ಇಶಾನ್ ಕಿಶನ್ ಶತಕ ಜಾರ್ಖಂಡ್ ನಾಯಕ ಹಾಗೂ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಇಶಾನ್ ಕಿಶನ್ (Ishan Kishan) ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ವಿಧ್ವಂಸಕ ಶತಕ ಸಿಡಿಸಿದ್ದಾರೆ. ಪ್ರತಿಷ್ಠಿತ ದೇಶೀಯ ಏಕದಿನ ಪಂದ್ಯಾವಳಿಯಾಗಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಇಶಾನ್ ಕಿಶನ್ ಮಣಿಪುರ ವಿರುದ್ಧ ಕೇವಲ 64 ಎಸೆತಗಳಲ್ಲಿ ಶತಕ ಸೇರಿದಂತೆ ಒಟ್ಟಾರೆಯಾಗಿ 78 ಎಸೆತಗಳಲ್ಲಿ 16 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 134 ರನ್ ಗಳಿಸಿದ್ದಾರೆ. ಜಾರ್ಖಂಡ್ಗೆ ಸುಲಭ ಜಯ ಇಶಾನ್ ಕಿಶನ್ ಅವರ ವಿನಾಶಕಾರಿ ಬ್ಯಾಟಿಂಗ್ ನೆರವಿನಿಂದ ಜಾರ್ಖಂಡ್ ತಂಡ 8 ವಿಕೆಟ್ ಗಳಿಂದ ಪಂದ್ಯ ಗೆದ್ದುಕೊಂಡಿತು. ಗುಂಪು-ಎ ಅಂಗವಾಗಿ ಸೋಮವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಣಿಪುರ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ಗೆ 253 ರನ್ ಗಳಿಸಿತ್ತು. ಜಾನ್ಸನ್ ಸಿಂಗ್ (69) ಮತ್ತು ಕಂಗಬಾಮ್ (43) ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಜಾರ್ಖಂಡ್ ಪರ ಅನುಕುಲ್ ರಾಯ್ ಮತ್ತು ಉತ್ಕರ್ಷ್ ಸಿಂಗ್ ಎರಡು ವಿಕೆಟ್ ಪಡೆದರೆ, ವಿಕಾಶ್ ಸಿಂಗ್ ಮತ್ತು ಸುಪ್ರಿಯೊ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: Vijay Hazare Trophy: 16 ಬೌಂಡರಿ, 11 ಸಿಕ್ಸರ್ಗಳ ಸಹಿತ ಗಾಯಕ್ವಾಡ್ ಸಿಡಿಲಬ್ಬರದ ಶತಕ! 20 ಓವರ್ನಲ್ಲಿ ಚೇಸಿಂಗ್ ಫಿನಿಶ್ 78 ಎಸೆತಗಳಲ್ಲಿ 134 ರನ್ ಬಳಿಕ ಗುರಿ ಮುರಿಯಲು ಇಳಿದ ಜಾರ್ಖಂಡ್ ಇಶಾನ್ ಕಿಶನ್ ಅವರ ಅಬ್ಬರದ ಶತಕದಿಂದ ಕೇವಲ 28.3 ಓವರ್ ಗಳಲ್ಲಿ 2 ವಿಕೆಟ್ ಗೆ 255 ರನ್ ಗಳಿಸಿ ನಿರಾಯಾಸ ಜಯ ಸಾಧಿಸಿತು. ಇಶಾನ್ ಕಿಶನ್ ಮೊದಲ ವಿಕೆಟ್ಗೆ 196ರನ್ಗಳ ಜೊತೆಯಾಟದಲ್ಲಿ ಪಾಲ್ಗೊಂಡರು. 64 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ ಇಶಾನ್, ಒಟ್ಟಾರೆ 78 ಎಸೆತಗಳಲ್ಲಿ16 ಬೌಂಡರಿ, 6 ಸಿಕ್ಸರ್ಗಳ ಸಹಿತ 134 ರನ್ಗಳಿಸಿದರೆ ಉತ್ಕರ್ಷ್ ಸಿಂಗ್ 64 ಎಸೆತಗಳಲ್ಲಿ 9 ಬೌಂಡರಿ ಸಹಿತ 68 ರನ್ ಗಳಿಸಿದರು. ಮಣಿಪುರ ಬೌಲರ್‌ಗಳ ಪೈಕಿ ಕಿಶನ್ ಸಿಂಘಾ 2 ವಿಕೆಟ್ ಪಡೆದರು. ಆಡಿದ ಎಲ್ಲಾ ಟೂರ್ನಿಗಳಲ್ಲೂ ಅಬ್ಬರ ಮಾನಸಿಕ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದ ಇಶಾನ್ ಕಿಶನ್ರನ್ನ ತಂಡದಿಂದ ಮಾತ್ರವಲ್ಲದೆ, ವಾರ್ಷಿಕ ಗುತ್ತಿಗೆಯಿಂದಲೂ ಹೊರಗಿಡಲಾಗಿತ್ತು. ಆದರೆ ಎಲ್ಲಾ ಮಾದರಿಯಲ್ಲೂ ಫಾರ್ಮ್ಗೆ ಮರಳಿರುವ ಇಶಾನ್ ದೇಶೀಯ ಕ್ರಿಕೆಟ್‌ನಲ್ಲಿ ಸತತ ಟೂರ್ನಿಗಳಲ್ಲಿ ಶತಕ ಬಾರಿಸುತ್ತಿದ್ದಾರೆ. ಬುಚ್ಚಿಬಾಬು ಟೂರ್ನಿಯಲ್ಲಿ ಶತಕ ಸಿಡಿಸಿದ್ದ ಇಶಾನ್ ಕಿಶನ್, ನಂತರ ದುಲೀಪ್ ಟ್ರೋಫಿ ಹಾಗೂ ರಣಜಿ ಟ್ರೋಫಿಯಲ್ಲಿ ಶತಕ ಸಿಡಿಸಿದ್ದರು. ಇದೀಗ ಇಶಾನ್ ಕಿಶನ್ ವಿಜಯ್ ಹಜಾರೆ ಟ್ರೋಫಿಯಲ್ಲೂ ಅದೇ ಫಾರ್ಮ್ ಮುಂದುವರಿಸಿದ್ದಾರೆ. ಇಶಾನ್ ಕಿಶನ್ ಶೀಘ್ರದಲ್ಲೇ ಟೀಂ ಇಂಡಿಯಾಗೆ ಮರಳಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: Anmolpreet Singh: Anmolpreet Singh: 12 ಬೌಂಡರಿ, 9 ಸಿಕ್ಸರ್ ಕೇವಲ 35 ಎಸೆತಗಳಲ್ಲಿ ದಾಖಲೆಯ ಶತಕ! ಐಪಿಎಲ್ನಲ್ಲಿ ಅನ್ಸೋಲ್ಡ್ ಆದ ಬ್ಯಾಟರ್ನಿಂದ ಚರಿತ್ರೆ ಐಪಿಎಲ್ನಲ್ಲಿ ಹೈದರಾಬಾದ್ ಪಾಲು ಇಶಾನ್ ಕಿಶನ್ ಅವರ ಅಬ್ಬರದ ಬ್ಯಾಟಿಂಗ್ ಬಗ್ಗೆ ಸನ್ ರೈಸರ್ಸ್ ಹೈದರಾಬಾದ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಮುಂಬರುವ ಸೀಸನ್ ನಲ್ಲೂ ಇಶಾನ್ ಕಿಶನ್ ಇದೇ ಬಲ ಪ್ರದರ್ಶಿಸಿದರೆ ಆರೆಂಜ್ ಆರ್ಮಿ ಕಪ್ ಗೆಲ್ಲುವ ರೇಸ್ನಲ್ಲಿ ಖಂಡಿತ ಹಿಂದುಳಿಯಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಇಶಾನ್ ಕಿಶನ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ 11.25 ಕೋಟಿ ಮೊತ್ತದ ಭಾರೀ ಬೆಲೆ ನೀಡಿ ಖರೀದಿಸಿದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.