ಗೌತಮ್ ಗಂಭೀರ್ ಸಿಡ್ನಿಯಲ್ಲಿ ಭಾರತ (India vs Australia) ತಂಡ 6 ವಿಕೆಟ್ ಸೋಲಿನಿಂದಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ (Border Gavaskar Trophy) 10 ವರ್ಷಗಳ ಬಳಿಕ ಸರಣಿ ಕಳೆದುಕೊಂಡಿದೆ. ಈ ಸರಣಿಯಲ್ಲಿ ಭಾರತ ಯಾವ ವಿಭಾಗದಲ್ಲೂ ಪ್ರಾಬಲ್ಯಯುತ ಪ್ರದರ್ಶನ ತೋರಲಿಲ್ಲ. ಬೌಲಿಂಗ್ನಲ್ಲಿ ಬುಮ್ರಾ (Bumrah) ಏಕಾಂಗಿ ಹೋರಾಟ ನಡೆಸಿದರೆ, ಬ್ಯಾಟಿಂಗ್ನಲ್ಲಿ ಪರ್ತ್ ಟೆಸ್ಟ್ ಹೊರೆತುಪಡಿಸಿ, ಉಳಿದೆಲ್ಲಾ ಟೆಸ್ಟ್‌ನಲ್ಲಿ ವೈಫಲ್ಯ ಅನುಭವಿಸಿತು. ಆಸ್ಟ್ರೇಲಿಯಾ ವಿರುದ್ಧ ಸತತ 4 ಸರಣಿ ಗೆದ್ದಿದ್ದ ಟೀಮ್ ಇಂಡಿಯಾ ಇದೀಗ 10 ವರ್ಷಗಳ ಬಳಿಕ ಟ್ರೋಫಿಯನ್ನ ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿದೆ. ಈ ಸರಣಿ ಸೋಲಿನ ಬಗ್ಗೆ ಮಾತನಾಡಿದ ಕೋಚ್ ಗಂಭೀರ್, ನಾವು ತಂಡವಾಗಿ ಸಾಮೂಹಿಕ ವೈಫಲ್ಯದಿಂದ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನ ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಈ ಸೋಲಿಗೆ ಯಾವುದೇ ಕಾರಣವಲ್ಲ, ನಾವು ತಂಡವಾಗಿ ವಿಫಲರಾಗಿದ್ದೇವೆ ಎಂದು ಹೇಳಿದ್ದಾರೆ. 10 ವರ್ಷಗಳ ಕಾಯುವಿಕೆ ಅಂತ್ಯ ಸಿಡ್ನಿಯಲ್ಲಿ ಭಾನುವಾರ ಕೊನೆಗೊಂಡ ಐದನೇ ಟೆಸ್ಟ್‌ನಲ್ಲಿ ಆಸೀಸ್ 6 ವಿಕೆಟ್‌ಗಳಿಂದ ಟೀಂ ಇಂಡಿಯಾವನ್ನು ಸೋಲಿಸಿತು. ಈ ಗೆಲುವಿನೊಂದಿಗೆ 10 ವರ್ಷಗಳ ಸುದೀರ್ಘ ಕಾಯುವಿಕೆಯ ಕಾಂಗರೂ ಪಡೆ ಅಂತ್ಯಗೊಳಸಿದೆ. ಈ ಸರಣಿಯ ಗೆಲುವಿನೊಂದಿಗೆ ಆಸೀಶ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025 ರ ಅಂತಿಮ ಸ್ಥಾನವನ್ನೂ ಪಡೆದುಕೊಂಡಿದೆ. ಭಾರತದ ನಂತರ ಸತತ 2ನೇ ಬಾರಿ ಟೆಸ್ಟ್ ಮಹಾಸಮರಕ್ಕೆ ಅರ್ಹತೆ ಪಡೆದುಕೊಂಡಿದೆ. ಜೂನ್ 11-15ರವರೆಗೆ ಲಾರ್ಡ್ಸ್ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇದನ್ನೂ ಓದಿ: IND vs AUS: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಸೋಲಿಗೆ 5 ಪ್ರಮುಖ ಕಾರಣಗಳು ಇಲ್ಲಿವೆ ಸುಲಭವಾಗಿ ಚೇಸ್ ಮಾಡಿದ ಆಸೀಸ್ ಸಿಡ್ನಿ ಟೆಸ್ಟ್‌ನಲ್ಲಿ 162 ರನ್‌ಗಳ ಗುರಿಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 27 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಉಸ್ಮಾನ್ ಖವಾಜ 45 ಎಸೆತಗಳಲ್ಲಿ 4 ಬೌಂಡರಿ ಸಹಿತ 41 ರನ್ಗಳಿಸಿದರೆ, ಟ್ರಾವಿಸ್ ಹೆಡ್ 38 ಎಸೆತಗಳಲ್ಲಿ 4 ಬೌಂಡರಿ ಸಹಿತ ಔಟಾಗದೆ 34 ಮತ್ತು ಬ್ಯೂ ವೆಬ್‌ಸ್ಟರ್ 34 ಎಸೆತಗಳಲ್ಲಿ 6 ಬೌಂಡರಿ ಸಹಿತ ಅಜೇಯ 39ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಚೇಸಿಂಗ್ ಆರಂಭಿಸಿದ ವೇಳೆ ಆಸೀಸ್ 58ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಆದರೆ ಖವಾಜ, ಹೆಡ್ ಹಾಗೂ ವೆಬ್‌ಸ್ಟರ್ ಕ್ರೀಸ್ನಲ್ಲಿ ನೆಲೆನಿಂತು ಗೆಲುವಿಗೆ ಕಾರಣರಾದರು. ಭಾರತದ ಬೌಲರ್‌ಗಳ ಪೈಕಿ ಪ್ರಸಿದ್ಧ್ ಕೃಷ್ಣ (3/65) ಮೂರು ವಿಕೆಟ್ ಪಡೆದರೆ, ಸಿರಾಜ್ 69ಕ್ಕೆ 1 ವಿಕೆಟ್ ಪಡೆದರು. ಗಾಯದ ಸಮಸ್ಯೆಯಿಂದ ನಾಯಕ ಬುಮ್ರಾ ಬೌಲಿಂಗ್‌ಗೆ ಗೈರು ಹಾಜರಾಗಿದ್ದೇ ಆಸೀಸ್ ಗೆಲುವಿನ ಹಾದಿ ಸುಲಭವಾಯಿತು. ಬುಮ್ರಾ ಅನುಪಸ್ಥಿತಿ ಕಾರಣವಲ್ಲ ಈ ಸೋಲಿನ ನಂತರ ಗೌತಮ್ ಗಂಭೀರ್ ಅವರ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದ ವೇಳೆ, ಬುಮ್ರಾ ಅನುಪಸ್ಥಿತಿಯು ಅಂತಿಮ ಟೆಸ್ಟ್‌ನಲ್ಲಿ ಭಾರತದ ಸೋಲಿಗೆ ಕಾರಣವೇ? ಎಂದು ಕೇಳಿದಾಗ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. " ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಿಂದ ನಾವು ಸೋತಿದ್ದೇವೆ ಎಂದು ನಾನು ಹೇಳುವುದಿಲ್ಲ. ನಮಗೆ ಗೆಲ್ಲುವ ಅವಕಾಶವಿತ್ತು. ಆದರೆ ನಮಗೆ ಸಾಧ್ಯವಾಗಲಿಲ್ಲ. ನಾವು ಸಾಮೂಹಿಕ ವೈಫಲ್ಯದಿಂದ ನಾವು ಸರಣಿಯನ್ನು ಕಳೆದುಕೊಂಡಿದ್ದೇವೆ. ತಂಡವು ಎಂದಿಗೂ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗಬಾರದು’ ಎಂದು ಗಂಭೀರ್ ಉತ್ತರಿಸಿದರು. ಇದನ್ನೂ ಓದಿ: ಭಾರತದ ಪ್ರಾಬಲ್ಯ ಅಂತ್ಯಗೊಳಿಸಿ WTC ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ! ಈ ಸಾಧನೆ ಮಾಡಿದ ಎರಡನೇ ತಂಡ 2ನೇ ಇನ್ನಿಂಗ್ಸ್‌ನಲ್ಲಿ ಭಾರತ ವೈಫಲ್ಯ 141/6 ಓವರ್‌ನೈಟ್ ಸ್ಕೋರ್‌ನೊಂದಿಗೆ ಮೂರನೇ ದಿನ ಆಟವನ್ನು ಪುನರಾರಂಭಿಸಿದ ಭಾರತ 157 ರನ್‌ಗಳಿಗೆ ಕುಸಿಯಿತು. ರಿಷಭ್ ಪಂತ್ (33 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 61) ಹೊರತುಪಡಿಸಿ ಉಳಿದೆಲ್ಲಾ ಬ್ಯಾಟರ್ಗಳು ವಿಫಲರಾದರು. ಆಸೀಸ್ ಬೌಲರ್‌ಗಳಲ್ಲಿ ಸ್ಕಾಟ್ ಬೊಲ್ಯಾಂಡ್ 45ಕ್ಕೆ 3 ಹಾಗೂ ಕಮಿನ್ಸ್ 44ಕ್ಕೆ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಪತನಕ್ಕೆ ಕಾರಣರಾದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 185 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಬಳಿಕ ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 181 ರನ್ ಗಳಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ 4 ರನ್‌ಗಳ ಮುನ್ನಡೆ ಪಡೆದರೂ 2ನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ ಉತ್ತಮವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ ವೈಫಲ್ಯ ಭಾರತಕ್ಕೆ ಈ ಸರಣಿಯನ್ನು ಕಳೆದುಕೊಂಡಿತು. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.