NEWS

Operation Kamala: ಗಣಿಗ 'ಬಾಂಬ್‌'ಗೆ ಜೋಶಿ ಟಾಂಗ್! 100 ಕೋಟಿ ಎಲ್ಲಿದೆ ಅಂತ ಪ್ರಶ್ನಿಸಿದ ಕೇಂದ್ರ ಸಚಿವ

ರವಿ ಗಣಿಗ-ಪ್ರಹ್ಲಾದ್ ಜೋಶಿ ಹುಬ್ಬಳ್ಳಿ: ಕಾಂಗ್ರೆಸ್ ಶಾಸಕರ (Congress MLA) ಖರೀದಿಗೆ ಬಿಜೆಪಿ ಮುಂದಾಗಿದೆ, 50ರಿಂದ 100 ಕೋಟಿ ರೂಪಾಯಿ ಆಫರ್ ಮಾಡುತ್ತಿದ್ದಾರೆ ಅಂತ ಮಂಡ್ಯ (Mandya) ಕಾಂಗ್ರೆಸ್ ಶಾಸಕ ರವಿ ಗಣಿಗ (Ravi Ganiga) ಬಾಂಬ್ ಸಿಡಿಸಿದ್ದರು. ಇದೀಗ ಕಾಂಗ್ರೆಸ್ ಶಾಸಕನ ಆರೋಪಕ್ಕೆ ಕೇಂದ್ರ ಸಚಿವ (Union Minister) ಪ್ರಹ್ಲಾದ್ ಜೋಶಿ (Prahlad Joshi) ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ (Congress) ನವರು ತಮ್ಮ ಭ್ರಷ್ಟಾಚಾರ (Corruption) ಮರೆಮಾಚಲು ಬಾಲಿಶತೆ ಇರೋರನ್ನ ಬಿಟ್ಟು ಸುಳ್ಳು ಆರೋಪ ಮಾಡಿಸ್ತಿದ್ದಾರೆ **,** ಪಕ್ಷ ನಿಮ್ಮನ್ನ ಬಲಿ ಪಶು ಮಾಡುತ್ತೆ ಅಂತ ಪ್ರಹ್ಲಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ **.** 100 ಕೋಟಿ ಎಲ್ಲಿದೆ ಅಂತ ಹೇಳಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜೋಶಿ, ಕಾಂಗ್ರೆಸ್ ಶಾಸಕರೋಬ್ರು ಬಿಜೆಪಿ ನನಗೆ 100 ಕೋಟಿ ಆಫರ್ ಮಾಡಿದೆ ಅಂತ ಹೇಳಿದ್ದಾರೆ, 100 ಕೋಟಿ ಎಲ್ಲಿದೆ ಅಂತ ಹೇಳಿದ್ರೆ, ನಾವು ತಗೊಂಡ ಬರ್ತೀವಿ ಅಂತ ವ್ಯಂಗ್ಯವಾಡಿದ್ರು. ಶಾಸಕರ ಖರೀದಿಗೆ 66 ಸಾವಿರ ಕೋಟಿ ಬೇಕು! ಒಬ್ರು ಇಬ್ರು ಶಾಸಕರು ತಗೊಂಡ್ರೆ ಏನು ಆಗೋದಿಲ್ಲ. 66 ಶಾಸಕರು ನಮ್ಮಲ್ಲಿ ಇದ್ದಾರೆ, ಅದರಲ್ಲಿ ಇಬ್ರು ಪಕ್ಷ ದ್ರೋಹ ಮಾಡಿ ಹೋಗಿದ್ದಾರೆ. ಅದರಿಂದ ಬಹುಮತಕ್ಕೆ 66 ಶಾಸಕರು ಅವಶ್ಯಕತೆ ಇದ್ದು, ಅವರ ಖರೀದಿಗೆ 6,600 ಕೋಟಿ ರೂಪಾಯಿ ಬೇಕಾಗುತ್ತೆ. ಆದ್ದರಿಂದ ಬಾಲಿಷತನಕ್ಕೆ ಒಂದು ಮಿತಿ ಇರಬೇಕು ಅಂತ ಶಾಸಕ ಗಣಿಗಗೆ ಟಾಂಗ್ ಕೊಟ್ರು. ಇದನ್ನೂ ಓದಿ: Siddaramaiah VS HDK: ಟಾರ್ಚ್ ಹಾಕಿ ಮುಡಾ ಕಾಗದ ತೋರಿಸಿದ ಸಿಎಂಗೆ ಹೆಚ್‌ಡಿಕೆ ಸಪ್ತ ಪ್ರಶ್ನೆ! ಉತ್ತರಿಸ್ತಾರಾ ಸಿದ್ದು? ಮೊದಲು ವಾಜಪೇಯಿ ಈಗ ಮೋದಿ ರವಿ ಗಣಿಗ ಮೊದಲ ಬಾರಿ ಶಾಸಕರಿದ್ದಾರೆ, ಯಾರೋ ಹೇಳಿದ್ದಾರೆ ಅಂತ ಹೇಳಿಕೆ ಕೊಡೋಕೆ ಹೋಗಬಾರದು, ಇಲ್ಲವಾದಲ್ಲಿ ನಾನು ನಿಮ್ಮ ಮೇಲೆ ಮಾನಹಾನಿ ಮೊಕದ್ದಮೆ ಹಾಕ್ತೇನೆ. ನಾವು ಮೊದಲು ವಾಜಪೇಯಿ, ಈಗ ಮೋದಿ ಮಾರ್ಗದರ್ಶನದಲ್ಲಿ ಕೆಲಸ ಮಾಡ್ತಾ ಇದ್ದೇವೆ. ಈ ರೀತಿ ಹೇಳಿಕೆ ಕೊಡಿಸಿ ಕಾಂಗ್ರೆಸ್ ಪಕ್ಷ ನಿಮ್ಮನ್ನ ಬಲಿ ಪಶು ಮಾಡುತ್ತೆ ಎಂದು ಗಣಿಗ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು. ಶಾಸಕ ರವಿ ಗಣಿಗ ಮೇಲೆ ದೂರು ಕಾಂಗ್ರೆಸ್ ಪಕ್ಷದಲ್ಲಿನ ಒಳಜಗಳದಿಂದ ಇಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣ ಆಗ್ತಿವೆ, ನಮ್ಮ ಪಕ್ಷದಿಂದ ಈಗಾಗಲೇ ಅವರ ಮೇಲೆ ದೂರನ್ನ ಕೊಟ್ಟಿದ್ದಾರೆ. ಪೊಲೀಸರು ಇಂತಹ ಸುಳ್ಳು ಆರೋಪಗಳ ಕುರಿತು ತನಿಖೆ ನಡೆಸಬೇಕು. ಯಾರಿಗೆ ಯಾರು ದುಡ್ಡು ಕೊಟ್ಟಿದ್ದಾರೆ ಅನ್ನೋದನ್ನ ಕಾಂಗ್ರೆಸ್ ಪಕ್ಷ ಬಹಿರಂಗ ಪಡಿಸಲಿ, ಕ್ಷುಲ್ಲಕ ಆರೋಪ ಮಾಡುವ ಪ್ರವೃತ್ತಿ ಸರಿಯಲ್ಲ, ಕಾಂಗ್ರೆಸ್ ಪಕ್ಷ ಅಸಹಾಯಕ ಸ್ಥಿತಿಯಲ್ಲಿದೆ ಹೀಗಾಗಿ ಕೆಲವರನ್ನ ಬಿಟ್ಟು ಹೀಗೆ ಮಾತನಾಡಿಸ್ತಾ ಇದ್ದಾರೆ ಎಂದು ಟೀಕಿಸಿದ್ದರು. ಕೆಲವರು ಬಾಲಿಶ ಹೇಳಿಕೆ ಕೊಡುತ್ತಿದ್ದಾರೆ ಮುಡಾ ಮತ್ತು ವಾಲ್ಮೀಕಿ ಹಗರಣದಿಂದ ಗಮನ ಬೇರೆಡೆ ತಿರುಗಿಸೋದಕ್ಕೆ ಕಾಂಗ್ರೆಸ್ ನಾಯಕರು ಹೀಗೆ ಹೇಳಿಕೆ ಕೊಡಿಸ್ತಿದ್ದಾರೆ ಅಂತ ಜೋಶಿ ಆರೋಪಿಸಿದ್ರು. ಬಿಜೆಪಿಯಲ್ಲಿಯೂ ಕೆಲವರು ಸಣ್ಣ ಮಕ್ಕಳಂತೆ ಹೇಳಿಕೆ ಕೊಡ್ತಿರ್ತಾರೆ. ಎಲ್ಲರಿಗೂ ಪಕ್ಷದ ವಿರುದ್ಧ ಹೇಳಿಕೆ ಕೊಡಬಾರದೆಂದು ಹೇಳಿದ್ದೇನೆ ಅಂತ ಪ್ರಹ್ಲಾದ್ ಜೋಶಿ ಹೇಳಿದ್ರು. ಕಾಂಗ್ರೆಸ್ ಸರ್ಕಾರ 5 ವರ್ಷ ಸುಭದ್ರವಾಗಿರಲಿ ಕಾಂಗ್ರೆಸ್ ನವರು ಐದು ವರ್ಷ ಸುಭದ್ರ ಸರ್ಕಾರ ನಡೆಸಬೇಕು ಅನ್ನೋದು ನಮ್ಮ ಪಕ್ಷದ ಸ್ಪಷ್ಟ ನಿಲುವು. ಆದರೆ ಡಿಕೆಶಿ ಮತ್ತು ಸಿದ್ದರಾಮಯ್ಯನವರೇ ಬಡಿದಾಡಿಕೊಳ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯೋದು ಬಿಡೋದು ಅವರಿಗೆ ಬಿಟ್ಟಿದ್ದು. ಕಳೆದ ಬಾರಿ ಅವರಿಗೆ ಬಹುಮತ ಇರ್ಲಿಲ್ಲ, ಕುಮಾರಸ್ವಾಮಿ ಸೇರಿಸಿಕೊಂಡು ಸರ್ಕಾರ ಮಾಡಿದ್ರು. ನಮ್ಮ ಪಕ್ಷಕ್ಕೆ 105 ಸ್ಥಾನ ಬಂದಿತ್ತು, ಆದರೆ ಬಹುಮತಕ್ಕೆ 114 ಶಾಸಕರ ಬೆಂಬಲ ಬೇಕಿತ್ತು. ಹೀಗಾಗಿ ನಾವು ಸರ್ಕಾರ ರಚನೆ ಮಾಡಿದ್ವಿ ಅಂತ ಹೇಳಿದ್ರು. ಗ್ಯಾರಂಟಿಯಿಂದ ಶಾಸಕರ ಅನುದಾನ ಕಡಿತ ಗ್ಯಾರಂಟಿಯಿಂದ ಅವರ ಶಾಸಕರೇ ಅನುದಾನ ಇಲ್ಲಾ ಅಂತಾರೆ, ಗ್ಯಾರೆಂಟಿ ಫಲಾನುಭವಿಗಳನ್ನು ಕಡಿಮೆ ಮಾಡ್ತೇವೆ ಎಂದಿದ್ದಾರೆ. ಮುಡಾ, ವಾಲ್ಮೀಕಿ ಹಗರಣ ಮುಚ್ಚಿ ಹಾಕಿ, ಭ್ರಷ್ಟಾಚಾರ ವಿಷಯವನ್ನು ಮರೆಮಾಚಲು ಕ್ಷುಲ್ಲಕ ಆರೋಪ ಮಾಡ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ, ಇದನ್ನು ನ್ಯಾಯಾಲಯ ನಿರ್ಣಯಿಸುತ್ತೆ. ತನಿಖೆನೇ ಮಾಡಬಾರದು ಅಂತ ಸಿದ್ದರಾಮಯ್ಯ, ಅವರ ಪಕ್ಷದವರು ಹೊರಟ್ಟಿದ್ದಾರೆ ಎಂದು ಜೋಶಿ ದೂರಿದರು. **(** ವರದಿ: ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ, ಹುಬ್ಬಳ್ಳಿ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.