ಸಿಎಂ ಸಿದ್ದರಾಮಯ್ಯ (ಸಾಂದರ್ಭಿಕ ಚಿತ್ರ) ಬೆಂಗಳೂರು: ಮುಖ್ಯಮಂತ್ರಿಗಳ (CM Siddaramaiah) ವಿರುದ್ಧ ರಾಜ್ಯಪಾಲರು ತನಿಖೆಗೆ ಸಮ್ಮತಿ ಕೊಟ್ಟಿದ್ದಾರೆ. ಈಗ ಬಿಜೆಪಿ, ಜೆಡಿಎಸ್ ಸರ್ಕಾರದ (BJP, JDS Govt) ಹಗರಣಗಳನ್ನ ಕಾಂಗ್ರೆಸ್ (Congress) ಟಾರ್ಗೆಟ್ ಮಾಡಿದೆ. ಕುಮಾರಸ್ವಾಮಿ (HD Kumaraswamy), ನಿರಾಣಿ, ಜೊಲ್ಲೆ ಸೇರಿದಂತೆ ಅನೇಕರ ಹಳೇ ಕೇಸ್‌ಗಳಿಗೆ ಮರುಜೀವ ನೀಡಲು ನಿರ್ಧಾರ ಆಗಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಮುಡಾ ಹಗರಣದಲ್ಲಿ ತನಿಖೆಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಅದು ಮುಖ್ಯಮಂತ್ರಿಗಳ ಮೇಲೆ ದೂರು ಕೊಟ್ಟ 1 ತಿಂಗಳ ಒಳಗೇ, ಇದು ಸಹಜವಾಗೇ ಕಾಂಗ್ರೆಸ್‌ನವ್ರ ಪಿತ್ತ ನೆತ್ತಿಗೇರಿಸಿದೆ. ರಾಜ್ಯಪಾಲರು ಬಿಜೆಪಿ ಕೈಗೊಂಬೆ, ಕೇಂದ್ರದ ಕೈಗೊಂಬೆ ಅಂತೆಲ್ಲಾ ನಿಂದಿಸ್ತಿದ್ದಾರೆ. ಎಚ್‌ಡಿಕೆ ವಿರುದ್ಧ ಲೋಕಾ ಮನವಿ, ಯಾಕೆ ಗವರ್ನರ್ ಅನುಮತಿಸಿಲ್ಲ ಇದರ ಜೊತೆಗೆ ಕುಮಾರಸ್ವಾಮಿಯವರ ಮೇಲಿರುವ ಗಣಿ ಹಗರಣದ ತನಿಖೆಗೆ ಲೋಕಾಯುಕ್ತರು ಅನುಮತಿ ಕೇಳಿದರೂ ಗವರ್ನರ್ ಒಪ್ಪಿಗೆ ನೀಡಿಲ್ಲ. ಶಶಿಕಲಾ ಜೊಲ್ಲೆ ಸಚಿವೆಯಾಗಿದ್ದಾಗ ನಡೆಸಿದ ಮೊಟ್ಟೆ ಹಗರಣದ ತನಿಖೆಗೆ ಯಾಕೆ ಅನುಮತಿ ಕೊಟ್ಟಿಲ್ಲ. ಮುರುಗೇಶ್ ನಿರಾಣಿ ಕೈಗಾರಿಕಾ ಸಚಿವರಾಗಿದ್ದಾಗ ನೇಮಕಾತಿ ಅಕ್ರಮ ನಡೆದಿದೆ ಆ ಬಗ್ಗೆ ಅನುಮತಿ ಕೋರಿರುವ ಕಡತಕ್ಕೆ ಯಾಕೆ ಅನುಮತಿ ಕೊಟ್ಟಿಲ್ಲ ಅಂತ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳಲ್ಲಿ ಸಾಲು ಸಾಲು ಪೋಸ್ಟ್‌ಗಳು ಪೋಸ್ಟ್ ಆಗ್ತಿದೆ. ಅಷ್ಟೇ ಅಲ್ಲ ಸಚಿವ ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯನವರೂ ಇದೇ ಮೈತ್ರಿಕೂಟದ ಮೇಲಿರುವ ಹಗರಣದ ಆರೋಪಗಳನ್ನ ಕೆಣಕಿ ರಾಜ್ಯಪಾಲರ ಮೇಲೆ ವಾಗ್ದಾಳಿ ಮಾಡಿದ್ದರು. ಇದನ್ನೂ ಓದಿ: Tungabhadra Dam: TB ಡ್ಯಾಂ ಕ್ರಸ್ಟ್ ಗೇಟ್ ಅಳವಡಿಕೆ ಸಕ್ಸಸ್; ಕನ್ಹಯ್ಯ ನಾಯ್ಡು ತಂಡದ ಪರಿಶ್ರಮಕ್ಕೆ ಶ್ಲಾಘನೆ ಎಚ್‌ಡಿಕೆ, ಜೊಲ್ಲೆ ವಿರುದ್ದ ಇದುವರೆಗೂ ಪ್ರಾಸಿಕ್ಯೂಷನ್ ಕೊಟ್ಟಿಲ್ಲ, ದಾಖಲೆಗಳ ಸಮೇತ ಎಚ್‌ಡಿಕೆ ವಿರುದ್ದ ಪ್ರಾಸಿಕ್ಯೂಷನ್ ಕೋರಿದರೂ ಕೊಟ್ಟಿಲ್ಲ. ಲೋಕಾಯುಕ್ತದವರೆ ಎಚ್‌ಡಿಕೆ ವಿರುದ್ದ ದಾಖಲೆ ಸಮೇತ ಕೇಳಿದ್ದಾರೆ. ಕುಮಾರಸ್ವಾಮಿ ಲೂಟಿ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ ಅಂತ ಹೇಳಿದ್ದಾರೆ. ನನ್ನ ಮುಡಾ ಪ್ರಕರಣದಲ್ಲಿ ಯಾವುದೇ ದಾಖಲಾಗಿಲ್ಲ, ಯಾವುದೇ ತನಿಖೆ ನಡೆದಿಲ್ಲ. ಸ್ವಾತಂತ್ರ್ಯ ಬುದ್ಧಿಯಿಂದ ರಾಜ್ಯಪಾಲರು ಪ್ರಾಸಿಕ್ಯೂಷನ್ ಕೊಟ್ಟಿಲ್ಲ, ಅಶೋಕ, ಕುಮಾರಸ್ವಾಮಿ, ವಿಜಯೇಂದ್ರ ಮಾತುಕೇಳಿ ಕೊಟ್ಟಿದ್ದಾರೆಂದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಸಿಎಂ ಆರೋಪಿಸಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಾಯಿ ಮಿನರಲ್ಸ್ ಅನ್ನೋ ನಕಲಿ ಕಂಪನಿಗೆ 550 ಎಕರೆ ಜಮೀನು ಮಂಜೂರು ಮಾಡಿದ್ದಾರೆ. ಅಕ್ರಮ ಅನ್ನೋದಕ್ಕೆ ಸಾಕ್ಷಿಯಿದೆ ಅನ್ನೋದು ಸಿಎಂ ವಾದ. ಆದರೆ 2023ರಲ್ಲಿ ಸಿದ್ದರಾಮಯ್ಯ, ಡಿಕೆಶಿ ಸರ್ಕಾರ ಅಧಿಕಾರಕ್ಕೆ ಬಂದಾಗ ಬೇಕಂತೆ ರಾಜ್ಯಪಾಲರಿಗೆ ಪತ್ರ ಹಾಕಿಸಿದ್ದು ಅನ್ನೋದು ಜೆಡಿಎಸ್‌ನವ್ರ ವಾದ. ಆರೋಪ ಏನಾದರೂ ಇರ್ಲಿ, 3 ಪಕ್ಷದವರೂ ಹಗರಣ ಮಾಡಿದ್ದಾರೆ ಅನ್ನೋದನ್ನ ಅವರೇ ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸ್ತಾ ಒಪ್ಪಿಕೊಳ್ತಿದ್ದಾರೆ. ಇದನ್ನೂ ಓದಿ: Vulture: ಕುತ್ತಿಗೆಯಲ್ಲಿ ಚಿಪ್ನೊಂದಿಗೆ ಬಾಂಗ್ಲಾದಿಂದ ಭಾರತಕ್ಕೆ ಬಂದ ರಣಹದ್ದು; ಕಾಲಿನ ಮೇಲೆ ವಿಶೇಷ ಸಂದೇಶ! ಅಧಿಕಾರದಲ್ಲಿದ್ದಾಗ ಹಗರಣದ ಆರೋಪ ಹೊತ್ತವರಲ್ಲಿ ಸಿದ್ದರಾಮಯ್ಯ ಮಾತ್ರ ಮೊದಲಿಗರಲ್ಲ, ಅನೇಕ ಮಂತ್ರಿಗಳು. ಸಚಿವರು ಪ್ರಾಸಿಕ್ಯೂಷನ್ ಎದುರಿಸಿದ್ದಾರೆ. ಕೆಲವರು ಕುರ್ಚಿ ಕಳ್ಕೊಂಡಿದ್ದಾರೆ. ಪ್ರಾಸಿಕ್ಯೂಷನ್ ಬಲೆಗೆ ಬಿದ್ದವರು 1. ರಾಮಕೃಷ್ಣ ಹೆಗಡೆ : ಖಾಸಗಿ ವ್ಯಕ್ತಿಗಳಿಗೆ ಭೂಮಿ ಪರಭಾರೆ ಮಾಡಿದ ಆರೋಪ, ಅಂದು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದರು. 2. ಎಚ್.ಡಿ.ದೇವೇಗೌಡ : ಮುಡಾ ನಿವೇಶನ ಹಂಚಿಕೆ HDD ವಿರುದ್ಧ ಪ್ರಾಸಿಕ್ಯೂಷನ್, ಅಂದು ಹೆಚ್.ಡಿ ದೇವೇಗೌಡರು ಮಂತ್ರಿಗಳಾಗಿದ್ದರು . 3. ಜೀವಿಜಯ : ಅರಣ್ಯ ಇಲಾಖೆಯ ಹಗರಣದಲ್ಲಿ ಪ್ರಾಸಿಕ್ಯೂಷನ್, ಜೀವಿಜಯ ಅವರು ಅಂದು ಮಂತ್ರಿಸ್ಥಾನದಲ್ಲಿದ್ದರು. 4. ಬಿ.ಎಸ್.ಯಡಿಯೂರಪ್ಪ : ಅಕ್ರಮ ಗಣಿಗಾರಿಕೆ, ರಾಚೇನಹಳ್ಳಿ ಡಿನೋಟಿಫೈ ಪ್ರಕರಣ, ಪ್ರಾಸಿಕ್ಯೂಷನ್‌ಗೆ ಸಿಲುಕಿ ಸಿಎಂ ಸ್ಥಾನ ಕಳ್ಕೊಂಡು ಜೈಲುಪಾಲು. ಹೇಳುತ್ತಾ ಹೋದರೆ ಇನ್ನೂ ಅನೇಕ ಪ್ರಕರಣಗಳಿವೆ. ಆದರೆ ಈಗಿರೋದು ಸಿದ್ದರಾಮಯ್ಯನವರ ಮುಡಾ ಪ್ರಕರಣ. ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಗವರ್ನರ್ ತಥಾಸ್ತು ಅಂತೇಳಿದ್ದಾರೆ. ಈಗ ತನಿಖೆ ಹೇಗೆ? ಯಾವಾಗ? ಯಾರಿಂದ ನಡೆಯುತ್ತೆ ಅನ್ನೋದಷ್ಟೇ ಮುಖ್ಯ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.