ಅಮ್ಮ ಬಳಸುತ್ತಿದ್ದ ಕುರ್ಚಿ, ಅಮ್ಮನ ಚಪ್ಪಲಿ; ಇದೀಗ ಕಿಚ್ಚನ ಅತಿ ದೊಡ್ಡ ಆಸ್ತಿ! ಕಿಚ್ಚ ಸುದೀಪ್ (Kichcha Sudeep) ಅಮ್ಮನ ನೆನಪಿನಲ್ಲಿಯೇ ಇದ್ದಾರೆ. ಅಮ್ಮನ (Mother) ನೆನದು ಕಣ್ಣೀರು ಹಾಕಿರೋದು ಇದೆ. ಮೊನ್ನ ಜೀ ಟಿವಿಯ ಸರಿಗಮಪ ಶೋದಲ್ಲೂ ಅಮ್ಮನ ನೆನಪಿಸಿಕೊಂಡಿದ್ದಾರೆ. ಕಣ್ಣಂಚಲಿ ನೀರು ನಿರಂತರವಾಗಿಯೇ ಸುರಿದೆ. ಆದರೆ, “ನಾನು ಕುಗ್ಗೋದಿಲ್ಲ” ಅಂತಲೂ ಸುದೀಪ್ (Sudeep) ಇಲ್ಲಿಯೇ ಹೇಳಿಕೊಂಡಿದ್ದಾರೆ. ಬಹುಶಃ ಇದು ಇತರರಿಗೂ ಸ್ಪೂರ್ತಿ ಆಗುವಂತೆ ಇದೆ. ಆದರೆ, ಸುದೀಪ್ ಅಮ್ಮನ ನೆನನಪಿಗಾಗಿಯೇ ಒಂದಷ್ಟು ವಸ್ತು ಹಾಗೆ ಉಳಿಸಿಕೊಂಡಿದ್ದಾರೆ. ಅಮ್ಮ (Mother) ಸದಾ ಕುಳಿತುಕೊಳ್ಳುತ್ತಿದ್ದ ಆ ಚೇರ್, ಅಮ್ಮ ಧರಿಸುತ್ತಿದ್ದ ಚಪ್ಪಲಿ (Slippers) ಹೀಗೆ ಈ ವಸ್ತುಗಳನ್ನ ಜತನದಿಂದಲೇ ಇಟ್ಟಿದ್ದಾರೆ. ಇದೀಗ ಈ ಒಂದು ಅಮೂಲ್ಯ ಸಂಗ್ರಹಕ್ಕೆ ಇನ್ನೂ ಒಂದು ವಿಶೇಷವೂ ಸೇರ್ಪಡೆ ಆಗಿದೆ. ಅದರ ಸುತ್ತ ಇನ್ನಷ್ಟು ವಿವರ ಇಲ್ಲಿದೆ ಓದಿ. ಅಮ್ಮನ ವಸ್ತುಗಳೇ ಕಿಚ್ಚನ ಸಮಸ್ತ ಆಸ್ತಿ ನೋಡಿ ಅಮ್ಮನ ಬಗ್ಗೆ ಕಿಚ್ಚನಿಗೆ ಇನ್ನಿಲ್ಲದ ಅಟ್ಯಾಚ್‌ಮೆಂಟ್ ಇದೆ. ಅಮ್ಮ ಅಂದ್ರೆ ನನ್ನ ಅಹಂ ಅನ್ನೋ ವಿಷಯವನ್ನ ಸ್ವತಃ ಸುದೀಪ್ ಹೇಳಿಕೊಂಡಿದ್ದಾರೆ. ಅಮ್ಮ ಅಂದ್ರೆ ಸರ್ವಸ್ವ ಅಂತಲೇ ಸುಮಾರು ಸಂದರ್ಶನಗಳಲ್ಲೂ ಹೇಳಿಕೊಂಡಿದ್ದಾರೆ. ಅಮ್ಮನ ಬಗ್ಗೆ ವಿಶೇಷ ಪ್ರೀತಿ ಹೊಂದಿರೋ ಕಿಚ್ಚ ಸುದೀಪ್, ಅಮ್ಮನ ಆ ಒಂದು ಮೂರ್ತಿಯನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಅದು ತುಂಬಾನೆ ವಿಶೇಷವಾಗಿಯೇ ಇದೆ. ಅಮ್ಮನ ಮೂರ್ತಿ ನೋಡಿ ಕಿಚ್ಚ ಮಂತ್ರಮುಗ್ಧ ಕಿಚ್ಚ ಸುದೀಪ್ ಮೊನ್ನೆ ಜೀ ಕನ್ನಡ ಸರಿಗಮಪ ಶೋಗೆ ಬಂದಿದ್ದರು. ಫಸ್ಟ್ ಟೈಮ್ ಈ ರೀತಿ ಶೋಗೆ ಬಂದು ಖುಷಿ ಪಟ್ಟಿದ್ದರು. ಈ ಒಂದು ಕ್ಷಣದಲ್ಲಿಯೇ ಹಲವು ಮೂಮೆಂಟ್‌ಗಳನ್ನ ಕ್ರಿಯೇಟ್ ಮಾಡಲಾಗಿತ್ತು. ಆ ಸುಂದರ ಕ್ಷಣಗಳಲ್ಲಿ ಎಮೋಷನಲ್ ಕ್ಷಣವೇ ಜಾಸ್ತಿ ಇದ್ದವು. ಇದನ್ನೂ ಓದಿ: Game Changer Movie: ಕನ್ನಡದಲ್ಲೂ ಬರ್ತಿದೆ ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್! ಅಮ್ಮನಿಗಾಗಿಯೇ ಕಿಚ್ಚನ ಕಣ್ಣಂಚಲಿ ಕಣ್ಣೀರು ನಿಜ, ಕಿಚ್ಚ ಸುದೀಪ್ ತಮ್ಮ ತಾಯಿಯ ಮೂರ್ತಿ ನೋಡಿ ಮಂತ್ರಮುಗ್ಧರಾಗಿದ್ದಾರೆ. ಅಷ್ಟೇ ಆಶ್ಚರ್ಯ ಕೂಡ ಪಟ್ಟಿದ್ದಾರೆ. ಅಮ್ಮನ ಆ ಒಂದು ಮೂರ್ತಿಗೆ ಅಷ್ಟೇ ಪ್ರೀತಿಯಿಂದ ಮುತ್ತು ಕೂಡ ಕೊಟ್ಟಿದ್ದಾರೆ. ಹಾಗೆ ಆ ಮೂರ್ತಿ ನೋಡಿದ್ಮೇಲೆ ಒಂದು ಪ್ರಶ್ನೆಯನ್ನ ಕೂಡ ಕಿಚ್ಚ ಸುದೀಪ್ ಕೇಳಿದ್ದಾರೆ. ನಾನು ಇದನ್ನ ಮನೆಗೆ ತೆಗೆದುಕೊಂಡು ಹೋಗ್ಲಾ ಅಮ್ಮನ ಮೂರ್ತಿಯನ್ನ ತೆಗೆದುಕೊಂಡು ಹೋಗ್ಲ? ಹೀಗೆ ಕಿಚ್ಚ ಸುದೀಪ್ ಕೇಳ್ತಾರೆ. ಆಗ ಅನುಶ್ರೀ ಹೇಳ್ತಾರೆ. ಇದು ನಿಮಗಾಗಿಯೇ ಮಾಡಿರೋದು, ತೆಗೆದುಕೊಂಡು ಹೋಗಿ ಅಂತಲೇ ಹೇಳ್ತಾರೆ. ಅಲ್ಲಿಯೇ ಸುದೀಪ್ ಇನ್ನೂ ಒಂದು ಮಾತು ಹೇಳ್ತಾರೆ. ಅದು ತುಂಬಾನೆ ವಿಶೇಷ ಅನಿಸುತ್ತದೆ. ಅಮ್ಮನ ಚೇರ್-ಅಮ್ಮನ ಚಪ್ಪಲಿ… ಸುದೀಪ್ ಈಗಾಗಲೇ ತಮ್ಮ ತಾಯಿ ಚಪ್ಪಲಿಯನ್ನ ಪೂಜಿಸುತ್ತಿದ್ದಾರೆ. ಅಮ್ಮ ಕುಳಿತುಕೊಳ್ಳುತ್ತಿದ್ದ ಚೇರ್ ಅನ್ನು ಜತನದಿಂದ ತೆಗೆದಿಟ್ಟಿದ್ದಾರೆ. ಹಾಗೆ ಅದೇ ಒಂದು ಅಮೂಲ್ಯ ಸಂಗ್ರಹದಲ್ಲಿ ಇದೀಗ ಈ ಒಂದು ಮೂರ್ತಿ ಕೂಡ ಸೇರುತ್ತದೆ ಅಂತಲೇ ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ: Yash CDP: ರಾಕಿ ಭಾಯ್ ಕಾಮನ್ ಡಿಪಿ ಜೌಟ್! ಅತಿ ದೊಡ್ಡ ಹಬ್ಬಕ್ಕೆ ಸಜ್ಜಾದ ಯಶ್ ಫ್ಯಾನ್ಸ್ ಅಮ್ಮನಿಗಾಗಿ ಲಾಲಿ ಹಾಡು ಹೇಳಿದ ಕಿಚ್ಚ ಅಮ್ಮನಿಗಾಗಿಯೇ ಸುದೀಪ್ ಹಾಡು ಹೇಳಿದ್ದಾರೆ. ಸರಿಗಮಪ ಶೋದಲ್ಲಿಯೇ ಅಮ್ಮನಿಗಾಗಿಯೇ ಹಾಡು ಹೇಳಿದ್ದಾರೆ. ಲಾಲಿ ಅಂತಲೇ ಅಷ್ಟೇ ಭಾವುಕರಾಗಿಯೇ ಹಾಡು ಹೇಳಿದ್ದಾರೆ. ಅದನ್ನ ಕೇಳಿದ ಅಲ್ಲಿರೋರು ಎಮೋಷನಲ್ ಕೂಡ ಆಗದ್ದಾರೆ. ಒಂದು ರೀತಿ ಇಡೀ ಶೋ ವಿಶೇಷವಾಗಿಯೇ ಎಲ್ಲರ ಹೃದಯ ತಟ್ಟಿದೆ. ಸರಿಗಮಪ ಸುದೀಪ್ ಸ್ಪೆಷಲ್ ಶೋ ಸರಿಗಮಪ ಶೋ ಸ್ಪೆಷಲ್ ಆಗಿಯೇ ಇತ್ತು. ಇಡೀ ಶೋದಲ್ಲಿ ಕಿಚ್ಚನ ಮಾತೇ ಹೆಚ್ಚಿತ್ತು. ಕಿಚ್ಚನ ಸಿನಿಮಾ, ಕಿಚ್ಚನ ಸಿನಿಮಾ ಹಾಡು, ಕಿಚ್ಚನ ವೈಯುಕ್ತಿಕ ಲೈಫ್ ಹೀಗೆ ಎಲ್ಲವೂ ಇಲ್ಲಿತ್ತು. ಹಾಗಾಗಿಯೇ ಈ ಒಂದು ಶೋ ಸ್ಪೆಷಲ್ ಆಗಿಯೇ ಇತ್ತು. ಸ್ಪೆಷಲ್ ಫೀಲ್ ಅನ್ನ ಕೂಡ ನೋಡುಗರಿಗೆ ಕೊಟ್ಟಿತು ಅಂತಲೇ ಹೇಳಬಹುದು. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.