ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಮ್ಯಾಕ್ಸ್ ಸಿನಿಮಾ (Max Movie) ಸಕ್ಸಸ್ ಖುಷಿಯಲ್ಲಿದ್ದಾರೆ. ಇಡೀ ಫ್ಯಾಮಿಲಿ ಕೂಡ ಮ್ಯಾಕ್ಸ್ ಚಿತ್ರದ ಯಶಸ್ಸನ್ನು ಸಂಭ್ರಮಿಸಿತು. ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ನಟ ಸುದೀಪ್ ಪತ್ನಿ ಪ್ರಿಯಾ (Priya Sudeep) ಹಾಗೂ ಮಗಳು ಸಾನ್ವಿ ಸುದೀಪ್ (Sanvi Sudeep) ಭಾಗಿಯಾಗಿದ್ರು. ಅಪ್ಪನಿಗಾಗಿ ಮನತುಂಬುವಂತೆ ಹಾಡಿದ ಸಾನ್ವಿ ಗಾಯನ ಕೇಳಿ ಎಲ್ಲರೂ ಚಪ್ಪಾಳೆ ತಟ್ಟಿದ್ರು. ಆದ್ರೆ ಸಾನ್ವಿ ಆ ಒಂದು ವಿಚಾರಕ್ಕೆ ಇದೀಗ ಟ್ರೋಲ್ ಆಗ್ತಿದ್ದಾರೆ. ಸುದೀಪ್ ಮಗಳು ಮಾಡಿದ ತಪ್ಪು ಏನು ಗೊತ್ತಾ? ಸಾನ್ವಿ ಸುದೀಪ್ ಟ್ರೋಲ್ ಆಗ್ತಿರೋದು ಯಾಕೆ? ಜೀ ಕನ್ನಡದ ಸರಿಗಮಪ ಸಂಗೀತಾ ಕಾರ್ಯಕ್ರಮಕ್ಕೆ ಬಂದಿದ್ದ ಸಾನ್ವಿ ಸುದೀಪ್ ಅವರು ಅಪ್ಪನಿಗಾಗಿ ಜಸ್ಟ್ ಮಾತ್ ಮಾತಲ್ಲಿ ಹಾಡನ್ನು ತುಂಬಾ ಚೆನ್ನಾಗಿ ಹಾಡಿದ್ರು. ಸಾನ್ವಿ ಸಂಗೀತಾ ಕೇಳಿದ ಕಾರ್ಯಕ್ರಮದ ಜಡ್ಜ್ಗಳು ಕೂಡ ಚಪ್ಪಾಳೆ ತಟ್ಟಿ, ಕೊಂಡಾಡಿದ್ರು. ಆದ್ರೆ ಕಾರ್ಯಕ್ರಮದ ಉದ್ದಕ್ಕೂ ಸಾನ್ವಿ ಆಡಿದ ಮಾತುಗಳಲ್ಲಿ ಆಂಗ್ಲ ಪದಗಳೇ ಹೆಚ್ಚಾಗಿತ್ತು. ಹೀಗಾಗಿ ಸಾನ್ವಿ ಸುದೀಪ್ ಫುಲ್ ಟ್ರೋಲ್ ಆಗ್ತಿದ್ದಾರೆ. ಇಂಗ್ಲೀಷ್ನಲ್ಲಿ ಮಾತಾಡಿ ಟ್ರೋಲ್ ಆದ ಸಾನ್ವಿ! ಕನ್ನಡ ಸಿನಿಮಾದ ಹಾಡು ಹಾಡಿದ ಬಳಿಕ ಮಾತಾಡಿದ ಸಾನ್ವಿ ಸುದೀಪ್ ಅವರು ಇಂಗ್ಲಿಷ್ನಲ್ಲೇ ಮಾತಾಡಿದ್ದಾರೆ. ಪ್ರತಿವರ್ಷ ಎಂಬ ಶಬ್ದ ಬಿಟ್ಟು ಇಡೀ ಮಾತಿನಲ್ಲಿ ಎಲ್ಲೂ ಕನ್ನಡ ಶಬ್ದ ಬಳಸಲಿಲ್ಲ ಹೀಗಾಗಿ ಸಾನ್ವಿ ಸುದೀಪ್ ಫುಲ್ ಟ್ರೋಲ್ ಆಗ್ತಿದ್ದಾರೆ. ಸಾನ್ವಿ ಇಂಗ್ಲೀಷ್ನಲ್ಲಿ ಮಾತಾಡಿದ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಏನ್ ವಿಪರ್ಯಾಸ ನೋಡಿ ಸುದೀಪ್ ಅವರು ಬೇರೆ ಅವರಿಗೆ kannad ಅಲ್ಲಾ Kannada ಅಂತ ಕಲಿಸಿ ಕೊಡ್ತಾರೆ ಅದ್ರೆ ತಮ್ಮ ಮಗಳಿಗೆ ಇನ್ನೂ ಕನ್ನಡ ಭಾಷೆ ಮಾತನಾಡೋಕ್ಕೆ ಬರಲ್ಲ 🫡.10min ಶೋ ನಲ್ಲಿ ಇದಾಳೆ ಬಟ್ ಒಂದು ಕನ್ನಡ ಪದ ಬಳಕೆ ಮಾಡಿಲ್ಲ ಬೇರೆಯವರಿಗೆ ಉಪದೇಶ ಮಾಡೋಕ್ಕಿಂತ ಮುಂಚೆ ತಮ್ಮ ಮಗಳಿಗೆ ಹೇಳಿದ್ರೆ ಒಳ್ಳೇದು #DBoss𓃰 #DevilTheHero pic.twitter.com/R3EbePb4f3 ಸಾನ್ವಿ ಮಾತಿಗೆ ನೆಟ್ಟಿಗರ ಬಗೆಬಗೆ ಕಮೆಂಟ್! ಅನೇಕರು ಸಾನ್ವಿ ಸುದೀಪ್ಗೆ ಸರಿಯಾಗಿ ಕನ್ನಡವೇ ಬರಲ್ವಾ? ಮಗಳಿಗೆ ಕನ್ನಡ ಕಲಿಸಿ ಎಂದು ಕಮೆಂಟ್ ಮಾಡ್ತಿದ್ದಾರೆ. ಇತ್ತ ಸುದೀಪ್ ಅಭಿಮಾನಿಗಳು ಕನ್ನಡದಲ್ಲಿ ಮಾತಾಡದಿದ್ದರೇನು? ಸಾನ್ವಿ ಹಾಡಿದ್ದು ಕನ್ನಡದ ಹಾಡೇ ಅಲ್ವಾ ಎಂದು ಸಮರ್ಥನೆ ಕೂಡ ಮಾಡಿಕೊಳ್ತಿದ್ದಾರೆ. ಇದನ್ನೂ ಓದಿ: Actor Darshan: ನಟ ದರ್ಶನ್‌ಗೆ ಬಿಗ್ ಶಾಕ್! 7 ಆರೋಪಿಗಳ ಜಾಮೀನು ರದ್ಧು ಕೋರಿ ಸುಪ್ರೀಂ ಮೆಟ್ಟಿಲೇರಿದ ಖಾಕಿ! ಕನ್ನಡದ ಅಂದ್ರೆ ಬಲು ಇಷ್ಟ! ಈ ಹಿಂದೆ ಕಿಚ್ಚ ಸುದೀಪ್ ಅವರು ವೇದಿಕೆ ಮೇಲ್ ಕನ್ನಡ್ ಅಲ್ಲ ಕನ್ನಡ ಎಂದು ಕೆಲವರಿಗೆ ಪಾಠ ಮಾಡಿದ್ರು. ನಟ ಸುದೀಪ್ ಅವರಿಗೆ ಕನ್ನಡದ ಮೇಲೆ ಅಪಾರ ಪ್ರೀತಿ ಇದೆ. ಅನೇಕ ಬಾರಿ ಬಿಗ್ ಬಾಸ್ ಶೋ ನಡೆಸಿಕೊಡುವ ವೇಳೆ ಕೂಡ ಕನ್ನಡದಲ್ಲಿ ಮಾತಾಡಿ ಅಂತ ಹೇಳಿದ್ದಾರೆ. ಎಷ್ಟೋ ಬಾರಿ ಸುದ್ದಿಗೋಷ್ಠಿಗಳಲ್ಲೂ ಕನ್ನಡದಲ್ಲಿ ಮಾತಾಡುವಂತೆ ಹೇಳಿದ ಉದಾಹರಣೆ ಕೂಡ ಇದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.