ಟಿಮ್ ಡೇವಿಡ್ ಐಪಿಎಲ್ ಮೆಗಾ ಹರಾಜಿನಲ್ಲಿ (IPL Mega Auction) ಆರ್‌ಸಿಬಿ ತಂಡಕ್ಕೆ ಸೇರಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ (Tim David) ಬಿಗ್ ಬ್ಯಾಷ್ ಲೀಗ್‌ನಲ್ಲಿ ಅಬ್ಬರಿಸಿದ್ದಾರೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ಹೋಬರ್ಟ್ ಹರಿಕೇನ್ಸ್ ತಂಡದ ಪರ ಆಡುವ ಟಿಮ್ ಡೇವಿಡ್ ಭಾನುವಾರ ಅಡಿಲೇಡ್ ಸ್ಟ್ರೈಕರ್ ವಿರುದ್ಧ ಕೇವಲ 28 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 62 ರನ್ ಸಿಡಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಡೇವಿಡ್ ಅವರ ವಿನಾಶಕಾರಿ ಬ್ಯಾಟಿಂಗ್ ನೆರವಿನಿಂದ ಹರಿಕೇನ್ಸ್ ಅಡಿಲೇಡ್ ಸ್ಟ್ರೈಕರ್ಸ್ ನೀಡಿದ್ದ 187 ರನ್ ಗಳ ಗುರಿಯನ್ನು ಇನ್ನೂ ಎಂಟು ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಕ್ರಿಸ್ ಲಿನ್ (49) ಮತ್ತು ಅಲೆಕ್ಸ್ ರಾಸ್ (47) ಅದ್ಭುತ ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಒಲಿ ಪೋಪ್ (33) ಮತ್ತು ಜೇಮಿ ಓವರ್ಟನ್ (ಔಟಾಗದೆ 27) ಕೂಡ ಕೊನೆಯಲ್ಲಿ ಒಂದಷ್ಟು ಆಕರ್ಷಕ ಹೊಡೆಗಳ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದರು. ಹರಿಕೇನ್ಸ್ ಬೌಲರ್‌ಗಳಲ್ಲಿ ವಕಾರ್ ಸಲಾಮ್‌ಖೀಲ್ 2 ವಿಕೆಟ್, ಕ್ರಿಸ್ ಜೋರ್ಡಾನ್, ಸ್ಟಾನ್‌ಲೇಕ್ ಮತ್ತು ರಿಲೆ ಮೆರೆಡಿತ್ 2 ವಿಕೆಟ್ ಪಡೆದರು. ಇದನ್ನೂ ಓದಿ: ವಿಜಯ್ ಹಜಾರೆಯಲ್ಲಿ ಅಬ್ಬರ! ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತಕ್ಕೆ ಗುಡ್ ನ್ಯೂಸ್ ಕೊಟ್ಟ ಶಮಿ! ಒಂದೇ ಓವರ್ನಲ್ಲಿ 26 ರನ್ 187 ರನ್‌ಗಳ ಗುರಿ ಬೆನ್ನತ್ತಿ ಅಖಾಡಕ್ಕಿಳಿದ ಹರಿಕೇನ್ಸ್ 18.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಟಿಮ್ ಡೇವಿಡ್ ಅಡಿಲೇಡ್ ಸ್ಟ್ರೈಕರ್ಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಮಿಚೆಲ್ ಓವನ್ (37), ಮ್ಯಾಥ್ಯೂ ವೇಡ್ (27) ಮೊದಲ ವಿಕೆಟ್ಗೆ 61 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಆನಂತ ಬಂದ ಶಾಯ್ ಹೋಪ್ (11), ಬೆನ್ ಮೆಕ್ಡರ್ಮಟ್ (17) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಕೊನೆ5 52 ಎಸೆತಗಳಲ್ಲಿ 86 ರನ್‌ಗಳ ಅಗತ್ಯವಿದ್ದಾಗ ಬ್ಯಾಟಿಂಗ್ಗೆ ಬಂದ ಡೇವಿಡ್ ನಿಖಿಲ್ ಚೌಧರಿ (22) ಜೊತೆಗೆ 75ರನ್‌ಗಳ ಜೊತೆಯಾಟವಾಡಿದರು. ಅದರಲ್ಲಿ ಪವರ್ ಸರ್ಜ್ 15ನೇ ಓವರ್ನಲ್ಲಿ 26 ರನ್ ಚಚ್ಚುವ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿದರು. ರಜತ್ ಪಾಟಿದಾರ್ ಶತಕ ಟಿಮ್ ಡೇವಿಡ್ ಮಾತ್ರವಲ್ಲ ಇದೇ ದಿನ ಮತ್ತೊಬ್ಬ ಆರ್‌ಸಿಬಿ ಸ್ಟಾರ್ ಕೂಡ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶ ತಂಡದ ನಾಯಕ ಹಾಗೂ ಆರ್‌ಸಿಬಿ ಆಟಗಾರ ರಜತ್ ಪಾಟಿದಾರ್ ಇಂದು ನಡೆದ ಬಂಗಾಳದ ವಿರುದ್ಧದ ಪಂದ್ಯದಲ್ಲಿ 137 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 132 ರನ್ (ನಾಟೌಟ್) ಗಳಿಸಿದರು. ಇವರ ಶತಕದ ನೆರವಿನಿಂದ ಮಧ್ಯಪ್ರದೇಶವು 6 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಬಂಗಾಳ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿತು. ನಾಯಕ ಸುದೀಪ್ ಘರಾಮಿ (99), ಸುದೀಪ್ ಚಟರ್ಜಿ (47) ಹಾಗೂ ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ (42) ಬ್ಯಾಟಿಂಗ್ ನೆರವಿನಿಂದ 269 ರನ್ಗಳಿಸಿತ್ತು. ಬಳಿಕ ಚೇಸಿಂಗ್ ಇಳಿದ ಮಧ್ಯಪ್ರದೇಶ 46.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಆರಂಭಿಕರಿಬ್ಬರೂ ಡಕ್ ಆಗಿದ್ದರೂ ರಜತ್ ಪಾಟಿದಾರ್, ಶುಭಂ ಶ್ಯಾಮಸುಂದರ್ ಶರ್ಮಾ (99) ನೆರವಿನಿಂದ ಮಧ್ಯಪ್ರದೇಶ ಜಯಭೇರಿ ಬಾರಿಸಿತು. ಈ ಪಂದ್ಯದಲ್ಲಿ ಇಬ್ಬರೂ ಆಟಗಾರರು 99 ರನ್‌ಗಳಿಗೆ ಔಟ್ ಆಗಿದ್ದು ಮತ್ತೊಂದು ವಿಶೇಷ. ಇದನ್ನೂ ಓದಿ: 4ನೇ ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್! ಟೂರ್ನಿಯಲ್ಲಿ 6ನೇ ಜಯ ಸಾಧಿಸಿ ನಾಕೌಟ್ ಪ್ರವೇಶಿಸಿದ ಕರ್ನಾಟಕ ಅದ್ಭುತ ಫಾರ್ಮ್ನಲ್ಲಿ ಆರ್‌ಸಿಬಿ ಸ್ಟಾರ್ ರಜತ್ ಪಾಟಿದಾರ್ ದೇಶಿ ಕ್ರಿಕೆಟ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ರಜತ್ ಕಳೆದ 14 ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 76(36), 62(36), 68(40), 4(7), 36(16), 28(18), 66*(29), 82*(40), 55(33), 21 ಸ್ಕೋರ್ *(15), 2(7), 2(3), 14(16), 132*(137) ರನ್ಗಳಿಸಿದ್ದಾರೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.