NEWS

Toxic Movie: ಟಾಕ್ಸಿಕ್ ಸಿನಿಮಾ ಬಗ್ಗೆ ಬಿಗ್ ಹಿಂಟ್ ಕೊಟ್ಟ ಯಶ್ ಪಕ್ಕ ಇದ್ದ ಕಾರು! 70 ವರ್ಷ ಹಳೆಯ ಲಕ್ಷುರಿ ಮಾಡೆಲ್

ಟಾಕ್ಸಿಕ್ ಕಾರು ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಟಾಕ್ಸಿಕ್ (Toxic Movie). ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಟಾಕ್ಸಿಕ್ ಸಿನಿಮಾದ ಅಪ್ಡೇಟ್​​ಗಾಗಿ ಸಿನಿ ಪ್ರಿಯರು ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ. ಅದರಲ್ಲೂ ನಟ ಅಭಿಮಾನಿಗಳಂತೂ ತುದಿಕಾಲಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಬರ್ತ್​ಡೇ (Birthday) ಮೊದಲೇ ಯಶ್ ಒಂದು ಪೋಸ್ಟರ್ ಶೇರ್​ ಮಾಡಿದ್ದರು. ಈ ಮೂಲಕ ಬರ್ತ್​ಡೇ ದಿನ ಸಿನಿಮಾದ ಅಪ್ಡೇಟ್ ಕೊಡೋದಾಗಿ ಹೇಳಿದ್ದರು. ಆದರೆ ಈಗ ಅದರಲ್ಲಿ ಒಂದು ಟ್ವಿಸ್ಟ್ ಕಾಣಿಸ್ತಿದೆ. ಯಶ್ ಅವರು ಶೇರ್ ಮಾಡಿದ ಪೋಸ್ಟರ್ ಸಿನಿಮಾ ಕಥೆಯ ಹಿಂಟ್ ಕೊಟ್ಟಿದೆ. ಜಸ್ಟ್ ಒಂದು ಫೋಟೋ ನೋಡಿ ನೆಟ್ಟಿಗರು ಈ ಸಿನಿಮಾದ ಕಥೆ ಹೀಗಿರಬಹುದು ಅಂತ ಯೋಚಿಸ್ತಿದ್ದಾರೆ. ಯಶ್ ಹುಟ್ಟು ಹಬ್ಬಕ್ಕೆ ಟಾಕ್ಸಿಕ್ ಚಿತ್ರದ ಪೊಸ್ಟರ್ ರಿಲೀಸ್ ಆಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಟಾಕ್ಸಿಕ್ ಅಪ್ಡೇಟ್ ಬಗ್ಗೆ ಮಾಹಿತಿ ಕೊಟ್ಟ ರಾಕಿಂಗ್ ಸ್ಟಾರ್ ಯಶ್ ಅವರು ಜನವರಿ 8ರಂದು 10: 25 ನಿಮಿಷಕ್ಕೆ ಟಾಕ್ಸಿಕ್ ಚಿತ್ರದ ನ್ಯೂ ಪೋಸ್ಟರ್ ಲಾಂಚ್ ಮಾಡೋದಾಗಿ ಹೇಳಿದ್ದಾರೆ. ಟಾಕ್ಸಿಕ್ ಪೋಸ್ಟರ್ ಬಗ್ಗೆ ಸೋಷಿಯಲ್ ಮೀಡಿಯಾ ದಲ್ಲಿ ಪೋಸ್ಟ್ ಹಾಕಿದ ಯಶ್ ಅವರು ಅಭಿಮಾನಿಗಳಿಗೆ ಭರ್ಜರಿಯಾಗಿಯೇ ಗುಡ್​ನ್ಯೂಸ್ ಕೊಟ್ಟಿದ್ದಾರೆ ಎನ್ನುವುದರಲ್ಲಿ ಸಂದೇಹವಿಲ್ಲ. ರೆಟ್ರೋ ಸ್ಟೈಲ್ ಕಾರಿನ ಪಕ್ಕ ಸಿಗರೇಟ್ ಸೇರುತ್ತಾ ಸೂಟ್ ಧರಿಸಿ, ಹ್ಯಾಟ್ ಧರಿಸಿ ಯಶ್ ನೋಡುತ್ತಿರುವುದನ್ನು ಕಾಣಬಹುದು. ಸದ್ಯ ಈ ಪೋಸ್ಟರ್ ಸಖತ್ ವೈರಲ್ ಆಗಿದೆ.​ ಸದ್ಯ ಚರ್ಚೆಯಾಗ್ತಿರೋದು ಟಾಕ್ಸಿಕ್​ನಲ್ಲಿ ಬಳಸಲಾಗಿರುವ ಕಾರಿನ ಬಗ್ಗೆ. ಹೌದು, ನಟ ಯಶ್ ಅವರ ಲುಕ್ ಬಗ್ಗೆ ಎಷ್ಟು ಚರ್ಚೆಯಾಗ್ತಿದೆಯೋ ಈಗ ಆ ಪೋಸ್ಟರ್​ನಲ್ಲಿ ಕಂಡು ಬಂದಿರುವ ಒಂದು ಕಾರಿನ ಬಗ್ಗೆಯೂ ಅಷ್ಟೆ ಚರ್ಚೆಯಾಗ್ತಿದೆ. ಇದು ಅಂತಿಂಥಾ ಕಾರಲ್ಲ! ಈಗಿನ ಮೂವಿಗಳಲ್ಲಿ ಸ್ಟಾರ್ ನಟರು ಲೇಟೆಸ್ಟ್ ಮಾಡೆಲ್ ಕಾರುಗಳಲ್ಲಿ ಮಾಸ್ ಎಂಟ್ರಿ ಕೊಡೋದನ್ನು ನೋಡಬಹುದು. ಆದರೆ ಟಾಕ್ಸಿಕ್ ಫೋಟೋದಲ್ಲಿ ಯಶ್ ಪೋಸ್ ಕೊಟ್ಟಿರುವ ಕಾರು ಲೇಟೆಸ್ಟ್ ಮಾಡೆಲ್ ಅಲ್ಲ. ಬದಲಾಗಿ ಇದೊಂದು ವಿಂಟೇಜ್ ಕಾರು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಸಾಕಷ್ಟು ಮಾಹಿತಿ ಹರಿದಾಡುತ್ತಿದ್ದು, ಇದು ಲಿಂಕನ್ ಕೋಸ್ಮೋಪೊಲಿಟನ್ ಕಾರು ಎನ್ನಲಾಗಿದೆ. ಇದು 1949ರಿಂದ 1954ರ ವರೆಗೆ ಸೇಲ್ ಆಗುತ್ತಿದ್ದಂತಹ ಬಹಳ ಲಕ್ಷುರಿಯಾದ ಕಾರಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: Toxic Movie: ಯಶ್​ ಫ್ಯಾನ್ಸ್​​ಗೆ ಗುಡ್​ನ್ಯೂಸ್! ರಾಕಿಂಗ್ ಸ್ಟಾರ್​ ಬರ್ತ್​ಡೇಗೆ ಬಿಗ್​ ಸರ್ಪೈಸ್ ಟಾಕ್ಸಿಕ್​ನಲ್ಲಿ ಇಷ್ಟು ಹಳೆಯ ಕಾರು ಅಂದರೆ ಸುಮಾರು 75 ವರ್ಷ ಹಳೆಯ ಕಾರನ್ನು ತೋರಿಸಿದ್ದರೆ ಇದು ಎಷ್ಟು ಹಳೆಯ ಸ್ಟೋರಿ ಎಂದು ಅಂದಾಜಿಸಬಹುದು. ಇತ್ತೀಚೆಗೆ ಟಾಕ್ಸಿಕ್ ದೃಶ್ಯ ಎನ್ನಲಾಗಿದ್ದ ವೈರಲ್ ವಿಡಿಯೋದಲ್ಲಿಯೂ ಪಾರ್ಟಿ ನಡೆಯುತ್ತಿರುವ ದೃಶ್ಯ ಕಂಡು ಬಂದಿತ್ತು. ಹಾಗಾಗಿ ಇವೆಲ್ಲವನ್ನೂ ಲಿಂಕ್ ಮಾಡಿದರೆ ಇದು ಪಕ್ಕಾ ರೆಟ್ರೋ ಸ್ಟೋರಿ ಹೊಂದಿರುವ ಸಿನಿಮಾ ಎನ್ನಲಾಗುತ್ತಿದೆ. ಇದು ಪಕ್ಕಾ ಯಾವ ಮಾಡೆಲ್ ಕಾರು ಎಂದು ಖಚಿತವಾಗಿಲ್ಲ. ಆದರೆ ಇದು ವಿಂಟೇಜ್ ಕಾರು ಎನ್ನುವುದು ಬಹಳಷ್ಟು ಜನರ ಅಭಿಪ್ರಾಯ. ಅದೇನೇ ಇದ್ದರೂ ಚಿತ್ರತಂಡ ಹೇಳಿದ ಮೇಲೆಯೇ ಖಚಿತವಾಗಲಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.