NEWS

HMPV: ಬೆಂಗಳೂರಲ್ಲಿ HMPV ವೈರಸ್ ಟೆನ್ಶನ್, ಆರೋಗ್ಯ ಇಲಾಖೆ ಗೈಡ್‌ ಲೈನ್! ಹೀಗೆಲ್ಲ ಮಾಡಿದ್ರೆ ಅಪಾಯ ಫಿಕ್ಸ್

ಸಾಂಕೇತಿಕ ಚಿತ್ರ ಬೆಂಗಳೂರು: ಕೋವಿಡ್ ವೈರಸ್ (Covid Virus) ಕಾಣಿಸಿಕೊಂಡ ಐದು ವರ್ಷದ ಬಳಿಕ ಮತ್ತೆ ದೇಶದಲ್ಲಿ ವೈರಸ್ ಹಾವಳಿ ಶುರುವಾಗಿದೆ. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಏಕಾಏಕಿ ಚೀನಾದಲ್ಲಿ ಹರಡುತ್ತಿದ್ದು, ಈ ನಡುವೆ ಕಳೆದ ನಾಲ್ಕು ದಿನ ಚೀನಾ ಪ್ರವಾಸ ಕೈಗೊಂಡಿದ್ದ ಶಾಸಕ ರವಿ ಗಣಿಗ (Ravi Ganiga) ಅವರು, ಚೀನಾದಲ್ಲಿ ಶೇಕಡ 80 ರಷ್ಟು ಜನ ಮಾಸ್ಕ್ (Mask) ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದು ತಿಳಿಸಿದ್ದರು. ಇದೀಗ ಬೆಂಗಳೂರಿಗೂ ಈ ವೈರಸ್ ಎಂಟ್ರಿ ಕೊಟ್ಟಿದೆ. ಇನ್ನು ಆರೋಗ್ಯ ಅಧಿಕಾರಿಗಳ ಜೊತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಸಭೆಯನ್ನು ನಡೆಸಿದ್ದರು. ಈ ವೇಳೆ ಸಚಿವ ದಿನೇಶ್‌ ಗುಂಡೂರಾವ್ ಹೊಸ ವೈರಸ್‌ ಬಗ್ಗೆ ಆತಂಕಪಡಬೇಕಾಗಿಲ್. ಆದ್ರೆ ಮುನ್ನೆಚ್ಚರಿಕೆಯಿಂದ ಇದ್ದರೆ ಒಳ್ಳೆಯದು ಎಂದು ಹೇಳಿದ್ದರು. ಇದೀಗ ಆರೋಗ್ಯ ಇಲಾಖೆ ಹೊಸ HMPV ವೈರಸ್‌ ಬಗ್ಗೆ ಮುನ್ನೆಚ್ಚರಿಕಾ ಕ್ರಮವನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಮಕ್ಕಳು, ವಯಸ್ಕರು, ವೃದ್ದರು ಏನು ಮಾಡಬೇಕು? ಏನು ಮಾಡಬಾರದು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಇದನ್ನೂ ಓದಿ: HMPV ವೈರಸ್‌ಗೆ ಆತಂಕ ಪಡಬೇಡಿ; ಜೀವಕ್ಕೇನು ಅಪಾಯವಿಲ್ಲ ಆದ್ರೆ ಮಾಸ್ಕ್ ಹಾಕಲೇಬೇಕು! ದಿನೇಶ್ ಗುಂಡೂರಾವ್ ಏನು ಮಾಡಬಹುದು? ಏನು ಮಾಡಬಾರದು? ರಾಜಧಾನಿ ಬೆಂಗಳೂರಿನಲ್ಲಿ HMP ವೈರಸ್ ಪತ್ತೆ ಹಿನ್ನೆಲೆ, ಇದೀಗ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮ ಬಿಡುಗಡೆ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮಗಳೇನು? ಏನು ಮಾಡಬಹುದು? ರೋಗ ಲಕ್ಷಣ ಹಾಗೂ ಜ್ವರದ ಲಕ್ಷಣ ಇದ್ದವರು ಕರವಸ್ತ್ರ ಅಥವಾ ಮಾಸ್ಕ್ ನಿಂದ ಬಾಯಿಯನ್ನ ಮುಚ್ಚಿಕೊಳ್ಳಬೇಕು ಎಂದು ಹೇಳಲಾಗಿದೆ. ಹಾಗೆಯೇ ಸ್ಯಾನಿಟೆಸರ್ ಬಳಕೆ ಮಾಡ್ಬೇಕು. ಜನರ ಗುಂಪಿನಲ್ಲಿ ಸೇರಬಾರದು ಜನಸಂದಣಿ ಪ್ರದೇಶದಲ್ಲಿ ಎಚ್ಚರವಹಿಸಬೇಕು ಬಿಸಿಯಾದ ಆಹಾರ ಸೇವನೆ ಮಾಡಬೇಕು ಹೆಚ್ಚಾಗಿ ನೀರು ಕುಡಿಯಬೇಕು ಏನು ಮಾಡಬಾರದು? ಬಳಸಿದ ಕರವಸ್ತ್ರವನ್ನೆ ಬಳಸಬಾರದು ಸದಾ ಮೂಗು, ಬಾಯಿ, ಕಣ್ಣು ಮುಟ್ಟಿಕೊಳ್ಳಬಾರದು ಸಾರ್ವಜನಿಕ ಸ್ಥಳಗಳಲ್ಲಿ ಉಗಿಯಬಾರದು. ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದೇನು? ಇನ್ನು ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಸಾರ್ವಜನಿಕರಲ್ಲಿ HMPV ಔಟ್ ಬ್ರೇಕ್ ಆಗಿದೆ ಎಂದು ಆತಂಕ ಇದೆ. ನಗರದಲ್ಲಿ ಎರಡು ಕೇಸ್ ಆಗಿರೋದು ಭಯ ಹುಟ್ಟಿಸಿದೆ.ಇದು ಮೊದಲ ಕೇಸ್ ಅಲ್ಲ. ILI ಯವರಿಗೆ ಬೇರೆ ಬೇರೆ ವೈರಸ್ ಬರುತ್ತೆ. ಅದ್ರಲ್ಲಿ ಈ HMPV ಕೂಡಾ ಇರುತ್ತದೆ ಎಂದರು. ಹಾನಿಕಾರಕ ವೈರಸ್ ಅಂತ ಹೇಳಲು ಸಾಧ್ಯವಿಲ್ಲ ಇದು ಹಾನಿಕಾರಕ ವೈರಸ್ ಅಂತ ಹೇಳಲು ಸಾಧ್ಯವಿಲ್ಲ. ಇದು ಸಹಜವಾಗಿರುವಂಥದ್ದು, ILI ಕೇಸ್ ನಲ್ಲಿ ಬೇರೆ ಬೇರೆ ವೈರಸ್ ಬರುತ್ತೆ. ಇದು ಬೇರೆ ಸಮಸ್ಯೆಗಳು ಸೇರಿಕೊಂಡು ಬರುತ್ತದೆ ಎಂದು ಹೇಳಿದರು. ಇದನ್ನೂ ಓದಿ: HMPV Virus: ಎಚ್ಚರ ಎಚ್ಚರ! 3 ಗಂಟೆ ಅವಧಿಯಲ್ಲಿ ಬೆಂಗಳೂರಿನ ಮತ್ತೊಂದು ಮಗುವಿನಲ್ಲಿ HMPV ವೈರಸ್ ಪತ್ತೆ! ಮಾಸ್ಕ್ ಹಾಕಬೇಕು , ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ ಇಬ್ಬರು ಮಕ್ಕಳು ಕೂಡಾ ಗುಣಮುಖರಾಗಿದ್ದಾರೆ. 8 ತಿಂಗಳ ಮಗು ನಾಳೆ ಡಿಸ್ಚಾರ್ಜ್ ಆಗುತ್ತೆ. ಮಾಸ್ಕ್ ಹಾಕಬೇಕು , ಲಾಕ್ ಡೌನ್ ಮಾಡಬೇಕು ಅಂತ ಏನಿಲ್ಲ. ಸಾರ್ವಜನಿಕರು ಆತಂಕ ಪಡಬೇಡಿ. ಇದರಿಂದ ಜೀವಕ್ಕೆ ಏನು ಅಪಾಯ ಇಲ್ಲ. ಚೈನಾ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ. ಪುಣೆಗೆ ಕಳುಹಿಸಬೇಕು ಎಂಬ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಇಂದು ಒಟ್ಟು ಇಬ್ಬರು ಮಕ್ಕಳಲ್ಲಿ ವೈರಸ್ ಪತ್ತೆ ಇಂದು ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ HMPV ವೈರಸ್ ಪತ್ತೆಯಾಗಿತ್ತು. ಇದು ದೃಢಪಟ್ಟ ಮೂರು ಗಂಟೆಗಳ ಅವಧಿಯಲ್ಲೇ ಇದೀಗ ಮತ್ತೊಂದು ಮೂರು ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. ಇಂದು ಒಟ್ಟು ಇಬ್ಬರು ಮಕ್ಕಳಲ್ಲಿ ವೈರಸ್ ಪತ್ತೆಯಾಗಿದೆ. ICMR ನಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.