NEWS

WTC Final: ಭಾರತದ ಪ್ರಾಬಲ್ಯ ಅಂತ್ಯಗೊಳಿಸಿ WTC ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ! ಈ ಸಾಧನೆ ಮಾಡಿದ ಎರಡನೇ ತಂಡ

WTC ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ ಭಾನುವಾರ ಅಂತ್ಯಗೊಂಡ 5 ಪಂದ್ಯಗಳ ಟೆಸ್ಟ್​ ಸರಣಿಯ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ಟೀಮ್ ಇಂಡಿಯಾವನ್ನ (India vs Australia) ಆರು ವಿಕೆಟ್‌ಗಳಿಂದ ಸೋಲಿಸಿ 3-1 ಸರಣಿಯನ್ನ ಗೆದ್ದುಕೊಂಡಿದೆ. ಬರೋಬ್ಬರಿ 10 ವರ್ಷಗಳ ಬಳಿಕ ಟೀಮ್​ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (Border Gavaskar Trophy) ತನ್ನ ಪ್ರಾಬಲ್ಯವನ್ನು ಅಂತ್ಯಗೊಳಿಸಿದೆ. ಕೊನೆಯ ಬಾರಿ ಭಾರತ 2014-15ರಲ್ಲಿ ಟೆಸ್ಟ್​ ಸರಣಿ ಸೋಲು ಕಂಡಿತ್ತು. ಇದೀಗ 10 ವರ್ಷಗಳ ಬಳಿಕ ಆಸ್ಟ್ರೇಲಿಯಾ ಟ್ರೋಫಿಯನ್ನ ಮರಳಿ ಪಡೆದಿದೆ. ಈ ಗೆಲುವಿನೊಂದಿ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ತನ್ನ ಸ್ಥಾನವನ್ನು ದೃಢಪಡಿಸಿಕೊಂಡಿದೆ. ಭಾರತದ ನಂತರ ಬ್ಯಾಕ್ ಟು ಬ್ಯಾಕ್ ವಿಶ್ವಟೆಸ್ಟ್ ಚಾಂಪಿಯನ್​ ಫೈನಲ್ ತಲುಪಿದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. WTC ಫೈನಲ್ ರೇಸ್​ನಿಂದ ಹೊರ ಬಿದ್ದ ಭಾರತ 2014-15ರಲ್ಲಿ ತವರಿನಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ಸರಣಿ ಗೆದ್ದಿತ್ತು. ಆದಾದ ನಂತರ ತವರಿನಲ್ಲಿ 2 ಹಾಗೂ ಭಾರತದಲ್ಲಿ 2 ಬಾರಿ ಸರಣಿಯನ್ನ ಕಳೆದುಕೊಂಡಿತ್ತು. ಇದೀಗ 2024-25ರ ಸರಣಿಯನ್ನ 3-1ರಲ್ಲಿ ಗೆಲ್ಲುವ ಮೂಲಕ ಸರಣಿಯನ್ನ ಗೆದ್ದಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ 3ನೇ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದರೆ, ಭಾರತ ಅಂತಿಮ ರೇಸ್‌ನಿಂದ ಹೊರಬಿದ್ದಿದೆ. ಇದನ್ನೂ ಓದಿ: India vs Australia: ಸಿಡ್ನಿ ಟೆಸ್ಟ್​ನಲ್ಲಿ ಟೀಂ ಇಂಡಿಯಾಗೆ ಸೋಲು; 10 ವರ್ಷಗಳ ಬಳಿಕ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ! ಒಂದು ಸರಣಿ ಇರುವಂತೆಯೇ ಫೈನಲ್ ಖಚಿತ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ತಂಡವು ಜೂನ್ 11 ರಂದು ಲಾರ್ಡ್ಸ್‌ನಲ್ಲಿ WTC ಫೈನಲ್‌ನಲ್ಲಿ ಈಗಾಗಲೇ ಅರ್ಹತೆ ಪಡೆದಿರುವ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ಈ ತಿಂಗಳ ಕೊನೆಯಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾಗೆ ಪ್ರಯಾಣಿಸಬೇಕಿದೆ. ಭಾರತದ ವಿರುದ್ಧ 3-1ರಲ್ಲಿ ಸರಣಿ ಗೆದ್ದಿರುವುದರಿಂದ ಆ ಸರಣಿ ಫಲಿತಾಂಶ ಯಾವುದೇ ಪರಿಣಾಮ ಬೀರುವುದಿಲ್ಲ. ಬ್ಯಾಟಿಂಗ್ ವೈಫಲ್ಯದಿಂದ ಸೋಲು ಭಾರತ ನ್ಯೂಜಿಲೆಂಡ್ ವಿರುದ್ಧ 3-0 ಅಂತರದ ಸೋಲಿನ ಬಳಿಕ ವಿಶ್ವಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ರೇಸ್​ನಲ್ಲಿ ಭಾರತದ ಸ್ಥಿತಿ ಕಷ್ಟಕರವಾಗಿತ್ತು. ಆದರೂ ಈ ಹಿಂದೆ ಸತತ 2 ಸರಣಿ ಗೆದ್ದಿದ್ದರಿಂದ ಭಾರತ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಬಹುದು ಎಂದು ಭಾವಿಸಲಾಗಿತ್ತು. ಆದರೆ ಭಾರತ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ಸರಣಿಯನ್ನ ಕಳೆದುಕೊಂಡಿದೆ. ಇದನ್ನೂ ಓದಿ: SA vs PAK: ಪಾಕ್ ವಿರುದ್ಧ ದ್ವಿಶತಕ ಸಿಡಿಸಿ ಅಬ್ಬರಿಸಿದ ರಿಕೆಲ್ಟನ್! 9 ವರ್ಷದ ಬಳಿಕ ವಿಶೇಷ ದಾಖಲೆ ಬರೆದ ರಿಯಾನ್ WTC ಅಂಕಪಟ್ಟಿ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ನಂತರ ಅಂಕಪಟ್ಟಿ ನೋಡುವುದಾದರೆ, ದಕ್ಷಿಣ ಆಫ್ರಿಕಾ 66.67 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 63.73 ಪಿಸಿಟಿಯೊಂದಿಗೆ 2ನೇ ಸ್ಥಾನ ಪಡೆದು ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಭಾರತ 50 ಪಿಸಿಟಿ , ನ್ಯೂಜಿಲ್ಯಾಂಡ್ 48.21 ಪಿಸಿಟಿ, ಶ್ರೀಲಂಕಾ 45.45 ಪಿಸಿಟಿ, ಇಂಗ್ಲೆಂಡ್ 43.18 ಪಿಸಿಟಿ, ಬಾಂಗ್ಲಾದೇಶ 31.25 ಪಿಸಿಟಿ, ಪಾಕಿಸ್ತಾನ 30.3 ಪಿಸಿಟಿ, ವೆಸ್ಟ್​ ಇಂಡೀಸ್ 24.24 ಪಿಸಿಟಿಯೊಂದಿಗೆ ಟೂರ್ನಿಯಿಂದ ಹೊರಬಿದ್ದಿವೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.