ದಾಲ್ಚಿನ್ನಿ ಮತ್ತು ಕರ್ಪೂರ ಜ್ಯೋತಿಷ್ಯ (Astrology) ನಮ್ಮ ಸನಾತನ ಶಾಸ್ತ್ರಗಳಲ್ಲೊಂದಾಗಿದ್ದು ಇದು ತನ್ನದೆ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಸಾಮಾನ್ಯವಾಗಿ ವ್ಯಕ್ತಿಯೊಬ್ಬ ಜನಿಸಿದಾಗ ಆ ಸಮಯದಲ್ಲಿನ ಗ್ರಹಗತಿಗಳು, ಆತ/ಅವಳು ಹುಟ್ಟಿದ ಸ್ಥಳ, ಹಾಗೂ ಸಮಯ ಇತ್ಯಾದಿ ಅಂಶಗಳು ಅವರ ಜೀವನದಲ್ಲಿನ ಮುಂದಿನ ಭವಿಷ್ಯದ ಮಹತ್ತರ ಅಂಶಗಳನ್ನು ಒಂದು ನಿರ್ದಿಷ್ಟ ಲೆಕ್ಕಾಚಾರದ ಮೂಲಕ ಜ್ಯೋತಿಷ್ಯದಿಂದ ತಿಳಿಯಬಹುದಾಗಿದೆ. ಅಲ್ಲದೆ, ಬಹು ಸಂದರ್ಭದಲ್ಲಿ ಜ್ಯೋತಿಷ್ಯದ ಬಹು ಅಂದಾಜುಗಳು ಹಾಗೂ ಲೆಕ್ಕಾಚಾರಗಳು ಸರಿಯಾಗಿ ತಾಳೆ ಹೊಂದಿರುವ ಉದಾಹರಣೆಗಳೂ ಇವೆ. ಹಾಗಾಗಿ ನಮ್ಮಲ್ಲಿ ಬಹು ಜನರು ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದಾರೆ. ಕೇವಲ ಜ್ಯೋತಿಷ್ಯ ಭವಿಷ್ಯದ ನೋಟ ಮಾತ್ರವಲ್ಲದೆ ವ್ಯಕ್ತಿಯ ವಿಶೇಷ ಗುಣಗಳು ಅವರವರ ರಾಶಿಗನುಗುಣವಾಗಿ ಹಾಗೂ ಕೆಲ ಸಂದರ್ಭಗಳಲ್ಲಿ ತೊಂದರೆಗಳಿಂದ ಪರಿಹಾರ ಪಡೆಯುವ ಬಗೆಯ ಬಗ್ಗೆಯೂ ತಿಳಿಸುತ್ತದೆ. ಜ್ಯೋತಿಷ್ಯದ ನಂಬಿಕೆಗಳ ಪ್ರಕಾರ, ನಮ್ಮ ಜಾತಕದಲ್ಲಿ ಗ್ರಹಗಳ ಸ್ಥಾನದಲ್ಲಿನ ಬದಲಾವಣೆಗಳು ನಮ್ಮ ಜೀವನದ ಮೇಲೆ ಭಾರೀ ಪರಿಣಾಮಗಳನ್ನು ಬೀರಬಹುದು. ಅಲ್ಲದೆ, ಗ್ರಹಗಳನ್ನು ಸಮಾಧಾನಪಡಿಸಲು ಕೆಲವು ಜ್ಯೋತಿಷ್ಯ ಪರಿಹಾರಗಳಿವೆ. ಇವುಗಳನ್ನು ಸರಿಯಾದ ಕ್ರಮದಲ್ಲಿ ಪಾಲಿಸಿದರೆ ಜೀವನದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ ಎಂಬ ವಿಶ್ವಾಸವಿದೆ. ಅಂತಹ ಹಲವು ವಿಶಿಷ್ಟ ಪರಿಹಾರಗಳ ಪೈಕಿ ದಾಲ್ಚಿನಿಯೊಂದಿಗೆ ಕರ್ಪೂರವನ್ನು ಸುಡುವುದೂ ಒಂದಾಗಿದೆ. ಇದನ್ನೂ ಓದಿ: ಮದುವೆಯಾದ ಮಹಿಳೆಯರು ಈ ದಿನ ತಲೆಸ್ನಾನ ಮಾಡಲೇಬಾರದಂತೆ! ಏಕೆ ಗೊತ್ತಾ? ಹಾಗಾದರೆ ಬನ್ನಿ, ಈ ಲೇಖನದಲ್ಲಿ ಕರ್ಪೂರ ಮತ್ತು ದಾಲ್ಚಿನಿ ಬಳಸಿ ಆ ಪರಿಹಾರ ಯಾವುದು, ಏತಕ್ಕಾಗಿ ಅದನ್ನು ಮಾಡಬೇಕು ಹಾಗೂ ಅದನ್ನು ಮಾಡುವ ಬಗೆ ಹೇಗೆ ಎಂಬೆಲ್ಲ ಅಂಶಗಳನ್ನು ಇಲ್ಲಿ ತಿಳಿಯೋಣ. ಜ್ಯೋತಿಷ್ಯದಲ್ಲಿ, ಕರ್ಪೂರವನ್ನು ಸುಡುವುದು ನಕಾರಾತ್ಮಕತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ, ವಿಶೇಷವಾಗಿ ಪೂಜೆ ಮತ್ತು ಶುಭ ಕಾರ್ಯಗಳ ಸಮಯದಲ್ಲಿ ಈ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಆದಾಗ್ಯೂ ನಿಮ್ಮ ಜಾತಕದಲ್ಲಿ ಗ್ರಹಗಳ ಅನುಚಿತ ಸ್ಥಾನದ ದುಷ್ಪರಿಣಾಮಗಳನ್ನು ತಪ್ಪಿಸುವ ಬಯಕೆ ನೀವು ಹೊಂದಿದ್ದಲ್ಲಿ ಹಾಗೂ ಅವುಗಳನ್ನು ಸಮಾಧಾನಪಡಿಸಬೇಕೆಂಬ ಇಚ್ಛೆ ನಿಮ್ಮದಾಗಿದ್ದಲ್ಲಿ ಖ್ಯಾತ ತಜ್ಞ ಜ್ಯೋತಿಷಿ ರಾಧಾಕಾಂತ್ ವತ್ಸ್ ಅವರು ಹೇಳಿರುವ ಈ ವಿಧಾನವನ್ನೊಮ್ಮೆ ಪ್ರಯತ್ನಿಸಿ ನೋಡಿ. ನಾವು ದಾಲ್ಚಿನಿಯೊಂದಿಗೆ ಕರ್ಪೂರವನ್ನು ಸುಡಬೇಕೇ? ಕರ್ಪೂರ ಮತ್ತು ದಾಲ್ಚಿನಿಯನ್ನು ಒಟ್ಟಿಗೆ ಸುಡುವುದು ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರ ಎರಡರಲ್ಲೂ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಪರಿಹಾರವು ಋಣಾತ್ಮಕತೆ ಮತ್ತು ತೊಂದರೆಗಳನ್ನು ದೂರ ಮಾಡುತ್ತದೆ. ಮತ್ತು ಈ ಪ್ರಕ್ರಿಯೆಯು ಧನಾತ್ಮಕತೆಗೆ ದಾರಿ ಮಾಡಿ ಕೊಡುತ್ತದೆ. ಅಲ್ಲದೆ, ಇದು ಕುಟುಂಬದಲ್ಲಿ ಶಾಂತಿ, ಪ್ರೀತಿ ಮತ್ತು ಸಮನ್ವಯವನ್ನು ಹೆಚ್ಚಿಸುತ್ತದೆ. ಕರ್ಪೂರ ಮತ್ತು ದಾಲ್ಚಿನಿ ಜ್ಯೋತಿಷ್ಯ ಪರಿಹಾರ ಜ್ಯೋತಿಷ್ಯದ ಪ್ರಕಾರ, ಕರ್ಪೂರವು ಶುಕ್ರ ಗ್ರಹದೊಂದಿಗೆ ಸಂಬಂಧಿಸಿದ್ದರೆ ದಾಲ್ಚಿನಿಯು ಶುಕ್ರ ಮತ್ತು ಮಂಗಳದೊಂದಿಗೆ ಸಂಬಂಧಿಸಿದೆ ಎಂದು ತಜ್ಞರು ನಮಗೆ ತಿಳಿಸುತ್ತಾರೆ. ಶುಕ್ರ ಗ್ರಹವು ಸೌಂದರ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ. ಅದೇ ಸಂದರ್ಭದಲ್ಲಿ ಮಂಗಳ ಗ್ರಹವು ಸಂತೋಷದ ದಾಂಪತ್ಯ ಜೀವನ, ಕುಟುಂಬ ಶಾಂತಿ ಮತ್ತು ಪಿತೃತ್ವ ಇತ್ಯಾದಿಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ದಾಲ್ಚಿನಿಯೊಂದಿಗೆ ಕರ್ಪೂರವನ್ನು ಸುಡುವುದು ಈ ಎರಡೂ ಗ್ರಹಗಳಿಂದ ಶುಭ ಫಲಿತಾಂಶಗಳನ್ನು ತರುತ್ತದೆ. ಈ ಪರಿಹಾರವು ನಿಮ್ಮ ಜಾತಕದಲ್ಲಿನ ಗ್ರಹಗಳನ್ನು ಸಮಾಧಾನಪಡಿಸಲು ಸಹಾಯ ಮಾಡುತ್ತದೆ ಮತ್ತು ಭೌತಿಕ ಸಂತೋಷಗಳನ್ನು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವಿರಿ ಎಂದು ಖಚಿತಪಡಿಸುತ್ತದೆ. ಈ ಪರಿಹಾರವನ್ನು ಮಾಡುವುದರಿಂದ, ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ಸಮೃದ್ಧಿ ಮತ್ತು ಮಾಧುರ್ಯವನ್ನು ನೀವು ಕಾಣಲು ಪ್ರಾರಂಭಿಸುತ್ತೀರಿ ಎಂದಾಗಿದೆ. ಕರ್ಪೂರ ಮತ್ತು ದಾಲ್ಚಿನಿ ಸುಡುವ ಜ್ಯೋತಿಷ್ಯ ಪರಿಹಾರಕ್ಕೆ ಸಂಬಂಧಿಸಿದ ಸಾಮಾನ್ಯ ಸಲಹೆ ಇದಾಗಿದ್ದು ಇದನ್ನು ನುರಿತ ಪರಿಣಿತರ ಮಾರ್ಗದರ್ಶನದಲ್ಲಿ ಪ್ರಯತ್ನಿಸಿ ಲಾಭ ಪಡೆಯಬಹುದು. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.