ಕಾಟನ್ ಕ್ಯಾಂಡಿ ಕಳೆದ ಕೆಲವು ದಿನಗಳಿಂದ ರ್ಯಾಪರ್ ಚಂದನ್ ಶೆಟ್ಟಿ (Chandan Shetty) ಅವರ ಕಾಂಟನ್ ಕ್ಯಾಂಡಿ (Cotton Candy) ಹಾಡು ಸಖತ್ ಸೌಂಡ್ ಮಾಡುತ್ತಿದೆ. ಬಹಳಷ್ಟು ಜನರು ಈ ಹಾಡಿಗೆ ರೀಲ್ಸ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ರಿಲೀಸ್ ಆಗಿರುವ ಚಂದನ್ ನ್ಯೂ ಆಲ್ಬಂ ಸಾಂಗ್ ಕಾಂಟನ್ ಕ್ಯಾಂಡಿಗೆ ಹೊಸ ಸಂಕಷ್ಟ ಎದುರಾಗಿದೆ. ಯುವರಾಜ್ ವೈಬುಲ್ ಕಾಟನ್ ಕ್ಯಾಂಡಿ ಹಾಡಿನ ಚರಣ ಕದ್ದಿದ್ದಾರೆ ಎಂದು ಅರೋಪ ಮಾಡಿದ್ದಾರೆ. 2018 ರಲ್ಲಿ Y bul ಪಾರ್ಟಿ ಸಾಂಗ್ ಮಾಡಿದ್ದೇ ನಾನು. Y ಬುಲ್ ಪಾರ್ಟಿ ಸಾಂಗಿನ ಚರಣವನ್ಜು ಚಂದನ್ ಕಾಪಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಟನ್ ಕ್ಯಾಂಡಿ ಹಾಡು ಈಗ ಲಕ್ಷ ಲಕ್ಷ ವ್ಯೂಸ್ ಆಗಿದೆ. ನಾನು ಕಷ್ಟ ಪಟ್ಟು ಸಾಂಗ್ ಮಾಡಿದ್ದೀನಿ ನನಗೆ ನ್ಯಾಯ ಬೇಕು. ನಮ್ಮ ಆಡಿಯೋ ಸಂಸ್ಥೆಯವರು ಕಾಪಿ ರೈಟ್ಸ್ ಹಾಕೋಣ ಅಂದಿದ್ದರು. ಚಂದನ್ ಜೊತೆ ಮಾತಾಡೊಣ ಅಂತ ನಾನೇ ಬೇಡ ಅಂತ ಹೇಳಿದ್ದೆ ಎಂದಿದ್ದಾರೆ. ನನ್ನ y bul ಸಾಂಗ್ ಮೂರೇ ಮೂರು ಪೆಗ್ಗಿಗೆ ಸಾಂಗ್ ಕಾಪಿ ಅಂತ ಚಂದನ್ ಹೇಳ್ತಿದ್ದಾರೆ ಅಂತ ಕೇಳ್ದೆ. ನಾನು ಹಾಡಿನಿಂದ ಸ್ಪೂರ್ತಿಯಾಗಿ y bul ಸಾಂಗ್ ಮಾಡಿದ್ದೆ. ಆದರೆ ಆ ಸಾಂಗನ್ನು ಕದ್ದು ನನ್ನ ಪಾರ್ಟಿ ಸಾಂಗ್ ಮಾಡಿಲ್ಲ ಎಂದಿದ್ದಾರೆ. ನಾನು ಟ್ಯೂಬ್ ಕದ್ದಿದ್ರೆ ಚಂದನ್ ಶೆಟ್ಟಿ ಯಾಕೆ ಕೇಸ್ ಹಾಕಲಿಲ್ಲ? ಇಷ್ಟೆಲ್ಲ ಅದ್ಮೇಲೆ ನಾನು ಬಿಡಲ್ಲ. ಈಗ ನಾನು ಕಾಪಿ ರೈಟ್ಸ್ ಕೇಸ್ ಹಾಕ್ತಿನಿ ಎಂದು ಕಾಟನ್ ಕ್ಯಾಂಡಿ ಹಾಡಿನ ಬಗ್ಗೆ ನ್ಯೂಸ್18 ಜೊತೆ ಮಾತನಾಡಿದ ರ್ಯಾಪರ್ ಯುವರಾಜ್ ವೈಬುಲ್ ಹೇಳಿದ್ದಾರೆ. ಚಂದನ್ ಶೆಟ್ಟಿ ತುಂಬಾ ಹಾಡುಗಳು ವಿಶೇಷಾಗಿಯೇ ಇರುತ್ತವೆ. 3 ಪೆಗ್ ಸಾಂಗ್ (3 PEG) ಈಗಲೂ ಇಷ್ಟ ಆಗುತ್ತದೆ. ಟಕಿಲಾ, ಚಾಕೊಲೇಟ್ ಗರ್ಲ್, ಹೀಗೆ ಹಲವು ಹಾಡುಗಳನ್ನ ಕೊಟ್ಟಿದ್ದಾರೆ. ಲಕಾ ಲಕಾ ಲಂಬರ್ಗಿನಿ, ನೋಡು ಶಿವ ಆದ್ಮೇಲೆ ಚಂದನ್ ಶೆಟ್ಟಿ ಯಾವುದೇ ಹಾಡನ್ನ ಮಾಡಿರಲಿಲ್ಲ. ತಮ್ಮದೇ ಸಿನಿಮಾಗಳಲ್ಲಿಯೇ ಬ್ಯುಸಿ ಆಗಿದ್ದರು. ಆದರೆ, ಈ ವರ್ಷ ಪಾರ್ಟಿ ಮಾಡಲು ಒಂದು ಸಾಂಗ್ ಕೊಟ್ಟಿದ್ದಾರೆ. ಇದಕ್ಕೆ ಕಾಟನ್ ಕ್ಯಾಂಡಿ ಅನ್ನುವ ಹೆಸರು ಇಟ್ಟಿದ್ದಾರೆ. ದೂರದ ದುಬೈಯಲ್ಲಿಯೇ (Dubai) ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಒಳ್ಳೆ ಲೋಕೇಷನ್‌ಗಳಲ್ಲಿಯೇ ಇಡೀ ಹಾಡು ಶೂಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: Sanvi Sudeep: ಬರ್ತ್ಡೇ ದಿನ ಅಮ್ಮನಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ ಸಾನ್ವಿ ಸುದೀಪ್ ಕಾಟನ್ ಕ್ಯಾಂಡಿ ಹಾಡು ಸೂಪರ್ ಆಗಿದೆ. ತುಂಬಾನೆ ಮಜಾ ಕೊಡುತ್ತದೆ. ಚಂದನ್ ಶೆಟ್ಟಿ ಸ್ಟೈಲ್ ನಲ್ಲಿಯೇ ಈ ಹಾಡು ಇದೆ. ವಿಶೇಷವೆಂದರೆ ಈ ಒಂದು ವಿಡಿಯೋ ಆಲ್ಬಂನಲ್ಲಿ ನವ ನಟಿ ಅಭಿನಯಿಸಿದ್ದಾರೆ. ಚಂದನ್ ಶೆಟ್ಟಿ ವಿಡಿಯೋ ಆಲ್ಬಂ ಅಂತ ಬಂದಾಗ, ಅಲ್ಲಿ ನವ ನಟಿಯರ ಆಗಮನ ಇದ್ದೇ ಇರುತ್ತದೆ. ಅದೇ ರೀತಿನೇ ಇದೀಗ ಈ ಒಂದು ಕಾಟನ್ ಕ್ಯಾಂಡಿ ಹಾಡಿನಲ್ಲಿ ಬೆಂಗಳೂರು ಮೂಲದ ನಟಿ ಸುಶ್ಮಿತಾ ಗೋಪಿನಾಥ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವರ್ದಿ ಮತ್ತು ವಜ್ರ ಅನ್ನುವ ಎರಡು ಸಿನಿಮಾಗಳನ್ನ ಸುಶ್ಮಿತಾ ಗೋಪಿನಾಥ್ ಮಾಡಿದ್ದಾರೆ. ಆದರೆ, ಆಲ್ಬಂ ಸಾಂಗ್ ಅಂತ ಬಂದ್ರೆ ಇದೆ ಮೊದಲ ಹಾಡಾಗಿದೆ. ವರದಿ: ಸತೀಶ್ ಕನಕಪುರ, ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.