NEWS

Nayanthara: ಮತ್ತೆ ಸಂಕಷ್ಟಕ್ಕೆ ಸಿಲುಕಿದ ನಯನತಾರಾ! 5 ಕೋಟಿಗೆ ಬೇಡಿಕೆ ಇಟ್ಟ ನಿರ್ಮಾಪಕ! ಕಾರಣ ಏನು?

ನಟಿ ನಯನತಾರಾ (Actress Nayanthara) ಅವರ ಸಾಕ್ಷ್ಯಚಿತ್ರ ಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿದೆ. ನಟ ಧನುಷ್ (Dhanush)​ ಹಾಗೂ ನಯನತಾರಾ ನಡುವೆ ವಾರ್​ ತಾರಕ್ಕೇರಿ ಬಳಿಕ ತಣ್ಣಗಾಯ್ತು. ಇದೀಗ ಮತ್ತೊಂದು ತಮಿಳು ಚಿತ್ರದ ದೃಶ್ಯಾವಳಿ ಬಳಸಿದ್ದಕ್ಕಾಗಿ ತಮಿಳು ನಿರ್ಮಾಪರು (Tamil Producers) 5 ಕೋಟಿ ಬೇಡಿಕೆ ಇಟ್ಟು ನಟಿ ನಯನತಾರಾಗೆ ನೋಟಿಸ್ ಕಳುಹಿಸಿದ್ದಾರೆ. ನಯನತಾರಾಗೆ ಮತ್ತೊಂದು ಸಂಕಷ್ಟ! ನಟಿ ನಯನತಾರಾ - ವಿಘ್ನೇಶ್ ಶಿವನ್ ಮದುವೆಯ ವಿಡಿಯೋ 2 ವರ್ಷಗಳ ನಂತರ Netflix OTD ನಲ್ಲಿ ಬಿಡುಗಡೆಯಾಗಿದೆ. ಕೇವಲ ಮದುವೆಯ ವಿಡಿಯೋ ಅಲ್ಲ “ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್” ಎಂಬ ಸಾಕ್ಷ್ಯಚಿತ್ರವಾಗಿದೆ. ಇದರಲ್ಲಿ ನಯನತಾರಾ ಪ್ರೇಮಕಥೆ, ಲೈಫ್​ ಸ್ಟೋರಿಗಳನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. 10 ಕೋಟಿಗೆ ಬೇಡಿಕೆ ಇಟ್ಟಿದ್ದ ಧನುಷ್​! ‘ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ ಸಾಕ್ಷ್ಯಚಿತ್ರದ ಟೀಸರ್​ನಲ್ಲೇ ‘ನಾನು ರೌಡಿ ದಾನ್’ ಚಿತ್ರದ ದೃಶ್ಯಗಳನ್ನು ಬಳಸಿದ್ದಕ್ಕಾಗಿ ಧನುಷ್ 10 ಕೋಟಿ ರೂಪಾಯಿ ಕೇಳಿ ನೋಟಿಸ್ ನೀಡಿದ್ರು ಎಂದು ನಟಿ ನಯನತಾರಾ ಆರೋಪಿಸಿದ್ರು, ಬಹಿರಂಗ ಪತ್ರ ಬರೆದು ಆಕ್ರೋಶ ಹೊರ ಹಾಕಿದ್ರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದ್ರೆ ನಯನತಾರಾ ಆರೋಪಕ್ಕೆ ಧನುಷ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ನ್ಯಾಯಾಲಯದಲ್ಲಿ ಕೇಸ್​ ವಿಚಾರಣೆ ನಡೆಯುತ್ತಿದೆ. ಚಂದ್ರಮುಖಿ ಸಿನಿಮಾ ಸಾಂಗ್ ವಿಡಿಯೋ ಬಳಕೆ ಅನುಮತಿ ಇಲ್ಲದೇ ಹಾಡಿನ ತುಣುಕು ಬಳಸಿದ್ದಕ್ಕೆ ಚಂದ್ರಮುಖಿ ಸಿನಿಮಾ ನಿರ್ಮಾಪಕರು ಕೂಡ ಕಾನೂನು ಕ್ರಮ ಕೈಗೊಂಡಿದ್ದಾರೆ. ನಯನತಾರಾ ಬಿಯಾಂಡ್​ ದಿ ಫೇರಿಟೆಲ್​ ಸಾಕ್ಷ್ಯಚಿತ್ರದಲ್ಲಿ 2005ರ ಬ್ಲಾಕ್‌ ಬಸ್ಟರ್‌ ನ ತುಣುಕನ್ನು ಅನಧಿಕೃತವಾಗಿ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. 5 ಕೋಟಿಗೆ ಬೇಡಿಕೆ ಇಟ್ಟ ನಿರ್ಮಾಪಕರು! ನಟ ಧನುಷ್ ಸಲ್ಲಿಸಿದ್ದ ಕೇಸ್ ಇತ್ಯರ್ಥವಾಗುವ ಮುನ್ನವೇ ನಯನತಾರಾಗೆ ಈಗ ಮತ್ತೊಂದು ಸಮಸ್ಯೆ ಎದುರಾಗಿದೆ ಎನ್ನಲಾಗ್ತಿದೆ. ನಯನತಾರಾ ಮತ್ತು ನೆಟ್‌ಫ್ಲಿಕ್ಸ್ ಇಬ್ಬರಿಗೂ ಮತ್ತೊಬ್ಬ ನಿರ್ಮಾಪಕರು ಲೀಗಲ್ ನೋಟಿಸ್ ನೀಡಿದ್ದಾರೆ. ಸಾಕ್ಷ್ಯಚಿತ್ರದಲ್ಲಿ ಅನುಮತಿ ಇಲ್ಲದೆ ಚಂದ್ರಮುಖಿ ಸಿನಿಮಾ ಕ್ಲಿಪ್‌ ಬಳಸಿದ್ದು ಇದೀಗ ಮತ್ತೊಂದು ವಿವಾದ ಹುಟ್ಟುಹಾಕಿದೆ. ನೋಟಿಸ್ ಪ್ರಕಾರ ನಟಿ ನಯನತಾರಾ ಮತ್ತು ಒಟಿಟಿ ವೇದಿಕೆಯಿಂದ ₹ 5 ಕೋಟಿ ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಆದ್ರೆ ಈ ಆರೋಪಕ್ಕೆ ನಯನತಾರಾ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಧನುಷ್ ನೋಟಿಸ್​ ಬಗ್ಗೆ ನಯನತಾರಾ ಹೇಳಿದ್ದೇನು? ಈ ಹಿಂದೆ ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ನಯನತಾರ ಪ್ರಚಾರದ ಗಿಮಿಕ್ ಅಂದವರಿಗೆ ತಿರುಗೇಟು ನೀಡಿದ್ದಾರೆ. ಇದು ಯಾವುದೇ ಪ್ರಚಾರದ ಗಿಮಿಕ್ ಅಲ್ಲ ಎಂದಿದ್ದಾರೆ. ಧೈರ್ಯವು ಸತ್ಯದಿಂದ ಬರುತ್ತದೆ. ನಾನು ಯಾವುದೇ ತಪ್ಪು ಮಾಡದಿದ್ದಾಗ, ನಾನ್ಯಾಕೆ ಭಯಪಡ್ಬೇಕು. ನಾನು ಈಗ ಧ್ವನಿ ಎತ್ತದಿದ್ದರೆ ಮುಂದೆ ಯಾರೂ ಮಾತನಾಡುವ ಧೈರ್ಯ ಮಾಡೋದಿಲ್ಲ ಎಂದು ನಯನತಾರಾ ಹೇಳಿದ್ರು. ಇದನ್ನೂ ಓದಿ: Nayanthara: ನಟ ಧನುಷ್​ ಜೊತೆಗಿನ ಕಿತ್ತಾಟ ಪಬ್ಲಿಸಿಟಿ ಸ್ಟಂಟ್​ ಎಂದವರಿಗೆ ತಿರುಗೇಟು ಕೊಟ್ಟ ನಯನತಾರಾ! ನಟಿ ಹೇಳಿದ್ದೇನು? ಸಣ್ಣ ಕ್ಲಿಪ್ ಬಳಸಲು ಅನುಮತಿ ಸಿಗಲಿಲ್ಲ ಈ ಸಾಕ್ಷ್ಯಚಿತ್ರ ಯಾವುದೇ ಸಿನಿಮಾ ರೀತಿ ಅಲ್ಲ, ಇದು ನಮ್ಮ ಜೀವನ, ನಮ್ಮ ಪ್ರೀತಿ ಮತ್ತು ನಮ್ಮ ಮಕ್ಕಳನ್ನ ಕಥೆಯುಳ್ಳ ಒಂದು ಸಣ್ಣ ಭಾಗವಾಗಿದ್ದು, ಇದು ತನ್ನ ಆಸೆಯಾಗಿತ್ತು. ಸಣ್ಣ ಕ್ಲಿಪ್ ಬಳಸಲು ಅನುಮತಿ ಸಿಗಲಿಲ್ಲ. ಧನುಷ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಿಲ್ಲ. ಇಂತಹ ಪರಿಸ್ಥಿತಿಯನ್ನು ಎದುರಿಸುವುದು ತುಂಬಾ ಕಷ್ಟ ಎಂದು ನಯನತಾರಾ ಹೇಳಿದ್ರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.