ಡಾ ಜಿ ಪರಮೇಶ್ವರ್, ಗೃಹ ಸಚಿವ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ (Renukaswamy Case) ಜೈಲು ಸೇರಿರುವ ದರ್ಶನ್ ಜೈಲಿನಲ್ಲೂ ಬಿಂದಾಸ್ ಆಗಿದ್ದಾರೆ. ದರ್ಶನ್‌ಗೆ ಜೈಲಲ್ಲಿ ರಾಜಾತಿಥ್ಯದ ವಿಡಿಯೋ ವೈರಲ್ ಆಗ್ತಿದ್ದಂತೆ ಪರಪ್ಪನ ಅಗ್ರಹಾರ ಜೈಲಿಗೆ (Parappana Agrahara Jail) ಪೊಲೀಸ್ ಅಧಿಕಾರಿಗಳ ದೌಡಾಯಿಸಿ ವಿಐಪಿ ವ್ಯವಸ್ಥೆ ಬಗ್ಗೆ ಆಂತರಿಕ ತನಿಖೆ ನಡೆಸಿದ್ದರು. ಕಾರಾಗೃಹ IGP ಆನಂದ್ ರೆಡ್ಡಿ, DIG ಸೋಮಶೇಖರ್ ನೇತೃತ್ವದ ತಂಡ, ದರ್ಶನ್, ವಿಲ್ಸನ್ ಗಾರ್ಡನ್ ನಾಗ (Wilson Garden Naga) ಕುಳಿತಿದ್ದ ಸ್ಥಳಗಳಲ್ಲಿ ಪರಿಶೀಲನೆ ಮಾಡಿದ್ದರು. ವಿಡಿಯೋ ಕಾಲ್‌ಗೆ ಅವಕಾಶ ಮಾಡಿಕೊಟ್ಟವರ ಬಗ್ಗೆಯೂ ವಿಚಾರಣೆ ನಡೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಉನ್ನತ ಮಟ್ಟದ ಅಧಿಕಾರಿಗಳ ಮೇಲೆ ಕ್ರಮ ಏಕೆ ಇಲ್ಲ? ಇದರ ನಡುವೆಯೇ ಗೃಹ ಸಚಿವ ಪರಮೇಶ್ವರ್ ಅವರು, ಪರಪ್ಪನ ಅಗ್ರಹಾರ ಏಳು ಮಂದಿ ಜೈಲಾಧಿಕಾರಿಗಳನ್ನು ಅಮಾನತು ಮಾಡುತ್ತಿದ್ದೇವೆ ಎಂದು ಘೋಷಣೆ ಮಾಡಿದ್ದರು. ಆದರೆ ಪರಪ್ಪರ ಅಗ್ರಹಾರದ ಸಣ್ಣ ಅಧಿಕಾರಿಗಳ ಮೇಲೆ ಮಾತ್ರ ಕೈಗೊಳ್ಳಲಾಗಿದೆ, ಉನ್ನತ ಅಧಿಕಾರಿಗಳ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹಿರಿಯ ಅಧಿಕಾರಿಗಳ ಬಗ್ಗೆಯೂ ವರದಿ ಕೇವಲ ಕೆಳಮಟ್ಟದ ಅಧಿಕಾರಿಗಳನ್ನು ಅಮಾನತು ಮಾಡಿ ಉನ್ನತ ಅಧಿಕಾರಿಗಳನ್ನ ವರ್ಗಾವಣೆ ಮಾಡ್ತೀವಿ ಅನ್ನೋದು ಎಷ್ಟು ಸರಿ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಪರಮೇಶ್ವರ್ ಅವರು, ಘಟನೆ ಆಗಿದೆ ಅದನ್ನು ನಾವು ಸಮರ್ಥನೆ ಮಾಡುತ್ತಿಲ್ಲ, ಈಗ ಪ್ರಕರಣದ ತನಿಖೆ ಆಗ್ತಿದೆ. ಅಲ್ಲದೇ ಹಿರಿಯ ಅಧಿಕಾರಿಗಳ ಬಗ್ಗೆಯೂ ವರದಿ ಕೇಳಿದ್ದೇನೆ. ವರದಿ ಬಂದ ಕೂಡಲೇ ಅವರು ಭಾಗಿಯಾಗಿದ್ದಾರೆ ಅಂತ ಗೊತ್ತಾದರೆ ಅವರನ್ನು ಅಮಾನತು ಮಾಡ್ತೇವೆ. ತನಿಖೆಯಲ್ಲಿ ಎಲ್ಲವೂ ಬೆಳಕಿಗೆ ಬರುತ್ತೆ, ಆಗ ಮುಂದಿನ ಕ್ರಮ ಆಗುತ್ತೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: R K Beach: ಬರೋಬ್ಬರಿ 400 ಮೀಟರ್ ಹಿಂದಕ್ಕೆ ಹೋದ ಸಮುದ್ರ; ಭಾರತದ ಖ್ಯಾತ ಬೀಚ್ನಲ್ಲಿ ಅಚ್ಚರಿಯ ಘಟನೆ! ಸೌಲಭ್ಯ ಸಿಗುವುದರಿಂದ ಲೋಕಾಭಿರಾಮವಾಗಿದ್ದಾರೆ ಇತ್ತ ಜೈಲಲ್ಲಿ ದರ್ಶನ್ ಗೆ ರಾಜಾತಿಥ್ಯ ಪ್ರಕರಣ ಅಧಿಕಾರಿ ಸಿಬ್ಬಂದಿಗಳ ಅಮಾನತು ಹಿನ್ನಲೆಯಲ್ಲಿ ರೇಣುಕಸ್ವಾಮಿ ಸಂಬಂಧಿ ಷಡಕ್ಷರಯ್ಯ ಪ್ರತಿಕ್ರಿಯೆ ನೀಡಿದ್ದು, ಜೈಲಲ್ಲಿ ತಪ್ಪು ಮಾಡಿದವರಿಗೆ ಅಮಾನತು ಮಾಡಿದ್ದಾಗಿ ಗೃಹ ಸಚಿವರು ಹೇಳಿದ್ದಾರೆ. ತಪ್ಪು ಮಾಡಿದವರು ತಪ್ಪೇ ಮಾಡದಂತೆ ನೋಡಿಕೊಳ್ಳಬೇಕು. ಸೆರೆಮನೆಯಲ್ಲಿ ಆರೋಪಿಗಳಿಗೆ ಆತಿಥ್ಯ ಸಿಕ್ಕರೆ ಮನ ಮನಪರಿವರ್ತನೆ ಹೇಗೆ ಆಗುತ್ತೆ? ಮನಪರಿವರ್ತನೆಗೆ ಇರುವ ಜೈಲು ಅರಮನೆ ಆಗಬಾರದು, ಸೆರೆ ಮನೆಯಾಗೆ ಇರಬೇಕು. ಸೆರೆಮನೆಯ ವ್ಯವಸ್ಥೆ ಇದ್ದಿದ್ದರೆ ಅವರಿಗೆ ಅಳುಕಿರುತ್ತಿತ್ತು. ಅಲ್ಲಿ ಎಲ್ಲಾ ಸೌಲಭ್ಯ ಸಿಗುವುದರಿಂದ ಲೋಕಾಭಿರಾಮವಾಗಿದ್ದಾರೆ. ಇದು ಬಂಧೀಖಾನೆ ಅಧಿಕಾರಿಗಳ ಲೋಪದಿಂದ ಆಗಿದೆ. ಇದು ಅವರಿಂದ ತನಿಖೆ ಆಗದೆ, ನ್ಯಾಯಾಂಗದ ಮೂಲಕ ತನಿಖೆ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ. (ವರದಿ: ಹೆಬ್ಬಾಕ ತಿಮ್ಮೇಗೌಡ, ನ್ಯೂಸ್18 ಕನ್ನಡ, ಬೆಂಗಳೂರು) None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.