ಸಿದ್ದರಾಮಯ್ಯಗೆ ಎಸ್‌ಆರ್ ಹಿರೇಮಠ್ ಆಗ್ರಹ ಹಾವೇರಿ: ಸಿಎಂ ಸಿದ್ದರಾಮಯ್ಯ (CM Siddaramaiah) ಮೇಲೆ ಕೇಳಿ ಬಂದಿರುವ ಮುಡಾ ಸೈಟ್ ಹಂಚಿಕೆ ಹಗರಣದ (MUDA Scam) ಕುರಿತಂತೆ ಸಮಾಜ ಪರಿವರ್ತನಾ ಸಮುದಾಯದ (ಎಸ್‌ಪಿಎಸ್) ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ್ (SR Hiremath) ಪ್ರತಿಕ್ರಿಯೆ ನೀಡಿದ್ದಾರೆ. ಹಾವೇರಿಯಲ್ಲಿ (Haveri) ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ಅಂತರಾತ್ಮವನ್ನು ಕೇಳಬೇಕು, ಸಿಎಂಗೆ ನೈತಿಕತೆ ಇದ್ದರೆ ಸೈಟ್ ವಾಪಸ್ಸು ಕೊಡಬೇಕು ಎಂದಿದ್ದಾರೆ. ಇನ್ನು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಭ್ರಷ್ಟಾಚಾರದ ಪ್ರತಿರೂಪ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡೋದು ಬೇಕಿಲ್ಲ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡೊದೇನೂ ಬೇಕಿಲ್ಲ ಅಂತ ಎಸ್ಆರ್ ಹಿರೇಮಠ್ ಹೇಳಿದ್ದಾರೆ. ಸಹಿ ಮಾಡಿದ್ದಾರೋ, ಇಲ್ವೋ ಅನ್ನೋದು ನಾವು ನೀವೂ ನೋಡಿಲ್ಲ, ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು ಅಂತ ಅಭಿಪ್ರಾಯಪಟ್ಟಿದ್ದಾರೆ. ಭ್ರಷ್ಟಾಚಾರದ ಪ್ರತಿರೂಪ ಡಿಸಿಎಂ ಇದ್ದಾರೆ ಇದ್ದವರೊಳಗೆ ಸ್ವಲ್ಪ ಪೈನಾನ್ಸಿಯಲ್ ಕರೆಪ್ಸನ್ ಬಗ್ಗೆ ಸ್ಯಾಂಟಿಟಿ ಕಾಪಾಡಿಕೊಂಡು ಬಂದಿದಾರೆ ಅಂತ ಸಿದ್ದರಾಮಯ್ಯ ಬಗ್ಗೆ ಎಸ್ಆರ್ ಹಿರೇಮಠ್ ಹೇಳಿದ್ದಾರೆ. ಕಾಂಗ್ರೆಸ್ ಪ್ರಾಮಾಣಿಕರು ದೀಪ ಹಚ್ಚಿಕೊಂಡು ಹುಡುಕಿದರು ಸಿಗೋದಿಲ್ಲ, ಉದಾಹರಣೆಗೆ ಭ್ರಷ್ಟಾಚಾರದ ಪ್ರತಿರೂಪ ಡಿಸಿಎಂ ಇದಾರೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಬಗ್ಗೆ ಆಕ್ರೋಶದ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: Siddaramaiah: ಸಿದ್ದರಾಮಯ್ಯಗೆ ಪತ್ರ ಬರೆದ ಸಿಟಿ ರವಿ! ಅತ್ತ ರಾಜ್ಯಪಾಲರಿಗೂ ಸಿಎಂ ವಿರುದ್ಧ ಲೆಟರ್! ಇದ್ದುದರಲ್ಲೇ ಸಿದ್ದರಾಮಯ್ಯ ಉತ್ತಮರು ಇದ್ದುದ್ದರಲ್ಲೆ ಸಿದ್ದರಾಮಯ್ಯ ಉತ್ತಮರು ಎಂದು ಸಿಎಂ ಪರ ಎಸ್‌ಆರ್ ಹಿರೇಮಠ್ ಬ್ಯಾಟಿಂಗ್ ಮಾಡಿದ್ದಾರೆ. ಕೂಡಲೇ ಎಲ್ಲಾ ಸೈಟ್ ವಾಪಸ್ಸು ಕೊಡಬೇಕು. ಅಂದಾಗಲೇ ಸಾರ್ವಜನಿಕ ಜೀವನದಲ್ಲಿ ಉತ್ತಮ ಹೆಸರು ಗಳಿಸೋಕೆ ಸಾಧ್ಯ ಅಂತ ಹೇಳಿದ್ದಾರೆ. ಅವರ ಸರ್ಕಾರ ಇದ್ದಾಗ ಬಿಜೆಪಿಯರು ಹಣ ಮತ್ತು ಅಧಿಕಾರದಿಂದ ಏನ್ ಮಾಡಿದ್ದಾರೆ, ಅದೆಲ್ಲವೂ ಎಲ್ಲರಿಗೂ ಗೊತ್ತಿದೆ. ಇಂದಿನ ಪಕ್ಷಗಳು ಸಾರ್ವಜನಿಕ ವಲಯದಲ್ಲಿ ನೈತಿಕತೆ ಕಳೆದುಕೊಂಡಿವೆ ಅಂತ ಹಿರೇಮಠ್ ಅಭಿಪ್ರಾಯಪಟ್ಟಿದ್ದಾರೆ. ಹೆಚ್‌ಡಿಕೆ ಭೂಮಿ ಕಬಳಿಸಿದ್ದಾರೆ ಹೆಚ್‌ಡಿ ಕುಮಾರಸ್ವಾಮಿ ಭೂಮಿ ಕಬಳಿಸಿದ್ದಾರೆ ಅಂತ ಹಿರೇಮಠ್ ಆರೋಪಿಸಿದ್ದಾರೆ. ಬಿಡದಿ ಬಳಿ ಸಂಬಂಧಿಕರ ಹೆಸರಿನಲ್ಲಿ ಗೊಮಾಳ ಜಾಗ ವರ್ಗಾವಣೆ ಮಾಡಿಕೊಂಡಿದ್ದಾರೆ. 200 ಎಕರೆಯಲ್ಲಿ 40 ಎಕರೆ ಕಬಳಿಕೆ ಆಗಿದೆ. ಈ ಪ್ರಕರಣ ತುಂಬಾ ಹೊಲಸಾಗಿದೆ. ನೈತಿಕತೆ ಇರುವ ಕುಟುಂಬವಾಗಿದ್ದರೆ ಸರ್ಕಾರಕ್ಕೆ ಜಮೀನು ವಾಪಸ್ಸು ಕೊಡಬೇಕು. ಕಬಳಿಸಿದ ಜಮೀನಿನಲ್ಲಿ ನೀತಿವಂತರು ಸಾರ್ವಜನಿಕ ವಲಯದಲ್ಲಿ ಇರಬಾರದು ಅಂತ ಹಿರೇಮಠ್ ಆಗ್ರಹಿಸಿದ್ದಾರೆ. ಪ್ರಜ್ವಲ್ ರೇವಣ್ಣನದ್ದು ಏನಾಗಿದೆ? ಇದೀಗ ಪ್ರಜ್ವಲ್ ರೇವಣ್ಣನದ್ದು ಏನಾಗಿದೆ? ಹಳೆಯ ವಿಡಿಯೋ ಅಂತಾ ತಂದೆ ಹೇಳುತ್ತಾರೆ. ಇವರೆಲ್ಲರೂ ಸೇರಿ ಹೊಲಸು ಅಭ್ಯರ್ಥಿಗೆ ಟಿಕೆಟ್ ಕೊಡ್ತಾರೆ ಎಂದರೆ ಇದಕ್ಕಿಂತ ನಾಚೀಗೇಡಿನ ಸಂಗತಿ ಏನಿದೆ? ಹೊರಗಡೆ ಬಂದ ಮೇಲೆ ಜನರೇ ಸೋಲಿಸಿದ್ದಾರೆ ಅಂತ ಎಸ್ಆರ್ ಹಿರೇಮಠ್ ವಾಗ್ದಾಳಿ ನಡೆಸಿದ್ದಾರೆ. (ವರದಿ: ರಮೇಶ್ ಬಿಹೆಚ್, ನ್ಯೂಸ್ 18 ಕನ್ನಡ, ಹಾವೇರಿ) None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.