NEWS

Bengaluru: ಇಬ್ಬರು ಅಪ್ರಾಪ್ತ ಬಾಲಕಿಯರನ್ನ ಮಚ್ಚಿನಿಂದ ಕೊಚ್ಚಿ ಕೊಂದ ಮಲತಂದೆ!

ಕೊಲೆ ಆರೋಪಿ ಸುಮಿತ್/ ಕೊಲೆಯಾದ ಸೋನಿಯಾ ಹಾಗೂ ಸುಷ್ಮಾ ಬೆಂಗಳೂರು: ಇಡೀ ಬೆಂಗಳೂರೇ (Capital City) ಬೆಚ್ಚಿ ಬೀಳುವ ಘಟನೆ ಇದು, ಏಕೆಂದರೆ ಆಗ ತಾನೇ ಊಟ (Food) ಮಾಡಿ ರೆಸ್ಟ್ ಮಾಡ್ತಿದ್ದ ಪೊಲೀಸರಿಗೆ ಡಬಲ್ ಮರ್ಡರ್ (Double Murder) ಅಂತ ಕಾಲ್ ಬಂದಿತ್ತು. ಕೂಡಲೇ ಸ್ಥಳಕ್ಕೆ ಓಡೋಡಿ ಬಂದ ಪೊಲೀಸರಿಗೆ (Bengaluru Police) ಕಂಡಿದ್ದು ಇಬ್ಬರು ಬಾಲೆಯರ ಬರ್ಬರ ಕೊಲೆ. ಮಲತಂದೆಯೇ ಮಚ್ಚಿನಿಂದ ಮನಸೋ ಇಚ್ಚೆ ಕೊಚ್ಚಿ ಕೊಲೆ ಮಾಡಿದ್ದಾನೆ. ಅಷ್ಟಕ್ಕೂ ಆ ಮಕ್ಕಳು (Children) ಮಾಡಿದ ತಪ್ಪಾದ್ರೂ ಏನು? ಇಲ್ಲಿದೆ ನೋಡಿ ಹೃದಯ ಕಲಕೋ ಸ್ಟೋರಿ. ಮನಸೋ ಇಚ್ಚೆ ಮಚ್ಚಿನಿಂದ ಕೊಚ್ಚಿ ಕೊಲೆ ನಿನ್ನೆ ಮಧ್ಯಾಹ್ನ 3:30 ರ ಸುಮಾರಿಗೆ ಅಮೃತಹಳ್ಳಿಯ ಕಾವೇರಿ ಲೇಔಟ್ ನಲ್ಲಿ ಡಬಲ್ ಮರ್ಡರ್ ನಡೆದಿದೆ. ಸುಮಿತ್ ಎಂಬ ಮಲತಂದೆ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮನಸೋ ಇಚ್ಚೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹೆಂಡತಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದ್ದು, ಕೃತ್ಯದ ಬಳಿಕ ಆರೋಪಿ ಸುಮೀತ್ ಎಸ್ಕೇಪ್ ಆಗಿದ್ದಾನೆ. ವಿಚಾರ ಗೊತ್ತಾಗುತ್ತಿದ್ದಂತೆ ಅಮೃತಹಳ್ಳಿ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಿದ್ದರು. ತಾಯಿ ಅನಿತಾಳಿಂದ ದೂರು ಪಡೆದು ಆರೋಪಿಗಾಗಿ ಬಲೆ ಬೀಸಿದ್ದಾರೆ. ಡೆಲಿವರಿ ಬಾಯ್ ಸುಮಿತ್ ಇನ್ನು ದೂರುದಾರೆ ಅನಿತಾ ಒಂಬತ್ತು ವರ್ಷಗಳ‌ ಹಿಂದೆ ಕೆಲ ವೈಯಕ್ತಿಕ ಕಾರಣಗಳಿಂದ ಗಂಡನಿಂದ ವಿಚ್ಚೇದನ ಪಡೆದಿದ್ದಳು. ಆಗಲೇ ಆಕೆಯ ಇಬ್ಬರು ಹೆಣ್ಣು ಮಕ್ಕಳಿದ್ದರು. ಆಗ ಬಂದವನೇ ಉತ್ತರ ಪ್ರದೇಶದ ಸುಮಿತ್. ನಿನ್ನ ಮಕ್ಕಳು ನನ್ನ ಮಕ್ಕಳಿದ್ದ ಹಾಗೆ ಅಂತ ಬಂದು ಮದುವೆ ಆಗಿದ್ದ. ಪತ್ನಿ ಅನಿತಾ ಗಾರ್ಮೆಂಟ್ಸ್ ಗೆ ಹೋಗ್ತಾ ಇದ್ದರೆ, ಸುಮಿತ್ ಡೆಲಿವರಿ ಬಾಯ್ ಆಗಿದ್ದ. ಆಗೋ ಹೀಗೋ ಜೀವನ ಮಾಡ್ಕೊಂಡು ಹೋಗ್ತಾ ಇದ್ದು, ಇತ್ತೀಚೆಗೆ ಈ ಇಬ್ಬರು ಅಪ್ರಾಪ್ತ ಮಕ್ಕಳು ಅಂದ್ರೆ ಆಗ್ತಾ ಇರಲಿಲ್ಲ. ಹೀಗಾಗಿ ಹೆಂಡತಿ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಸದ್ಯ ಅಮೃತಹಳ್ಳಿ‌ ಪೊಲೀಸರು ಕೊಲೆ ಕೇಸ್ ದಾಖಲಿಸಿದ್ದು, ಮನೆಯ ಸುತ್ತಮುತ್ತ ಇರೋ ಸಿಸಿ ಕ್ಯಾಮರಾಗಳ ಪರಿಶೀಲನೆ ಮಾಡ್ತಾ ಇದ್ದಾರೆ. ಎಸ್ಕೇಪ್ ಆಗಿರುವ ಸುಮೀತ್‌ಗಾಗಿ ನಾಲ್ಕು ವಿಶೇಷ ತಂಡಗಳಿಂದ ಹುಡುಕಾಟ ಮಾಡ್ತಾ ಇದ್ದಾರೆ. ಇದನ್ನೂ ಓದಿ: Karnataka Politics: ಕಾಂಗ್ರೆಸ್​​​ ಶಾಸಕರ ಖರೀದಿಗೆ 100 ಕೋಟಿ ಆಫರ್! ಬಿಜೆಪಿ ವಿರುದ್ಧ ಎಂಎಲ್​ಎ ಗಣಿಗ ರವಿಕುಮಾರ್ ಬಾಂಬ್! ಮನೆ ಮಾಲೀಕ ಹೇಳಿದ್ದೇನು? ಘಟನೆ ಬಗ್ಗೆ ಮಾಹಿತಿ ನೀಡಿರುವ ಮನೆ ಮಾಲೀಕ ದೇವಿಪ್ರಸಾದ್, ಕಳೆದ ಎರಡ್ಮೂರು ತಿಂಗಳಿಂದ ಗಂಡ ಹೆಂಡತಿ ನಡುವೆ ಗಲಾಟೆ ಇತ್ತು. ಎರಡು ತಿಂಗಳಿಂದ ಮನೆ ಬಾಡಿಗೆ ಕೊಟ್ಟಿರಲಿಲ್ಲ. ಇದೇ ಕಾರಣಕ್ಕೆ ಮನೆ ಖಾಲಿ ಮಾಡಲು ಹೇಳಿದ್ವಿ, ಆದರೆ ನಿನ್ನೆ ಸಂಜೆ ಕೊಲೆ ವಿಚಾರ ಗೊತ್ತಾಗಿ ಪೊಲೀಸರಿಗೆ ಹೇಳಿದ್ದೇವು. ಕಾರಣ ಗೊತ್ತಿಲ್ಲ, ಆದರೆ ಕಳೆದ ಒಂದು ತಿಂಗಳಿಂದ ಗಂಡ ಹೆಂಡ್ತಿ ನಡುವೆ ಗಲಾಟೆ ಹೆಚ್ಚಿತ್ತು. ಗಾರ್ಮೆಂಟ್ಸ್ ಕೆಲಸ ಮುಗಿಸಿ ಪತ್ನಿ ಮನೆಗೆ ಬಂದಿದ್ದಳು. ಆಗ ರಕ್ತವನ್ನು ನೋಡಿ ಕೂಗಾಡಿದ್ದು, ನಾವು ಹೋಗಿ ನೋಡಿದ್ವಿ. ಆಗ ಪೊಲೀಸರು ವಿಚಾರ ಹೇಳಿದ್ದೇವೆ. ಏನಾಯ್ತು, ಯಾಕಾಯ್ತು ಗೊತ್ತಿಲ್ಲ ಎಂದು ಹೇಳಿದರು. (ವರದಿ: ಮಂಜುನಾಥ್, ನ್ಯೂಸ್​18 ಕನ್ನಡ, ಬೆಂಗಳೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.