NEWS

HMPV Virus: ಭಯ ಬೇಡ, ಇರಲಿ ಮುಂಜಾಗ್ರತೆ! HMPV ಬಗ್ಗೆ ನಿಮಗಿರೋ ಪ್ರಶ್ನೆಗಳಿಗೆ ಇಲ್ಲಿದೆ ತಜ್ಞ ವೈದ್ಯರ ಉತ್ತರ!

ತಜ್ಞ ವೈದ್ಯರಿಂದ HMPV ಬಗ್ಗೆ ಮಾಹಿತಿ ಚೀನಾದಿಂದ ಹುಟ್ಟಿಕೊಂಡ ಕೋವಿಡ್ (Covid) ಅಲೆಯಿಂದ ಉಂಟಾದ ವಿನಾಶವನ್ನು ಜಗತ್ತು ನೋಡಿದೆ. ಕೊರೋನಾ (Corona) ಚೀನಾದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹತ್ಯಾಕಾಂಡವನ್ನು ಸೃಷ್ಟಿಸಿತ್ತು. ಕೊರೋನಾ ಕಾಟದಿಂದ ಜನ ಹೇಗೆ ರೋಸಿಹೋಗಿದ್ದರು ಅಂತ ಗೊತ್ತಿದೆ. ಇದೀಗ ಚೀನಾದಲ್ಲಿ ಮತ್ತೊಂದು ವೈರಸ್‌ ವಕ್ಕರಿಸಿದೆ. ಚೀನಾದಲ್ಲಿ 3 ದಿನಗಳ ಹಿಂದೆ ಈ ವೈರಸ್‌ ಹರಡಿರೋ ಬಗ್ಗೆ ಸುದ್ದಿಯಾಗಿತ್ತು. ನೋಡಿದ್ರೆ ಇಂದು ಈ ವೈರಸ್ ಬೆಂಗಳೂರಿಗೆ (Bengaluru) ಕಾಲಿಟ್ಟಿದೆ. ಹೌದು, ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) 8 ತಿಂಗಳ ಮಗು ಹಾಗೂ 3 ತಿಂಗಳ ಮಗುವಿನಲ್ಲಿ ಕಾಣಿಸಿಕೊಂಡಿದೆ. ಇದು ಕೂಡ ಕೊರೋನಾದಂತೆಯೇ ಹರಡುತ್ತಾ? ಈ ವೈರಸ್‌ ಬಂದ್ರೆ ಏನ್‌ ಮಾಡ್ಬೇಕು? ತಜ್ಞ ವೈದ್ಯರಾದ ಗೌತಮ್‌ ಆರ್‌ಬಿ ಚೌಧರಿ ಅವರು ತಿಳಿಸಿದ್ದಾರೆ. ನಿಮ್ಮ ಪ್ರಶ್ನೆಗಳಿಗೆ ಸ್ವತಃ ಗೌತಮ್‌ ಆರ್‌ಬಿ ಚೌಧರಿ ಉತ್ತರಿಸಿದ್ದಾರೆ. ಪ್ರಶ್ನೆ 1) : ಈ HMPV ವೈರಸ್‌ ಕಾಣಿಸಿಕೊಳ್ಳೋದು ಯಾವಾಗ? ಗೌತಮ್‌ ಆರ್‌ಬಿ ಚೌಧರಿ: ಸಾಮಾನ್ಯವಾಗ ಚಳಿ ಇರುವಂಥ ವಾತಾವರಣದಲ್ಲಿ ಈ ವೈರಸ್‌ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಕೋವಿಡ್‌‌ ನಂತಯೇ ಒಬ್ಬರಿಂದ ಒಬ್ಬರಿಗೆ ಈ ಎಚ್‌ಎಂಪಿವಿ ವೈರಸ್‌ಗಳು ಹರಡುತ್ತೆ. ಪ್ರಶ್ನೆ 2): ಒಬ್ಬರಿಂದ ಒಬ್ಬರಿಗೆ ಹೇಗೆ ಹರಡುತ್ತೆ? ಗೌತಮ್‌ ಆರ್‌ಬಿ ಚೌಧರಿ: ಇದು ಕೂಡ ಕೋವಿಡ್‌ನಂತೆಯೇ ಹರಡುತ್ತೆ. ಹತ್ತಿರ ನಿಂತು ಮಾತನಾಡುವಾಗ, ಸೀನುವಾಗ ನಮ್ಮ ಬಾಯಿಯಿಂದ ಬರುವಂತಹ ಉಗುಳಿನಿಂದ ಈ ಸೋಂಕು ಹರಡಬಹುದು. ಪ್ರಶ್ನೆ 3) : ಯಾರಲ್ಲಿ ಹೆಚ್ಚು ಈ ಸೋಂಕು ಕಾಣಿಸಿಕೊಳ್ಳುತ್ತೆ? ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಯಾಕೆ? ಗೌತಮ್‌ ಆರ್‌ಬಿ ಚೌಧರಿ: ಸದ್ಯಕ್ಕೆ ಬೆಂಗಳೂರಿನಲ್ಲಿ ಎರಡು ಮಕ್ಕಳಲ್ಲಿ ಈ ಎಚ್‌ಎಂಪಿವಿ ವೈರಸ್‌ ಕಾಣಿಸಿಕೊಂಡಿದೆ. ಹಾಗಂತ ಇದು ಮಕ್ಕಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತೆ ಅಂತ ಹೇಳೋಕೆ ಆಗಲ್ಲ. ರೋಗ ನಿರೋಧಕ ಶಕ್ತಿ ಕಡಿಮೆ ಇರುವಂಥವರಲ್ಲಿ ಈ ವೈರಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಮಕ್ಕಳು, ವಯಸ್ಸಾದವರಲ್ಲಿ ಹೆಚ್ಚು ಕಾಣಿಸಿಕೊಳ್ಳಬಹುದು. ಡಯಾಬಿಟಿಸ್‌, ಕಿಡ್ನಿ ಸಮಸ್ಯೆ, ಕ್ಯಾನ್ಸರ್‌ ಸಮಸ್ಯೆ ಇರುವಂಥ ರೋಗಿಗಳಲ್ಲೂ ಈ ವೈರಸ್ ಬೇಗ ಕಾಣಿಸಿಕೊಳ್ಳಬಹುದು. ಇನ್ನಿತರ ರೋಗಗಳಿಂದ ಬಳಲುತ್ತಿರುವವರಿಗೆ ಈ ವೈರಸ್‌ ಹರಡುವ ಸಾಧ್ಯತೆ ಇರುತ್ತದೆ. ಇದನ್ನೂ ಓದಿ: ಬೆಂಗಳೂರಲ್ಲಿ ಕಾಣಿಸಿಕೊಂಡಿರೋ ಈ HMPV ಎಷ್ಟು ಡೇಂಜರಸ್‌? 20 ವರ್ಷದಿಂದ ಭಾರತದಲ್ಲೇ ಇತ್ತಾ ಈ ವೈರಸ್? ಪ್ರಶ್ನೆ 4): ಈ ಎಚ್‌‌ಎಂಪಿವಿ ರೋಗ ಲಕ್ಷಣಗೇಳೇನು? ಗೌತಮ್‌ ಆರ್‌ಬಿ ಚೌಧರಿ: ಮೊದಲಿಗೆ ನಿಮಗೆ ಜ್ವರ ಮತ್ತು ಇತರ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಚ್ಚು, ಕಮ್ಮಿ ಕೋವಿಡ್‌ನಂತಹ ರೋಗಲಕ್ಷಣಗಳನ್ನೇ ಇದು ಹೊಂದಿದೆ. ಕೆಮ್ಮು, ಜ್ವರ, ಮೂಗು ಕಟ್ಟಿಕೊಳ್ಳುವುದು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತು. ಕೆಲವೊಂದು ಪ್ರಕರಣಗಳಲ್ಲಿ ನ್ಯುಮೋನಿಯಾ ಕೂಡ ಆಗಬಹುದು. ಪ್ರಶ್ನೆ 5: ಈ ವೈರಸ್ ಬರದಂತೆ ಏನು ಮಾಡಬೇಕು? ಗೌತಮ್‌ ಆರ್‌ಬಿ ಚೌಧರಿ: ಅಂತರ ಕಾಪಾಡಿಕೊಳ್ಳಬೇಕು. ಜನರಿದ್ದ ಕಡೆಯಲ್ಲಿ ಮಾಸ್ಕ್‌ ಧರಿಸಬೇಕು. ಉತ್ತಮ ಆಹಾರ ಸೇವನೆ ಮಾಡಬೇಕು. ಕೋಲ್ಡ್ ವಾಟರ್‌ ಅಥವಾ ಫ್ರಿಡ್ಜ್‌ನಲ್ಲಿಟ್ಟಿರುವಂಥ ಆಹಾರಗಳನ್ನು ಸೇವನೆ ಮಾಡಬಾರದು. ಪ್ರೋಟಿನ್ ಹೆಚ್ಚಿರುವಂಥ ಆಹಾರ ಸೇವನೆ ಮಾಡಬೇಕು. ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುತ್ತಿರಬೇಕು. ಸ್ಟೀಮ್‌ ಇನ್‌ಹೇಲೇಷನ್‌ ಮಾಡ್ತಿರಬೇಕು. ಬಿಸಿ ನೀರಿಗೆ ಉಪ್ಪು ಸೇರಿಸಿ ಗಾರ್ಗಲ್ ಮಾಡ್ತಿರಬೇಕು. ವ್ಯಾಯಮ ಮಾಡ್ತೀರಿ. ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವಂತೆ ನೋಡಿಕೊಳ್ಳಬೇಕು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.