NEWS

Fraud Case: ಐಶ್ವರ್ಯಾ ಗೌಡ ಮತ್ತೆ ಅರೆಸ್ಟ್, ಗಂಡನೂ ಲಾಕ್! ಬೆಳಗ್ಗೆ ಧಮ್ಕಿ, ಸಂಜೆ ಅಂದರ್!

ಐಶ್ವರ್ಯ ಅರೆಸ್ಟ್‌ ಬೆಂಗಳೂರು: ಕೋಟ್ಯಂತರ ರೂಪಾಯಿ ಚಿನ್ನ ವಂಚನೆ ಕೇಸ್‌ನಲ್ಲಿ (Fraud Case) ಸಿಲುಕಿಕೊಂಡಿರುವ ಆರೋಪಿ ಐಶ್ವರ್ಯ ಗೌಡ ಅವರ ಬಗ್ಗೆ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ. ಮೊದಲಿಗೆ ಐಶ್ವರ್ಯ ಗೌಡ ಮಾಜಿ ಸಂಸದ ಡಿ.ಕೆ.ಸುರೇಶ್‌ (DK Suresh) ಅವರ ತಂಗಿ ಎಂದು ಹೇಳಿಕೊಂಡು ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಇನ್ನು ಇಂದು ಬೆಳಿಗ್ಗೆಯಿಂದ ಶಿಲ್ಪಾ ಗೌಡ ಮತ್ತೊಂದು ಆಡಿಯೋ ವೈರಲ್‌ (Audio Viral) ಆಗಿದ್ದು. ಈ ಆಡಿಯೋದಲ್ಲಿ ಶಿಲ್ಪಾ ಗೌಡಗೆ (Shilpa Gowda) ಧಮ್ಕಿ ಹಾಕಿರುವ ವಿಚಾರ ಬಹಿರಂಗವಾಗಿತ್ತು. ಇದೀಗ ಶಿಲ್ಪಾ ಗೌಡ ನೀಡಿದ ದೂರಿನನ್ವಯ ಐಶ್ವರ್ಯಾ ಗೌಡರನ್ನು ಆರ್ ಆರ್ ನಗರ ಪೊಲೀಸರು (RR Nagar Police) ಬಂಧಿಸಿದ್ದಾರೆ. ಐಶ್ವರ್ಯಾ ಗೌಡ ಮತ್ತೆ ಅರೆಸ್ಟ್‌! ಮಾಜಿ ಸಂಸದ ಡಿ ಕೆ ಸುರೇಶ್ (DK Suresh) ತಂಗಿ ಎಂದು ಹೇಳಿಕೊಂಡು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದೆ. ಐಶ್ವರ್ಯ ಗೌಡ (Aishwarya Gowda) 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ (Gold) ಖರೀದಿಸಿ ವಂಚನೆ ಮಾಡಿದ್ದಾರೆ ಎಂದು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ (Varahi World Gold Shop)​ ಮಾಲೀಕರು ದೂರು ನೀಡಿದ್ದರು. ಇದನ್ನೂ ಓದಿ: ನಗದು, ಚಿನ್ನಾಭರಣ ಕೊಟ್ಟವರಿಗೆ ಐಶ್ವರ್ಯಗೌಡ ಅವಾಚ್ಯ ಶಬ್ದಗಳಿಂದ ಧಮ್ಕಿ! ವಂಚಕಿಯ ಮತ್ತೊಂದು ಸ್ಫೋಟಕ ಆಡಿಯೋ ಲಭ್ಯ! ಈ ದೂರಿನನ್ವಯ ಐಶ್ವರ್ಯಾ ಗೌಡ ಮತ್ತು ಪತಿ ಹರೀಶ್‌ನನ್ನು ಬಂಧಿಸಲಾಗಿತ್ತು. ಆದ್ರೆ ಕೆಲದಿನಗಳ ಹಿಂದಷ್ಟೇ ಹೈಕೋರ್ಟ್‌ ಇವರಿಬ್ಬರಿಗೆ ಮಧ್ಯಂತರ ಜಾಮೀನು ನೀಡಿತ್ತು. ಚಿನ್ನ ಪಡೆದು ವಂಚಿಸಿದ ಪ್ರಕರಣದಲ್ಲಿ ಐಶ್ವರ್ಯಾ ಗೌಡ ಹಾಗೂ ಪತಿ ಹರೀಶ್‌ಗೆ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ದೊರಕಿತ್ತು. ಈ ಹಿನ್ನೆಲೆ ಐಶ್ವರ್ಯಾ ಗೌಡ ಮತ್ತು ಪತಿ ಹರೀಶ್ ರಿಲೀಸ್ ಆಗಿದ್ದರು. ಆದ್ರೆ ಇದೀಗ ಮತ್ತೆ ಬಂಧನವಾಗಿದ್ದಾರೆ. ದೂರು ನೀಡಿದ್ದ ಶಿಲ್ಪಾಗೌಡಗೆ ಫುಲ್ ಅವಾಜ್ ವಾಟ್ಸಪ್‌ನಲ್ಲಿ ವಾಯ್ಸ್ ನೋಟ್ ಕಳಿಸಿದ್ದ ಐಶ್ವರ್ಯಗೌಡ ನಗದು ಚಿನ್ನಾಭರಣ ಕೊಟ್ಟವರಿಗೆ ಫುಲ್ ಅವಾಜ್ ಹಾಕಿದ್ದಾಳೆ. ಈ ಆಡಿಯೋವನ್ನು ಆರ್ ಆರ್ ನಗರ ಠಾಣೆಗೆ ದೂರು ನೀಡಿದ್ದ ಶಿಲ್ಪಾಗೌಡಗೆ ಕಳುಹಿಸಿದ್ದರು ಎನ್ನಲಾಗಿತ್ತು. ಇದರಿಂದ ಶಿಲ್ಪಾ ಗೌಡ ಇಂದು ಆರ್‌‌ಆರ್‌ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು. ಇದೀಗ ಶಿಲ್ಪಾ ಗೌಡ ನೀಡಿದ ವಂಚನೆ ದೂರಿನನ್ವಯ ಆರೋಪಿಗಳಾದ ಐಶ್ವರ್ಯ ಗೌಡ ಹಾಗೂ ಪತಿ ಹರೀಶ್‌ನನ್ನ ಪೊಲೀಸರು ಮತ್ತೆ ಬಂಧಿಸಿದ್ದಾರೆ ಎನ್ನಲಾಗಿದೆ. ಆಡಿಯೋದಲ್ಲಿ ಏನಿತ್ತು? ಅವಾಚ್ಯ ಶಬ್ದಗಳಿಂದ ನಿಂದಿಸಿ ಅದೇನ್ ಮಾಡ್ತಿಯಾ ಮಾಡ್ಬಿಡೇ ನೋಡೆ ಬಿಡೋಣ.. ಯಾರದ್ದು ಕೊಟ್ಟು ತೀರಿಸ್ತಿನೋ ಬಿಡ್ತಿನೋ, ನಿಂದು ಮಾತ್ರ ತೀರಿಸಿಬಿಟ್ರೆ ಕೇಳ್ಕೊ. ನೀನ್ ಇದೆ ಥರ ಆಲಿಬೇಕು. ಇಲ್ಲ ಇದ್ಯಾವ್ದಾದ್ರು ದೊಡ್ಡ ಲೆವೆಲ್ ಗೆ ಹೋಗಿ, ನಿನ್ನ ಮರ್ಯಾದೆ ಹೋಗಬೇಕು. ಇಲ್ಲ ನನ್ನ ಮರ್ಯಾದೆ ಹೋಗಬೇಕು ಅಷ್ಟೇ. ನಿಂದು ಹೋಗಬೇಕು. ನಂದು ಹೋಗಬೇಕು..ನಿನ್ನ ಮರ್ಯಾದೆ ಕಳಿಬೇಕು. ಅಲ್ಲಿವರೆಗೂ ನನಗೆ ಸಮಾಧಾನ ಇಲ್ಲ. ನಾನ್ ಕೊಡೋದು ಇಲ್ಲ. ಇನ್ನೊಂದ್ ಸರಿ ಕಂಡೋರ್ ಮಾತ್ ಕೇಳ್ಕೊಂಡ್ ಆಡಬಾರದು ಅನ್ನೊ ಬುದ್ದಿ ನಿನ್ ಲೈಫಲ್ ಬರಬೇಕು. ಇಲ್ಲ ನೀನ್ ಮಣ್ಣು ಮುಕ್ಕಬೇಕು. ಇಲ್ಲ ನಾನ್ ಮಣ್ಣು ಮುಕ್ಕಬೇಕ ನಿನ್ನಿಂದ. ಇದೆರಡೇ ಮಾಡಬೇಕು. ನೋಡೆಬಿಡೋಣ ಅದೇನಾದ್ರು ಆಗೋಗ್ಲಿ ಎಂದು ಅವಾಜ್ ಹಾಕಿರುವ ಆಡಿಯೋ ಇದೀಗ ಪೊಲೀಸರಿಗೆ ಲಭ್ಯವಾಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.