ಹನುಮನ ಜನ್ಮಸ್ಥಳ ಅಂಜನಾದ್ರಿ ಕೊಪ್ಪಳ: ರಾಮನ ಭಂಟ ಹನುಮನ ಜನ್ಮಸ್ಥಳದಲ್ಲಿ (Hanuman Birth Place) ಮತ್ತೆ ಧರ್ಮ ಯುದ್ಧ ಶುರುವಾಗಿದೆ. ವಿದ್ಯುತ್ ಕಂಬದಲ್ಲಿ (Electric Pole) ದೇವರ ಚಿಹ್ನೆಗಳನ್ನ ಹಾಕಿದ್ದಕ್ಕೆ ಎಸ್ಡಿಪಿಐ (SDPI) ಕೆರಳಿ ಕೆಂಡವಾಗಿದೆ. ನಗರಸಭೆ ಅಧಿಕಾರಿಗಳಿಗೆ ದೂರು ಕೊಡ್ತಿದ್ದಂತೆ, ಹಿಂದೂ ಸಂಘಟನೆಯವ್ರು (Hindu Activist) ನಿಗಿನಿಗಿ ಕೆಂಡಕಾರ್ತಿದ್ದಾರೆ. ವಿದ್ಯುತ್ ಕಂಬದಲ್ಲಿ ಬಿಲ್ಲು, ಬಾಣ, ಗದೆ! ಕೊಪ್ಪಳ ಜಿಲ್ಲೆಯ ಗಂಗಾವತಿ ಮೊದಲೇ ಹೇಳಿ ಕೇಳಿ ಕೋಮು ಸೂಕ್ಷ್ಮ ಪ್ರದೇಶ. ಇದೇ ಜಾಗದಲ್ಲೇ ಈಗ ಧರ್ಮ ದಂಗಲ್ ಶುರುವಾಗಿದೆ. ಇತ್ತೀಚಿಗೆ ಕೆಆರ್ಡಿಲ್ನಿಂದ ರಸ್ತೆ ಅಗಲೀಕರಣ ಮಾಡಿ ಒಂದಿಷ್ಟು ಅಭಿವೃದ್ಧಿ ಕಾರ್ಯ ಮಾಡಿದೆ. ಈ ವೇಳೆ ರಾಣಾ ಪ್ರತಾಪಸಿಂಹ್ ವೃತ್ತದಿಂದ, ಜುಲೈ ನಗರದ ಸರ್ಕಲ್ ವರೆಗೆ ಹಾಕಿರೋ ವಿದ್ಯುತ್ ಕಂಬಗಲ್ಲಿ ವೆಂಕಟೇಶ್ವರನ ಚಿಹ್ನೆ, ಆಂಜನೇಯ ಗದೆ, ಶ್ರೀರಾಮನ ಬಿಲ್ಲನ್ನ ಅಳವಡಿಸಲಾಗಿದೆ. ಇದು SDPI ಕಾರ್ಯಕರ್ತರ ಕಣ್ಣು ಕೆಂಪಗಾಗಿಸಿದೆ. ಈ ಕುರಿತು ಮಾತನಾಡಿರುವ SDPI ತಾಲೂಕು ಕಾರ್ಯದರ್ಶಿ ಗಂಗಾವತಿ ಚಾಂದ ಸಲ್ಮಾನ್, ಕೆಆರ್ಡಿಎಲ್ ಎಂಬ ಸಂಸ್ಥೆಯ ಅಡಿಯಲ್ಲಿ ರಸ್ತೆಯ ಅಗಲೀಕರಣ ಕಾಮಗಾರಿ ನಡೆದಿದೆ. ಈ ವೇಳೆ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದಾರೆ, ಅದರಲ್ಲಿ ಕೆಲವು ಚಿಹ್ನೆಗಳನ್ನು ಅಳವಡಿಸಿ ಕೆಲವರು ಕೋಮು ಸಂಘರ್ಷಕ್ಕೆ ಕಾರಣವಾಗ್ತಿದ್ದಾರೆ. ಅಂತಹವರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. SDPI ಕಾರ್ಯಕರ್ತರು ಸಿಡಿದೇಳ್ತಿದ್ದಂತೆ ಹಿಂದೂ ಮುಖಂಡರು ಸಹ ತಿರುಗೇಟು ಕೊಡ್ತಿದ್ದಾರೆ. ಹನುಮನ ಜನ್ಮಸ್ಥಳದಲ್ಲಿ ಹಿಂದೂ ದೇವರ ಚಿಹ್ನೆ ಹಾಕಿದರೆ ತಪ್ಪೇನು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ, ಈಗ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಇದು ನಮ್ಮ ವ್ಯಾಪ್ತಿಯಲ್ಲಿ ಇದೇ, ಆದರೆ ಫಂಡ್ ನಮ್ಮದಲ್ಲ. ಈಗ ಅಳವಡಿಕೆ ಮಾಡಿರುವುದನ್ನು ಏನು ಮಾಡೋದಕ್ಕೆ ಆಗೋದಿಲ್ಲ ಅಂತ ಹೇಳಿದ್ದೇವೆ ಎಂದು ಹಿಂದೂ ಕಾರ್ಯಕರ್ತರೊಂದಿಗೆ ಮಾತನಾಡಿದ ಆಡಿಯೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: Food Startup: ಅಮ್ಮನ ಕೈ ರುಚಿ ರೆಸಿಪಿ; ಸ್ಟಾರ್ಟ್ಅಪ್ ಆರಂಭಿಸಿ ₹12 ಲಕ್ಷ ಗಳಿಸುತ್ತಿರೋ ಮಹಿಳೆ! ಒಟ್ಟಿನಲ್ಲಿ ಧರ್ಮಯುದ್ಧ ನಗರಸಭೆ ಅಂಗಳಕ್ಕೆ ಹೋಗಿದ್ದು, ಎಲ್ಲಾ ವಿದ್ಯುತ್ ಕಂಬಗಳನ್ನ ತೆರವು ಮಾಡ್ತಾರಾ? ಅಥವಾ ಹಾಗೆ ಬಿಡ್ತಾರಾ? ಅನ್ನೋದೇ ಸದ್ಯದ ಕುತೂಹಲವಾಗಿದೆ. (ವರದಿ: ಶರಣಪ್ಪ ಬಾಚಲಾಪುರ, ನ್ಯೂಸ್18 ಕನ್ನಡ, ಕೊಪ್ಪಳ) None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.