NEWS

Parenting Tips: ಬೇರೆಯವರ ಸ್ಟೈಲ್​ ನೋಡಿ ಮಕ್ಕಳನ್ನು ಬೆಳೆಸ್ತೀರಾ? ಈ ತಪ್ಪು ಮಾಡ್ಬೇಡಿ

ಪೇರೆಂಟಿಂಗ್ ಮಗುವಿನ (Chilndren) ಬೆಳವಣಿಗೆ ಎಂಬುದು ಒಂದು ಅಸಾಮಾನ್ಯ ಪ್ರಕ್ರಿಯೆಯಾಗಿದ್ದು, ಮಕ್ಕಳ ಹಂತ ಹಂತದ ಬೆಳವಣಿಗೆಯನ್ನು ಪೋಷಕರು (Parents), ಗುರುಗಳು, ಆರೈಕೆದಾರರು ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದು ಅಧ್ಯಯನ ಹೇಳುತ್ತದೆ. ಮಕ್ಕಳು ಇಂತಿಷ್ಟು ವರ್ಷದಲ್ಲಿ ಹೀಗೆ ಕೆಲಸ ಮಾಡುತ್ತಾರೆ ಎಂದು ಯೋಚಿಸಿಕೊಂಡು ಅವರ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂದು ಅಧ್ಯಯನ ಹೇಳುತ್ತದೆ. ಬೆಳವಣಿಗೆಯ ಹಂತ ಎಲ್ಲಾ ಮಕ್ಕಳಿಗೂ ಸಮನಾಗಿರುವುದಿಲ್ಲ ಉಹಾರಣೆಗೆ ಮಗುವು ಮೂರು ತಿಂಗಳೊಳಗೆ ತನ್ನವರನ್ನು ಗುರುತಿಸಲು ಆರಂಭಿಸುತ್ತದೆ, ಆರು ತಿಂಗಳೊಳಗೆ ಅಂಬೆಗಾಲಿಡಲು ಮಗ್ಗಲು ಬದಲಿಸಲು ಆರಂಭಿಸುತ್ತದೆ, ಇನ್ನು ಹತ್ತು ತಿಂಗಳ ಸಮಯದಲ್ಲಿ ಹಿಡಿದು ನಿಂತು ನಿಧಾನಕ್ಕೆ ನಡೆಯಲಾರಂಭಿಸುತ್ತದೆ. ಆದರೆ ಈ ಎಲ್ಲಾ ಹಂತಗಳು ಎಲ್ಲಾ ಮಕ್ಕಳಿಗೆ ಸಮನಾಗಿರುವುದಿಲ್ಲ. ಕೆಲವರು ವೇಗವಾಗಿ ಈ ಕ್ರಿಯೆಗಳನ್ನು ನಡೆಸಿದರೆ ಇನ್ನು ಕೆಲವು ಮಕ್ಕಳು ನಿಧಾನವಾಗಿ ಪ್ರಕ್ರಿಯೆ ನಡೆಸುತ್ತಾರೆ. ಹೀಗಾಗಿ ಮಕ್ಕಳು ಇಂತಿಷ್ಟು ವರ್ಷದಲ್ಲಿ ಹೀಗೆಯೇ ಇರುತ್ತಾರೆ, ಇಂತಹದ್ದೇ ಚಟುವಟಿಕೆಗಳನ್ನು ನಡೆಸುತ್ತಾರೆ ಎಂಬುದನ್ನು ತೀರ್ಮಾನಿಸಲಾಗುವುದಿಲ್ಲ. ಪಾಶ್ಚಿಮಾತ್ಯ ದೇಶಗಳ ಮಾಹಿತಿ ಮಕ್ಕಳ ಅಭಿವೃದ್ಧಿಯ ಕುರಿತ ಹೆಚ್ಚಿನ ಸಂಶೋಧನೆಗಳನ್ನು ಪಾಶ್ಚಿಮಾತ್ಯ ದೇಶಗಳಾದ ಯುಎಸ್, ಯುಕೆ, ನೆದರ್ಲ್ಯಾಂಡ್ಸ್, ಜರ್ಮನಿ ಮತ್ತು ಫ್ರಾನ್ಸ್‌ ಕೈಗೊಂಡಿವೆ. ಈ ದೇಶಗಳು ತಮ್ಮ ದೇಶಗಳ ಮಕ್ಕಳ ಪ್ರಗತಿಯನ್ನು ಗುರುತಿಸಿ ಅದರ ಮೇಲೆ ಸಂಶೋಧನೆ ನಡೆಸಿವೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಕ್ಕಳ ಬೆಳವಣಿಗೆಯ ಕುರಿತು ಮೂಲಭೂತ ಸಂಶೋಧನೆಯನ್ನು ಮಾಡುವುದು ಸವಾಲಿನ ಸಂಗತಿಯಾಗಿದೆ. ಈ ದೇಶಗಳಲ್ಲಿ ಹೋಲಿಕೆ ಹಾಗೂ ಉದಾಹರಣೆಗಳನ್ನು ಅಲ್ಲಿನ ಮಕ್ಕಳೊಂದಿಗೆ ಮಾಡಲಾಗಿದೆ. ಇದು ವಿಶ್ವದ ಎಲ್ಲಾ ಮಕ್ಕಳಿಗೂ ಅನ್ವಯವಾಗುವುದಿಲ್ಲ ಎಂದು ಅಧ್ಯಯನ ಹೇಳುತ್ತದೆ. ಮಕ್ಕಳ ಬೆಳವಣಿಗೆಯ ಹಂತಗಳು ಆಯಾ ದೇಶಕ್ಕೆ ಪ್ರತ್ಯೇಕವಾಗಿರುತ್ತವೆ. ಒಂದು ದೇಶದ ಮಾನದಂಡವನ್ನು ಎಲ್ಲಾ ದೇಶಕ್ಕೂ ಅನ್ವಯಿಸಲಾಗುವುದಿಲ್ಲ ಎಂದು ಅಧ್ಯಯನ ತಿಳಿಸಿದೆ. ಮಗುವಿನ ಬೆಳವಣಿಗೆಯನ್ನು ದಾಖಲಿಸುವುದು ಅವರಿರುವ ವಾತಾವರಣ ಹಾಗೂ ಸಾಂಸ್ಕೃತಿಕ, ಸಾಮಾಜಿಕ ಸನ್ನಿವೇಶವನ್ನು ಒಳಗೊಂಡಿರುತ್ತದೆ. ಭೌತಿಕ ಪರಿಸರದಲ್ಲಿನ ವ್ಯತ್ಯಾಸಗಳು, ಪೋಷಕರ ಶೈಲಿಗಳು, ಸ್ಥಳ, ಹವಾಮಾನ ಹೀಗೆ ಪ್ರತಿಯೊಂದು ಮಕ್ಕಳ ಬೆಳವಣಿಗೆಯನ್ನು ರೂಪಿಸಲು ಮುಖ್ಯವಾಗಿರುತ್ತವೆ. ಪೋಷಕರ ಪಾತ್ರ ಮಹತ್ವದ್ದು ಮಕ್ಕಳಲ್ಲಿರುವ ಕೂತುಹಲ, ಸಂಕೋಚ, ವೈವಿಧ್ಯತೆ ಕೂಡ ಮಗುವು ತಮ್ಮ ಕಲಿಕೆಯ ವಾತಾವರಣವನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ತಿಳಿಸುತ್ತದೆ ಎಂದು ಅಧ್ಯಯನ ಉಲ್ಲೇಖಿಸಿದೆ. ಮಗುವಿನ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಕೂಡ ಹಿರಿದಾದುದು ಎಂದು ಅಧ್ಯಯನ ಉಲ್ಲೇಖಿಸಿದ್ದು, ಮಗು ಕುಳಿತುಕೊಳ್ಳಲು, ತೆವಳಲು, ನಿಲ್ಲಲು ಮತ್ತು ಓಡಲು ಯಾವಾಗ ನಿರೀಕ್ಷಿಸಬಹುದು ಎಂಬ ಚಾರ್ಟ್, ಚಿತ್ರಗಳು ಕೂಡ ಮಕ್ಕಳ ಅಭಿವೃದ್ಧಿಯ, ಬೆಳವಣಿಗೆಯ ಹಂತಗಳನ್ನು ಅರಿತುಕೊಳ್ಳಲು ಪೋಷಕರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದೆ. ಮಗು ಇರುವ ಸ್ಥಳ ಹಾಗೂ ಸಂಸ್ಕೃತಿ ಮಗುವಿನ ಬೆಳವಣಿಗೆಯು ಮಗು ವಾಸವಾಗಿರುವ ಸ್ಥಳ ಹಾಗೂ ಸಂಸ್ಕೃತಿಯನ್ನು ಆಧರಿಸಿರುತ್ತದೆ. ಇವುಗಳು ಕೂಡ ಮಗುವಿನ ಹಂತ ಹಂತದ ಪ್ರಗತಿಗೆ ಸಹಕಾರಿಯಾಗಿದೆ. ಇದನ್ನೂ ಓದಿ: Belly Fat Burning: ಬೊಜ್ಜು ಇಳಿಸೋಕೆ ಸರ್ಕಸ್ ಮಾಡ್ತಿರೋ ಮಹಿಳೆಯರೇ, ತಪ್ಪದೇ ಇದೊಂದು ಕೆಲಸ ಮಾಡಿ ಸಾಕು! ದೇಹ ಮಲ್ಲಿಗೆಯಂತೆ ಹಗುರಾಗುತ್ತೆ! ಅಲ್ಲಿನ ಜನಜೀವನ, ಭಾಷೆ, ಆಚರಣೆ, ಸಂಸ್ಕೃತಿ, ಸಂಪ್ರದಾಯಗಳು ಮಗುವಿನ ಮೇಲೆ ಪರಿಣಾಮ ಬೀರುತ್ತವೆ. ಸಮುದಾಯಗಳನ್ನು ಅರ್ಥಮಾಡಿಕೊಳ್ಳುವುದು ಎಂದರೆ ಅವರ ಮಾತನ್ನು ಆಲಿಸುವುದು, ಅವರನ್ನು ಸಬಲೀಕರಣಗೊಳಿಸುವುದು ಮತ್ತು ಅವರ ಹಕ್ಕುಗಳನ್ನು ಪಡೆದುಕೊಳ್ಳಲು ಸಹಾಯ ಮಾಡುವುದಾಗಿದೆ. ಮಕ್ಕಳ ಅಭಿವೃದ್ಧಿಯ ಪಾಶ್ಚಿಮಾತ್ಯ-ಕೇಂದ್ರಿತ ತಿಳುವಳಿಕೆಯನ್ನು ಮೀರಿ ಮುಂದುವರಿಯುವುದು ಕೇವಲ ಸಂಶೋಧಕರಿಗೆ ಮಾತ್ರ ಪ್ರಯೋಜನವಾಗಿಲ್ಲ ಇದರೊಂದಿಗೆ ಹೆಚ್ಚು ನಿಖರವಾದ ವಿಜ್ಞಾನಕ್ಕೆ ಕಾರಣವಾಗುತ್ತದೆ. ಇದನ್ನೂ ಓದಿ: Chicken Soup: ಚಳಿ ತಡೆಯೋಕಾಗ್ತಿಲ್ವಾ? ಹಾಗಿದ್ರೆ ಬಿಸಿ ಬಿಸಿಯಾಗಿ ಚಿಕನ್ ಕಾರ್ನ್ ಸೂಪ್ ಮಾಡಿ, ಬೆಂಗಳೂರು ವೆದರ್ ಎಂಜಾಯ್ ಮಾಡಿ ಆದರೆ ಪ್ರಪಂಚದಾದ್ಯಂತ ಮಕ್ಕಳೊಂದಿಗೆ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಆಶಾದಾಯಕವಾಗಿ ಪ್ರಯೋಜನವಾಗುತ್ತದೆ. ಹಾಗಾಗಿ ಮಗುವಿನ ಬೆಳವಣಿಗೆ, ಪ್ರಗತಿ ಮೊದಲಾದ ಅಂಶವನ್ನು ಸಾಮಾನ್ಯ ಪ್ರಕ್ರಿಯೆ ಎಂದು ಕಡೆಗಣಿಸುವಂತಿಲ್ಲ, ನಿರ್ಲಕ್ಷಿಸುವಂತಿಲ್ಲ ಎಂದು ಅಧ್ಯಯನ ಉಲ್ಲೇಖಿಸಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.