲಹೆ ನೀಡುತ್ತಾರೆ. ಆ್ಯಂಟಿ ಏಜಿಂಗ್ ಉತ್ಪನ್ನಗಳನ್ನು ಬಳಸಿ ಎಂಬ ಸಲಹೆಯನ್ನು ನೀಡಿರುವ ಜಿವೂ, ತ್ವಚೆಯ ಕಾಳಜಿಗೆ ಕನ್ಸಿಸ್ಟೆನ್ಸಿ ಮುಖ್ಯವಾಗಿದೆ ಎಂದಿದ್ದಾರೆ. ನಿದ್ರೆಯ ಮಹತ್ವದ ಬಗ್ಗೆಯೂ ಹೇಳಿದ ಜಿವೊ, ಸಾಕಷ್ಟು ನಿದ್ರೆ ಮಾಡುವುದು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ ಎಂದಿದ್ದಾರೆ. ಮಾಯಿಶ್ಚರೈಸಿಂಗ್ ಅತಿ ಮುಖ್ಯ ಅಲ್ಪಾವಧಿಯಲ್ಲಿ ತ್ವಚೆಯ ಸುಧಾರಣೆ ನಡೆಯುವುದಿಲ್ಲ ಇದಕ್ಕೆ ದೀರ್ಘಕಾಲದ ಪೋಷಣೆ ಮಾಡಬೇಕಾಗುತ್ತದೆ. ನಿರಂತರವಾದ ಆರೈಕೆಯು ಉತ್ತಮ ಫಲಿತಾಂಶಗಳನ್ನು ಸಾಧಿಸುವುದಕ್ಕೆ ನೆರವಾಗುತ್ತದೆ. ತ್ವಚೆಯ ಆರೈಕೆಯ ಸಮಯದಲ್ಲಿ ಕ್ಲೆನ್ಸಿಂಗ್ ಅನ್ನು ಮಾಡಬೇಕು, ತ್ವಚೆಯ ಕಂಡೀಷನರ್ ಅನ್ನು ಆಧರಿಸಿ ಮಾಯಿಶ್ಚರೈಸಿಂಗ್ ಮಾಡಿ, ನಿತ್ಯವೂ ಸನ್‌ಸ್ಕ್ರೀನ್ ಬಳಸಿ ಎಂದಿದ್ದಾರೆ. ನಿತ್ಯವೂ ಸನ್‌ಸ್ಕ್ರೀನ್ ಬಳಸಬೇಕೆಂದ ಜಿವೊ ತ್ವಚೆಯ ಪ್ರಕಾರಕ್ಕೆ ಅನುಗುಣವಾಗಿ ಉತ್ಪನ್ನಗಳನ್ನು ಆಯ್ಕೆಮಾಡಿ ಎಂದು ಜಿವೂ ಹೇಳುತ್ತಾರೆ. ಚರ್ಮದ ಪ್ರಕಾರಕ್ಕೆ ಹೊಂದಿಕೆಯಾಗದ ಉತ್ಪನ್ನಗಳನ್ನು ನೋಡುವ ಪ್ರಯತ್ನದಲ್ಲಿ ನೀವು ಎಂದಿಗೂ ಕಠಿಣ ಉತ್ಪನ್ನಗಳನ್ನು ಬಳಸಬಾರದು. ನೀವು ಮಾಡಬೇಕಾದ ಒಂದು ಕೆಲಸವೆಂದರೆ ಪ್ರತಿದಿನ ಸನ್‌ಸ್ಕ್ರೀನ್ ಅನ್ನು ಬಳಸುವುದು. ಯುವಿ ಕಿರಣಗಳು ಚರ್ಮದ ವಯಸ್ಸನ್ನು ವೇಗಗೊಳಿಸುವುದರಿಂದ, ದಿನವಿಡೀ ನಿಮ್ಮ ಚರ್ಮವನ್ನು ರಕ್ಷಿಸುವುದು ಮುಖ್ಯವಾಗಿದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.