ಬೆಂಗಳೂರು: ಕೋಟ್ಯಂತರ ರೂಪಾಯಿ ಚಿನ್ನ ವಂಚನೆ ಕೇಸ್‌ನಲ್ಲಿ ಸಿಲುಕಿಕೊಂಡಿರುವ ಆರೋಪಿ ಐಶ್ವರ್ಯ ಗೌಡ ಅವರ ಬಗ್ಗೆ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ. ಮೊದಲಿಗೆ ಐಶ್ವರ್ಯ ಗೌಡ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಇದೀಗ ಐಶ್ವರ್ಯಗೌಡಳ ಮತ್ತೊಂದು ಆಡಿಯೋ ಲಭ್ಯವಾಗಿದೆ. ದೂರು ನೀಡಿದ್ದ ಶಿಲ್ಪಾಗೌಡಗೆ ಫುಲ್ ಅವಾಜ್ ವಾಟ್ಸಪ್‌ನಲ್ಲಿ ವಾಯ್ಸ್ ನೋಟ್ ಕಳಿಸಿದ್ದ ಐಶ್ವರ್ಯಗೌಡ ನಗದು ಚಿನ್ನಾಭರಣ ಕೊಟ್ಟವರಿಗೆ ಫುಲ್ ಅವಾಜ್ ಹಾಕಿದ್ದಾಳೆ. ಈ ಆಡಿಯೋವನ್ನು ಆರ್ ಆರ್ ನಗರ ಠಾಣೆಗೆ ದೂರು ನೀಡಿದ್ದ ಶಿಲ್ಪಾಗೌಡಗೆ ಕಳುಹಿಸಿದ್ದರು ಎನ್ನಲಾಗುತ್ತಿದೆ. ಏನಿದೆ ಆಡಿಯೋದಲ್ಲಿ? ಅವಾಚ್ಯ ಶಬ್ದಗಳಿಂದ ನಿಂದಿಸಿ ಅದೇನ್ ಮಾಡ್ತಿಯಾ ಮಾಡ್ಬಿಡೇ ನೋಡೆ ಬಿಡೋಣ.. ಯಾರದ್ದು ಕೊಟ್ಟು ತೀರಿಸ್ತಿನೋ ಬಿಡ್ತಿನೋ, ನಿಂದು ಮಾತ್ರ ತೀರಿಸಿಬಿಟ್ರೆ ಕೇಳ್ಕೊ. ನೀನ್ ಇದೆ ಥರ ಆಲಿಬೇಕು. ಇಲ್ಲ ಇದ್ಯಾವ್ದಾದ್ರು ದೊಡ್ಡ ಲೆವೆಲ್ ಗೆ ಹೋಗಿ, ನಿನ್ನ ಮರ್ಯಾದೆ ಹೋಗಬೇಕು. ಇಲ್ಲ ನನ್ನ ಮರ್ಯಾದೆ ಹೋಗಬೇಕು ಅಷ್ಟೇ. ನಿಂದು ಹೋಗಬೇಕು. ನಂದು ಹೋಗಬೇಕು..ನಿನ್ನ ಮರ್ಯಾದೆ ಕಳಿಬೇಕು. ಅಲ್ಲಿವರೆಗೂ ನನಗೆ ಸಮಾಧಾನ ಇಲ್ಲ. ನಾನ್ ಕೊಡೋದು ಇಲ್ಲ. ಇನ್ನೊಂದ್ ಸರಿ ಕಂಡೋರ್ ಮಾತ್ ಕೇಳ್ಕೊಂಡ್ ಆಡಬಾರದು ಅನ್ನೊ ಬುದ್ದಿ ನಿನ್ ಲೈಫಲ್ ಬರಬೇಕು. ಇಲ್ಲ ನೀನ್ ಮಣ್ಣು ಮುಕ್ಕಬೇಕು. ಇಲ್ಲ ನಾನ್ ಮಣ್ಣು ಮುಕ್ಕಬೇಕ ನಿನ್ನಿಂದ. ಇದೆರಡೇ ಮಾಡಬೇಕು. ನೋಡೆಬಿಡೋಣ ಅದೇನಾದ್ರು ಆಗೋಗ್ಲಿ ಎಂದು ಅವಾಜ್ ಹಾಕಿರುವ ಆಡಿಯೋ ಇದೀಗ ಪೊಲೀಸರಿಗೆ ಲಭ್ಯವಾಗಿದೆ. ಇದನ್ನೂ ಓದಿ: HMPV Virus: ಎಚ್ಚರ ಎಚ್ಚರ! ಬೆಂಗಳೂರಿನಲ್ಲೂ ಕಾಣಿಸಿಕೊಂಡ HMPV ವೈರಸ್! 8 ತಿಂಗಳ ಮಗುವಿನಲ್ಲಿ ಸೋಂಕು ಪತ್ತೆ ಏನಿದು ಪ್ರಕರಣ? ಡಿಕೆ ಸುರೇಶ್ ಅವರ ಸಹೋದರಿಯೆಂದು ನಂಬಿಸಿ ಖರೀದಿ ನೆಪದಲ್ಲಿ 9.82 ಕೋಟಿ ರೂ. ಮೌಲ್ಯದ ಚಿನ್ನವನ್ನು ಪಡೆದು ವಂಚಿಸಿದ್ದಾರೆ ಎಂದು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲೀಕರಾದ ವನಿತಾ ಎಸ್ ಐತಾಳ್ ಎಂಬುವವರು ನೀಡಿರುವ ದೂರಿನನ್ವಯ ಐಶ್ವರ್ಯಾ ಗೌಡ, ಹರೀಶ್ ಕೆಎನ್ ಹಾಗೂ ಕನ್ನಡದ ನಟ ಧರ್ಮೇಂದ್ರ ಬಿ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: Amit Shah: ಅಮಿತ್ ಶಾ ಹೇಳಿಕೆ ಖಂಡಿಸಿ ಬಂದ್‌ಗೆ ಕರೆ; ಸಂಜೆ 6ರವರೆಗೆ ಇಲ್ಲಿ ಬಸ್ ಸಂಚಾರ ಇರಲ್ಲ, ಶಾಲಾ ಕಾಲೇಜುಗಳಿಗೆ ರಜೆ 9 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಐಶ್ವರ್ಯಾ ಗೌಡ 2023ರ ಅಕ್ಟೋಬರ್‌ನಿಂದ 2024 ಏಪ್ರಿಲ್‌ವರೆಗೆ ಹಂತ ಹಂತವಾಗಿ 9 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ ಖರೀದಿ ಮಾಡಿದ್ದಾರೆ. ಹಣ ಪಾವತಿ ಮಾಡುವಂತೆ ಕೇಳಿದಾಗ ಡಿಕೆ ಸುರೇಶ್ ಅವರಿಂದ ಕರೆ ಮಾಡಿಸಿ ಕಾಲಾವಕಾಶ ಕೋರಿದ್ದರಂತೆ. ಜತೆಗೆ ನಟ ಧರ್ಮೇಂದ್ರ ಎಂಬುವವರಿಂದಲೂ ಕರೆ ಮಾಡಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಐಶ್ವರ್ಯಾ ಗೌಡ ಪತಿ ಹರೀಶ್ ಕೆಎನ್ ಮೇಲೆ ಕೊಲೆ ಬೆದರಿಕೆ ಆರೋಪ ಐಶ್ವರ್ಯಾ ಗೌಡ ಅವರ ಪತಿ ಹರೀಶ್ ಕೆಎನ್ ಕೂಡ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ನಾನು ಡಿಕೆ ಸುರೇಶ್ ತಂಗಿ, ನನಗೆ ಅನೇಕ ರಾಜಕೀಯ ವ್ಯಕ್ತಿಗಳ ಸಂಪರ್ಕವಿದೆ. ನಾನು ದೊಡ್ಡ ಬ್ಯುಸಿನೆಸ್ ವುಮೆನ್. ನಿಮಗೆ ಒಳ್ಳೆ ವ್ಯಾಪಾರ ವಹಿವಾಟು ನೀಡುತ್ತೇನೆ ಎಂದೆಲ್ಲ ಹೇಳಿ ವನಿತಾ ಅವರನ್ನು ಐಶ್ವರ್ಯಾ ನಂಬಿಸಿದ್ದರು ಎನ್ನಲಾಗಿದೆ. (ವರದಿ: ಗಂಗಾಧರ್ ಆಂಜನಪ್ಪ, ನ್ಯೂಸ್ 18 ಕನ್ನಡ, ಬೆಂಗಳೂರು) None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.