NEWS

Shivaji Maharaj: ಅನಾವರಣಗೊಂಡ 8 ತಿಂಗಳಿಗೇ ಕುಸಿದ 35 ಅಡಿ ಎತ್ತರದ ಶಿವಾಜಿ ಪ್ರತಿಮೆ; ಪ್ರಕರಣ ದಾಖಲು

ಕುಸಿದ 35 ಅಡಿ ಎತ್ತರದ ಶಿವಾಜಿ ಪ್ರತಿಮೆ ಮಹಾರಾಷ್ಟ್ರದ (Maharashtra) ಸಿಂಧುದುರ್ಗ (Sindhudurg) ಜಿಲ್ಲೆಯ ರಾಜ್‌ಕೋಟ್ ಕೋಟೆಯಲ್ಲಿ (Rajkot fort) ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದ ರಾಜ ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji Maharaj) ಪ್ರತಿಮೆ ಸೋಮವಾರ ಕುಸಿದು ಬಿದ್ದಿದೆ. ಮಾಲ್ವಾನ್‌ನ ರಾಜ್‌ಕೋಟ್ ಕೋಟೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮರಾಠ ರಾಜನ 35 ಅಡಿ ಎತ್ತರದ ಪ್ರತಿಮೆ ಕುಸಿದಿದೆ. ಪೊಲೀಸ್ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ತಲುಪಿದ್ದಾರೆ. ಹಾನಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ವರದಿಯಾಗಿದೆ. ಭಾರಿ ಮಳೆ, ಬಿರುಗಾಳಿಗೆ ಕುಸಿಯಿತಾ ಪ್ರತಿಮೆ? ತಜ್ಞರು ಪ್ರತಿಮೆ ಕುಸಿತಕ್ಕೆ ನಿಖರವಾದ ಕಾರಣವನ್ನು ಖಚಿತಪಡಿಸಲಿದ್ದಾರೆ, ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರಿ ಮಳೆ ಮತ್ತು ಬಿರುಗಾಳಿ ಬೀಸಿದೆ ಎಂದು ಅಧಿಕಾರಿ ಹೇಳಿದ್ದಾರೆ. ಈ ಪ್ರತಿಮೆಯನ್ನು ಡೊಮೇನ್‌ನಲ್ಲಿ ತಜ್ಞರು ವಿನ್ಯಾಸಗೊಳಿಸಿದ್ದಾರೆ. ಇದು ರಾಜ್ಯ ಸರ್ಕಾರ ಮತ್ತು ಭಾರತೀಯ ನೌಕಾಪಡೆಯ ಎರಡೂ ಸಂಘಟಿತ ಪ್ರಯತ್ನವಾಗಿದೆ. ಅನಾವರಣದ ನಂತರ ಪ್ರತಿಮೆಯನ್ನು ನಿರ್ವಹಣೆಗಾಗಿ ಸ್ಥಳೀಯ ಆಡಳಿತಕ್ಕೆ ಹಸ್ತಾಂತರಿಸಲಾಯಿತು. ಕುಸಿತದ ನಿಖರವಾದ ಕಾರಣವನ್ನು ಸೈಟ್ ಮೌಲ್ಯಮಾಪನದಿಂದ ಮಾತ್ರ ಕಂಡುಹಿಡಿಯಬಹುದು, ಅದು ಪ್ರಗತಿಯಲ್ಲಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ರಕ್ಷಣಾ ಮೂಲಗಳು ಸಿಎನ್‌ಎನ್ ನ್ಯೂಸ್ 18ಗೆ ತಿಳಿಸಿವೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಎಂಟ್ರಿ ಕೊಟ್ಟಿತ್ತು ಮೋದಿ ವಿಮಾನ; ನೆರೆಯ ರಾಷ್ಟ್ರದಲ್ಲಿ46 ನಿಮಿಷ ಕಳೆದ ಪ್ರಧಾನಿ! ಎಫ್‌ಐಆರ್‌ ದಾಖಲು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು ಬಿದ್ದ ಘಟನೆಯಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. M/s ಆರ್ಟಿಸ್ಟ್ ಕಂಪನಿಯ ಮಾಲೀಕ ಜಯದೀಪ್ ಆಪ್ಟೆ ಮತ್ತು ಸ್ಟ್ರಕ್ಚರಲ್ ಕನ್ಸಲ್ಟೆಂಟ್ ಚೇತನ್ ಪಾಟೀಲ್ ವಿರುದ್ಧ ಮಾಲ್ವಾನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. This video shows how an inferior & low quality materials was used in installations of Ch.Shivaji Maharaj statue that collapsed this evening. It broke down into several pieces. Statue is completely hollow from inside & some iron pillars used & hastily installed in Sindhudurg. pic.twitter.com/nDxl5yVp0m ಭಾರತೀಯ ನೌಕಾಪಡೆ ಹೇಳಿದ್ದೇನು? ಕುಸಿತದ ಕಾರಣವನ್ನು ತಕ್ಷಣವೇ ತನಿಖೆ ಮಾಡಲು ತಂಡವನ್ನು ನಿಯೋಜಿಸಲಾಗಿದೆ ಎಂದು ಇಂಡಿಯನ್ ನೇವಿ ಹೇಳಿಕೆ ನೀಡಿದೆ. 2023ರ ಡಿಸೆಂಬರ್ 4ರ ನೌಕಾಪಡೆಯ ದಿನದಂದು ಸಿಂಧುದುರ್ಗದ ನಾಗರಿಕರಿಗೆ ಸಮರ್ಪಣೆಯಾಗಿ ಅನಾವರಣಗೊಂಡ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಉಂಟಾದ ಹಾನಿಯನ್ನು ಭಾರತೀಯ ನೌಕಾಪಡೆಯು ತೀವ್ರ ಕಳವಳದಿಂದ ಗಮನಿಸುತ್ತದೆ. ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ತಜ್ಞರ ಜೊತೆಯಲ್ಲಿ ನೌಕಾಪಡೆಯು ಈ ದುರದೃಷ್ಟಕರ ಅಪಘಾತದ ಕಾರಣವನ್ನು ತಕ್ಷಣವೇ ತನಿಖೆ ಮಾಡಲು ತಂಡವನ್ನು ನಿಯೋಜಿಸಿದೆ. ಪ್ರತಿಮೆಯನ್ನು ಶೀಘ್ರವಾಗಿ ಸರಿಪಡಿಸಿ ಮರುಸ್ಥಾಪಿಸಲು ಕ್ರಮಗಳನ್ನು ಪ್ರಾರಂಭಿಸುತ್ತದೆ ಎಂದು ನೌಕಾಪಡೆ ಹೇಳಿದೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ಘಟನೆಯ ನಂತರ ಎನ್‌ಸಿಪಿ (ಎಸ್‌ಪಿ) ಜಯಂತ್ ಪಾಟೀಲ್, ಶಿವಸೇನಾ (ಯುಬಿಟಿ) ಯ ಆದಿತ್ಯ ಠಾಕ್ರೆ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ, ಈ ಘಟನೆ ಕೆಲಸದ ಗುಣಮಟ್ಟದ ಬಗ್ಗೆ ಗಮನ ಸೆಳೆದಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿಯು ದುರಹಂಕಾರದಿಂದ ಸ್ಮಾರಕವನ್ನು ತರಾತುರಿಯಲ್ಲಿ ಮಾಡಡಿದೆ ಎಂದು ಠಾಕ್ರೆ ಹೇಳಿದ್ದಾರೆ. ‘ಶಿವಾಜಿ ಮಹಾರಾಜರಿಗೆ ಅವಮಾನ’ ‘ನಮ್ಮ ಮತ್ತು ಎಲ್ಲಾ ಮಹಾರಾಷ್ಟ್ರದ ಆರಾಧ್ಯ ದೈವವಾದ ಛತ್ರಪತಿ ಶಿವಾಜಿ ಮಹಾರಾಜರ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ! ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತರಾತುರಿಯಲ್ಲಿ ನಿರ್ಮಿಸಿದ ಮತ್ತು ಮೋದಿ ಅವರು ಉದ್ಘಾಟಿಸಿದ ಛತ್ರಪತಿ ಶಿವಾಜಿ ಅವರ ಪ್ರತಿಮೆ ಕೇವಲ 8 ತಿಂಗಳಲ್ಲಿ ಕುಸಿದಿದೆ. ದುರಹಂಕಾರದಿಂದಲೇ ಮಹಾರಾಜರ ಸ್ಮಾರಕವನ್ನು ಅದರ ಗಂಭೀರತೆಯನ್ನು ಪರಿಗಣಿಸದೆ ತರಾತುರಿಯಲ್ಲಿ ಮಾಡಲಾಯಿತು. ಮಹಾರಾಜರ ಫೋಟೋ ಮಾತ್ರ ಬಳಸುವುದು ಉದ್ದೇಶವಾಗಿತ್ತು, ಆದ್ದರಿಂದ ಸ್ಮಾರಕದ ಗುಣಮಟ್ಟವನ್ನು ಗಣನೆಗೆ ತೆಗೆದುಕೊಂಡಿಲ್ಲ. ಸ್ಥಳೀಯರು ಹೇಳಿದರೂ ಕೇಳಲಿಲ್ಲ’ ಎಂದು ಸೋಷಿಯಲ್ ಮೀಡಿಯಾ ಎಕ್ಸ್​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.