NEWS

Arun Puthila: ನಾಚಿಕೆ ಬಿಟ್ಟವರೇ ರಾಜಕಾರಣಿ! ಮಹಿಳೆ ಜೊತೆ ಹೀಗೆ ಮಾತನಾಡಿದ್ರಾ ಅರುಣ್ ಕುಮಾರ್ ಪುತ್ತಿಲ?

ಅರುಣ್ ಕುಮಾರ್ ಪುತ್ತಿಲ ಮಂಗಳೂರು: ಕರಾವಳಿ ಭಾಗದ ಜಿಲ್ಲೆಗಳಲ್ಲಿ ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ (BJP Leader Arun Kumar Puthila) ಅವರದ್ದೆನ್ನಲಾದ ರಾಜಕೀಯ (Politics) ಸಂಬಂಧಿತ ಸಂಭಾಷಣೆಯ ಆಡಿಯೋವೊಂದು ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ. ಅದರಲ್ಲಿ ಮಹಿಳೆಯೊಂದಿಗೆ ಮಾತನಾಡಿರುವ ಪುತ್ತಿಲ ಬಿಜೆಪಿ (BJP) ಸೇರ್ಪಡೆ ಮತ್ತು ರಾಜಕೀಯದ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿದ್ದಾರೆ ಸದ್ಯ ಮಹಿಳೆ ಜೊತೆಗಿನ ಆಡಿಯೋ (Audio) ಫುಲ್ ವೈರಲ್ (Viral) ಆಗಿದ್ದು. ರಾಜ್ಯ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ. ವಿಧಾನಸಭೆಯಲ್ಲಿ ಬಿಜೆಪಿಗೆ ಸೆಡ್ಡು ಅರುಣ್ ಕುಮಾರ್ ಪುತ್ತಿಲ ಅವರ ಹೆಸರು ರಾಜ್ಯದ ಕರಾವಳಿ ಭಾಗದಲ್ಲಿ ಸಖತ್ ಫೇಮಸ್, ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ತಮಗೆ ಬಿಜೆಪಿ ಟಿಕೆಟ್ ನೀಡಿಲ್ಲವೆಂದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುತ್ತಿಲ ಅವರು ಬಿಜೆಪಿಯ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಮಾತ್ರವಲ್ಲ ಗೆಲುವಿನ ಸಮೀಪಕ್ಕೆ ಬಂದು ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ್ದರು. ಸೋತರೂ ಕೂಡ ದೃತಿಗೆಡದೆ ತಮ್ಮದೇ ಆದ ವರ್ಚಸ್ಸನ್ನು ಕರಾವಳಿ ಭಾಗದಲ್ಲಿ ಹೊಂದಿದ್ದರು. ಒಮ್ಮೆ ಬಿಜೆಪಿಯಿಂದ ದೂರ ಉಳಿದಿದ್ದ ಪುತ್ತಿಲ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ರಾಜಕೀಯದಲ್ಲಿ ನಾಚಿಕೆ, ಹೇಸಿಗೆ ಇಲ್ಲಾ ಸದ್ಯ ಅವರೀಗ ಬಿಜೆಪಿ ನಾಯಕಿಯೊಬ್ಬರ ಬಳಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ. ನೀವು ಬಿಜೆಪಿಗೆ ಸೇರಿದ್ದು ನಾಚಿಕೆ ಆಗಲಿಲ್ವ ಎಂದು ಮಹಿಳೆ ಕೇಳಿದ್ದಾಳೆ. ಆದರೆ, ಇದಕ್ಕೆ ಉತ್ತರಿಸಿದ ಅರುಣ್ ಪುತ್ತಿಲ ಅವರದ್ದೆನ್ನಲಾದ ಧ್ವನಿ ಹೋಲುವ ವ್ಯಕ್ತಿ ‘ರಾಜಕೀಯದಲ್ಲಿ ನಾಚಿಗೆ, ಹೇಸಿಗೆ ಥೂ ಅದೆಲ್ಲಾ ಇಲ್ಲ’, ಅದೆಲ್ಲಾ ಬಿಟ್ಟವರೇ ಪೊಲಿಟೀಶಿಯನ್. ಮಾನ ಮರ್ಯಾದೆ ಎರಡನ್ನೂ ಬಿಡದಿದ್ದರೇ ಉನ್ನತ ಹುದ್ದೆಗೆ ಹೋಗಲು ಸಾದ್ಯವಿಲ್ಲ ಎಂದು ಆ ಮಹಿಳೆಯ ಜೊತೆ ಹೇಳಿದ್ದಾರೆ. ₹3.5 ಕೋಟಿ ಪಡೆದ ಕುರಿತು ಪ್ರಸ್ತಾಪ ಮಾನ ಮರ್ಯದೆ ಬಿಟ್ಟಿದ್ದರಿಂದಲೇ ಪರಿವಾರದ ಜನ ದೊಡ್ಡವರಾಗಿದ್ದಾರೆ. ಇನ್ನೂ ಪರಿವಾರದ ಜನ 3.5 ಕೋಟಿ ರೂ. ಹಣ ಪಡೆದಿದ್ದಾರೆ ಅನ್ನೊ ಬಗ್ಗೆಯೂ ಮಾತನಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಮಹಿಳೆ ‘ಸೌಶಯಾತ್ಮಾವೀ ಇನಶ್ಯತೀ’ ಎಂಬ ಸಂಸ್ಕೃತ ಶ್ಲೋಕ ಹೇಳಿದ್ದಾಳೆ. ಅಂದರೆ ಸಂಶಯ ಪಟ್ಟವನು ನಾಶವಾಗುತ್ತಾನೆ. ನೀವು ನಾಶ ಆದ್ರಿ ಎಂದು ಮಹಿಳೆ ಮಾತನಾಡಿದ್ದಾಳೆ. ರೆಕಾರ್ಡ್ ಮಾಡಿ ಕಡ್ಡಿ ಇಡುವುದಾಗಿ ತಿಳಿಸಿದ ಮಹಿಳೆ ಇನ್ನೂ ಅರುಣ್ ಪುತ್ತಿಲ ಅವರದ್ದೆನ್ನಲಾದ ವೈರಲ್ ಆಡಿಯೋದಲ್ಲಿ, ಅವರು ಹಣ ತೆಗೆದುಕೊಂಡಿದ್ದರ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇನ್ನು ಬಿಜೆಪಿ ನಾಯಕಿ ನೀವು ಬೆಂಗಳೂರಿನಲ್ಲಿ ಒಂಟಿಯಾಗಿ ಸಿಕ್ಕಾಗ ಹೆಚ್ಚಿನ ವಿಚಾರವನ್ನು ಮಾತನಾಡುವುದಾಗಿ ಹೇಳಿದ್ದಾರೆ. ಬಳಿಕ ಆ ಮಹಿಳೆ ಈಗ ಆಡಿಯೋ ರೆಕಾರ್ಡ್ ಮಾಡಿ ನಿಮಗೆ ಇವತ್ತು ಕಡ್ಡಿ ಇಟ್ಟಿದ್ದೇನೆ ಎಂದು ಹೇಳಿದ್ದಾರೆ. ವರದಿ: ಅಜಿತ್ ಕುಮಾರ್, ನ್ಯೂಸ್ 18 ಕನ್ನಡ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.