Vijay Devarakonda: ಟಾಲಿವುಡ್ ವಿಜಯ್ ದೇವರಕೊಂಡ ನಾಳೆ ಬೆಳಗ್ಗೆ 'ಗರ್ಲ್‌ಫ್ರೆಂಡ್' ಪರಿಚಯಿಸ್ತಿದ್ದಾರೆ! ಸ್ಯಾಂಡಲ್‌ವುಡ್‌ನ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಪುಷ್ಪಾ-2 ಚಿತ್ರದ ರಿಲೀಸ್ ಖುಷಿಯಲ್ಲಿದ್ದಾರೆ. ಒಳ್ಳೆ ಓಟದಲ್ಲಿಯೇ ಇರೋ ಈ ಚಿತ್ರದ ಕಲೆಕ್ಷನ್ ಕೂಡ ಚೆನ್ನಾಗಿಯೇ ಇದೆ. ಈ ಒಂದು ಸಂಭ್ರಮದ ಮಧ್ಯೆನೇ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ “ದಿ ಗರ್ಲ್ ಫ್ರೆಂಡ್” (The Girlfriend) ಸಿನಿಮಾದ ಹೊಸ ಸುದ್ದಿ ಹೊರ ಬಂದಿದೆ. ವಿಶೇಷವಾಗಿ ಈ ಚಿತ್ರದ ಟೀಸರ್ ಅನ್ನ ಇದೀಗ ರಶ್ಮಿಕಾ ಗೆಳೆಯ ವಿಜಯ್ ದೇವರಕೊಂಡ ರಿಲೀಸ್ ಮಾಡುತ್ತಿದ್ದಾರೆ. ಇದನ್ನ ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ಸಿನಿಮಾ ತಂಡ ಇದೀಗ ಹೇಳಿಕೊಂಡಿದೆ. ವಿಜಯ್ ದೇವರಕೊಂಡ “ದಿ ಗರ್ಲ್ ಫ್ರೆಂಡ್” ಅನ್ನ (The Girlfriend) ಜಗತ್ತಿಗೆ ಪರಿಚಯಿಸುತ್ತಿದ್ದಾರೆ ಅನ್ನೋದನ್ನ ಹೇಳಿದ್ದಾರೆ. ಅದರ ಸುತ್ತ ಇನ್ನಷ್ಟು ವಿವರ ಇಲ್ಲಿದೆ ಓದಿ. ರಶ್ಮಿಕಾ ಚಿತ್ರಕ್ಕೆ ವಿಜಯ್ ಸಾಥ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ವಿಚಾರ ಸದ್ಯದ ಟಾಕ್ ಆಫ್ ದಿ ಟೌನ್ ಆಗಿದೆ. ಟಾಲಿವುಡ್ ಸೇರಿದಂತೆ ಸ್ಯಾಂಡಲ್‌ವುಡ್‌ನಲ್ಲೂ ಈ ಸುದ್ದಿ ಜೋರಾಗಿಯೇ ಕೇಳಿ ಬರುತ್ತಿದೆ. ಇತ್ತೀಚಿಗೆ ಈ ಜೋಡಿಯ ಒಂದು ಫೋಟೋ ಅತಿ ಹೆಚ್ಚು ವೈರಲ್ ಆಗಿದೆ. ಹೋಟೆಲ್ ಒಂದರಲ್ಲಿ ಜೊತೆಗೆ ಕುಳಿತು ಊಟ ಮಾಡ್ತಿರೋ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದಾದ್ಮೇಲೆ ಪುಷ್ಪ-2 ಚಿತ್ರದ ಪ್ರಚಾರದ ಸಮಯದಲ್ಲಿ, ತಮ್ಮನ್ನ ಮದುವೆ ಆಗುವ ಹುಡುಗು ಹೇಗಿರಬೇಕು ಅನ್ನೋದನ್ನ ಕೂಡ ರಶ್ಮಿಕಾ ಹೇಳಿಕೊಂಡಿದ್ದರು. ಹಾಗೆ ಹೇಳಿದ ಪ್ರತಿ ವಿಷಯವೂ ವಿಜಯ್ ದೇವರಕೊಂಡೇ ಕನೆಕ್ಟ್ ಆಗೋ ರೀತಿಯಲ್ಲಿಯೇ ಇದ್ದವು ಬಿಡಿ. ಇದನ್ನೂ ಓದಿ: Upendra: ನಾನು ಟ್ರೆಂಡ್ ಫಾಲೋ ಮಾಡಲ್ಲ, ಟ್ರೆಂಡ್ ಹುಟ್ಟುಹಾಕ್ತೀನಿ ಎಂದ ಉಪ್ಪಿ ದಿ ಗರ್ಲ್‌ಫ್ರೆಂಡ್ ಟೀಸರ್ ರಶ್ಮಿಕಾ ಮಂದಣ್ಣ ಅಭಿನಯದ ದಿ ಗರ್ಲ್ ಫ್ರೆಂಡ್ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಇದನ್ನ ವಿಜಯ್ ದೇವರಕೊಂಡ ರಿಲೀಸ್ ಮಾಡ್ತಿದ್ದಾರೆ. ಡಿಸೆಂಬರ್-09 ರಂದು ಬೆಳಗ್ಗೆ 11,07 ಕ್ಕೆ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಈ ವಿಚಾರವನ್ನ ಸಿನಿಮಾ ತಂಡವೇ ಅಧಿಕೃತವಾಗಿಯೇ ಹೇಳಿಕೊಂಡಿದೆ. ಹಾಗೇನೆ ವಿಜಯ್ ದೇವರಕೊಂಡ ದಿ ಗರ್ಲ್‌ಫ್ರೆಂಡ್ ಅನ್ನ ಜಗತ್ತಿಗೆ ಪರಿಚಯಸಿಸುತ್ತಿದ್ದಾರೆ ಅಂತಲೇ ಇಂಟ್ರಸ್ಟಿಂಗ್ ಆಗಿಯೇ ಹೇಳಿಕೊಂಡಿದೆ. ದಿ ಗರ್ಲ್‌ಫ್ರೆಂಡ್ ಮಾಹಿತಿ ದಿ ಗರ್ಲ್‌ಫ್ರೆಂಡ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣಗೆ ಕನ್ನಡದ ನಟ ದೀಕ್ಷಿತ್ ಶೆಟ್ಟಿ ಜೋಡಿ ಆಗಿದ್ದಾರೆ. ಡೈರೆಕ್ಟರ್ ರಾಹುಲ್ ರವಿಂದ್ರನ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಹೆಶಾಮ್ ಅಬ್ದುಲ್ ವಹಾಬ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಈಗಾಗಲೇ ಈ ಚಿತ್ರದ ಮೊದಲ ಟೀಸರ್ ಗಮನ ಸೆಳೆದಿದೆ. ಅಷ್ಟೇ ಇಂಟ್ರಸ್ಟಿಂಗ್ ಫೀಲ್ ಕೂಡ ಕೊಟ್ಟಿದೆ. ಆದರೆ, ಈಗ ರಿಲೀಸ್ ಆಗುತ್ತಿರೋ ಟೀಸರ್ ಹೇಗಿದೆ ಅನ್ನೋ ಪ್ರಶ್ನೆ ಕೂಡ ಇದೆ. ಅದರ ಬೆನ್ನಲ್ಲಿಯೇ ಕುತೂಹಲ ಕೂಡ ಜಾಸ್ತಿ ಇದೆ ಅಂತಲೂ ಹೇಳಬಹುದು. ದಿ ಗರ್ಲ್‌ಫ್ರೆಂಡ್ ರಿಲೀಸ್ ದಿ ಗರ್ಲ್‌ಫ್ರೆಂಡ್ ಚಿತ್ರ ಮುಂದಿನ ವರ್ಷ ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿದೆ. ಹಾಗೇನೆ ಜನರಲ್ಲಿ ವಿಶೇಷವಾಗಿಯೇ ಇಂಟ್ರಸ್ಟ್ ಕೂಡ ಮೂಡಿಸಿದೆ ಅಂತಲೇ ಹೇಳಬಹುದು. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.