ಪುನೀತ್ ಹೃದಯ ಜ್ಯೋತಿ ಯೋಜನೆ ರಾಮನಗರ: ಜಿಲ್ಲೆಯ ಕನಕಪುರ (Kanakapura) ತಾಲೂಕಿನ ಕುರುಬಳ್ಳಿ ಗ್ರಾಮದ 80 ವರ್ಷ ವಯಸ್ಸಿನ ವೆಂಕಟಪ್ಪ ಎಂಬುವರು ಅನಾರೋಗ್ಯದಿಂದ ರಾಮನಗರ (Ramanagara) ಜಿಲ್ಲಾ ಆಸ್ಪತ್ರೆಗೆ (District Hospital ) ದಾಖಲಾಗಿದ್ದರು. ಈ ವೇಳೆ ಇಸಿಜಿ ಮಾಡಿದ ಬಳಿಕ ವೃದ್ಧರಿಗೆ ಹೃದಯಾಘಾತವಾಗೋ (Heart Attack) ಎಚ್ಚರಿಕೆಯನ್ನು ವೈದ್ಯರು ನೀಡಿದ್ದರು. ಬಳಿಕ ವೈದ್ಯರು ತಕ್ಷಣ ಎಚ್ಚೆತ್ತು ಹೃದಯಾಘಾತ ತಡೆಯುವ ಚುಚ್ಚುಮದ್ದ ನೀಡಿದ್ದರು. ಇದಾದ ನಾಲೈದು ದಿನಗಳ ಬಳಿಕ ವೆಂಕಟಪ್ಪ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. 28 ಸಾವಿರ ಮೌಲ್ಯದ ಎಲ್ಲಾ ಚುಚ್ಚುಮದ್ದು ಹಾಗೂ ಔಷಧೋಪಚಾರ ಎಲ್ಲವನ್ನು ಉಚಿತವಾಗಿ ನೀಡಿದ್ದಾರೆ. ಸದ್ಯ ವೆಂಕಟಪ್ಪ ಕನಕಪುರದ ಕುರುಬಳ್ಳಿ ಗ್ರಾಮದ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಕುಟುಂಬ ಈಗ ಮತ್ತೊಮ್ಮೆ ದಿ. ಪುನೀತ್ ರಾಜಕುಮಾರ್ ಅವರನ್ನು ನೆನೆಪು ಮಾಡಿಕೊಳ್ಳುತ್ತಿದೆ. ರಾಮನಗರ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಂಜುನಾಥ್ ಈ ಬಗ್ಗೆ ಮಾಹಿತಿ ನೀಡಿದ್ದು, ವೆಂಕಟಪ್ಪನವರು ಗೋಲ್ಡನ್ ಅವರ್‌ನಲ್ಲಿ ನಮ್ಮ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಸರ್ಕಾರದ ಪುನೀತ್ ರಾಜಕುಮಾರ್ ಹೃದಯಜ್ಯೋತಿ ಯೋಜನೆಯಡಿ ಈ ಇಂಜಕ್ಷನ್ ನೀಡಿದ್ದೆವು. ಬಳಿಕ ಅವರು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಇದೊಂದು ಒಳ್ಳೆಯ ಯೋಜನೆಯಾಗಿದ್ದು ಅವಶ್ಯಕತೆ ಇರೋರು ಬಳಸಿಕೊಳ್ಳಿ ಎಂದಿದ್ದಾರೆ. ಪುನೀತ್ ಹೃದಯ ಜ್ಯೋತಿ ಯೋಜನೆ ಬಗ್ಗೆ ನ್ಯೂಸ್18ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ಈ ಯೊಜನೆಯ ಅಡಿ ಈವರೆಗೂ 50 ರಿಂದ 60 ಜನರ ಜೀವ ಉಳಿದಿದೆ. 82 ತಾಲೂಕುಗಳಲ್ಲಿ ಇಂಜೆಕ್ಷನ್ ಸಿಗ್ತಿದೆ, ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಣೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Haveri: ನಗು ಮೊಗದ ಒಡೆಯ ಅಪ್ಪುಗಾಗಿ ಸ್ವಂತ ಖರ್ಚಿನಲ್ಲೇ ದೇಗುಲ ನಿರ್ಮಿಸಿದ ಅಭಿಮಾನಿ; ಸೆ 26ಕ್ಕೆ ಉದ್ಘಾಟನೆ ದ.ಕ ಜಿಲ್ಲೆಯಲ್ಲಿ ಹೃದಯಜ್ಯೋತಿ ಯೋಜನೆಯಿಂದ 4 ಜನರ ಜೀವ ಉಳಿದಿದೆ. ಸುಳ್ಯ ತಾಲೂಕಿನ ಮೂವರು ಮತ್ತು ಬಂಟ್ವಾಳ ಇಬ್ಬರು ಈ ಇಂಜೆಕ್ಷನ್ ಪಡೆದು ಬದುಕಿದ್ದಾರೆ. ಇಸಿಜಿ ಮಾಡಿ ಈ ಇಂಜೆಕ್ಷನ್ ನೀಡಲಾಗಿದೆ. ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಈ ಯೋಜನೆ ಸಂಪೂರ್ಣ ಉಚಿತವಾಗಿದೆ, ಎಪಿಎಲ್ ಕಾರ್ಡ್ ಬಳಕೆದಾರರು ಇಂಜೆಕ್ಷನ್ ನ 70% ಹಣವನ್ನು ಪಾವತಿಸಬೇಕು. ನ್ಯೂಸ್ 18 ಕನ್ನಡಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್ ಆರ್ ತಿಮ್ಮಯ್ಯ ಮಾಹಿತಿ ನೀಡಿದ್ದಾರೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.