ಬೈಲಕುಪ್ಪೆಗೆ ಆಗಮಿಸಿದ ದಲೈ ಲಾಮಾ ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ (Piriyapatna) ತಾಲೂಕಿನ ಬೈಲಕುಪ್ಪೆಗೆ (Bylakuppe) ಟಿಬೆಟಿಯನ್ನರ (Tibetans) ಸಾಂಪ್ರದಾಯಿಕ ಧರ್ಮ ಗುರುಗಳಾದ 14ನೇ ದಲೈ ಲಾಮಾ (Dalai Lama) ಆಗಮಿಸಿದ್ದಾರೆ. ಸುಮಾರು 30 ದಿನಗಳ ಕಾಲ ದಲೈ ಲಾಮಾ ಅವರು ಇಲ್ಲಿಯೇ ಉಳಿದುಕೊಳ್ಳಲಿದ್ದು, ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಬೆಳಗ್ಗೆಯಿಂದಲೇ 6 ಕಿಮೀ ನಿಂತ ಬೌದ್ದ ಬಿಕ್ಕುಗಳು ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಬೈಲಕುಪ್ಪೆಯ ನೂತನ ನಾಲ್ಕನೇ ಕ್ಯಾಂಪಿನಲ್ಲಿರುವ ಎಲಿಫ್ಯಾಡ್ ನಲ್ಲಿ ಬಂದಿಳಿದರು. ದಲಾಯಿಲಾಮರವರು ಆಗಮಿಸುತ್ತಿದ್ದಂತೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಟಿಬೆಟಿಯನ್ನರು, 6 ಕಿ.ಮೀ ರಸ್ತೆಯುದ್ದಕ್ಕೂ ಸಾಂಪ್ರದಾಯಿಕ ಮಾದರಿಯ ಉಡುಪುಗಳನ್ನು ಧರಿಸಿ ತಮ್ಮ ನೆಚ್ಚಿನ ಗುರುಗಳ ದರ್ಶನ ಪಡೆದುಕೊಂಡರು. ಹೂಗಳ ಮೂಲಕ ಸ್ವಾಗತ ಜೆಡ್ ಪ್ಲಸ್ ಹೊಂದಿರುವ ದಲೈ ಲಾಮಾ ಅವರು ಆಗಮಿಸುತ್ತಿದ್ದಂತೆ, ಸುಮಾರು 250 ಕ್ಕೂ ಪೊಲೀಸರು ಭದ್ರತೆ ವ್ಯವಸ್ಥೆ ಕಲ್ಪಿಸಿದರು. ಎಲಿಫ್ಯಾಡ್ ನಿಂದ ಕಾರಿನ ಮುಖಾಂತರ ಲಕ್ಷ್ಮೀಪುರ ಗ್ರಾಮದಲ್ಲಿರುವ ತಶಿಲಾಂಪು ದೇವಸ್ಥಾನಕ್ಕೆ ತೆರಳಿದರು. ದೇವಸ್ಥಾನದ ಬಳಿ ಬಗೆ ಬಗೆಯ ಹೂಗಳನ್ನು ಹಾಕುವುದರ ಮೂಲಕ ಬೌದ್ಧ ಬಿಕ್ಕುಗಳು ತಮ್ಮ ನೆಚ್ಚಿನ ಗುರುಗಳನ್ನು ದೇವಸ್ಥಾನದ ಒಳಗಡೆ ಬರಮಾಡಿಕೊಂಡರು. ಇಲ್ಲಿನ ಸ್ಥಳೀಯ ಟಿಬೆಟಿಯನ್ನರು ಟಿಬೆಟಿಯನ್ ಮಾದರಿಯ ನೃತ್ಯಗಳನ್ನು ಸಹ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ನೆರೆದಿದ್ದ ಪ್ರೇಕ್ಷಕರಿಗೆ, ಬೌದ್ಧ ಬಿಕ್ಷುಗಳಿಗೆ ನೂತನ ವರ್ಷದ ಶುಭಾಶಯವನ್ನು ದಲೈ ಲಾಮಾ ಅವರು ತಿಳಿಸಿದರು. ಇದನ್ನೂ ಓದಿ: Uttara Kannada: ರಸ್ತೆ ಸುರಕ್ಷತಾ ನಿಯಮ ಪಾಲಿಸಿ ಅಪಘಾತ ತಪ್ಪಿಸಿ; ಸ್ಕೇಟಿಂಗ್ ಮೂಲಕ ವಿದ್ಯಾರ್ಥಿಗಳ ಜಾಗೃತಿ ಹಬ್ಬದ ವಾತಾವರಣ ನಿರ್ಮಾಣ ಬೈಲಕುಪ್ಪೆಯ ಪ್ರತಿಯೊಂದು ಟಿಬೆಟಿಯನ್ ಕ್ಯಾಂಪಿನಲ್ಲಿ ಎಲ್ಲಾ ರೀತಿಯ ಸಿದ್ಧತಾ ಕಾರ್ಯಗಳು ಈಗಾಗಲೇ ಮುಗಿದಿದೆ. ಬೈಲಕುಪ್ಪೆ ಸುತ್ತಮುತ್ತ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ತಮ್ಮ ನೆಚ್ಚಿನ ಗುರು ಆಗಮನದ ಹಿನ್ನೆಲೆಯಲ್ಲಿ ಇಲ್ಲಿನ ಪ್ರತಿಯೊಂದು ರಸ್ತೆಯನ್ನು ದುರಸ್ತಿಪಡಿಸಿ, ರಸ್ತೆಯ ಅಕ್ಕಪಕ್ಕದ ಕಟ್ಟಡಗಳಿಗೆ, ಸುಣ್ಣ ಬಣ್ಣ ಬಳಿದು, ಪ್ರವೇಶ ದ್ವಾರವನ್ನು ಶೃಂಗರಿಸಿದ್ದರು. ಜೊತೆಗೆ ಟಿಬೆಟಿಯನ್ ಮಾದರಿಯ ಚಿತ್ರಗಳು, ರಂಗೋಲಿ, ಪ್ರಚಾರ ತೋರಣಗಳನ್ನು ಸಿದ್ಧ ಮಾಡಿ ತಮ್ಮ ನೆಚ್ಚಿನ ಗುರುವಿಗೆ ಸ್ವಾಗತ ಕೋರಿದರು. ಕನ್ನಡ ಸುದ್ದಿ / ನ್ಯೂಸ್ / ರಾಜ್ಯ / ಮೈಸೂರು / Mysuru: ಬೈಲಕುಪ್ಪಗೆ ಟಿಬೆಟಿಯನ್ 14ನೇ ಧರ್ಮಗುರು ದಲೈ ಲಾಮಾ ಭೇಟಿ; ಬಗೆಬಗೆಯ ಹೂ ಹಾಕಿ ಸ್ವಾಗತಿಸಿದ ಬೌದ್ಧ ಭಿಕ್ಕುಗಳು Mysuru: ಬೈಲಕುಪ್ಪಗೆ ಟಿಬೆಟಿಯನ್ 14ನೇ ಧರ್ಮಗುರು ದಲೈ ಲಾಮಾ ಭೇಟಿ; ಬಗೆಬಗೆಯ ಹೂ ಹಾಕಿ ಸ್ವಾಗತಿಸಿದ ಬೌದ್ಧ ಭಿಕ್ಕುಗಳು ಬೈಲಕುಪ್ಪೆಗೆ ಆಗಮಿಸಿದ ದಲೈ ಲಾಮಾ ಸ್ಥಳೀಯ ಟಿಬೆಟಿಯನ್ನರು ಟಿಬೆಟಿಯನ್ ಮಾದರಿಯ ನೃತ್ಯಗಳನ್ನು ಸಹ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ನೆರೆದಿದ್ದ ಪ್ರೇಕ್ಷಕರಿಗೆ, ಬೌದ್ಧ ಬಿಕ್ಷುಗಳಿಗೆ ನೂತನ ವರ್ಷದ ಶುಭಾಶಯವನ್ನು ದಲೈ ಲಾಮಾ ಅವರು ತಿಳಿಸಿದರು. ಮುಂದೆ ಓದಿ … 1-MIN READ Kannada Mysore,Mysore,Karnataka Last Updated : January 6, 2025, 6:24 pm IST Whatsapp Facebook Telegram Twitter Follow us on Follow us on google news Published By : Sumanth SN Reported By : Suma C S ಸಂಬಂಧಿತ ಸುದ್ದಿ ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ (Piriyapatna) ತಾಲೂಕಿನ ಬೈಲಕುಪ್ಪೆಗೆ (Bylakuppe) ಟಿಬೆಟಿಯನ್ನರ (Tibetans) ಸಾಂಪ್ರದಾಯಿಕ ಧರ್ಮ ಗುರುಗಳಾದ 14ನೇ ದಲೈ ಲಾಮಾ (Dalai Lama) ಆಗಮಿಸಿದ್ದಾರೆ. ಸುಮಾರು 30 ದಿನಗಳ ಕಾಲ ದಲೈ ಲಾಮಾ ಅವರು ಇಲ್ಲಿಯೇ ಉಳಿದುಕೊಳ್ಳಲಿದ್ದು, ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಬೆಳಗ್ಗೆಯಿಂದಲೇ 6 ಕಿಮೀ ನಿಂತ ಬೌದ್ದ ಬಿಕ್ಕುಗಳು ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಬೈಲಕುಪ್ಪೆಯ ನೂತನ ನಾಲ್ಕನೇ ಕ್ಯಾಂಪಿನಲ್ಲಿರುವ ಎಲಿಫ್ಯಾಡ್ ನಲ್ಲಿ ಬಂದಿಳಿದರು. ದಲಾಯಿಲಾಮರವರು ಆಗಮಿಸುತ್ತಿದ್ದಂತೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಟಿಬೆಟಿಯನ್ನರು, 6 ಕಿ.ಮೀ ರಸ್ತೆಯುದ್ದಕ್ಕೂ ಸಾಂಪ್ರದಾಯಿಕ ಮಾದರಿಯ ಉಡುಪುಗಳನ್ನು ಧರಿಸಿ ತಮ್ಮ ನೆಚ್ಚಿನ ಗುರುಗಳ ದರ್ಶನ ಪಡೆದುಕೊಂಡರು. ಜಾಹೀರಾತು ಕಥಕ್ ಅಂದ್ರೆ ಈ ನಟಿಗೆ ಪ್ರಾಣ! ಇನ್ನಷ್ಟು ಸುದ್ದಿ… ಹೂಗಳ ಮೂಲಕ ಸ್ವಾಗತ ಜೆಡ್ ಪ್ಲಸ್ ಹೊಂದಿರುವ ದಲೈ ಲಾಮಾ ಅವರು ಆಗಮಿಸುತ್ತಿದ್ದಂತೆ, ಸುಮಾರು 250 ಕ್ಕೂ ಪೊಲೀಸರು ಭದ್ರತೆ ವ್ಯವಸ್ಥೆ ಕಲ್ಪಿಸಿದರು. ಎಲಿಫ್ಯಾಡ್ ನಿಂದ ಕಾರಿನ ಮುಖಾಂತರ ಲಕ್ಷ್ಮೀಪುರ ಗ್ರಾಮದಲ್ಲಿರುವ ತಶಿಲಾಂಪು ದೇವಸ್ಥಾನಕ್ಕೆ ತೆರಳಿದರು. ದೇವಸ್ಥಾನದ ಬಳಿ ಬಗೆ ಬಗೆಯ ಹೂಗಳನ್ನು ಹಾಕುವುದರ ಮೂಲಕ ಬೌದ್ಧ ಬಿಕ್ಕುಗಳು ತಮ್ಮ ನೆಚ್ಚಿನ ಗುರುಗಳನ್ನು ದೇವಸ್ಥಾನದ ಒಳಗಡೆ ಬರಮಾಡಿಕೊಂಡರು. ಇಲ್ಲಿನ ಸ್ಥಳೀಯ ಟಿಬೆಟಿಯನ್ನರು ಟಿಬೆಟಿಯನ್ ಮಾದರಿಯ ನೃತ್ಯಗಳನ್ನು ಸಹ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ನೆರೆದಿದ್ದ ಪ್ರೇಕ್ಷಕರಿಗೆ, ಬೌದ್ಧ ಬಿಕ್ಷುಗಳಿಗೆ ನೂತನ ವರ್ಷದ ಶುಭಾಶಯವನ್ನು ದಲೈ ಲಾಮಾ ಅವರು ತಿಳಿಸಿದರು. ಜಾಹೀರಾತು ಇದನ್ನೂ ಓದಿ: Uttara Kannada: ರಸ್ತೆ ಸುರಕ್ಷತಾ ನಿಯಮ ಪಾಲಿಸಿ ಅಪಘಾತ ತಪ್ಪಿಸಿ; ಸ್ಕೇಟಿಂಗ್ ಮೂಲಕ ವಿದ್ಯಾರ್ಥಿಗಳ ಜಾಗೃತಿ ಹಬ್ಬದ ವಾತಾವರಣ ನಿರ್ಮಾಣ ಬೈಲಕುಪ್ಪೆಯ ಪ್ರತಿಯೊಂದು ಟಿಬೆಟಿಯನ್ ಕ್ಯಾಂಪಿನಲ್ಲಿ ಎಲ್ಲಾ ರೀತಿಯ ಸಿದ್ಧತಾ ಕಾರ್ಯಗಳು ಈಗಾಗಲೇ ಮುಗಿದಿದೆ. ಬೈಲಕುಪ್ಪೆ ಸುತ್ತಮುತ್ತ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ತಮ್ಮ ನೆಚ್ಚಿನ ಗುರು ಆಗಮನದ ಹಿನ್ನೆಲೆಯಲ್ಲಿ ಇಲ್ಲಿನ ಪ್ರತಿಯೊಂದು ರಸ್ತೆಯನ್ನು ದುರಸ್ತಿಪಡಿಸಿ, ರಸ್ತೆಯ ಅಕ್ಕಪಕ್ಕದ ಕಟ್ಟಡಗಳಿಗೆ, ಸುಣ್ಣ ಬಣ್ಣ ಬಳಿದು, ಪ್ರವೇಶ ದ್ವಾರವನ್ನು ಶೃಂಗರಿಸಿದ್ದರು. ಜೊತೆಗೆ ಟಿಬೆಟಿಯನ್ ಮಾದರಿಯ ಚಿತ್ರಗಳು, ರಂಗೋಲಿ, ಪ್ರಚಾರ ತೋರಣಗಳನ್ನು ಸಿದ್ಧ ಮಾಡಿ ತಮ್ಮ ನೆಚ್ಚಿನ ಗುರುವಿಗೆ ಸ್ವಾಗತ ಕೋರಿದರು. ಜಾಹೀರಾತು Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: Dalai Lama , Local 18 , mysuru , Tibet First Published : January 6, 2025, 4:04 pm IST ಮುಂದೆ ಓದಿ None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.